- Home
- Entertainment
- TV Talk
- Saregamapa Contestant: ರಿಯಾಲಿಟಿ ಶೋ ಗೆಲ್ಲದಿದ್ರೆ ಏನಾಯ್ತು? ಸಿನಿಮಾದಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡ ಲಹರಿ
Saregamapa Contestant: ರಿಯಾಲಿಟಿ ಶೋ ಗೆಲ್ಲದಿದ್ರೆ ಏನಾಯ್ತು? ಸಿನಿಮಾದಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡ ಲಹರಿ
ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿ ಲಹರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ದೊರೆತಿದೆ. ಸೆಮಿಫೈನಲ್‌ನಲ್ಲಿ ಹೊರಬಿದ್ದಿದ್ದ ಲಹರಿಗೆ ಈ ಅವಕಾಶ ಸಿಕ್ಕಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
- FB
- TW
- Linkdin

ಈ ಬಾರಿಯ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿ ಲಹರಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಸೆಮಿಫೈನಲ್‌ನಲ್ಲಿಯೇ ಲಹರಿ ಹೊರಬಂದಿದ್ದರು. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಫೈನಲ್ ಪ್ರವೇಶಿಸಿದ್ದ ಇನ್ನೋರ್ವ ಸ್ಪರ್ಧಿ ಅರ್ಹರಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಸ್ಪರ್ಧಿ ಲಹರಿ ಅದ್ಬುತ ಗಾಯಕಿ ಅನ್ನೋದರಲ್ಲಿ ಎರಡು ಮಾತಿಲ್ಲ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರೇ ಲಹರಿ ಹಾಡು ಕೇಳಿ ಆಶ್ಚರ್ಯಚಕಿತರಾಗಿದ್ದರು. ಆಡಿಷನ್‌ನಿಂದಲೇ ತನ್ನ ಸುಮುಧರ ಕಂಠದಿಂದ ಲಹರಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದರು. ಲಹರಿ ಹಾಡು ಕೇಳಲು ಜನರು ಕಾಯುತ್ತಿದ್ದರು.
ಇದೀಗ ಲಹರಿಗೆ ಕನ್ನಡದ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ, ತಮ್ಮ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕಿ ಲಹರಿಗೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ಲಹರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ಅ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಸರ್ ಎಂದು ಲಹರಿ ಬರೆದುಕೊಂಡು ಅರ್ಜುನ್ ಜನ್ಯ ಜೊತೆಗಿನ ಮತ್ತು ರೆಕಾರ್ಡ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋಗಳಿಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಸರಿಗಮಪ ಮೋಸ ಮಾಡಿದ್ರೂ AJ ಮೋಸ ಮಾಡಲ್ಲ ಅನ್ನೋದು ಮತ್ತೊಮ್ಮೆ ಸಾಬೀತು ಆಗಿದೆ. ಈ ಹಿಂದೆಯೂ ಅರ್ಜುನ್ ಜನ್ಯ, ಹಲವು ಹೊಸ ಗಾಯಕರಿಗೆ ಅವಕಾಶ ನೀಡಿದ್ದಾರೆ. ಲಹರಿ ಭಾಗವಹಿಸಿದ್ದ ರಿಯಾಲಿಟಿ ಶೋನಲ್ಲಿ ಅರ್ಜುನ್ ಜನ್ಯ ಸಹ ಮೂವರು ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ.
ಸರಿಗಮಪ ಶೋನಲ್ಲಿ ಲಹರಿಗೆ ಅವಕಾಶ ನೀಡುವುದಾಗಿ ಅರ್ಜುನ್ ಜನ್ಯ ಘೋಷಿಸಿದ್ದಾರೆ. ಇದೀಗ ಕೊಟ್ಟ ಮಾತಿನಂತೆ ಲಹರಿಗೆ ಅವಕಾಶ ನೀಡಿದ್ದಾರೆ. ಈ ಬಾರಿ ಸರಿಗಮಪ ಶೋನ ವಿನ್ನರ್ ಆಗಿ ಬೀದರ್‌ನ ಶಿವಾನಿ ಹೊರಬಂದಿದ್ದರು.