Asianet Suvarna News Asianet Suvarna News

Gadag : ಕೊಲೆಯೋ? ಅಪಘಾತವೋ? ಮಗನ ಸಾವಿನ ರಹಸ್ಯ ಬಯಲು ಮಾಡುವಂತೆ ತಾಯಿಯ ಒತ್ತಾಯ

ಹೆತ್ತ ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರೋ ರೇಣುಕಾ ಅವರು, ಘಟನೆ ನಡೆದ ಸ್ಥಳದಲ್ಲಿ ಬೈಕ್ ಡಬಲ್ ಸ್ಟ್ಯಾಂಡ್ ಹಾಕಿದ್ದು‌ ಹಾಗೆಯೇ ಇದೆ.‌ ತಲೆ ಹಾಗೂ ಕಾಲಿಗೆ ಗಾಯವಾಗಿದೆ. ಆದ್ರೆ, ದೇಹದಲ್ಲಿ ಬೇರೆಲ್ಲೂ ಗಾಯವಾಗಿಲ್ಲ ಅನ್ನೋದು ಅನುಮಾನಕ್ಕೆ ಕಾರಣವಾಗಿದೆ. 

Gadag Mother insists to reveal the secret of her son's death gow
Author
First Published Jan 29, 2024, 7:29 PM IST

ಗದಗ (ಜ.29): ಗದಗ  ಜಿಲ್ಲೆಯ ಹರ್ತಿ ಗ್ರಾಮದ ಬಳಿ 2023 ರ ನವೆಂಬರ್ 13 ರ ರಾತ್ರಿ 29 ವರ್ಷದ ಅಭಿಷೇಕ್ ಉಮಚಗಿ ಅನ್ನೋರ ಮೃತ ದೇಹ ಪತ್ತೆಯಾಗಿತ್ತು. ಬೈಕ್ ಮೇಲಿಂದ ಬಿದ್ದು ಅಭಿಷೇಕ್ ಮೃತಪಟ್ಟಿದ್ರು.  ಹಿಟ್ ಆ್ಯಂಡ್ ರನ್ ರೀತಿಯಲ್ಲಿ ಪ್ರಕರಣ ಕಂಡು ಬಂದ್ರೂ ಕೊಲೆ ನಡೆದಿರಬಹುದು ಅನ್ನೋ ಅನುಮಾನ ಮೃತ ಅಭಿಷೇಕ್ ಅವರ ತಾಯಿ ರೇಣುಕಾ ಆರೋಪಿಸ್ತಿದ್ದಾರೆ.

ಹೆತ್ತ ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರೋ ರೇಣುಕಾ ಅವರು, ಘಟನೆ ನಡೆದ ಸ್ಥಳದಲ್ಲಿ ಬೈಕ್ ಡಬಲ್ ಸ್ಟ್ಯಾಂಡ್ ಹಾಕಿದ್ದು‌ ಹಾಗೆಯೇ ಇದೆ.‌ ತಲೆ ಹಾಗೂ ಕಾಲಿಗೆ ಗಾಯವಾಗಿದೆ. ಆದ್ರೆ, ದೇಹದಲ್ಲಿ ಬೇರೆಲ್ಲೂ ಗಾಯವಾಗಿಲ್ಲ ಅನ್ನೋದು ಅನುಮಾನಕ್ಕೆ ಕಾರಣವಾಗಿದೆ. 

ಪ್ರತಿ ದಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಿಂದ ಬೇಸತ್ತ ಪತ್ನಿ, ಬುದ್ಧಿಕಲಿಸಲು ಹೋಗಿ ಪತಿ ಆಸ್ಪತ್ರೆ ದಾಖಲು!

ಅಭಿಷೇಕನ ಮೊಬೈಲ್ ನಲ್ಲಿನ ಘಟನೆ ದಿನ ಹಾಗೂ ಅದರ ಹಿಂದಿನ ದಿನದ ಎಲ್ಲ ಕಾಲ್ ಡಿಟೈಲ್ಸ್ ಡಿಲೀಟ್ ಮಾಡಲಾಗಿದೆ. ಘಟನೆ ನಡೆದಾಗ ಪಂಚನಾಮೆಗೂ ರೇಣುಕಾ ಅವರನ್ನ ಕರೆದಿರಲಿಲ್ಲ. ಕುಟುಂಬಸ್ಥರು ಬರುವ ಮುನ್ನವೇ ಆಸ್ಪತ್ರೆಗೆ ಬಾಡಿ ಶಿಫ್ಟ್ ಮಾಡ್ಲಾಗಿತ್ತು. ಹೀಗಾಗಿ ಇದೊಂದು ಅಪಘಾತವೂ ಅಥವಾ ಕೊಲೆಯೋ ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದು, ಇಷ್ಟು ದಿನವಾದ್ರು ಗದಗ ಗ್ರಾಮೀಣ ಪೊಲೀಸರು ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತಾ ಅಭಿಷೇಕ್ ತಾಯಿ ಆರೋಪ ಮಾಡಿದ್ದಾರೆ. 

