Asianet Suvarna News Asianet Suvarna News

ಬೀಜ ಮತ್ತು ಸಿಪ್ಪೆಯಿಲ್ಲದ ಹಣ್ಣು ಯಾವುದು, 99% ಜನರಿಗೆ ಉತ್ತರ ಗೊತ್ತಿಲ್ಲ, ನಿಮ್ಗೆ ಗೊತ್ತಿದ್ಯಾ?

ಎಜುಕೇಶನ್‌, ಜಾಬ್‌ಗೆ ಸಂಬಂಧಿಸಿದ ಯಾವುದೇ ಎಕ್ಸಾಂ ಪಾಸಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆಯಿದೆ ಎಂದು ನಮಗೆಲ್ಲರಿಗೂ ತಿಳಿದಿದೆ.  ತೀರಾ ಸರಳವೆನಿಸುವ ಉತ್ತರವೇ ಹೊಳೆಯದ ಹಲವು ಪ್ರಶ್ನೆಗಳನ್ನು ಎಕ್ಸಾಂನಲ್ಲಿ ಕೇಳುತ್ತಾರೆ. ಉತ್ತರ ಗೊತ್ತಿದೆ ಗೊತ್ತಿದೆ ಅಂತನಿಸಿದರೂ ಗೊತ್ತಿಲ್ಲದ ಪ್ರಶ್ನೆ. ಅಂಥಾ ಕೆಲವು ಪ್ರಶ್ನೆಗಳು ಇಲ್ಲಿವೆ. ನಿಮಗೆ ಇವುಗಳ ಗೊತ್ತಿದ್ಯಾ ಚೆಕ್ ಮಾಡಿ.

What is a fruit without seed and peel, 99% people dont know the answer Vin
Author
First Published Sep 8, 2023, 1:12 PM IST

ಇವತ್ತಿನ ದಿನಗಳಲ್ಲಿ ಜ್ಞಾನ ಎಂಬುದು ಅತ್ಯಂತ ಬೆಲೆಬಾಳುವ ವಿಷಯವಾಗಿದೆ. ನಾಲೆಡ್ಜ್‌ ಇದ್ದವರು ಎಂಥಾ ಸಾಧನೆಯನ್ನೂ ಮಾಡಿಬಿಡಬಹುದು. ಉತ್ತಮ ವಿದ್ಯಾಭ್ಯಾಸ, ಜಾಬ್ ಹೀಗೆ ಏನೇ ಸಿಗಬೇಕಾದರೂ ನಾಲೆಡ್ಜ್ ಅಂತೂ ಬೇಕೇ ಬೇಕು. ಎಜುಕೇಶನ್‌, ಜಾಬ್‌ಗೆ ಸಂಬಂಧಿಸಿದ ಯಾವುದೇ ಎಕ್ಸಾಂ ಪಾಸಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆಯಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳು ಕೆಲವೊಮ್ಮೆ ತುಂಬಾ ಸಿಂಪಲ್ ಆಗಿದ್ದು, ಟ್ರಿಕ್ಕೀ ಆಗಿರುತ್ತವೆ. 

ಸಾಮಾನ್ಯವಾಗಿ ಈ ರೀತಿಯ ಪರೀಕ್ಷೆಗಳಲ್ಲಿ (Exam) ದೇಶ-ವಿದೇಶಗಳಲ್ಲಿ ನಡೆಯುವ ಆಗು ಹೋಗುಗಳ ಬಗ್ಗೆ ಕೇಳುತ್ತಾರೆ. ಕೆಲವೊಂದು ಚರಿತ್ರೆಗೆ ಸಂಬಂಧಿಸಿದ ಪ್ರಶ್ನೆಗಳು (Questions), ಮ್ಯಾಥ್ಸ್‌ ಸಂಬಂಧಿಸಿದ ಕೊಶ್ಚನ್ಸ್‌ ಸಹ ಇರುತ್ತವೆ. ಇದಲ್ಲದೆ ತೀರಾ ಸರಳವೆನಿಸುವ ಉತ್ತರವೇ ಹೊಳೆಯದ ಹಲವು ಪ್ರಶ್ನೆಗಳನ್ನು ಎಕ್ಸಾಂನಲ್ಲಿ ಕೇಳುತ್ತಾರೆ. ಉತ್ತರ ಗೊತ್ತಿದೆ ಗೊತ್ತಿದೆ ಅಂತನಿಸಿದರೂ ಗೊತ್ತಿಲ್ಲದ ಪ್ರಶ್ನೆ. ಅಂಥಾ ಕೆಲವು ಪ್ರಶ್ನೆಗಳು ಇಲ್ಲಿವೆ. ನಿಮಗೆ ಇವುಗಳ ಗೊತ್ತಿದ್ಯಾ ಚೆಕ್ ಮಾಡಿ.

ಹಣದ ಬಣ್ಣ ಯಾವುದು ? ಇಂಟರ್ ವ್ಯೂನಲ್ಲಿ ಈ ರೀತಿಯ ಪ್ರಶ್ನೆಯೂ ಕೇಳುತ್ತಾರೆ

ಪ್ರಶ್ನೆ : ಬೀಜವಿಲ್ಲದ ಮತ್ತು ಸಿಪ್ಪೆ ಇಲ್ಲದ ಹಣ್ಣು ಯಾವುದು?

