Asianet Suvarna News Asianet Suvarna News

ಚಿತ್ರದುರ್ಗ: ಕೇವಲ 150 ರೂ. ಕೊಡದಿದ್ದಕ್ಕೆ ಕೊಲೆ..!

ಘಟನೆಯು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ದಾಖಲಾಗಿದೆ. ಗಲಾಟೆ ಮಾಹಿತಿ ನೀಡಿದ ಕೂಡಲೇ ಆರೋಪಿ ಶೇಖರಪ್ಪನನ್ನು ಬಂಧಿಸಿ ವಿಚಾರಣೆ ಆರಂಭಿಸಿದ ಪೊಲೀಸರು 

60 Year Old Man Killed in Chitradurga grg
Author
First Published Dec 12, 2023, 8:58 PM IST

ಚಿತ್ರದುರ್ಗ(ಡಿ.12):  ಕೋಟಿಗಟ್ಟಲೇ ಹಣದ ವ್ಯವಹಾರದ ಹಂಚಿಕೆಯಲ್ಲಿ ವ್ಯತ್ಯಾಸ ಆದಾಗ ಕೊಲೆ ಆಗೋದು ಸರ್ವೆ ಸಾಮಾನ್ಯ. ಆದ್ರೆ ಕೋಟೆನಾಡಿನಲ್ಲಿ ಕೇವಲ 150 ರೂಪಾಯಿಗಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ವರದಿ ಇಲ್ಲಿದೆ.

ಎಸ್ ವೀಕ್ಷಕರೇ, ಜನರು ವ್ಯವಹಾರ ಮಾಡುವ ಮೊದಲು ಚೆನ್ನಾಗಿಯೇ ಇರ್ತಾರೆ. ಆದ್ರೆ ವ್ಯವಹಾರಗಳಲ್ಲಿ ಕೋಟಿ ಕೋಟಿ ಲಾಭ ಬಂದಂತೆಲ್ಲಾ ಸಹಪಾಠಿಗಳ‌ ಮಧ್ಯೆ ವೈಮನಸ್ಸು ಬಂದು, ಗಲಾಟೆ ನಡೆದು ಕೊನೆಯಲ್ಲಿ ಕೊಲೆಯಾಗಿರುವ ಎಷ್ಟೋ ಘಟನೆಗಳು ನಮ್ಮ ಕಣ್ಮುಂದೆ ಇವೆ. ಆದ್ರೆ ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದಲ್ಲಿ ಕೇವಲ 150 ರೂ.ಗೆ ಕೊಲೆ ಆಗಿರುವ ಇಂದು(ಮಂಗಳವಾರ) ಬೆಳಕಿಗೆ ಬಂದಿದೆ. 

ಬೆಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ಆಟೋ ಚಾಲಕನ ಹತ್ಯೆಗೈದ ದುಷ್ಕರ್ಮಿಗಳು

ಒಂದೆ ಗ್ರಾಮದ ನಾಗರಾಜ್ (60) ಹಾಗೂ ಶೇಖರಪ್ಪ (65) ಪರಸ್ಪರ ಸ್ನೇಹಿತರಾಗಿರುತ್ತಾರೆ. ಈ‌ ಹಿಂದೆ ನಾಗರಾಜ್ ಸ್ನೇಹಿತ ಶೇಖರಪ್ಪ ಬಳಿ ಕೇವಲ 150 ರೂ. ಸಾಲವಾಗಿ ಪಡೆದಿರುತ್ತಾನೆ. ನಿತ್ಯ ಕುಡಿದು ಮನೆ ಬಾಗಿಲಿಗೆ ಬಂದು ನಾಗರಾಜ್ ನನ್ನ ಹಣ ವಾಪಾಸ್ ಕೊಡು ಎಂದು ಶೇಖರಪ್ಪ ಗಲಾಟೆ ಮಾಡ್ತಿರ್ತಾನೆ. ಇದ್ರಿಂದ ಬೇಸರಗೊಂಡ ಮೃತ ವ್ಯಕ್ತಿ ಶೇಖರಪ್ಪನ ಮಗ ಮಾರುತಿ ನಿತ್ಯ ಗಲಾಟೆ ಮಾಡ್ತಾನೆ ಆತನ ಸಹವಾಸ ಯಾಕೆ ಬೇಕು ಎಂದು ತಾನೇ 150 ರೂ. ಒಂದು ವಾರದ ಹಿಂದೆ ಕೊಟ್ಟು ಕಳಿಸಿರ್ತಾನೆ. ಆದರೂ ಸುಮ್ಮನಾಗದ ಆರೋಪಿ ಶೇಖರಪ್ಪ‌, ಅದಾಗಿಯೂ ನಿನ್ನೆ ರಾತ್ರಿಯೂ ಮೃತನ ಮನೆ ಬಾಗಿಲಿಗೆ ಬಂದು ಗಲಾಟೆ ಶುರು ಮಾಡಿದ್ದಾನೆ. 

