Asianet Suvarna News Asianet Suvarna News

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು..

ಮನುಷ್ಯನ ಗುರಿ ಏನು..?
ಇಂದು ಕುಮಾರವ್ಯಾಸ ಜಯಂತಿ
ಕವಿಬ್ರಹ್ಮನಷ್ಟೇ ಅಲ್ಲ, ಭಾವಬ್ರಹ್ಮ ಕುಮಾರವ್ಯಾಸ
ಕವಿಸಾರ್ಭೌಮನ ಕಾವ್ಯಸೌಂದರ್ಯ ಬಲ್ಲಿರಾ?

Kumaravyasa Jayanti today lets revisit his most famous work skr
Author
First Published Jan 5, 2023, 3:20 PM IST

ಶ್ರೀಕಂಠ ಶಾಸ್ತ್ರಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಉಪನಿಷತ್ತಿನ ಋಷಿಯೋರ್ವ ಕಂಡುಕೊಂಡಂತೆ ಜೀವನದ ಗುರಿ-ಗಮ್ಯ ಆನಂದ. ಆನಂದೋ ಬ್ರಹ್ಮೇತಿವ್ಯಜಾನಾತ್ ಆನಂದಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ.. ಹೀಗೆ ಮಂತ್ರ ಮುಂದುವರೆಯುತ್ತದೆ. ಇದರ ಅರ್ಥ :

ಜೀವನದಲ್ಲಿ ಆನಂದ ಹೊಂದುವುದೇ ಮನುಷ್ಯನ ಪರಮ ಗುರಿ. ಆನಂದಕ್ಕಾಗಿಯೇ ಜೀವರಾಶಿಗಳೆಲ್ಲ ಹುಟ್ಟಿವೆ ಎಂಬುದು. ಈ  ಗುರಿ ತಿಳಿಯುವುದು ಸುಲಭ. ಆದರೆ ಗುರಿ ಕಡೆ ಸಾಗುವುದು ಹೇಗೆ..? ಅದರ ಮಾರ್ಗ ಯಾವುದು..? ಆನಂದದ  ಪಥ ಎಲ್ಲಿದೆ..?

ಅದಕ್ಕೊಂದು ಭವ್ಯ ಸಾಧನವಿದೆ. ಅದೇ ಕಾವ್ಯಾಸ್ವಾದ.

ಕಾವ್ಯ ಮನುಷ್ಯನ ಆನಂದದ ಮಹತ್ಸಾಧನ. ಒಂದು ಮಹತ್ಕಾವ್ಯಕ್ಕೆ ಮನುಷ್ಯನನ್ನು ಬ್ರಹ್ಮಾನಂದದಲ್ಲಿ ಕರಗಿಸುವ ಶಕ್ತಿ ಇರುತ್ತದೆ. ಹೀಗಾಗಿ ಕಾವ್ಯ ಎನ್ನುವುದು ಸಾಕ್ಷಾತ್ ಪರಬ್ರಹ್ಮವಸ್ತು. ಹಾಗಂತ ಬರೆದದ್ದೆಲ್ಲಾ ಕಾವ್ಯ ಎಂದುಕೊಂಡರೆ ಭ್ರಮೆಯಾಗುತ್ತದೆ. ನಾವು ಬರೆದ ಪದ್ಯಗಳೆಲ್ಲಾ, ಗೀಚಿದ ಹಾಡುಗಳೆಲ್ಲಾ ಮಹಾಕಾವ್ಯಗಳಾಗುವುದಿಲ್ಲ. ಯಾಕೆಂದರೆ ನಾವು ಬಳಸುವುದು ಕೇವಲ ಶಬ್ದಗಳನ್ನು ಮಾತ್ರ.  ನಾಲ್ಕಾರು ಶಬ್ದಗಳನ್ನು ಪೋಣಿಸಿ ಅದನ್ನೇ ದೊಡ್ಡ ತೋಮಾಲೆ ಹಾರ ಎಂದು ಬೀಗಿಬಿಡುತ್ತೇವೆ. ಅದಲ್ಲ. ಹಾಗಿದ್ದರೆ ಕಾವ್ಯ ಎಂದರೇನು..? ಕಾವ್ಯ ಹುಟ್ಟುವುದಾದರೂ ಹೇಗೆ..?

