Asianet Suvarna News Asianet Suvarna News

ಕಲಬುರಗಿ ವಕೀಲನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಬಂಧನ

ಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಮುಖ  ಆರೋಪಿಯನ್ನು ಕಲಬುರಗಿಯ ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Kalaburgi lawyer murder case Main accused arrested by kalaburagi police rav
Author
First Published Dec 10, 2023, 9:33 AM IST

ಕಲಬುರಗಿ (ಡಿ.10): ಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಮುಖ  ಆರೋಪಿಯನ್ನು ಕಲಬುರಗಿಯ ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೀಲಕಂಠ ಪಾಟೀಲ್ಕ ಬಂಧಿತ ಆರೋಪಿ. ನ.7 ರಂದು ಕಲಬುರಗಿಯ ಶ್ರೀ ಗಂಗಾವಿಹಾರ ಅರ್ಪಾಟಮೆಂಟ್ ನಲ್ಲಿ ಹತ್ಯೆಯಾಗಿತ್ತು.  ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನ ಬಂಧಿಸಿರುವ ಪೊಲೀಸರು. ಬಂಧಿತ ಮಲ್ಲಿನಾಥ ನಾಯ್ಕೋಡಿ, ಭಾಗೇಶ, ಅವಣ್ಣ. ಈ ಮೂವರು ಪ್ರಮುಖ ಆರೋಪಿಯ ಪ್ಲಾನ್‌ನಂತೆ ಹತ್ಯೆಗೈದಿದ್ದರು. ಆದ್ರೆ ಪ್ರಮುಖ ಆರೋಪಿಯಾಗಿದ್ದ ನೀಲಕಂಠ ಪಾಟೀಲ್ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ವಿಶೇಷ ತಂಡ ರಚನೆ ತಡರಾತ್ರಿ ಆರೋಪಿಯನ್ನು ಬಂಧಿಸಿದ ಖಾಕಿ ಪಡೆ. 

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹೈಕೋರ್ಟ್‌ ವಕೀಲನ ಭೀಕರ ಹತ್ಯೆ

ಹತ್ಯೆಗೆ ಕಾರಣ:

ವಕೀಲ ಈರಣ್ಣ ಗೌಡನಿಗೆ ಕೋಟ್ಯಂತರ ಬೆಲೆ ಬಾಳು ಜಮೀನು ಇದೆ. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ 12 ಏಕರೆ ಜಮೀನು. ಜಮೀನಿನಲ್ಲಿ ಪಾಲು ಕೇಳಿದ್ದ ಹಂತಕರು. ಆದರೆ ಇವರ ಬೇಡಿಕೆಗೆ ವಿರೋಧಿಸಿದ್ದ ಈರಣ್ಣ ಗೌಡ. ಪಾಲು ಸಿಗಲ್ಲ ಎಂದು ಖಾತ್ರಿಯಾಗ್ತಿದ್ದಂತೆ ಕೊಲೆಗೆ ಸಂಚು ರೂಪಿಸಿದ ಹಂತಕರು. ಈರಣ್ಣಗೌಡ ಸತ್ತರೆ ಜಮೀನಿಗೆ ವಾರಸುದಾರರೇ ಇರಲ್ಲ ಎಂದು ಸ್ಕೆಚ್. ಕೋಟ್ಯಂತರ ರೂಪಾಯಿ ಬೆಲೆಬಾಳುವ ಈರಣ್ಣಗೌಡನ ಜಮೀನಿನ ಮೇಲೆ ಕಣ್ಣಿಟ್ಟು ಹತ್ಯೆ ಮಾಡಿರುವ ಹಂತಕರು. 

ಯುವಕನ ಕೊಲೆ: ಮೂವರು ಆರೋಪಿಗಳ ಬಂಧನ

ಬಾಗೇಪಲ್ಲಿ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ 28 ವರ್ಷದ ಗಜೇಂದ್ರ ಎಂಬ ಯುವಕನನ್ನು ಡಿ.7ರಂದು ತಡರಾತ್ರಿ ಗ್ರಾಮದ ಜನನಿಬಿಡ ಪ್ರದೇಶದ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಭೇದಿಸಿರುವ ಪೊಲೀಸರು, ಈ ಸಂಬಂಧ ಆರೋಪಿಗಳಾದ ಸುರೇಂದ್ರಬಾಬು, ಶ್ರೀನಾಥ್ ಹಾಗೂ ವೆಂಕಟೇಶ ಎಂಬುವರನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ: ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 56 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ: ಎಸ್‌ಬಿಐ ಬ್ಯಾಂಕ್ ವಿರುದ್ಧ FIR

ಕೊಲೆಯಾದ ಗಜೇಂದ್ರ ಹಾಗೂ ಆರೋಪಿಗಳಾದ ಸುರೇಂದ್ರಬಾಬು, ಶ್ರೀನಾಥ್ ಹಾಗೂ ವೆಂಕಟೇಶ್​ ಎಲ್ಲರೂ ಸಂಬಂಧಿಕರೇ. ಮೃತ ಗಜೇಂದ್ರ ಆರೋಪಿ ಸುರೇಂದ್ರ ಬಾಬುನ ಅಕ್ಕನ ಮಗಳನ್ನು ಪ್ರೀತಿಸಿ ಆಕೆಯೊಂದಿಗೆ ಮನೆಬಿಟ್ಟು ಹೋಗಿದ್ದ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗೇಪಲ್ಲಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಂದ್ರಬಾಬು ಹಾಗೂ ಗಜೇಂದ್ರ ಮಧ್ಯೆ ದ್ವೇಷ ಉಂಟಾಗಿತ್ತು. ಇದರಿಂದ ಸುರೇಂದ್ರ ಬಾಬು, ವೆಂಕಟೇಶ ಹಾಗೂ ಶ್ರೀನಾಥ್ ಸೇರಿ ಗಜೇಂದ್ರನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇವರೆಲ್ಲರೂ ಕ್ಯಾಂಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios