ಗರಿಷ್ಠ ಹಣ ಸಂಗ್ರಹಿಸುವ ಭಾರತದ ಟಾಪ್ 10 ಟೋಲ್ ಗೇಟ್, ₹13,988 ಕೋಟಿ ಕಲೆಕ್ಟ್

Synopsis
ಕಳೆದ 5 ವರ್ಷದಲ್ಲಿ ಭಾರತದ ಗರಿಷ್ಠ ಹಣ ಸಂಗ್ರಹಿಸುವ ಟಾಪ್ 10 ಟೋಲ್ ಪ್ಲಾಜಾಗಳಿಂದ ಸಂಗ್ರಹವಾದ ಮೊತ್ತ 13,988 ಕೋಟಿ ರೂಪಾಯಿ. ಯಾವ ಟೋಲ್ ಪ್ಲಾಜಾ ಮೊದಲ ಸ್ಥಾನದಲ್ಲಿದೆ? ಈ ಪಟ್ಟಿಯಲ್ಲಿ ಕರ್ನಾಟಕದ ಯಾವುದಾದರೂ ಟೋಲ್ ಗೇಟ್ ಇದೆಯಾ?
ನವದೆಹಲಿ(ಏ.28) ಭಾರತದ ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹೆದ್ದಾರಿಗಳ ಸ್ವರೂಪ ಬದಲಾಗಿದೆ. ಎಕ್ಸ್‌ಪ್ರೆಸ್‌ವೇ ಸೇರಿದಂತೆ ಅಡೆ ತಡೆ ಇಲ್ಲದ ರಸ್ತೆಗಳು ಸಾರಿಗೆ ಸಂಪರ್ಕವನ್ನು ಬದಲಿಸಿದೆ. ಭಾರತದ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಟೋಲ್ ಸಂಗ್ರಹಕ್ಕೆ ಭಾರಿ ವಿರೋಧವಿದೆ. ಏನೇ ಆದರೂ ಈ ಟೋಲ್ ಸಂಗ್ರಹದಲ್ಲಿ ಭಾರತ ದಾಖಲೆ ಬರೆದಿದೆ. ಕಳೆದ 5 ವರ್ಷದಲ್ಲಿ ಭಾರತದ ಟಾಪ್ 10 ಟೋಲ್ ಪ್ಲಾಜಾ ಸಂಗ್ರಹಿಸಿದ ಮೊತ್ತ ಬರೋಬ್ಬರಿ 13,988 ಕೋಟಿ ರೂಪಾಯಿ. ಗರಿಷ್ಠ ಟೋಲ್ ಸಂಗ್ರಹವಾದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗುಜರಾತ್‌ನ ಭರ್ತಾನಾ ಟೋಲ್ ಪ್ಲಾಜಾ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ.
ಭಾರತದ ಕೆಲ ಹೆದ್ದಾರಿಗಳಲ್ಲಿ ಅತೀ ಹೆಚ್ಚು ವಾಹನ ಪ್ರತಿ ದಿನ ಸಂಚಾರ ಮಾಡುತ್ತಿದೆ. ಪ್ರಯಾಣಿಕರು, ಸರಕು ಸಾಗಾಣೆ ಸೇರಿದಂತೆ ಹಲವು ಕಾರಣಗಳಿಂದ ಪ್ರಮುಖ ರಸ್ತೆಗಳು ವಾಹನ ದಟ್ಟಣೆ ರಸ್ತೆ ಎಂದು ಪರಿಗಣಿಸಲಾಗಿದೆ. ಇದೀಗ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲ(MoRTH) ಅಂಕಿ ಅಂಶ ಬಿಡುಗಡೆ ಮಾಡಿದೆ. 2019-20 ರಿಂದ 2023-24ರ ವರೆಗಿನ 5 ವರ್ಷಗಳ ಟೋಲ್ ಸಂಗ್ರಹದ ಮಾಹಿತಿಯನ್ನು ನೀಡಿದೆ.
ಇನ್ಮುಂದೆ ಟೋಲ್‌ನಲ್ಲಿ ವಾಹನಗಳು ಕಾಯಬೇಕಿಲ್ಲ: ಜಿಪಿಎಸ್ ಆಧರಿತ ಟೋಲ್ 15 ದಿನದಲ್ಲಿ ಜಾರಿ: ಗಡ್ಕರಿ
ಭಾರತದಲ್ಲಿ ಗರಿಷ್ಠ ಹಣ ಸಂಗ್ರಹವಾಗುವ ಟಾಪ್ 10 ಟೋಲ್ ಪ್ಲಾಜಾ
ಭರ್ತಾನಾ ಟೋಲ್ ಪ್ಲಾಜಾ, ಗುಜರಾತ್
ಶಹಜಹಾನ್‌ಪುರ್ ಟೋಲ್ ಪ್ಲಾಜಾ, ರಾಜಸ್ಥಾನ
ಜಲಾಧುಲಾಗೋರಿ ಟೋಲ್ ಪ್ಲಾಜಾ, ಪಶ್ಚಿಮ ಬಂಗಾಳ
ಬಾರಜೊರೆ ಟೋಲ್ ಪ್ಲಾಜಾ, ಉತ್ತರ ಪ್ರದೇಶ
ಗರೌಂಡಾ ಟೋಲ್ ಪ್ಲಾಜಾ, ಪಾಣಿಪತ್
ಚೋರಾಸ್ಯ ಟೋಲ್ ಪ್ಲಾಜಾ, ಗುಜರಾತ್
ತಕಾರಿಯಾ ಟೋಲ್ ಪ್ಲಾಜಾ, ರಾಜಸ್ಥಾನ
L&T ಕೃಷ್ಣಗಿರಿ ಥೋಪುರ್ ಪ್ಲಾಜಾ, ತಮಿಳುನಾಡು
ನವಾಬ್‌ಗಂಜ್ ಟೋಲ್ ಪ್ಲಾಜಾ, ಉತ್ತರ ಪ್ರದೇಶ
ಸಾಸರಮ್ ಟೋಲ್ ಪ್ಲಾಜಾ, ಬಿಹಾರ
ಯಾವ ಟೋಲ್ ಪ್ಲಾಜಾದಲ್ಲಿ ಎಷ್ಟು ಸಂಗ್ರಹ?