ಶಬ್ದಾರ್ಥೌ ಕಾವ್ಯಂ. ಶಬ್ದ-ಅರ್ಥಗಳು ಬೆಸೆಯಬೇಕು. ಶಬ್ದ ಹಾಗೂ ಅರ್ಥಗಳ ಸಮ್ಮಿಲನದಲ್ಲಿ ಕಾವ್ಯ ಕನ್ನಿಕೆ ಅರಳುತ್ತಾಳೆ. ಶಬ್ದ ಶರೀರವೆನಿಸಿದರೆ, ಅದರೊಳಗಿರುವ ಅರ್ಥವೇ ಅದರ ಉಸಿರು. ಇಷ್ಟಾದ ಮೇಲೆ ಕಾವ್ಯದಲ್ಲಿ ಒಂದು ಆತ್ಮ ಶಕ್ತಿ ಬೇಕು. ಅದೇ ಧ್ವನಿ. ಕಾವ್ಯಸ್ಯಾತ್ಮಾ ಧ್ವನಿ: ಅಂತಾನೆ ಆನಂದವರ್ಧನ. ಕಾವ್ಯದಲ್ಲಿ ಒಂದು ಧ್ವನಿ ಇರಬೇಕು. ನಮ್ಮೊಳಗೆ ಸದಾ ಮಿಡುಕುವ ಅಂತರಂಗ ಜ್ಯೋತಿಯ ಹಾಗೆ. ಇಷ್ಟಿದ್ದರೆ ಒಂದು ಕಾವ್ಯ ಜೀವ ತಳೆಯುತ್ತದೆ.

ಮನುಷ್ಯರನ್ನು ಬ್ರಹ್ಮ ಹುಟ್ಟಿಸುವಂತೆ ಕಾವ್ಯಕ್ಕೂ ಒಬ್ಬ ಬ್ರಹ್ಮ ಬೇಕು. ‘ಅಪಾರೇ ಕಾವ್ಯ ಸಂಸಾರೇ ಕವಿರೇವ ಪ್ರಜಾಪತಿ: ಹೀಗೆ ಕವಿ ಬ್ರಹ್ಮನಾಗದ ಹೊರತು ಕಾವ್ಯ ಸೃಷ್ಟಿಯಾಗಲಿಕ್ಕೆ ಸಾಧ್ಯವಿಲ್ಲ. ಅಲ್ಲಿ ಸೃಷ್ಟಿಯು ಪೂರ್ಣ ಸ್ಥಿತಿಗೆ ಬಂದು ಆನಂತರ ವಿಸ್ತಾರಗೊಂಡು ಲಯಕ್ಕೆ ಬರುತ್ತದೆ. ಇದನ್ನ ತಿಳಿದು ಕವಿಯ ಹೃದಯ ಬೆಳಗಿದರೆ ಆಗ ಅವನ ಕಾವ್ಯವನ್ನು ಓದಿದವನು ಜ್ಞಾನಿಯಾಗಿ ಸಮಾಧಿ ಸ್ಥತಿ ತಲುಪಿ ಪರಮಾನಂದ ಸುಖ ಅನುಭವಿಸಲಿಕ್ಕೆ ಸಾಧ್ಯ. ಇಂಥ ಲಕ್ಷಣವಿದ್ದಾಗ ಅದನ್ನು ಮಹಾಕಾವ್ಯ ಎನ್ನಬಹುದು. ಇಂಥ ಕಾವ್ಯ ಸೃಷ್ಟಿ ಮಾಡಿದವನನ್ನು ಕವಿಬ್ರಹ್ಮ ಎನ್ನಬಹುದು. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇಂಥ ಒಬ್ಬ ಅಪ್ರತಿಮ ಕವಿ ಬ್ರಹ್ಮನ ಜನ್ಮದಿನ ಇಂದು. ಈ ದಿನ ಆ ಮಹನೀಯನನ್ನು ನೆನೆಸಿಕೊಳ್ಳದಿದ್ದರೆ ಅದು ನಮ್ಮ ಭಾವನೆಗಳಿಗೆ ತಂದುಕೊಂಡ ಬಡತನ. ನಮ್ಮ ಹೃದಯಾನಂದಕ್ಕೆ ಮಾಡಿಕೊಂಡ ವಂಚನೆಯಾಗುತ್ತೆ. ಹೀಗಾಗಿ ಆ ಕವಿಸಾರ್ಭೌಮನನ್ನು ಮತ್ತು ಅವನ ಕಾವ್ಯ ಸೌಂದರ್ಯವನ್ನು ಸ್ವಲ್ಪವಾದರೂ ಆಸ್ವಾದಿಸುವ ಪ್ರಯತ್ನ ಮಾಡೋಣ.

Gemstone Benefits: ಈ 5 ರತ್ನಗಳು ಸಂಬಂಧದಲ್ಲಿ ಸಂತೋಷವನ್ನು ತುಂಬುತ್ತವೆ..

