Asianet Suvarna News Asianet Suvarna News

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್‌ ನಲ್ಲಿ ಉದ್ಯೋಗವಕಾಶ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್‌ ಇಲಾಖೆಯಲ್ಲಿ ಖಾಲಿ ಇರುವ 457 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Union Public Service Commission recruitment Combined Defence Services jobs gow
Author
First Published Jan 5, 2024, 12:37 PM IST

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ (ಯುಪಿಎಸ್‌ಸಿ) ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್‌ (ಸಿಡಿಎಸ್) ಇಲಾಖೆಯಲ್ಲಿ ಖಾಲಿ ಇರುವ 457 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್‌ ಪರೀಕ್ಷೆ-457 ಹುದ್ದೆಗಳು

(ವಿಭಾಗವಾರು ಮಾಹಿತಿ ಇಂತಿದೆ)

1.ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್-100 ಹುದ್ದೆ

2.ಇಂಡಿಯನ್ ನೇವಲ್ ಅಕಾಡೆಮಿ, ಎಜಿಮಲ್-32 ಹುದ್ದೆ

3.ಏರ್ ಫೋರ್ಸ್ ಅಕಾಡೆಮಿ, ಹೈದರಾಬಾದ್-(ಪ್ರೀ-ಫ್ಲೈಯಿಂಗ್) -32 ಹುದ್ದೆ

4.ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ (ಮದ್ರಾಸ್)- 275 ಹುದ್ದೆ

5.ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ (ಮದ್ರಾಸ್) – 18 ಹುದ್ದೆ

85 ಲಕ್ಷ ಉದ್ಯೋಗ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಬರೆದ ಐಐಐಟಿ ವಿದ್ಯಾರ್ಥಿನಿ!

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 09-01-2024

ಅರ್ಜಿ ನಮೂನೆಯಲ್ಲಿ ಬದಲಾವಣೆಯ ದಿನಾಂಕ: 10-01-2024 ರಿಂದ 16-01-2024 ರವರೆಗೆ

ಪರೀಕ್ಷೆಯ ದಿನಾಂಕ: 21-04-2024

ಅರ್ಜಿ ಶುಲ್ಕ

ಸಾಮಾನ್ಯ ವರ್ಗ/ ಇರತರಿಗೆ : 200 ರು.

ಎಸ್ ಸಿ/ ಎಸ್‌ ಟಿ/ ಮಹಿಳಾ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ.

ವಯಸ್ಸಿನ ಮಿತಿ (01-01-2024 ರಂತೆ) :

ಕನಿಷ್ಠ ವಯಸ್ಸು: 20 ವರ್ಷಗಳು

ಗರಿಷ್ಠ ವಯಸ್ಸು: 24 ವರ್ಷಗಳು

ನಿರುದ್ಯೋಗಿಗಳಿಗೆ 2024ರ ವರ್ಷ ಲಕ್‌, ಭಾರತದಲ್ಲಿ 3.9 ಮಿಲಿಯನ್ ಉದ್ಯೋಗ ಸೃಷ್ಟಿ

ಶೈಕ್ಷಣಿಕ ವಿದ್ಯಾರ್ಹತೆ:

1. ಇಂಡಿಯನ್ ಮಿಲಿಟರಿ ಅಕಾಡೆಮಿ ಮತ್ತು ಅಧಿಕಾರಿಗಳ ತರಬೇತಿ ಅಕಾಡೆಮಿ ಹುದ್ದೆಗಾಗಿ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

2. ಇಂಡಿಯನ್ ನೇವಲ್ ಅಕಾಡೆಮಿ ಹುದ್ದೆಗಾಗಿ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

3.ಏರ್ ಫೋರ್ಸ್ ಅಕಾಡೆಮಿ ಹುದ್ದೆಗಾಗಿ: ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಅಧ್ಯಯನ ಮಾಡಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ಸೂಚನೆ: ಅಂತಿಮ ವರ್ಷದ ಪದವಿ ಕೋರ್ಸ್‌ನಲ್ಲಿ ಓದುತ್ತಿರುವ ಮತ್ತು ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಇನ್ನೂ ಉತ್ತೀರ್ಣರಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ದೈಹಿಕ ಮಾನದಂಡಗಳು: ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್ (1), 2024 ರ ಪ್ರವೇಶಕ್ಕಾಗಿ ಅಭ್ಯರ್ಥಿಗಳು ದೈಹಿಕ ಮಾನದಂಡ ನಿಯಮಗಳ ಪ್ರಕಾರ ದೈಹಿಕವಾಗಿ ಫಿಟ್ ಆಗಿರಬೇಕು.

