ಕರೀನಾ ಕಪೂರ್ ಬಾತ್ ರೂಂಮಲ್ಲಿ ಸಲ್ಮಾನ್ ಖಾನ್ ಪೋಸ್ಟರ್!
'ಮೈನೆ ಪ್ಯಾರ್ ಕಿಯಾ' (Maine Pyar Kiya) ಸಿನಿಮಾ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ (Salman Khan) ಮನೆಮಾತಾದರು. ರಾತ್ರೋರಾತ್ರಿ ಸ್ಟಾರ್ ಆದ ಸಲ್ಮಾನ್ ಪ್ರತಿ ಹುಡುಗಿಯ ಕ್ರಶ್ ಆದರು ಮತ್ತು ಬಾಲಿವುಡ್ನ ಸೂಪರ್ಸ್ಟಾರ್ ಕರೀನಾ ಕಪೂರ್ ಖಾನ್ (Kareena Kapoor) ಕೂಡ ಈ ಪಟ್ಟಿಯಲ್ಲಿದ್ದಾರೆ. ಆ ಸಮಯದಲ್ಲಿ ಕರೀನಾ ಕಪೂರ್ ತನ್ನ ಬಾತ್ ರೂಂನಲ್ಲಿ ಸಲ್ಮಾನ್ ಖಾನ್ ಅವರ ದೊಡ್ಡ ಪೋಸ್ಟರ್ ಹಾಕಿ ಕೊಂಡಿದ್ದರು.

ಒಮ್ಮೆ ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಸಲ್ಮಾನ್ ಅವರ ಟೆಲಿವಿಷನ್ ಶೋ 'ದಸ್ ಕಾ ದಮ್' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ, ಸಲ್ಮಾನ್ಗೆ ಸಂಬಂಧಿಸಿದ ಒಂದು ಘಟನೆಯನ್ನು ನೆನಪಿಸಿಕೊಂಡರು,

ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್, 'ಕರಿಷ್ಮಾ ಮತ್ತು ನಾನು 'ನಿಶ್ಚಯ್' ಚಿತ್ರದ ಶೂಟಿಂಗ್ ಮಾಡುತ್ತಿದ್ದೆವು ಮತ್ತು ಆಕೆಯ ಸಹೋದರಿ ಬೆಬೋ ಅವರ ಬಾತ್ರೂಮ್ಲ್ಲಿ ನನ್ನ ದೊಡ್ಡ ಪೋಸ್ಟರ್ ಇದೆ ಎಂದು ಕರಿಷ್ಮಾ ಹೇಳಿದ್ದರು.
ಆದರೆ ನಂತರ ಮತ್ತೊಂದು ಚಿತ್ರ 'ಆಶಿಕಿ' ಬಿಡುಗಡೆಯಾಯಿತು ಮತ್ತು ಬೆಬೋ ನನ್ನ ಪೋಸ್ಟರ್ ಅನ್ನು ಹರಿದು ಹಾಕಿದರು. ರಾಹುಲ್ ರಾಯ್ ಅವರ ಪೋಸ್ಟರ್ಗೆ ಬದಲಾಯಿಸಿದರಂತೆ.
ನಂತರ ಕರೀನಾ ಬಂದು, ಸಲ್ಮಾನ್ ನಿನ್ನ ಪೋಸ್ಟರ್ ಇನ್ನು ನನ್ನ ಬಾತ್ ರೂಂನಲ್ಲಿ ಇರೋಲ್ಲ. ಈಗ ಅದು ರಾಹುಲ್ ರಾಯ್ ಎಂದು ಹೇಳಿದ್ದಳು ಎಂದು ಸಲ್ಮಾನ್ ಶೋನಲ್ಲಿ ಬಹಿರಂಗಪಡಿಸಿದರು.
ಕರಿಷ್ಮಾ ಕಪೂರ್ ಮತ್ತು ಸಲ್ಮಾನ್ ಖಾನ್ ಜುಡ್ವಾ', 'ಜೀತ್' ಮುಂತಾದ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆಗಿನ್ನೂ ಕರೀನಾ ಶಾಲೆಯಲ್ಲಿ ಓದುತ್ತಿದ್ದರು.
ಸಲ್ಮಾನ್ ಕರೀನಾಳನ್ನು ಶಾಲಾ ಹುಡುಗಿಯಾದಾಗಿನಿಂದಲೂ ನೋಡಿದ್ದಾರೆ. ನಂತರ ಇಬ್ಬರು 'ಮೇನ್ ಔರ್ ಮಿಸೆಸ್ ಖನ್ನಾ', 'ಬಾಡಿಗಾರ್ಡ್' ಮತ್ತು 'ಬಜರಂಗಿ ಭಾಯಿಜಾನ್' ನಂತಹ ಚಲನಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಸಲ್ಮಾನ್ ಮುಂದಿನ 'ಟೈಗರ್ 3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ಕರೀನಾ ಪ್ರಸ್ತುತ ಟಬು ಮತ್ತು ಕೃತಿ ಸನನ್ ಅವರೊಂದಿಗೆ 'ದಿ ಕ್ರ್ಯೂ' ಚಿತ್ರದ ಚಿತ್ರೀಕರಣದಲ್ಲಿದ್ದಾರೆ.