ಆತ ಹುಟ್ಟಿದ್ದು ನಮ್ಮ ಕನ್ನಡ ನಾಡಿದ ಒಂದು ಬರಡು ಭೂಮಿಯಲ್ಲಿಯಲ್ಲಾದರೂ ಆತನ ಕಾವ್ಯ ಕಾನನವೇ ಆ ಭೂಮಿಯನ್ನ ಇಂದು ಪರಿಮಳದ ಪುಷ್ಪೋದ್ಯಾನವಾಗಿಸಿದೆ. ಪಾವನ ತೀರ್ಥವಾಗಿಸಿದೆ. ಇಂದಿಗೂ ಅಲ್ಲಿ ನೆಲೆಗೊಂಡಿರುವ ವೀರನಾರಾಯಣನಿಗೆ ಕಾವ್ಯಸೇವೆ ನಿತ್ಯವೂ ನೆರವೇರುತ್ತಿದೆ. 

ವಿಷ್ಣುವಿನ ನಾಭಿಯಲ್ಲಿ ಅರಳಿದ ಬ್ರಹ್ಮನಂತೆ ಗದುಗಿನ ವೀರ ನಾರಾಯಣನ ಅನುಗ್ರಹದಿಂದ ಹುಟ್ಟಿದವನು ಕವಿಬ್ರಹ್ಮ ನಾರಣಪ್ಪ. ಕುಮಾರವ್ಯಾಸನೆಂದೆ ಪ್ರಸಿದ್ಧನಾದ ನಾರಣಪ್ಪ ಬರೆದ ಪದ್ಯಗಳೆಲ್ಲ ಕೃಷ್ಣನಿಗೆ ಅರ್ಪಿತವಾದ ಸುಗಂಧ ಪುಷ್ಪಗಳು. ಈ ಕುಮಾರ ವ್ಯಾಸನ ಕುರಿತಾಗಿ ಒಂದು ದಂತ ಕಥೆ ಪ್ರಚಲಿತದಲ್ಲಿದೆ. ಆತ ಗದುಗಿನ ವೀರನಾರಾಯಣ ದೇವಸ್ಥಾನದ ಸಮೀಪದಲ್ಲಿದ್ದ ಬಾವಿಯಲ್ಲಿ ಮಿಂದು ಬಂದು ಒದ್ದೆಬಟ್ಟೆಯನ್ನುಟ್ಟು ನಾರಾಯಣನ ಸನ್ನಿಧಾನದಲ್ಲಿ ನಾವು ಈಗಲೂ ಕಾಣಬಹುದಾದ ಕಂಬದ ಕೆಳಗೆ ಬರೆಯಲು ಕೂತರೆ ಪದವಿಟ್ಟಳುಪದೊಂದಗ್ಗಳಿಕೆ, ಒಂದು ಸಲ ಬರೆಯಲಿಕ್ಕೆ ಪ್ರಾರಂಭಿಸಿದರೆ ಅಳಿಸುವ, ಚಿತ್ತು ಮಾಡುವ ಪ್ರಸಂಗವೇ ಇಲ್ಲ. ಬರೆದದ್ದೆಲ್ಲಾ ರಸಪಾಕಗಳೇ. ಹಾಗೆ ಬರೆಯುತ್ತಾ ಬರೆಯುತ್ತ ಉಟ್ಟ ಬಟ್ಟೆ ಆರಿದ ಮೇಲೆ ಅವನಿಗೆ ಅಡರಿದ್ದ ಕಾವ್ಯಬ್ರಹ್ಮಾವೇಶವೂ ಹಾಗೇ ನಿಧಾನವಾಗಿ ಕರಗುತ್ತಿತ್ತಂತೆ. ಬಟ್ಟೆ ಒಣಗಿದ ಮೇಲೆ ಪದ್ಯಗಳು ಮೂಡುತ್ತಿರಲಿಲ್ಲ ಅಂತಾರೆ.

ಅಂಥ ಮಹನೀಯ ರಚಿಸಿದ ಕಾವ್ಯವೇ ಕರ್ನಾಟ ಭಾರತ ಕಥಾ ಮಂಜರಿ. ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಪಂಪ ಮಹಾಕವಿ ಲೌಕಿಕ ಕಾವ್ಯವೆನಿಸಿದರೆ ಕುಮಾರವ್ಯಾಸನದ್ದು ಭಗವದ್ವಿಲಾಸದ ಭೂಮಿಕೆ. ವ್ಯಾಸರ ಕಥೆಯನ್ನೇ ಹೇಳಿದ್ದರೂ ಕುಮಾರವ್ಯಾಸನ ಸೃಷ್ಟಿ ನವನವೀನ ಎಂಬುದಕ್ಕೆ ಅವನ ಪದ್ಯಗಳಲ್ಲಿ ಹರಿದಾಡುವ ಮಿಂಚೇ ಸಾಕ್ಷಿ. ಆತನ ಕಾವ್ಯದಲ್ಲಿ ಪಶುವಿನಿಂದ ಸ್ಥಿತಪ್ರಜ್ಞ ಕೃಷ್ಣನವರೆಗೆ ಪಾತ್ರಗಳ ಮನೋವೃತ್ತಿ ಇದೆಯಲ್ಲಾ ಅದು ಅವನ ಪ್ರಚಂಡ ಶಕ್ತಿ.