ರೇಣುಕಾ ಉಮಚಗಿ ಅವರಿಗೆ ಇಬ್ಬರು ಮಕ್ಕಳು. ಒಬ್ಬ ಬುದ್ಧಿಮಾಂದ್ಯ, ಇನ್ನೋರ್ವ ಸಾವನ್ನಪ್ಪಿರೋ ಅಭಿಷೇಕ. ಹುಬ್ಬಳ್ಳಿಯ ನವನಗರದಲ್ಲಿ ರೇಣುಕಾ ಉಮಚಗಿ ಕುಟುಂಬ ವಾಸ ಮಾಡ್ತಿದೆ. ಗದಗ ಜಿಲ್ಲೆಯ ಕಣವಿ ಹೊಸೂರು ಗ್ರಾಮದ ಯುವತಿಯೊಂದಿಗೆ ಅಭಿಷೇಕನ ಮದುವೆ ಮಾಡಿದ್ರು. ಮದುವೆಯಾಗಿ 11 ತಿಂಗಳಾಗಿತ್ತು. ಗಂಡ ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ವಾರದಲ್ಲಿ ಎರಡು ಬಾರಿ ಹುಬ್ಬಳ್ಳಿಯ ನವನಗರದಿಂದ ತವರು ಮನೆ ಕಣವಿಹೊಸರು ಗ್ರಾಮಕ್ಕೆ ಹೆಂಡತಿ ಹೋಗ್ತಿದ್ರಂತೆ.

ಪೂಜೆ ಮಾಡುವ ನೆಪದಲ್ಲಿ ಮಹಿಳೆಯ ಚಿನ್ನ ಎಗರಿಸಿಕೊಂಡು ಹೋದ ಬುಡುಬುಡಿಕೆಯವರು!

ನವೆಂಬರ್ 13 ರಂದು ತಾಯಿ ರೇಣುಕಾಳ‌ ಮುಂದೆ ಸ್ನೇಹಿತರ ಜೊತೆಗೆ ಹೋಗುತ್ತೇನೆ ಅಂತಾ ಹೇಳಿದ್ದ ಅಭಿಷೇಕ್, ಕಣವಿ ಹೊಸೂರಿನಲ್ಲಿರೋ ತನ್ನ ಪತ್ನಿ ತವರು ಮನೆಗೆ ಹೋಗ್ತಿದ್ದ. ಹೋಗುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.. ಹೀಗಾಗಿ ಇದೊಂದು ಅಪಘಾತವಲ್ಲ, ಕೊಲೆಯೂ ಆಗಿರ್ಬಹದು ಅನ್ನೋದು ಅಭಿಷೇಕ್ ಕುಟುಂಬಸ್ಥರು ಸಂಶಯ. ಅಭಿಷೇಕನ ಮೊಬೈಲ್ ಲಾಕ್ ಓಪನ್ ಮಾಡೋದು ಪತ್ನಿಗೆ ಮಾತ್ರ ಗೊತ್ತಿತ್ತು.

ಆದ್ರೆ, ಅಭಿಷೇಕ ಸಾವನ್ನಪ್ಪಿದ ದಿನ ಹಾಗೂ ಅದರ ಹಿಂದಿನ ದಿನದ ಕಾಲ್ ಹಿಸ್ಟರಿ ಡಿಲೀಟ್ ಮಾಡಲಾಗಿದೆ. ತನಿಖೆ ಬಗ್ಗೆ ಗದಗ ಗ್ರಾಮೀಣ ಪೊಲೀಸರನ್ನು ಕೇಳಿದ್ರೆ, ಅವರು ಹೆಚ್ಚಿಗೆ ಏನು ಹೇಳ್ತಿಲ್ಲ.. ಹೀಗಾಗಿ ಗದಗ ಎಸ್ಪಿಯವರನ್ನು ಭೇಟಿಯಾಗಿ ಮತ್ತೊಮ್ಮೆ ದೂರು ನೀಡಲು ಕುಟುಂಬ ನಿರ್ಧಾರ ಮಾಡಿದೆ.. ಪ್ರಕರಣದ ಬಗ್ಗೆ ಎಸ್ ಪಿ ಬಿಎಸ್ ನೇಮಗೌಡ ಅವರನ್ನ ಕೇಳಿದ್ರೆ, ಕೇಸ್ ವಿಚಾರವಾಗಿ ದೂರುದಾರರಿಗೆ ಕೆಲ ಗೊಂದಲಗಳಿದ್ದವು, ಪರಿಹರಿಸಿದ್ದೇವೆ.. ತನಿಖೆ ಮಾಡ್ತಿದ್ದೇವೆ. ಆದಷ್ಟು ಬೇಗ ಪ್ರಕರಣದ ಸ್ಪಷ್ಟತೆ ಬೆಳಕಿಗೆ ಬರಲಿದೆ ಅಂತಾ ಹೇಳ್ತಿದ್ದಾರೆ.

ಅಭಿಷೇಕ ಸಾವಿನ ಸುತ್ತ ಸಾಕಷ್ಟು ಅನುಮಾನದ ಹುತ್ತ ಬೆಳೆದಿದೆ. ಮೇಲಾಗಿ ಈ‌ ಅಪಘಾತದ ಪ್ರಕರಣದಲ್ಲಿ ಗದಗ ಗ್ರಾಮೀಣ ಪೊಲೀಸರ ನಡೆಯೂ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈವರೆಗೂ ಅಪಘಾತವಾದ ವಾಹನ ಪತ್ತೆಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ದೂರುದಾರರನ್ನು ಕರೆದುಕೊಂಡು ಹೋಗಿಲ್ಲ. ಪಂಚನಾಮೆ ಮಾಡುವ ವೇಳೆಯಲ್ಲಿಯೂ ಹೆತ್ತ ತಾಯಿ ಹಾಗೂ ಕುಟುಂಬಸ್ಥರಿಗೆ ಮಾಹಿತಿ ಇಲ್ಲ. ಹೀಗಾಗಿ ಅಭಿಷೇಕನ ಸಾವಿನ ರಹಸ್ಯವನ್ನು ಬಯಲು ಮಾಡ್ಬೇಕು, ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನೊಂದ ತಾಯಿ ನ್ಯಾಯಕ್ಕಾಗಿ ಅಂಗಲಾಚಿದ್ದು, ಗದಗ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಗೊಂದಲದ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣುವಂತೆ ಮಾಡ್ಬೇಕು.

Follow Us:
Download App:
  • android
  • ios