Asianet Suvarna News Asianet Suvarna News

1.09 ಕೋಟಿ ಸರ್ಕಾರಿ ಉದ್ಯೋಗಕ್ಕೆ ಕೇವಲ 87 ಲಕ್ಷ ಜನರಿಂದ ಮಾತ್ರ ನೋಂದಣಿ!

 ರಾಷ್ಟ್ರೀಯ ಉದ್ಯೋಗ ಸೇವಾ ಪೋರ್ಟಲ್‌ನಲ್ಲಿ ಈ ವರ್ಷ 1.09 ಕೋಟಿ ಉದ್ಯೋಗಾವಕಾಶಕ್ಕೆ ಕೇವಲ 87 ಲಕ್ಷ ಮಂದಿಯಷ್ಟೇ ನೋಂದಣಿ ಮಾಡಿಸಿಕೊಂಡಿರುವ ಸಂಗತಿ ಬಯಲಾಗಿದೆ.

More jobs  less takers  Only 87 lakh applied against 1.09 crore jobs gow
Author
First Published Apr 29, 2024, 11:44 AM IST

ನವದೆಹಲಿ (ಏ.29): ನೂರು ಹುದ್ದೆಗಳು ಖಾಲಿ ಇದ್ದರೆ ಅದಕ್ಕೆ ಸಾವಿರಾರು ಅರ್ಜಿಗಳು ಬರುವುದು ಸಾಮಾನ್ಯ. ಆದರೆ ರಾಷ್ಟ್ರೀಯ ಉದ್ಯೋಗ ಸೇವಾ ಪೋರ್ಟಲ್‌ನಲ್ಲಿ ಈ ವರ್ಷ 1.09 ಕೋಟಿ ಉದ್ಯೋಗಾವಕಾಶಗಳು ಇವೆ. ಆದರೆ ಅದನ್ನು ಪಡೆಯಲು ಕೇವಲ 87 ಲಕ್ಷ ಮಂದಿಯಷ್ಟೇ ನೋಂದಣಿ ಮಾಡಿಸಿಕೊಂಡಿರುವ ಸಂಗತಿ ಬಯಲಾಗಿದೆ.

ಇವೆಲ್ಲ ಸರ್ಕಾರಿ ಉದ್ಯೋಗಗಳು. ಖಾಸಗಿ ಕ್ಷೇತ್ರದಲ್ಲಿರುವ ನೌಕರಿಗಳೇ ಇಲ್ಲಿ ನೋಂದಣಿಯಾಗಿವೆ. ಆದರೆ ಈ ವೆಬ್‌ಸೈಟ್‌ನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲದ ಕಾರಣ ನೋಂದಣಿ ಕುಸಿದಿರಬಹುದು ಎಂದೂ ಹೇಳಲಾಗುತ್ತಿದೆ.

ಮುದ್ದಿನ ಶ್ವಾನ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

ರಾಷ್ಟ್ರೀಯ ಉದ್ಯೋಗ ಸೇವಾ ಪೋರ್ಟಲ್‌ನಲ್ಲಿ 2023ಕ್ಕೆ ಹೋಲಿಸಿದರೆ ಈ ವರ್ಷ ಉದ್ಯೋಗ ಲಭ್ಯತೆ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. 2023ರಲ್ಲಿ 34,81,944 ರಷ್ಟಿದ್ದ ಉದ್ಯೋಗಾವಕಾಶ ಈಗ 1,09,24,161ಕ್ಕೆ ಏರಿಕೆಯಾಗಿದೆ. ಆದರೆ ಆ ಉದ್ಯೋಗ ಪಡೆಯಲು ನೋಂದಣಿ ಮಾಡಿಸಿಕೊಳ್ಳುವವರ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. 2023ರಲ್ಲಿ 57,20,748 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಈಗ ಅದು 87,20,900ಕ್ಕೆ ಹೆಚ್ಚಳವಾಗಿದೆ. ಅಂದರೆ ಶೇ.53ರಷ್ಟು ಏರಿಕೆ ಕಂಡಬಂದಿದೆ. ಉದ್ಯೋಗ ಏರಿಕೆ ಪ್ರಮಾಣಕ್ಕೆ ಹೋಲಿಸಿದರೆ ಇದು ಹೆಚ್ಚಲ್ಲ.

ಕರ್ನಾಟಕ ಲೋಕಸೇವಾ ಆಯೋಗದ 384 ಹುದ್ದೆಗೆ 1.95 ಲಕ್ಷ ಅರ್ಜಿ ಸಲ್ಲಿಕೆ!

ಉದ್ಯೋಗ ಸೇವಾ ಪೋರ್ಟಲ್‌ನಲ್ಲಿ ನೌಕರಿಗಳ ಸಂಖ್ಯೆ ದೇಶದಲ್ಲಿ ಆರ್ಥಿಕ ಪ್ರಗತಿಯ ಸಂಕೇತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೋರ್ಟಲ್‌ನಲ್ಲಿ ಹಣಕಾಸು ಹಾಗೂ ವಿಮಾ ವಲಯದ ನೌಕರಿಗಳು ಹೆಚ್ಚು ನೋಂದಣಿಯಾಗಿವೆ. ನಂತರದ ಸ್ಥಾನದಲ್ಲಿ ಸೇವಾ ವಲಯದ ಉದ್ಯೋಗಗಳಿವೆ.

Follow Us:
Download App:
  • android
  • ios