ಕುಮಾರವ್ಯಾಸನ ಪದ ಪ್ರಯೋಗದಲ್ಲಿ ಭಾವ ಭಾಗೀರಥಿ ಧಡಧಡನೆ ಇಳಿದು ಬರುತ್ತಾಳೆ. ತಡೆದು ನಿಲ್ಲಿಸಿ ಅನುಭವಿಸಲಿಕ್ಕೆ ನಮ್ಮೊಳಗೆ ಬೇಕು ಶಿವಶಕ್ತಿ. ಅವನ ಕಾವ್ಯದಲ್ಲಿನ ಒಂದು ಪುಟ್ಟ ಪ್ರಸಂಗವನ್ನು ನೋಡುವುದಾದರೆ..

ಸಭಾ ಪರ್ವದ ಘಟನೆ ಇದು. ದ್ಯೂತ ಸನ್ನಾಹದ ಪ್ರಸಂಗ. ಇಲ್ಲಿ ಗೊತ್ತಾಗತ್ತೆ ಕುಮಾರವ್ಯಾಸನ ಕೌಶಲ್ಯ ಶಕ್ತಿ. ದುರ್ಯೋಧನ ಪಾಂಡವರ ಆತಿಥ್ಯಕ್ಕೆ ಮನಸೋಲದೆ ಹೊಟ್ಟೆ ಉರಿ ಪಟ್ಟುಕೊಂಡ. ಆಗ ದುರ್ಯೋಧನನ ಮನಸ್ಸಿಲ್ಲಾದ ತಳಮಳವನ್ನ ಕವಿ ಬಿಚ್ಚಿಡುವ ಬಗೆ ಇದು.

ನಿತಿನ್ ಗಡ್ಕರಿ ಕೈಲಿವೆ 3 ಅದೃಷ್ಟ ರತ್ನಗಳು; ಏನವುಗಳ ಪ್ರಯೋಜನ?

ಮೂರು ಬಗೆಯಲ್ಲಿ ಕವಿತಾ ರಚನಾ ಪದ್ದತಿ ಇದೆ.

ಒಂದು, ಸ್ವತ: ಸಂಭವಿ - ತಾನೇ ವಿಶೇಷವಾಗಿರುವುದು.

ಕವಿ ಪ್ರೌಢೋಕ್ತಿ - ಕವಿ ತನ್ನ ಮಾತಿನಿಂದ ವಿಶೇಷಗೊಳಿಸಿದರೆ ಅದು ಕವಿ ಪ್ರೌಢೋಕ್ತಿ. ಮತ್ತೊಂದು,

ಕವಿ ನಿಬದ್ಧ ಪ್ರೌಢೋಕ್ತಿ. ಕವಿ ಪಾತ್ರಗಳ ಮೂಲಕ ಅವುಗಳ ಸ್ವಭಾವಕ್ಕೆ ತಕ್ಕ ಹಾಗೆ ಭಾವವನ್ನ ವ್ಯಕ್ತ ಪಡಿಸಬೇಕು. ಅದು ಮೇಲ್ಪಂಕ್ತಿ ಅಂತಾರೆ. ಅಂಥದ್ದನ್ನೇ ಕವಿ ಇಲ್ಲಿ ಬಳಸಿದ್ದಾನೆ. ಇಲ್ಲಿ ಒಂದು ಪ್ರಸಂಗವನ್ನನ  ದುರ್ಯೋಧನನ ಮನಸ್ಸು ಹೇಗೆ ಎಂಬುದನ್ನು ಅವನ ಬಾಯಲ್ಲೇ ಹಲುಬಿಸುವುದು ಹೇಗಿದೆ ಗಮನಿಸಿ.

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮೊಗದ
ತಾಳಿಗೆಯ ನಿರ್ದ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ 

ನೃಪಾಲ ಅಂದರೆ ರಾಜ. ಆದರೆ ಅವನು ಬಂದಿದ್ದು ಇರುಳಲ್ಲಿ. ರಾಜನಾದವನು ಇರಳಲ್ಲಿ ಬಂದ. ಕಳ್ಳರು ಬರುವ ಹೊತ್ತಲ್ಲಿ. ತನ್ನ ಮನೆಗೇ ತಾನು ಅಪವೇಳೆಯಲ್ಲಿ ಬರೋ ಹಾಗಾಯ್ತು.

