ಸದಾ ನಗ್ನತೆಯಿಂದ ಹಾಗೂ ಕಾಂಟ್ರವರ್ಸಿ ಮೂಲಕ ಗುರುತಿಸಿಕೊಂಡಿರೋ ನಟಿ ಪೂನಂ ಪಾಂಡೆಗೆ ಯಾವ ರೀತಿಯ ಗಂಡ ಬೇಕು ಎನ್ನುವ ಕನಸನ್ನು ತೆರೆದಿಟ್ಟಿದ್ದಾರೆ ಅವರ ತಾಯಿ ವಿದ್ಯಾ. ಅವರು ಹೇಳಿದ್ದೇನು ಕೇಳಿ... 

ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇರೋ ಬಾಲಿವುಡ್​​ ನಟಿ ಪೂನಂ ಪಾಂಡೆಯ ಮತ್ತೊಂದು ಅಶ್ಲೀಲತೆಯ ವಿಡಿಯೋ ಕೆಲ ದಿನಗಳ ಹಿಂದಷ್ಟೇ ವೈರಲ್‌ ಆಗಿತ್ತು. ನಟಿ ದಿವ್ಯಾ ಅಗರ್ವಾಲ್‌ ಅವರ ಹುಟ್ಟುಹಬ್ಬಕ್ಕೆ ಹೋಗಿದ್ದ ನಟಿ ಕೆಳಗಿನ ಒಳ ಉಡುಪು ಧರಿಸದೇ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪೂನಂ ಪಾಂಡೆಯನ್ನು ಕಂಡು ಖುಷಿಯಿಂದ ದಿವ್ಯಾ ತಬ್ಬಿಕೊಂಡಾಗ, ಬಟ್ಟೆ ಮೇಲೆ ಹೋಗಿದೆ. ಆಗ ಕೆಳಗಿನ ಒಳ ಉಡುಪು ಧರಿಸದೇ ಇರುವುದು ಕಂಡು ಬಂದಿದೆ. ಇನ್ನು ಪಾಪರಾಜಿಗಳಿಗೆ ಕೇಳಬೇಕಾ? ಜೋರಾಗಿ ಕೂಗಿದ್ದಾರೆ. ಆ ಸಂದರ್ಭದಲ್ಲಿ ನಟಿ ಹಿಂಬದಿ ಕೈಯಿಟ್ಟು ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಏನೂ ಆಗಿಲ್ಲ ಎನ್ನುವಂತೆ ನಗುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದಾಗಿದೆ! ಹೀಗೆ ಉದ್ದೇಶಪೂರ್ವಕವಾಗಿ ನಗ್ನತೆಯನ್ನು ಮೆರೆಯುವ ಪೂನಂ ಪಾಂಡೆಗೆ ಮದುವೆ ಮಾಡಲು ಅವರ ಅಮ್ಮ ಮುಂದಾಗಿದ್ದಾರೆ.

ಗೂಗಲ್​ ದಾಖಲೆಯ ಪ್ರಕಾರ ನಟಿಗೆ ಈಗ 34 ವರ್ಷ ವಯಸ್ಸು. ಇದೀಗ ಇನ್​ಸ್ಟಾಬಾಲಿವುಡ್​ಗೆ ನೀಡಿರುವ ಸಂದರ್ಶನದಲ್ಲಿ ಮಗಳ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದೀಗ ಪೂನಂ ಪಾಂಡೆಯ ಅಮ್ಮ ವಿದ್ಯಾ ಪಾಂಡೆ ಅವರು ಇಂಡಸ್ಟ್ರಿಯ ಮಂದಿ ನನ್ನ ಅಳಿಯ ಆಗೋದು ಬೇಡಪ್ಪಾ ಎಂದು ಮುಖ ಕಿವುಚಿದ್ದಾರೆ. ಇವರು ನನಗೆ ಸ್ವಲ್ಪನೂ ಇಷ್ಟ ಇಲ್ಲ. ನನ್ನ ಮಗಳು ಇಂಡಸ್ಟ್ರಿಯಲ್ಲಿ ಇದ್ದರೂ ನನಗೆ ಅಳಿಯ ಮಾತ್ರ ನಟರು ಬೇಡವೇ ಬೇಡ. ಇಲ್ಲಿ ಯಾರೂ ಸರಿಯಲ್ಲ ಎಂದಿದ್ದಾರೆ. ನನ್ನ ಇನ್ನೊಂದು ಮಗಳು ಮದುವೆಯೇ ಬೇಡ ಎಂದು ಕುಳಿತಿದ್ದಾಳೆ. ಪೂನಂಗಾದ್ರೂ ಮದ್ವೆಯಾಗಲಿ, ಯಾವುದೇ ಸಾಧಾರಣ ನೌಕರಿಯಲ್ಲಿ ಇರುವವ, ಕಡಿಮೆ ದುಡಿದರೂ ಪರವಾಗಿಲ್ಲ. ಅಂಥವನೇ ಇವಳ ಗಂಡ ಆಗಲಿ ವಿನಾ ಸಿನಿಮಾ ಮಂದಿ ಉಸಾಬರಿಯೇ ಬೇಡ ಎಂದಿದ್ದಾರೆ!

ಅಷ್ಟಕ್ಕೂ ಕಳೆದ ವರ್ಷ ಸರಿಸುಮಾರು ಇದೇ ಟೈಮ್​ಗೆ ಪೂನಂ ಪಾಂಡೆಯ ವಿಷಯ ಸದ್ದು ಮಾಡಿತ್ತು. ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದ್ದರು.

ಸಾವಿನ ಸುಳ್ಳು ಸುದ್ದಿ ಹರಡಿದ್ದ ಈಕೆಯ ವಿರುದ್ಧ ಇದಾಗಲೇ ಹಲವಾರು ಕೇಸ್​ ದಾಖಲಾಗಿದೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯೂ ದಾಖಲಾಗಿದೆ. ಆದರೆ ಸದ್ಯ ಯಾವ ಕೇಸ್​ಗಳದ್ದೂ ಸುದ್ದಿ ಇಲ್ಲ. ಎಲ್ಲವೂ ಸೈಲೆಂಟ್​ ಆಗಿದೆ. ಪೂನಂ ಸುಳ್ಳು ಸುದ್ದಿ ಹರಡಿದ್ದು ಗೊತ್ತಾಗುತ್ತಿದ್ದಂತೆಯೇ ಚಿತ್ರನಿರ್ಮಾಪಕ ಅಶೋಕ್​ ಪಂಡಿತ್​ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್​ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ. ಇದೇ ಹಿನ್ನೆಲೆಯಲ್ಲಿ ಕೇಸ್​ ದಾಖಲಾಗಿದ್ದರೂ ಇದುವರೆಗೆ ಏನೂ ಸುದ್ದಿಯಿಲ್ಲ.

 

View post on Instagram