- Home
- Entertainment
- TV Talk
- Toxic Children in Kannada Serials: ಈ ಪಾತ್ರಗಳನ್ನ ನೋಡಿದ್ರೆ ಇಂಥ ಮಕ್ಕಳು ಹುಟ್ಟೋದೆ ಬೇಡ ಅನ್ಸತ್ತೆ… !
Toxic Children in Kannada Serials: ಈ ಪಾತ್ರಗಳನ್ನ ನೋಡಿದ್ರೆ ಇಂಥ ಮಕ್ಕಳು ಹುಟ್ಟೋದೆ ಬೇಡ ಅನ್ಸತ್ತೆ… !
ಕೆಲವು ಧಾರಾವಾಹಿಗಳಲ್ಲಿ ಮಕ್ಕಳನ್ನು ನೋಡಿದ್ರೆ ಅಯ್ಯೋ ರಾಮ ಇಂಥ ಮಕ್ಕಳು ಯಾವ ತಂದೆ ತಾಯಿಗೂ ಬೇಡವೇ ಬೇಡ ಅನಿಸುತ್ತೆ. ನಿಮಗೂ ಹಾಗೆ ಅನಿಸಿದ್ಯಾ?
- FB
- TW
- Linkdin

ಕನ್ನಡ ಕಿರುತೆರೆಯಲ್ಲಿ (Kannada Serials) ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷ ಕಥೆಗಳ ಸೀರಿಯಲ್ ಬರುತ್ತಿವೆ. ಇವುಗಳಲ್ಲಿ ಮನೆಯಲ್ಲಿಯೇ ವಿಲನ್ ಗಳು ಇರುತ್ತಾರೆ. ಕೆಲವು ಧಾರಾವಾಹಿಗಳಲ್ಲಿ ವಿಲನ್ ಗಳು ಬೇರೆ ಇರುತ್ತಾರೆ, ಇನ್ನೂ ಕೆಲವು ಧಾರಾವಾಹಿಗಳಲ್ಲಿ ಹೆತ್ತ ಮಕ್ಕಳೇ ವಿಲನ್ ಗಳಾಗಿರುತ್ತಾರೆ.
ಈವಾಗ ನಾವು ಹೇಳುತ್ತಿರೋದು ಲಕ್ಷ್ಮೀ ನಿವಾಸ (Lakshmi Nivasa) ಹಾಗೂ ಭಾರ್ಗವಿ LLB ಸೀರಿಯಲ್ ಗಳ ಬಗ್ಗೆ. ಈ ಧಾರಾವಾಹಿಯ ಮೂವರು ಮಕ್ಕಳು ಅಪ್ಪ- ಅಮ್ಮನನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ ಅಂದ್ರೆ, ಅಯ್ಯೋ ಇಂಥ ಮಕ್ಕಳು ಯಾವ ಅಪ್ಪ ಅಮ್ಮನಿಗೂ ಬೇಡ ಅನಿಸಿ ಬಿಡುತ್ತೆ.
ಮೊದಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿಯ ಸಂತೋಷ್. ಜಿಪುಣ ಮಾತ್ರವಲ್ಲ. ಅಮ್ಮ-ಅಪ್ಪನನ್ನು ತನ್ನ ಸ್ವಂತ ಲಾಭಕ್ಕಾಗಿ ಬಳಸುವ ದುರ್ಬುದ್ಧಿಯುಳ್ಳ ಮಗ. ಹಣಕ್ಕಾಗಿ ಏನು ಬೇಕಾದರೂ ಮಾಡುವಂತಹ ಮಗ. ಈಗ ಅವನಿಂದಾಗಿಯೇ ಲಕ್ಷ್ಮೀ ಶ್ರೀನಿವಾಸ ಮನೆ ಬಿಟ್ಟು ಹೋಗುವಂತಾಗಿದೆ.
ಲಕ್ಷ್ಮೀ ಶ್ರೀನಿವಾಸರ ಎರಡನೇ ಮಗ ಹರೀಶ್. ಅವನಂತೂ ದಿನಪೂರ್ತಿ ಹೆಂಡತಿಯ ಸೆರಗು ಹಿಡಿದು ಸುತ್ತುತ್ತಿರುತ್ತಾನೆ. ಅಷ್ಟೇ ಅಲ್ಲ ತನ್ನ ಮನೆ ಕೆಲಸಕ್ಕಾಗಿ ಇರಲಿ ಎಂದು ಅಮ್ಮನನ್ನು ಕರೆತಂದಿರುವ ಪಾಪಿ ಮಗ. ಕೊಂಚ ಒಳ್ಳೆತನ ಇದ್ದರೂ ಸಹ ಸಂತೋಷ್ ಸಹವಾಸದಿಂದ ದುರ್ಬುದ್ಧಿ ಕಲಿತಿದ್ದಾರೆ ಹರೀಶ್.