Budh Uday: ಧನುವಿನಲ್ಲಿ ಬುಧನುದಯ, 4 ರಾಶಿಗಳಿಗೆ ವಿಶೇಷ ಅನುಗ್ರಹ

ಮೇಲು ಮುಸುಕಿನ - ಮುಸುಕು ಬೇರೆ ಹಾಕ್ಕೊಂಡು ಬಂದ.

ಹೊಗೆ ಮೊಗದ - ಮುಖವೆಲ್ಲ ಹೊಗೆಯಾಗಿದೆ. ಇಲ್ಲಿ ನೋಡಿ ಕವಿ ಸಮಯ ಅರಳಿದೆ. ಇದರ ಅಂತರಾರ್ಥ ಗಮನಿಸಿ : ಮುಖವೆಲ್ಲಾ ಹೊಗೆಯಾಯ್ತು. ಯಾವಾಗ..? ಹೊಟ್ಟೆ ಕಿಚ್ಚು ಅತಿಯಾಗಿರುವಾಗ ಅದರ ಹೊಗೆ ಮುಖಕ್ಕೆ ಅಡರದೆ ಇನ್ನೆಲ್ಲಿಗೆ ಅಡರತ್ತೆ ಹೇಳಿ..? ಇದು ಕುಮಾರ ವ್ಯಾಸದ ಭಾವ ದರ್ಶನ ಶಕ್ತಿ.  

ತಾಳಿಗೆಯ ನಿರ್ದ್ರವದ - ಅಂದರೆ ಗಂಟಲಲ್ಲಿ ನೀರು ಒಣಗಿದೆಯಂತೆ. ಹೊಟ್ಟೆಯಲ್ಲಿ ಕಿಚ್ಚಿರುವಾಗ ಗಂಟಲು ಒಣಗದೆ ಮತ್ತೇನು..? ಹೀಗೆ ಅವನ ಕಾವ್ಯದಲ್ಲಿ ವ್ಯಕ್ತಿಗಳ ಸ್ವಾಭವ ಹೇಗೆಲ್ಲಾ ಹೊಯ್ದಾಡ್ತ್ತೆ ಅನ್ನೋದನ್ನ ಲೀಲಾಜಾಲವಾಗಿ ರಚಿಸಿಬಿಡ್ತಾನೆ. ಇಲ್ಲಿ ಶಬ್ದ-ಅರ್ಥ ಧ್ವನಿ ಎಲ್ಲವೂ ಸೇರಿ ರಸಪಾಕವಾಗಿದೆ.

ಇನ್ನೊಂದು ಪ್ರಸಂಗ ಗಮನಿಸಿ,

ಪಾಂಡವರೆಲ್ಲಾ ವನವಾಸಕ್ಕೆ ಬಂದಿದ್ದಾರೆ. ಅವರು ಯಾವರೀತಿ ಕಷ್ಟಪಡುತ್ತಿದ್ದಾರೆ ಎಂಬುದನ್ನು ತಿಳಿದು ಸಂತೋಷಿಸುವ ಕೆಟ್ಟ ಮನಸ್ಸಿನ ದುರ್ಯೋಧನ ಅವರ  ಪರೀಕ್ಷೆಗಾಗಿ ದೂರ್ವಾಸರನ್ನ ಕಳಿಸಿಕೊಟ್ಟಿದ್ದಾನೆ. ದೂರ್ವಾದರು ಅರಣ್ಯಕ್ಕೆ ಬಂದು ಧರ್ಮರಾಜನ ಬಳಿನಿಂದು ಯೋಗ ಕ್ಷೇಮ ವಿಚಾರಿಸಿ,  ಅಪ್ಪಾ ಧರ್ಮರಾಯ ಹೊಟ್ಟೆ ತುಂಬ ಹಸಿವಾಗ್ತಿದೆ ಏನಾದ್ರೂ ಹಸಿವಿಗೆ ಚಿಕಿತ್ಸೆ ಇದೆಯಾ ಅಂತ ಕೇಳ್ತಾನೆ.

Sabarimala: ಜನಪ್ರಿಯ ಅರಾವಣಂ ಪ್ರಸಾದಕ್ಕೆ ಕೀಟನಾಶಕಯುಕ್ತ ಏಲಕ್ಕಿ ಬಳಕೆ ಆರೋಪ! ಇಷ್ಟಕ್ಕೂ ಏನೀ ಅರಾವಣಂ?

ಆಗ ಹಿಂದೆ ಮುಂದೆ ನೋಡದೆ ಧರ್ಮರಾಜ ಪ್ರಾಮಿಸ್ ಮಾಡಿಬಿಡ್ತಾನೆ. ಅದಕ್ಕೇನಂತೆ ಸ್ನಾನ ಮಾಡಿಕೊಂಡು ಬನ್ನಿ.  ಊಟ ಸಿದ್ಧವಿರತ್ತೆ ಅಂತ ತಡವರಿಸದೆ ಹೇಳಿಬಿಡ್ತಾನೆ. ಸರಿ ದೂರ್ವಾಸರು ಸ್ನಾನಕ್ಕೆ ಹೊರಡ್ತಾರೆ.

