- Home
- Entertainment
- TV Talk
- ವಿನಯ್ ಗೌಡಗೆ ಹೆಂಡ್ತಿಯಾದ ಮೋಕ್ಷಿತಾ ಪೈ… ಮರೆಯಲಾರದ ಕ್ಷಣಗಳನ್ನು ನೆನಪಿಸಿಕೊಂಡ ಬಿಗ್ ಬಾಸ್ ಚೆಲುವೆ
ವಿನಯ್ ಗೌಡಗೆ ಹೆಂಡ್ತಿಯಾದ ಮೋಕ್ಷಿತಾ ಪೈ… ಮರೆಯಲಾರದ ಕ್ಷಣಗಳನ್ನು ನೆನಪಿಸಿಕೊಂಡ ಬಿಗ್ ಬಾಸ್ ಚೆಲುವೆ
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಈಗಷ್ಟೇ ತಮ್ಮ ಹೊಸ ಮೈಕ್ರೋ ಸೀರೀಸ್ ‘ಅದೇ ಕಣ್ಣು’ ಚಿತ್ರೀಕರಣ ಮುಗಿಸಿದ್ದು, ಶೂಟಿಂಗ್ ನ ಮರೆಯಲಾರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
- FB
- TW
- Linkdin

ಬಿಗ್ ಬಾಸ್ ಸೀಸನ್ 11 (Bigg Boss Season 11) ರ ಬಳಿಕ ನಟಿ ಮೋಕ್ಷಿತಾ ಪೈ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ಸೀರೀಸ್ ಎಂದು ಒಂದಾದ ಮೇಲೆ ಒಂದು ಶೂಟಿಂಗ್ ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದೀಗಷ್ಟೇ ನಟಿ ತಮ್ಮ ಹೊಸ ಮೈಕ್ರೋ ಸೀರೀಸ್ ಮುಗಿಸಿರುವ ಸಂಭ್ರಮದಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೈಕ್ರೋ ಸೀರೀಸ್ ಗೆ ಹೆಚ್ಚಿನ ಬೇಡಿಕೆ ಇದ್ದು, ಕನ್ನಡದಲ್ಲೂ ಈ ಹೊಸ ಟ್ರೆಂಡ್ ಶುರುವಾಗಿದೆ. ನಟ-ನಿರ್ದೇಶಕ ದಿಲೀಪ್ ರಾಜ್ ನಿರ್ದೇಶನದಲ್ಲಿ ಮೋಕ್ಷಿತಾ ಪೈ (Mokshitha Pai), ವಿನಯ್ ಗೌಡ ಹಾಗೂ ಆರತಿ ಪಡುಬಿದ್ರಿ ನಟಿಸಿರುವ ಅದೇ ಕಣ್ಣು ಸೀರೀಸ್ ಸದ್ಯ ಸದ್ದು ಮಾಡುತ್ತಿದೆ.
ಈ ಕುರಿತಾಗಿ ನಟಿ ಮೋಕ್ಷಿತಾ ಪೈ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಮರೆಯಲಾರದ ಅನುಭವದ ಕುರಿತು ಬರೆದುಕೊಂಡಿದ್ದು, ಶೂಟಿಂಗ್ ಫೋಟೊಗಳನ್ನು ಒಂದಷ್ಟು ಶೇರ್ ಮಾಡಿದ್ದಾರೆ.
ಸುಂದರವಾಗಿ ಬರೆಯಲಾದ ಮೈಕ್ರೋ ಸೀರೀಸ್ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ತುಂಬಾನೆ ಕೃತಜ್ಞಳಾಗಿದ್ದೇನೆ. ಅದೇ ಕಣ್ಣು ಸೀರೀಸ್ ನ ತುಂಬಾ ಆಳ ಮತ್ತು ಅರ್ಥಪೂರ್ಣವಾದ ಪಾತ್ರಕ್ಕೆ ಆಯ್ಕೆಯಾಗಿರುವುದು ನಿಜಕ್ಕೂ ವಿಶೇಷವಾಗಿದೆ.