ಇನ್ನು ಬರೋದು ಭಾರ್ಗವಿ LLB ಧಾರಾವಾಹಿಯಲ್ಲಿನ ಭಾರ್ಗವಿಯ ಅಕ್ಕ ಬೃಂದಾ. ಇವರನ್ನು ನೋಡಿದ್ರೆ ಸತ್ರು ಪರವಾಗಿಲ್ಲ ಇಂತಹ ಮಗಳು ಹುಟ್ಟೋದೆ ಬೇಡ ಎನ್ನುವಂತೆ ಆಗುತ್ತೆ. ತನ್ನ ಬೇಳೆ ಬೇಯಿಸಲು ಅಮ್ಮನನ್ನೆ ದಾಳವಾಗಿ ಉಪಯೋಗಿಸಿಕೊಂಡು, ಇದೀಗ ಅಮ್ಮನ ಕೈಯಲ್ಲೇ ತನ್ನ ಮನೆ ಕೆಲಸ ಮಾಡಿಸುತ್ತಿದ್ದಾರೆ ಬೃಂದಾ.
ಈ ಮೂರು ಪಾತ್ರಗಳನ್ನು ನೋಡಿದ್ರೆ ಕೋಪ ಬರೋದಕ್ಕೆ ಮುಖ್ಯ ಕಾರಣ ಅವರ ನಟನೆ. ಮೂರು ಜನ ಕೂಡ ಅದ್ಭುತ ನಟರು. ಸಂತೋಷ್ ಪಾತ್ರಕ್ಕೆ ಮಧು ಹೆಗಡೆ (Madhu Hegde) ಜೀವ ತುಂಬಿಸಿ ನಟಿಸುತ್ತಿದ್ದಾರೆ. ಇವರು ಪಾತ್ರವನ್ನು ಹೇಗೆ ಆವರೀಸಿಕೊಂಡಿದ್ದಾರೆ ಅಂದ್ರೆ, ಎದುರು ಸಿಕ್ಕರೆ ಜನ ಕೆನ್ನೆಗೆ ಬಾರಿಸಬಹುದು ಅಷ್ಟೊಂದು ಅಧ್ಬುತವಾಗಿ ನಟಿಸಿದ್ದಾರೆ.
ಇನ್ನು ಹರೀಶ್ ಪಾತ್ರಧಾರಿ ಅಜಯ್ ರಾಜ್ (Ajay Raj) ಕೂಡ ಅದ್ಭುತ ನಟ. ಇವರು ಬಾಲ ನಟನಾಗಿ ಗುರುತಿಸಿಕೊಂಡು, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಪ್ಪ ಅಮ್ಮನ ಕಡೆಗೆ ಪ್ರೀತಿ ಇದ್ದೂ ಇಲ್ಲದಂತೆ ನಡೆದುಕೊಳ್ಳುವ ಇವರ ಅಭಿನಯವೂ ಚೆನ್ನಾಗಿದೆ.
ಇನ್ನು ಜನ ತುಂಬಾ ಮೆಚ್ಚಿಕೊಂಡಿರುವ ವಿಲನ್ ಪಾತ್ರ ಅಂದ್ರೆ ಅದು ಬೃಂದಾ ಪಾತ್ರ. ಬೃಂದಾ ಪಾತ್ರದಲ್ಲಿ ಚೈತ್ರಾ ರಾವ್ (Chaithra Rao) ಅದ್ಭುತವಾಗಿ ನಟಿಸಿದ್ದಾರೆ. ಅಬ್ಬಾ ಇವಳೆಂತ ಮಗಳು, ಈ ರೀತಿ ಮಕ್ಕಳು ಕೂಡ ಇರುತ್ತಾರ ಎನ್ನುವಂತೆ ಭರ್ಜರಿಯಾಗಿಯೇ ನಟಿಸುತ್ತಿದ್ದಾರೆ. ಇವರ ನಟನೆಯನ್ನು ಜನರಂತೂ ಇಷ್ಟಪಟ್ಟಿದ್ದಾರೆ.