ಆಗ ಅಲ್ಲಿ ಆಗುವ ತಳಮಳವನ್ನು ಕವಿ ಬಣ್ಣಿಸುವ ಬಗೆ ನೋಡಿ

ಅರಸಿ ಯಾರೋಗಿಸಿದ ಭಾವವ
ಬರವಿನಲಿ ನೃಪನರಿದು ಅರಸನ
ಹರುಷವಡಗಿತು ಧೈರ್ಯ ಸುಕ್ಕಿತು ಉಷ್ಣನಯನಾ೦ಬು |
ಉರಿ ಹೊಡೆದ ಕೆ೦ದಾವರೆಯವೋಲ್
ಕರಕುವಡೆದುದು ಮುಖ ಕಪೋಲಕೆ
ಕರವಿಟ್ಟನು ಮು೦ದೆಗೆಟ್ಟು ಮಹೀಶ ಚಿ೦ತಿಸಿದ

ದೂರ್ವಾಸರು ಸ್ನಾನಕ್ಕೆ ಹೋದ ಮೇಲೆ ಅಡುಗೆ ಮನೆ ಕಡೆ ತಿರುಗಿದ ಧರ್ಮರಾಯ ಅತ್ತ ತಿರುಗಿದರರೆ, ಅರಸಿ ಯಾರೋಗಿಸಿದ ಭಾವವ ಬರವಿನಲಿ ನೃಪನರಿದು ಅರಸನಹರುಷವಡಗಿತು.

ಅರಸಿ- ರಾಣಿ ಅಡುಗೆ ಮನೆಯಿಂದ ಬರ್ತಿರೋ ಧಾಟಿಯಲ್ಲೇ ಅರಸನ ಹರುಷವೆಲ್ಲ ಅಡಗಿಯೋಯ್ತಂತೆ. ಅಂದ್ರೆ ಅವಳು ಅಡುಗೆ ಮನೆಯಿಂದ ಹೇಗೆ ನಡೆದು ಬಂದಳು ಅನ್ನೋ ಅವಳ ನಡಿಗೆಯಲ್ಲೇ ಎಲ್ಲವೂ ಅರ್ಥವಾಗತ್ತೆ.  ಅಗುಳಿ ಹಾಕ್ಕೋಂಡೇ ಬಂದ್ಲೋ, ಸೆರಗಿಗೆ ಕೈ ಒರೆಸಿಕೊಂಡೇ ಬಂದ್ಲೋ, ಮೂತಿ ಸವರಿಕೊಂಡೇ ಬಂದ್ಲೋ ಅಂತು ಅವಳು ಬರುವ ಭಂಗಿಯಲ್ಲೇ ಅಡುಗೆಮನೆ ಖಾಲಿ ಅನ್ನೋದನ್ನ ಕುಮಾರವ್ಯಾಸ ಹೇಳುವ ಕಲೆಯಿದು. ಸಾಮಾನ್ಯವಾಗಿ ಗಂಡುಮಕ್ಕಳು ಮನೆಗೆ ಯಾರನ್ನಾದರೂ ಅಚಾನಕ್ಕಾಗಿ ಆಹ್ವಾನಿಸುವಾಗ ಹೆಣ್ಣುಮಕ್ಕಳ ಸ್ಥಿತಿ, ಅಡುಗೆ ಮನೆ ಪರಿಸ್ಥಿತಿ, ಹಾಲಿದ್ಯಾ, ಮೊಸರಿದ್ಯಾ..? ತರಕಾರಿ ಇದ್ಯಾ ಇದ್ಯಾವುದರ ಚಿಂತೆಯೂ ಮಾಡದೆ ಎಡವುವ ಹಾಗೆ ಧರ್ಮರಾಯ ಎಡವಿದ್ದನ್ನ ಸಹಜವಾಗಿ ಚಿತ್ರಿಸಿ ಗೆದ್ದಿದ್ದಾನೆ. ಆಗ ಅಲ್ಲಿ  ಚಿಂತೆ ಶುರುವಾಗತ್ತೆ. ದೂರ್ವಾದರು ಅಂದ್ರೆ ಸಿಡಿಬೆಂಕಿನುಂಡೆ. ಅವ್ರು ಬಂದ್ಬಿಟ್ರೆ ಗತಿಯೇನು..? ಮತ್ತಿನ್ನೇನು ಶಾಪಕ್ಕೆ ಗುರಿಯಾಗಬೇಕೀಓ ಅಂತ ಎಲ್ಲರೂ ಕಂಗಾಲಾಗಿದ್ದಾರೆ. ಆಗ ಧೌಮ್ಯ ಮಹರ್ಷಿಗಳು ಒಂದು ಉಪಾಯ ಹೇಳ್ತಾರೆ. ನೋಡ್ರಪ್ಪಾ ಕಂಗಾಲಾಗಬೇಡಿ. ಈಗ ಒಳಿದಿರುವುದು ಒಂದೇ ದಾರಿ ಅದು ನಾಮ ಬಲ. ಕೃಷ್ಣನಾಮಾಮೃತವೇ ಈಗ ರಕ್ಷೆ. ಹಾಗಾಗಿ ಕೃಷ್ಣನನ್ನ ನೆನೆಯರಪ್ಪಾ ಅಂತ ಹೇಳ್ತಾರೆ. ಆಗ ಕುಮಾರ ವ್ಯಾಸ ಸಾಕ್ಷಾತ್ ಬ್ರಹ್ಮನಾಗಿ ಬ್ರಹ್ಮೋಪದೇಶವನ್ನೇ ನೀಡುವ ಪರಿಯನ್ನ ನೀವು  ನೋಡಿ.