ಈ ಇಬ್ಬರ ಮಧ್ಯೆ ಪರಸ್ಪರ ಗಲಾಟೆ ಶುರುವಾಗಿದ್ದು ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಡೆದಿದೆ. ನಮ್ಮ ತಂದೆಯ ಸಾವಿಗೆ ನ್ಯಾಯ ಸಿಗುವವರೆಗೂ ನಾವು ಸುಮ್ಮನೆ ಇರಲ್ಲ ಎಂದು ಮೃತ ವ್ಯಕ್ತಿ ಮಗಳು ಮೀನಾಕ್ಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಘಟನೆಯು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ದಾಖಲಾಗಿದೆ. ಗಲಾಟೆ ಮಾಹಿತಿ ನೀಡಿದ ಕೂಡಲೇ ಆರೋಪಿ ಶೇಖರಪ್ಪನನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಬೆಂಗಳೂರು: ಮುಂದಿನ ತಿಂಗಳು ಹಸೆಮಣೆಗೆ ಏರಬೇಕಿದ್ದ ಆಟೋ ಚಾಲಕನ ಬರ್ಬರ ಕೊಲೆ

ಆರೋಪಿ ಕೇವಲ 150 ರೂ.ಗೆ ಕೊಲೆ ಮಾಡಿದ್ದಾನಲ್ಲ, ನಾವು ಅದೇ ದುಡ್ಡು ಕೊಟ್ರೆ ಮತ್ತೆ ಜೀವ ವಾಪಾಸ್ ಬರಲಿದೆಯೇ ಎಂದು ಸಂಬಂಧಿಕರು ಆರೋಪಿಗೆ ಪ್ರಶ್ನೆ ಮಾಡ್ತಿದ್ದಾರೆ. ಇನ್ನೂ ಕೊಲೆ ನಡೆದಿದ್ದರೂ ಇಡೀ ಊರಿನ ಯಾವ ಹಿರಿಯ ಮುಖಂಡರು ಕೂಡ ಯಾರೂ ಬಂದು ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿಲ್ಲ. ಕೇವಲ ದುಡ್ಡಿಗಾಗಿ ಯಾರಿಗೆ ಏನು ಬೇಕಾದ್ರು ಇವರು ಮಾಡ್ತಾರೆ ಎಂಬುದಕ್ಕೆ ಇದೆ ಸಾಕ್ಷಿ. ನಮಗೆ ಆಗಿರುವ ಅನ್ಯಾಯ ಮುಂದೆ ಬೇರೆಯವರಿಗೂ ಆಗಲ್ಲ ಎಂಬುದು ಏನು ಗ್ಯಾರಂಟಿ. ಆದ್ದರಿಂದ ಪೊಲೀಸರು ಆರೋಪಿಗೆ ತಕ್ಕ ಶಿಕ್ಷೆ ನೀಡಿ, ನಮ್ಮ‌ ತಂಟೆಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮೃತನ ಸಂಬಂಧಿ ನೇತ್ರಾವತಿ ಆಗ್ರಹಿಸಿದರು.

ಸಿಟ್ಟಿನ ಕೈಗೆ ಬುದ್ದಿ ಕೊಟ್ರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದೊಂದು ಕೊಲೆಯೇ ಸಾಕ್ಷಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಎನಿವೇ ಕೇವಲ 150 ರೂ.ಗೆ ಕೊಲೆ ಆಗಿದೆ ಅಂದ್ರೆ ಎಂಥವರಿಗೂ ಶಾಕ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ. 

Follow Us:
Download App:
  • android
  • ios