ಪ್ರಶ್ನೆ : ಯಾವ ಜೀವಿ ಹಸಿವಾದಾಗ ಕಲ್ಲನ್ನು ತಿನ್ನುತ್ತದೆ ?

ಪ್ರಶ್ನೆ: ಮಲಗಿರುವಾಗಲೂ ಯಾವ ಪ್ರಾಣಿ ಬೂಟುಗಳನ್ನು ಧರಿಸುತ್ತದೆ?

ಪ್ರಶ್ನೆ: ಅವನಿಗೆ ನಾಲ್ಕು ಕಾಲುಗಳಿವೆ, ಆದರೆ ಅವನಿಗೆ ನಡೆಯಲು ಸಾಧ್ಯವಿಲ್ಲ.

ಪ್ರಶ್ನೆ: ಅವಳು ಗಾಢ ಬಣ್ಣವನ್ನು ಕಣ್ಣುಗಳ ಮೇಲೆ ಅಲಂಕರಿಸಲ್ಪಟ್ಟಿದ್ದಾಳೆ. 

ಪ್ರಶ್ನೆ: ದೇಹವನ್ನು ಒರೆಸಿದ ನಂತರವೂ ಒದ್ದೆಯಾಗಿ ಉಳಿಯುವುದು ಯಾವುದು?

ಗಂಡ 4 ಮಕ್ಕಳನ್ನು ಹೊಂದಲು ಕೇಳಿದರೆ ಏನು ಮಾಡುತ್ತೀರಾ? IAS ಸಂದರ್ಶನದ ಪ್ರಶ್ನೆ

ಉತ್ತರ: ಮಲ್ಬೆರಿ (ಹಿಪ್ಪು ನೇರಳೆ)
ಉತ್ತರ: ಆಸ್ಟ್ರಿಚ್ 
ಉತ್ತರ: ಕುದುರೆ
ಉತ್ತರ: ಟೇಬಲ್
ಉತ್ತರ: ಹುಬ್ಬು
ಉತ್ತರ: ಟವೆಲ್

ಐಎಎಸ್ ಸಂದರ್ಶನದಲ್ಲಿ ವಿವಿಧ ರೀತಿಯ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಅವರು ಕೇಳುವ ಪ್ರಶ್ನೆಗಳು ನಿಮ್ಮ ಜ್ಞಾನ (Knowledge)ವನ್ನು ಅರಿಯಲು ಆಗಿರುತ್ತದೆ. ಮತ್ತೆ ಕೆಲವು ನಿಮ್ಮ ವ್ಯಕ್ತಿತ್ವ (Personality)ವನ್ನು ಅಳೆದು, ತೂಗಲು ಕೇಳಿರುತ್ತಾರೆ. ಅದಕ್ಕಾಗಿ ನೀವು ಯೋಚನೆ ಮಾಡಿ ಉತ್ತರ ನೀಡಬೇಕಾಗುತ್ತದೆ.  ಹಾಗಾದರೆ ಐಎಎಸ್ ಸಂದರ್ಶನದಲ್ಲಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ ನೋಡೋಣ... 

ಪ್ರಶ್ನೆ: ಆನೆಗಳ ತೂಕ ಎಷ್ಟು?
ಉತ್ತರ: ಭಾರತದಲ್ಲಿ ಕಂಡುಬರುವ ಆನೆಗಳ ಸರಾಸರಿ ತೂಕ 5000 ಕೆ.ಜಿ ವರೆಗೆ ಇರುತ್ತದೆ. ಆಫ್ರಿಕನ್ ಆನೆಗಳು 6000 ಕಿಲೋವರೆಗೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಆನೆಗಳು 2000 ಕೆಜಿಯಿಂದ 6,500 ಕೆಜಿ ವರೆಗೆ ತೂಗಬಹುದು.   

ಪ್ರಶ್ನೆ: ಶರೀರದ ಯಾವ ಭಾಗ ಬಾಲ್ಯದಿಂದ ಮುಪ್ಪಿನವರೆಗೂ ಬೆಳೆಯುವುದಿಲ್ಲ
ಉತ್ತರ: ಕಣ್ಣು

ಐಎಎಸ್ ಸಂದರ್ಶನದಲ್ಲಿ ಕೇಳುವ ಕೆಲ ಪ್ರಶ್ನೆಗಳು ತಲೆ ತಿರುಗಿಸಿಬಿಡುತ್ತವೆ!!!

ಪ್ರಶ್ನೆ: ಯಾವ ಗ್ರಹದಲ್ಲಿ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ?
ಉತ್ತರ: ಸೌರಮಂಡಲದಲ್ಲಿ ಹೆಚ್ಚಿನ ಚಂದ್ರಮ ಇರುವ ಗ್ರಹ ಗುರು ಆಗಿದೆ. ಈ ಗ್ರಹದಲ್ಲಿ ೨೦೦೯ರಲ್ಲಿ ಒಟ್ಟು 63 ಚಂದಿರರನ್ನು ಕಂಡುಹಿಡಿಯಲಾಗಿತ್ತು. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಚಂದಿರರ ಶೋಧನೆ ನಡೆಯಬಹುದು. 

Follow Us:
Download App:
  • android
  • ios