ಆಯಸ್ಸು ದೇಹಕ್ಕೇ ಹೊರತು ಆತ್ಮಕ್ಕಲ್ಲ ಎಂಬ ಸತ್ಯ ಅರಿತಿದ್ದ ಶ್ರೀಗಳು..!

ಅರಸುವೆನೆ ಪರಿಪೂರ್ಣ ಕೇಳೆ೦
ದರುಹುವೆನೆ ಸರ್ವಜ್ಞ ಸಾಕೆ೦
ದೊರಲ ಲಾರೆನು ತಾಯಿ ನೀ ನಿಮಗಾವು ಶಿಶುಗಳಲೆ |
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯಲು ಭಕುತರಾರ್ತಿಯ
ನರಿವ ವಿಫುಳ ಘರಟ್ಟರಾರು೦ಟೆ೦ದಳಿ೦ದು ಮುಖಿ || ೨೬ ||

ಇಲ್ಲಿ ಕುಮಾರವ್ಯಾಸ ಶಕ್ತಿ ಗಮನಿಸಬೇಕಾದದ್ದು :

ದ್ರೌಪದಿ ಕೃಷ್ಣನನ್ನು ಕರೆಯುವ ಪರಿಯಲ್ಲಿ ವೇದಾಂತವನ್ನೇ ಬಸಿದುಬಿಡುತ್ತಾನೆ ಕವಿ. ಅರಸುವೆನೆ ಪರಿಪೂರ್ಣ - ಹುಡುಕೋಣ ಅಂದ್ರೆ ನೀನು ಪರಿಪೂರ್ಣ. ಎಲ್ಲಿಲ್ಲ ನೀನು..? ಎಲ್ಲ ಕಡೆ ಹರಡಿದೀಯ. ವಿಷ್ಣು ಅಂದ್ರೆ ಸರ್ವ ವ್ಯಾಪಿ ಅಂತ ಅರ್ಥ. ಎಲ್ಲಕಡೆ ವ್ಯಾಪಕವಾಗಿರುವಾತ. ಇಂಥವನನ್ನ ಎಲ್ಲಿ ಅಂತ ಹುಡುಕಲಿ..?

 ಕೇಳೆಂದರಹುವೆನೆ ಪರಿಪೂರ್ಣ - ಕೇಳೋಣ ಅಂದ್ರೆ ನಿನಗೆ ಗೊತ್ತಿಲ್ಲದ್ದಾದ್ರೂ ಏನು..? ಸರ್ವಜ್ಞನಲ್ವಾ ನೀನು..? ಇನ್ನೇನು ಕೇಳೋದು..? ನನಗೆ ಏನು ಬೇಕಾಗಿದೆ ಅಂತ ನಿನಗೇ ಚೆನ್ನಾಗಿ ಗೊತ್ತಿದೆ.  ಈ ಎರಡು ಸಾಲಿನಲ್ಲಿ ಎಲ್ಲವನ್ನೂ ಹೇಳಿಬಿಟ್ಟಿದ್ದಾನೆ ಕುಮಾರವ್ಯಾಸ.

ಗೋಳಾಡಲಾರೆ ನೀನು ನಮ್ಮ ತಾಯಿ. ತಾಯಿಗೆ ಮಾತ್ರವೇ ಮಕ್ಕಳ ಹಸಿವೇನು ಅಂತ ಗೊತ್ತಾಗೋದು. ಹೀಗಾಗಿ ಹೆಚ್ಚು ಗೋಳಾಡಿಸಬೇಡ.