ನನ್ನ ಮೇಲೆ ಆ ನಂಬಿಕೆ ಇಟ್ಟಿದ್ದಕ್ಕಾಗಿ ದಿಲೀಪ್ ಸರ್ ಮತ್ತು ಶ್ರೀವಿದ್ಯಾ ರಾಜ್ ಅವರಿಗೆ ಕೃತಜ್ಞಳಾಗಿದ್ದೇನೆ. ಜೊತೆಗೆ ಪ್ರತಿಭಾನ್ವಿತ ಸಹ-ಕಲಾವಿದರಾದ ವಿನಯ್ ಗೌಡ (Vinay Gowda), ಆರತಿ ಪಡುಬಿದ್ರಿ, ಲಕ್ಷ್ ಜೊತೆ ನಟಿಸಿರುವುದಕ್ಕೆ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಅಷ್ಟೇ ಅಲ್ಲದೇ ಕಾರ್ತಿಕ್ ರಾಜ್ ಅವರ ತಂತ್ರಜ್ಞರ ಉತ್ಸಾಹಭರಿತ ತಂಡ ಹಾಗೂ ಮೇಕಪ್ ಆರ್ಟಿಸ್ಟ್ ಶಿಲ್ಪಾ ನಾಗರಾಜ್ ಅವರೊಂದಿಗೆ ಕೆಲಸ ಮಾಡಿರುವುದರಿಂದ ತುಂಬಾ ಅನುಭವಗಳನ್ನು ಪಡೆದುಕೊಂಡೆ. ಎಲ್ಲರ ಬೆಂಬಲ ಮತ್ತು ಸಮರ್ಪಣೆ ಸೆಟ್‌ನಲ್ಲಿನ ಪ್ರತಿ ಕ್ಷಣವನ್ನು ಮರೆಯಲಾಗದಂತೆ ಮಾಡಿತು.
ನನ್ನ ಅಭಿಮಾನಿಗಳು, ಪ್ರೇಕ್ಷಕರು ಮತ್ತು ಹಿತೈಷಿಗಳಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಅಷ್ಟೇ ಮುಖ್ಯವಾಗಿ ಪ್ರತಿ ಹಂತದಲ್ಲೂ ತೋರಿಸಲಾದ ಪ್ರೀತಿ, ಪ್ರೋತ್ಸಾಹ ಮತ್ತು ಉತ್ಸಾಹವು ಸೀರೀಸ್ (micro series) ನಾವು ಎಂದಿಗೂ ಊಹಿಸದ ರೀತಿಯಲ್ಲಿ ಬೆಳೆಯಲು ಸಹಾಯ ಮಾಡಿತು.
ಈ ಹೊಸ ಪ್ರಯಾಣಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿರೋದನ್ನು ನೋಡಲು ಖುಷಿಯಾಗುತ್ತಿದೆ. ಪ್ರತಿಯೊಂದು ಸಂದೇಶ ಮತ್ತು ಮೆಚ್ಚುಗೆಯ ಚಿಹ್ನೆಗಳು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಅರ್ಥವನ್ನು ನೀಡಿದೆ ಎಂದಿದ್ದಾರೆ ಮೋಕ್ಷಿತಾ ಪೈ.
ಅಷ್ಟೇ ಅಲ್ಲದೇ ತಾವು ಹಂಚಿಕೊಂಡಿರುವ ಕೆಲವು ಚಿತ್ರಗಳಲ್ಲಿ ಕಂಡುಬರುವ ರಕ್ತವು ಕೃತಕವಾಗಿದ್ದು, ಚಿತ್ರೀಕರಣದ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ. ನಿಜವಾದ ಗಾಯ ಅಥವಾ ಹಾನಿಯಾಗಿಲ್ಲ. ವೀಕ್ಷಕರು ವಿವೇಚನೆಯಿಂದ ವರ್ತಿಸಿ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ ಸುಂದರಿ.
ಮೋಕ್ಷಿತಾ ಪೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಮಿಡಲ್ ಕ್ಲಾಸ್ ರಾಮಾಯಣ (Middle Class Ramayana) ಎನ್ನುವ ಸಿನಿಮಾದಲ್ಲಿ ಕಪ್ಪು ಸುಂದರಿಯಾಗಿ ನಟಿಸುತ್ತಿದ್ದಾರೆ. ಇನ್ನು ಪಾರು ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.