ಪರೀಕ್ಷೆಯ ಮಾಹಿತಿ ಮತ್ತು ಆಯ್ಕೆ ವಿಧಾನ: ಈ ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮತ್ತು ಬುದ್ಧಿಮತ್ತೆ ಮತ್ತು ಸಂದರ್ಶನ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

1.ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ : ಇದು ವಸ್ತುನಿಷ್ಠ ಮಾದರಿಯ ಪರೀಕ್ಷೆಯಾಗಿರುತ್ತದೆ.

(ಎ) ಇಂಡಿಯನ್ ಮಿಲಿಟರಿ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಮತ್ತು ಏರ್ ಫೋರ್ಸ್‌ ಅಕಾಡೆಮಿ ಪ್ರವೇಶಕ್ಕಾಗಿ : ಇಲ್ಲಿ ಇಂಗ್ಲಿಷ್, ಸಾಮಾನ್ಯ ಜ್ಞಾನ, ಪ್ರಾಥಮಿಕ ಗಣಿತಕ್ಕೆ ಸಂಬಂಧಿಸಿದಂತೆ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 300 ಅಂಕಗಳಿಗೆ ,6 ಗಂಟೆಯ ಅವಧಿಗೆ ಪರೀಕ್ಷೆ ನಡೆಸಲಾಗುತ್ತದೆ.

2.ಬುದ್ಧಿವಂತಿಕೆ ಮತ್ತು ವ್ಯಕ್ತಿತ್ವ ಪರೀಕ್ಷೆ: ಈ ಪ್ರಕ್ರಿಯೆಯು - ಹಂತ 1 ಮತ್ತು ಹಂತ 2 ಎಂಬ ಎರಡು ಹಂತದ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಹಂತ-1ನ್ನು ತೇರ್ಗಡೆಯಾದ ಅಭ್ಯರ್ಥಿಗಳು ಮಾತ್ರ ಹಂತ-2 ಕ್ಕೆಅರ್ಹರಾಗುತ್ತಾರೆ.

(ಎ) ಹಂತ -1: ಇದು ಚಿತ್ರ ಗ್ರಹಿಕೆ, ವಿವರಣೆ ಪರೀಕ್ಷೆಯಾಗಿದ್ದು, ಅಧಿಕಾರಿ ಇಂಟೆಲಿಜೆನ್ಸ್ ರೇಟಿಂಗ್ (ಒಐಆರ್) ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.‌ ಇಲ್ಲಿ ಅಭ್ಯರ್ಥಿಗಳ ಸಂಯೋಜನೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

(ಬಿ) ಹಂತ 2: ಹಂತ -1 ರಲ್ಲಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನ, ಗುಂಪು ಪರೀಕ್ಷೆ, ಅಧಿಕಾರಿ ಕಾರ್ಯಗಳು, ಮನೋವಿಜ್ಞಾನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಟ್ಟು 4 ದಿನಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಯ ವಿವರಗಳಿಗಾಗಿ ಅಧಿಕೃತ ವೆಬ್‌ ಸೈಟ್‌ ಅನ್ನು ವೀಕ್ಷಿಸಬಹುದು.

ಪರೀಕ್ಷಾ ಕೇಂದ್ರಗಳು: ಪರೀಕ್ಷೆಯು ಭಾರತದಾದ್ಯಂತ ಇರುವ ಎಲ್ಲಾ ರಾಜ್ಯಗಳ ಪ್ರಮುಖ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ, ಮೈಸೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

Follow Us:
Download App:
  • android
  • ios