 ಕುರುಹುದೋರೈ ಕೃಷ್ಣಾ - ನೀನು ಇದೀಯ ಅನ್ನೋದು ಸ್ಪಷ್ಟವಾಗಿದೆ. ಆದ್ರೆ ಗುರ್ತುಮಾಡ್ಕೊಡು.  ಇದೇ ಇಲ್ಲೇ ಹೀಗೆ ಅನ್ನೋ ಮಾರ್ಕ್ ಮಾಡ್ಕೊಡು ಸಾಕು ಅಂತ ಕೇಳ್ತಿದ್ದಾನೆ. ಇದರ ಜೊತೆಗೆ ಕುಮಾರವ್ಯಾಸನ ಪ್ರತಿಭಾ ಶಕ್ತಿ ಗೊತ್ತಾಗೋದು ಮುಂದಿನ ಸಾಲುಗಳಲ್ಲಿ.  

ಭಕುತರ ಆರ್ತಿಯನು - ಭಕ್ತರ ಬಯಕೆಯನ್ನು , ಅರಿವ ವಿಫುಳ ಘರಟ್ಟರು ಆರು೦ಟು..?  ಅಲ್ಲಪ್ಪಾ ಸ್ವಾಮಿ ಈಗ ಬಂದಿರೋ ಸಂಕಟ ಎಂಥದ್ದು ಅಂದ್ರೆ ಅದು ಕಠಿಣ ಧಾನ್ಯದಂತೆ. ರಾಗಿಯಂತಿದೆ. ಈ ಕಠಿಣವಾದ ರಾಗಿಯನ್ನ ಬೀಸೋಕಲ್ಲಿನಿಂದ ಹಿಟ್ಟುಮಾಡಿಕೊಡು ಬಾ.. ಕಷ್ಟ ಅನ್ನೋ ರಾಗಿಯನ್ನ ಮಿಕ್ಸಿಗೆ ಹಾಕ್ಕೊಡು ಬಾ. ಹಿಟ್ಟು ಮಾಡ್ಕೊಡು ಬಾ. ಅಂತ ದ್ರೌಪದಿ ಕೇಳ್ತಿದ್ದಾಳೆ.

Siddeshwara Sri Quotes: 'ಅಕ್ಷರ ಕಲಿತವ ಭ್ರಷ್ಟನಾಗಬಹುದು, ಸಂಸ್ಕಾರವಂತ ಭ್ರಷ್ಟನಾಗಲಾರ'

ದ್ರೌಪದಿಗೆ ಈಗ ಅಡುಗೆ ಸಮಸ್ಯೆ. ಅಡುಗೆ ಸಮಸ್ಯೆಯನ್ನ ಅಡುಗೆ ಮನೆಯಲ್ಲಿ ನಡೆಯುವ ಘಟನೆಗಳಲ್ಲೇ ವಿವರಿಬೇಕಾದದ್ದು ಸಜಹ ಸ್ವಭಾವ. ಇದನ್ನ ಕುಮಾರ ವ್ಯಾಸ ದ್ರೌಪದಿಯ ಅಂತರಂಗ ಪ್ರವೇಶ ಮಾಡಿ ಅವಳ ಸಹಜ ಸಂಕಟವನ್ನ ರಾಗಿ ಬೀಸೋ ಕಲ್ಲಿಗೆ ಹೋಲಿಸಿ ಹೇಳಿರುವುದು ಅವನ ಅಸಾಮಾನ್ಯ ಕಲ್ಪನಾ ಶಕ್ತಿಯಲ್ಲದೆ ಮತ್ತೇನು ಹೇಳಿ..?

ಅವನ ಬತ್ತದ ಬತ್ತಳಿಕೆಯ ತುಂಬ ಇಂಥದ್ದೇ ಪದ್ಯಗಳು ತುಂಬಿವೆ. ಒಂದೊಂದೂ ಅಪರಿಮಿತ ಶಕ್ತಿಯುಳ್ಳ ಪದ್ಯಬಾಣಗಳು. ಬಾಣಗಳು ಹೃದಯಕ್ಕೆ ನೆಟ್ಟುಬಿಟ್ಟರೆ ಭಾವರಸ ವಿಷ್ಣುವಿನಂತೆಯೇ ಹರಡಿ ಬಿಡುವುದು ಸತ್ಯ. ಹೀಗಾಗಿ ಕುಮಾರ ವ್ಯಾಸನೆಂದರೆ ಬರೀ ಬ್ರಹ್ಮನಲ್ಲ ಅವನು ಭಾವಬ್ರಹ್ಮ. ಇಂಥ ಮಹನೀಯನನ್ನು ನೆನೆಸಿಕೊಂಡು ಕನಿಷ್ಠ ನಾವು ಇಂದು ಅವನ ಭಕ್ತರಾದರೂ ಆಗೋಣವಲ್ಲವೇ..?

Follow Us:
Download App:
  • android
  • ios