ಮೊದಲ ಸ್ಥಾನದಲ್ಲಿರುವ ಗುಜರಾತ್‌ನ ಭರ್ತಾನಾ ಟೋಲ್ ಪ್ಲಾಜಾ ವಡೋದಾರ-ಬರೂಚ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿದೆ. ಕಳೆದ 5 ವರ್ಷದಲ್ಲಿ ಈ ಟೋಲ್ ಪ್ಲಾಜಾದಲ್ಲಿ ಒಟ್ಟು 2,043.81 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. 2023-24ರ ಸಾಲಿನಲ್ಲಿ ಅಂದರೆ ಒಂದೇ ವರ್ಷದಲ್ಲಿ 472.65 ಕೋಟಿ ರೂಪಾಯಿ ಹಣ ಸಂಗ್ರಹಿಸಿದೆ.
ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದ ಶಹಜಹಾನ್‌ಪುರ ಟೋಲ್ ಪ್ಲಾಜಾ, ಗುರುಗಾಂವ್-ಕೊತ್ತಾಪುರಿ-ಜೈಪುರ್ ಸೆಕ್ಷನ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿದೆ. ಇದು ದೆಹಲಿ ಹಾಗೂ ಮುಂಬೈ ರಸ್ತೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಈ ಟೋಲ್ ಪ್ಲಾಜ್ ಕಳೆದ 5 ವರ್ಷದಲ್ಲಿ 1,884.46 ಕೋಟಿ ರೂಪಾಯಿ ಸಂಗ್ರಹಿಸಿದೆ.
ಪಶ್ಚಿಮ ಬಂಗಾಳದ ಜಲಾಧುಲಾಗೋರಿ ಫೀ ಟೋಲ್ ಪ್ಲಾಜಾ, ರಾಷ್ಟ್ರೀಯ ಹೆದ್ದಾರಿ 16 ಧಂಕುನಿ-ಖರಗ್‌ಪುರ್ ಮಾರ್ಗದಲ್ಲಿದೆ. ಈ ಟೋಲ್ ಪ್ಲಾಜಾ ಕಳೆದ 5 ವರ್ಷದಲ್ಲಿ 1,480.75 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ 19ರನ್ನು ಸಂಪರ್ಕಿಸುತ್ತದೆ. ಪಾಣಿಪತ್ ಜಲಂಧರ್ ಮಾರ್ಗದಲ್ಲಿರುವ ಗರೌಂಡಾ ಟೋಲ್ ಪ್ಲಾಜಾ, ಶ್ರೀನಗರದಿಂದ ಕನ್ಯಾಕುಮಾರಿ ಸಂಪರ್ಕಿಸುವ ಭಾರತದ ಪ್ರಮುಖ ರಸ್ತೆಯಾಗಿದೆ. ಕಳೆದ 5 ವರ್ಷದಲ್ಲಿ ಈ ಹೆದ್ದಾರಿ ಟೋಲ್ ಪ್ಲಾಜಾ 1,314.37 ಕೋಟಿ ರೂಪಾಯಿ ಸಂಗ್ರಹಿಸಿದೆ. ಟಾಪ್ 10 ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಟೋಲ್ ಗೇಟ್ ಸ್ಥಾನ ಪಡೆದಿಲ್ಲ.
ಒಂದು ವರ್ಷದಲ್ಲಿ 55,882 ಕೋಟಿ ರೂ ಸಂಗ್ರಹ
ಟಾಪ್ 10 ಟೋಲ್ ಪ್ಲಾಜಾಗಳು ಭಾರತದ ಒಟ್ಟು ಟೋಲ್ ಪ್ಲಾಜಾಗಳ ಶೇಕಡಾ 7 ರಷ್ಟು ಹಣ ಸಂಗ್ರಹ ಮಾಡಿದೆ. ಭಾರತದ ಒಟ್ಟು ಟೋಲ್ ಪ್ಲಾಜಾಗಳಿಂದ 2023-24ರ ಸಾಲಿನಲಿನಲ್ಲಿ ಒಟ್ಟು 55,882 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಇದು ಒಂದು ವರ್ಷದಲ್ಲಿ ಸಂಗ್ರಹವಾದ ಟೋಲ್ ಪ್ಲಾಜಾ ಮೊತ್ತ.
ಮತ್ತೊಂದು ಬೆಲೆ ಏರಿಕೆ ಶಾಕ್, ನಾಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣ ದುಬಾರಿ