‘25-04-2025’ ನ್ನು“ರಾಜೇಶ್ ಕೃಷ್ಣನ್ ಮ್ಯೂಸಿಕಲ್ ಡೇ” ಎಂದು ಘೋಷಿಸಿದ ಅಮೆರಿಕಾ
ಬ್ರೂಕ್ ಫೀಲ್ಡ್, ವಿಸ್ಕಾನ್ಸಿನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 25-04-2025 ನ್ನು “ರಾಜೇಶ್ ಕೃಷ್ಣನ್ ಮ್ಯೂಸಿಕಲ್ ಡೇ” ಎಂದು ಘೋಷಿಸಿದ್ದಾರೆ.

ಕನ್ನಡದ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಗುಡ್ ನ್ಯೂಸ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಜೇಶ್ ಕೃಷ್ಣನ್ ಅವರಿಗೆ ಬ್ರೂಕ್ ಫೀಲ್ಡ್, ವಿಸ್ಕಾನ್ಸಿನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 25/04/2025 ನ್ನು “ರಾಜೇಶ್ ಕೃಷ್ಣನ್ ಮ್ಯೂಸಿಕಲ್ ಡೇ” ( RAJESH KRISHNAN MUSICAL DAY) ಎಂದು ಘೋಷಿಸಿದ್ದಾರೆ. ಈ ಸಂತಸದ ವಿಷಯವನ್ನು ರಾಜೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬ್ರೂಕ್ಫೀಲ್ಡ್ ಮೇಯರ್ ಆಗಿರುವ ಸ್ಟೀವನ್ ವಿ. ಪಾಂಟೊ ಅತ್ಯುನ್ನತ್ತ ಗೌರವ ʼರಾಜೇಶ್ ಕೃಷ್ಣನ್ ಸಂಗೀತ ದಿನʼ ವನ್ನು ರಾಜೇಶ್ ಕೃಷ್ಣನ್ ಅವರಿಗೆ ಪ್ರದಾನ ಮಾಡಿದರು. ಗೌರವ ಸ್ವೀಕರಿಸುತ್ತಿರುವ ಫೋಟೊವನ್ನು ರಾಜೇಶ್ ಕೃಷ್ಣನ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. (Happy to inform you all that April 25th 2025 was considered as "RAJESH KRISHNAN MUSICAL DAY" by the City of Brookfield, Wisconsin, United States of America.)
ರಾಜೇಶ್ ಕೃಷ್ಣನ್ (Rajesh Krishnan) ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ಅದ್ಭುತವಾದ ಗಾಯಕ, ಅವರ ಹಾಡು ಕೇಳಿದ್ರೆ, ಮನಸ್ಸು ಕಳೆದು ಹೋಗುತ್ತೆ, ಅಂತಹ ಮೆಲೋಡಿ ಕಿಂಗ್ ಇವರು. 1991ರಲ್ಲಿ ಬಿಡುಗಡೆಯಾದ ಕನ್ನಡದ ಗೌರಿ ಗಣೇಶ ಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಕರಿಯರ್ ಆರಂಭಿಸಿದ ರಾಜೇಶ್ ಕೃಷ್ಣನ್ ಇಲ್ಲಿವರೆಗೆ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಿಗೂ, ಡಿವೋಷನಲ್ ಹಾಡುಗಳಿಗೂ ಧ್ವನಿಯಾಗಿದ್ದಾರೆ.
ತಮಿಳುನಾಡಿನಲ್ಲಿ ಜನಿಸಿದ ರಾಜೇಶ್ ಕೃಷ್ಣನ್ ಗೆ ತಾಯಿ ಮೀರಾ ಕೃಷ್ಣನ್ (Meera Krishnan)ಅವರೇ ಮೊದಲ ಗುರು. ಇವರು ಇಲ್ಲಿವರೆಗೂ ಬರೋಬ್ಬರಿ 3000ಕ್ಕೂ ಹೆಚ್ಚು ಕನ್ನಡ, 500ಕ್ಕೂ ಹೆಚ್ಚು ತೆಲುಗು, 250ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡಿದ್ದಾರೆ. ಅಷ್ಟೇ ಅಲ್ಲ ಇವರು ಧ್ಯಾನ್ ಮತ್ತು ರಘು ಮುಖರ್ಜಿಗೆ ಕಂಠದಾನ ಕೂಡ ಮಾಡಿದ್ದಾರೆ. ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಹಿನ್ನೆಲೆ ಗಾಯಕರಾಗಿ, ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ರಾಜೇಶ್ ಕೃಷ್ಣನ್ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ (singing reality show) ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಅಮೆರಿಕಾದಿಂದ ವಿಶೇಷ ಗೌರವ ಪಡೆದ ರಾಜೇಶ್ ಕೃಷ್ಣನ್ ಗೆ ಅಭಿನಂದನೆಗಳು.