ಕರ್ನಾಟಕ ಮಾತ್ರವಲ್ಲ ಈ 7 ರಾಜ್ಯಗಳಲ್ಲೂ ಅತಿ ಹೆಚ್ಚು ಕನ್ನಡ ಮಾತಾಡೋ ಜನರಿದ್ದಾರೆ
ಕರ್ನಾಟಕ ಅಲ್ಲದೇ ಬೇರೆ ಯಾವೆಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿದ್ದಾರೆ ಗೊತ್ತಾ?

ಕನ್ನಡ ಭಾಷೆಯನ್ನು (Kannada Language) ಕರ್ನಾಟಕದಲ್ಲಿ ಮಾತ್ರ ಮಾತನಾಡ್ತಾರ? ಖಂಡಿತಾ ಇಲ್ಲ. ಕರ್ನಾಟಕದ ಬಳಿ ಇರುವ ಈ 6 ರಾಜ್ಯಗಳಲ್ಲೂ ಸಹ ಕನ್ನಡ ಅತಿ ಹೆಚ್ಚು ಮಾತನಾಡುವ ಜನರಿದ್ದಾರೆ. ಆ ರಾಜ್ಯಗಳು ಯಾವುವು? ಅಲ್ಲಿ ಎಷ್ಟು ಜನ ಕನ್ನಡ ಮಾತನಾಡ್ತಾರೆ ನೋಡೋಣ.

ಗುಜರಾತ್ :
ಕನ್ನಡ ಮಾತನಾಡುವವರ ಸಂಖ್ಯೆಯನ್ನ ಆಧರಿಸಿದ್ರೆ, ಗುಜರಾತ್ (Gujrat) 7ನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 18,033 ಜನರು ಕನ್ನಡ ಮಾತನಾಡುತ್ತಾರೆ.
ಗೋವಾ (Goa)
ಗೋವಾ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ರಾಜ್ಯಗಳಲ್ಲಿ 6ನೇ ಸ್ಥಾನದಲ್ಲಿದೆ. ಈ ಪುಟ್ಟ ರಾಜ್ಯದಲ್ಲಿ ಸುಮಾರು 67,923 ಜನರು ಕನ್ನಡ ಮಾತನಾಡುತ್ತಾರೆ.
ಕೇರಳ (Kerala)
ಕೇರಳ 5ನೇ ಸ್ಥಾನದಲ್ಲಿದೆ. ನಮ್ಮ ಗಡಿನಾಡಾಗಿರುವ ಕಾಸರಗೋಡಿನಲ್ಲಿ ಅತಿ ಹೆಚ್ಚಿನ ಜನರು ಕನ್ನಡವನ್ನೇ ಮಾತನಾಡುತ್ತಾರೆ. ಅಷ್ಟೇ ಅಲ್ಲ ಕೇರಳದಲ್ಲಿ ಒಟ್ಟು 86995 ಜನರು ಕನ್ನಡ ಮಾತನಾಡುತ್ತಾರೆ.
ಆಂಧ್ರಪ್ರದೇಶ (Andhra Pradesh)
ಆಂಧ್ರಪ್ರದೇಶವು ಕನ್ನಡ ಮಾತನಾಡುವ ಜನರ ಸಂಖ್ಯೆಯನ್ನು ಆಧರಿಸಿ 4ನೇ ಸ್ಥಾನದಲ್ಲಿದೆ. ಇಲ್ಲಿ ಬರೋಬ್ಬರಿ 5,34,144 ಜನರು ಕನ್ನಡವನ್ನು ಮಾತನಾಡುತ್ತಾರೆ.
ಮಹಾರಾಷ್ಟ್ರ (Maharastra)
ಮಹಾರಾಷ್ಟ್ರವು ನಮ್ಮ ಕರ್ನಾಟಕ ಗಡಿಗೆ ಹೊಂದಿಕೊಂಡಿರೋದರಿಂದ ಇಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕೂಡ ಹೆಚ್ಚು. ಮಹಾರಾಷ್ಟ್ರ 3ನೇ ಅತಿ ಹೆಚ್ಚು ಕನ್ನಡ ಮಾತನಾಡುವ ರಾಜ್ಯವಾಗಿದ್ದು, ಇಲ್ಲಿ ಬರೋಬ್ಬರಿ 10,00,463 ಜನರು ಕನ್ನಡ ಮಾತನಾಡುತ್ತಾರೆ.
ತಮಿಳುನಾಡು (Tamilnadu)
ಟಾಪ್ 2 ಸ್ಥಾನದಲ್ಲಿರೋದು ತಮಿಳುನಾಡು. ಇಲ್ಲಿ ಸುಮಾರು 12, 86, 175 ಜನರು ಕನ್ನಡ ಮಾತನಾಡುತ್ತಾರೆ. ತಮಿಳು ಮಾತನಾಡೋ ಜನರ ಮಧ್ಯೆ ಕೂಡ ಎಷ್ಟೊ ಕನ್ನಡಿಗರು ಇದ್ದಾರೆ.
ಕರ್ನಾಟಕ (Karnataka)
ಕರ್ನಾಟಕ ಟಾಪ್ 1 ಸ್ಥಾನದಲ್ಲಿ ಇರಲೇಬೇಕು ಅಲ್ವಾ? ನಮ್ಮ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟಿದೆ ಗೊತ್ತಾ? 4 ಕೋಟಿಗೂ ಹೆಚ್ಚಿನ ಜನರು ಇಲ್ಲಿ ಕನ್ನಡವನ್ನೇ ಮಾತನಾಡ್ತಾರೆ.