Asianet Suvarna News Asianet Suvarna News

ಕಾಡಿಗೆ ಸೊಪ್ಪು ತರಲು ಹೋದ ವ್ಯಕ್ತಿಯನ್ನು ಕೊಂದು ತಿಂದ ಹುಲಿ, ಗ್ರಾಮಸ್ಥರಿಗೆ ಸಿಕ್ಕಿದ್ದು ಅರ್ಧ ಮೃತದೇಹ!

ಕಾಡಿಗೆ ಸಮೀಪವಿರುವ ಊರುಗಳಲ್ಲಿ ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ಮಾಡುವ ವಿಚಾರ ಹೊಸದೇನಲ್ಲ. ಹೀಗೆಯೇ ಕಾಡಿನಲ್ಲಿ ಎಲೆಗಳನ್ನು ಸಂಗ್ರಹಿಸಲು ಹೋದ ವ್ಯಕ್ತಿಯನ್ನು ಹುಲಿ ಕೊಂದು ತಿಂದಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

Tiger Kills, Eats Man Near Bhopal, Locals Told to be Alert, Roads with Feline Activity Shut Vin
Author
First Published May 18, 2024, 12:04 PM IST

ಮಧ್ಯಪ್ರದೇಶ: ಕಾಡಿನಲ್ಲಿ ಎಲೆಗಳನ್ನು ಸಂಗ್ರಹಿಸಲು ಹೋದ 62 ವರ್ಷದ ವ್ಯಕ್ತಿಯನ್ನು ಹುಲಿ ಕೊಂದು ತಿಂದಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಭೋಪಾಲ್ ನಗರ ಮಿತಿಯಿಂದ ಕೇವಲ 20 ಕಿಮೀ ದೂರದಲ್ಲಿರುವ ರೈಸನ್ ಜಿಲ್ಲೆಯ ಒಬೆದುಲ್ಲಾಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವರದಿಗಳ ಪ್ರಕಾರ ಇದು ದಶಕಗಳಲ್ಲಿ ಭೋಪಾಲ್ ಸುತ್ತಮುತ್ತಲ ಪ್ರದೇಶದಲ್ಲಿ ಹುಲಿಯಿಂದ ಮಾನವ ಹತ್ಯೆಯಾದ ಮೊದಲ ವರದಿಯಾಗಿದೆ. ಅರಣ್ಯ ಅಧಿಕಾರಿಗಳು ಹುಲಿಗಳನ್ನು ಪತ್ತೆಹಚ್ಚಲು ಈ ಪ್ರದೇಶದಲ್ಲಿ 40 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸ್ಥಾಪಿಸಿದ್ದಾರೆ.

ಸಂಜೆಯಾದ ನಂತರ ಕಾಡಿಗೆ ಕಾಲಿಡದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಹುಲಿ ಸಂಚರಿಸಲು ಸಾಧ್ಯತೆಯಿರುವ ಇರುವ ರಸ್ತೆಗಳನ್ನು ಮುಚ್ಚಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರೈಸನ್ ಜಿಲ್ಲೆಯ ಒಬೆದುಲ್ಲಾಗಂಜ್ ಪ್ರದೇಶದ ರತಪಾನಿ ವನ್ಯಜೀವಿ ಅಭಯಾರಣ್ಯದ ನೀಮ್ಖೇಡ ಕುಶಿಯಾರಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.

ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹೆದ್ದಾರಿ, ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ಫೋಟೋ ವೈರಲ್‌

ಸಂತ್ರಸ್ತ ಮಣಿರಾಮ್ ಜಾತವ್, ಎಲೆಗಳನ್ನು ಸಂಗ್ರಹಿಸಲು ಏಕಾಂಗಿಯಾಗಿ ಕಾಡಿನೊಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಹುಲಿ ಬೇಟೆಯಾಡಿ ತಿಂದು ಹಾಕಿದೆ. ಕಾಡಿಗೆ ಹೋದ ಮಣಿರಾಮ್‌ ಹಲವಾರು ಗಂಟೆಗಳ ಕಾಲ ಹುಡುಕಾಡಿದರೂ ಬರದಿದ್ದಾಗ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಡಿದರು. ಹೀಗೆ ಹುಡುಕಾಡುವಾಗ ಪೊದೆಯೊಳಗೆ ಅರ್ಧ ಮೃತದೇಹ ಸಿಕ್ಕಿದೆ.

ಬೆಳಗ್ಗೆ ಡಿಎಫ್‌ಒ ವಿಜಯ್‌ ಕುಮಾರ್‌ ಮತ್ತು ಎಸ್‌ಡಿಒ ಸುಧೀರ್‌ ಪಟ್ಲೆ ಅವರ ಸಮ್ಮುಖದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡ ಶವ ಪರೀಕ್ಷೆ ನಡೆಸಿತು. ಜಾತವ್ ಅವರನ್ನು ಹುಲಿ ಕೊಂದು ತಿಂದಿರುವುದು ದೃಢಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಅಯ್ಯೋ ಫುಲ್ ಸೆಖೆ ಗುರು... ನ್ಯಾಚುರಲ್ ಸ್ವಿಮ್ಮಿಂಗ್ ಫುಲ್‌ನಲ್ಲಿ ಚಿಲ್‌ ಮಾಡ್ತಿರುವ ಟೈಗರು.!

Latest Videos
Follow Us:
Download App:
  • android
  • ios