Asianet Suvarna News Asianet Suvarna News

ಹಗರಣ ಬಯಲಿಗೆಳೆದು ಮಾಫಿಯಾದಿಂದ 7 ಸುತ್ತು ಗುಂಡೇಟಿಗೆ ಒಳಗಾಗಿದ್ದ ಅಧಿಕಾರಿಗೆ UPSC ಗರಿ

ಸ್ಕಾಲರ್‌ಶಿಪ್‌ ಹಗರಣ ಬಯಲಿಗೆಳೆದು ಮಾಫಿಯಾಗಳಿಂದ 7 ಸುತ್ತು ಗುಂಡು ಹಾರಿಸಿ ಸಾಯಿಸಲು ಯತ್ನಿಸಿಲ್ಪಟ್ಟಿದ್ದ ಉತ್ತರಪ್ರದೇಶದ ಅಧಿಕಾರಿ ರಿಂಕೂ ರಹೀ ಈಗ  ಯುಪಿಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದು, 683ನೇ ರ್ಯಾಂಕ್‌ ಗಳಿಸಿದ್ದಾರೆ.
 

Uattar pradesh officer Rinkoo Rahee clears UPSC exam was shot 7 times by mafias for exposing scholarship scam akb
Author
Bangalore, First Published Jun 2, 2022, 2:46 PM IST

ಮೀರತ್: ಉತ್ತರ ಪ್ರದೇಶದ ಹಾಪುರ್‌ನ 2007ರ ಬ್ಯಾಚ್‌ನ ಪ್ರಾಂತೀಯ ಸಿವಿಲ್ ಸರ್ವಿಸ್ (ಪಿಸಿಎಸ್) ಅಧಿಕಾರಿ ರಿಂಕೂ ರಹೀ (Rinkoo Rahee) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು 683ನೇ ಶ್ರೇಣಿ ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.  ಪ್ರಾಂತೀಯ ಸಿವಿಲ್ ಸರ್ವಿಸ್ ಅಧಿಕಾರಿಯಿಂದ ಅಖಿಲ ಭಾರತ ಮಟ್ಟದ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗುವವವರೆಗಿನ ಅವರ ಹಾದಿ ಸುಲಭದ ಮಾರ್ಗವಾಗಿರಲಿಲ್ಲ. 

ಇವರು ಸ್ಕಾಲರ್‌ಶಿಪ್ ಹಗರಣವನ್ನು ಬಯಲಿಗೆಳೆದಿದ್ದಕ್ಕಾಗಿ ಮಾಫಿಯಾಗಳಿಂದ 7 ಸುತ್ತು ಗುಂಡು ಹಾರಿಸಿಕೊಂಡಿದ್ದರು. 26ನೇ ವಯಸ್ಸಿನಲ್ಲಿ 100 ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನ ಹಗರಣವನ್ನು ಭೇದಿಸಿದಾಗ ರಹೀ ಮಾಫಿಯಾಗಳ ಕೋಪವನ್ನು ಎದುರಿಸಬೇಕಾಯಿತು. ಮಾರ್ಚ್ 2009 ರಲ್ಲಿ ಮಾಫಿಯಾಗಳು ಅವರಿಗೆ ಏಳು ಸುತ್ತು ಗುಂಡು ಹಾರಿಸಿದ್ದರು. 

ಏಳು ಗುಂಡುಗಳಲ್ಲಿ, ಮೂರು ಗುಂಡುಗಳು  ರಿಂಕು ಅವರ ಮುಖವನ್ನು ಹೊಕ್ಕಿ ಅವರನ್ನು ವಿರೂಪಗೊಳಿಸಿದವು. ಅವರ ಒಂದು ಕಣ್ಣು ಕುರುಡಾಗಿದ್ದಲ್ಲದೇ ಕಿವಿಗೆ ಶಾಶ್ವತವಾಗಿ ಶ್ರವಣದೋಷವನ್ನು ಉಂಟು ಮಾಡಿತು. ಆದರೆ ಇವರು ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದಾಗ ಇದ್ಯಾವುದೂ ಕೂಡ ಅವರನ್ನು ಧೃತಿಗೆಡಿಸಲಿಲ್ಲ. ಅಲ್ಲದೇ ಒಂದು ರೀತಿಯಲ್ಲಿ ಇವರ ಈ ಸಮಸ್ಯೆಗಳೇ ಅವರಿಗೆ ನೆರವಾಗಿ ಬಂತು. ಏಕೆಂದರೆ ಯುಪಿಎಸ್‌ಸಿಯಲ್ಲಿ ವಿಶೇಷ ಚೇತನರಿಗೆ ಮಾತ್ರ 40 ವರ್ಷಗಳವರೆಗೆ ಪರೀಕ್ಷೆ ಬರೆಯುವ ಅವಕಾಶವಿದೆ. ಇದರ ಪರಿಣಾಮ ರಿಂಕೂ ರಾಹೀ ಅವರಿಗೆ ತಮ್ಮ 40ನೇ ವಯಸ್ಸಿನಲ್ಲಿ ಪರೀಕ್ಷೆ ಪೂರ್ಣಗೊಳಿಸಿ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಯಿತು. 

Udupi: ಯುಪಿಎಸ್‌ಸಿ ಪರೀಕ್ಷೆ: ಟ್ಯಾಕ್ಸಿ ಚಾಲಕನ ಪುತ್ರ ಸಾಧನೆ
2008 ರಲ್ಲಿ ಮುಜಾಫರ್‌ನಗರದಲ್ಲಿ (Muzaffarnaga)  ರಿಂಕೂ ರಾಹೀ ಅವರು ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಅವರು ಬೃಹತ್ ಮಟ್ಟದ ಸ್ಕಾಲರ್‌ಶಿಪ್ ದಂಧೆಯನ್ನು (scholarship scam) ಭೇದಿಸಿದ್ದರು. ಪರಿಣಾಮ ಮಾಫಿಯಾಗಳು ಇವರನ್ನು ಹತ್ಯೆ ಮಾಡಲು ಯತ್ನಿಸಿದ್ದರು. ಇವರ ಮೇಲಿನ ದಾಳಿಗೆ ಎಂಟು ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು. ಹಾಗೂ ಈ ಪೈಕಿ ನಾಲ್ವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನಾನು ಆಸ್ಪತ್ರೆಯಲ್ಲಿ ನನ್ನ ಜೀವಕ್ಕಾಗಿ ಹೋರಾಡುತ್ತಿರುವಾಗ, ನಾನು ವ್ಯವಸ್ಥೆಯ ವಿರುದ್ಧ ಹೋರಾಡಲಿಲ್ಲ. ವ್ಯವಸ್ಥೆಯು ನನ್ನ ವಿರುದ್ಧ ಹೋರಾಡುತ್ತಿತ್ತು. ನಾನು ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು. ಆದರೆ ನನ್ನ ವೈದ್ಯಕೀಯ ರಜೆ ಇನ್ನೂ ಅನುಮೋದನೆಗಾಗಿ ಬಾಕಿ ಉಳಿದಿದೆ ಎಂದು 40 ವರ್ಷದ ರಾಹೀ ಹೇಳಿದರು. ಮಾಫಿಯಾಗಳಿಂದ ಕೊಲೆ ಯತ್ನಕ್ಕೆ ಒಳಗಾದ ಸಮಯದಲ್ಲಿ ರಾಹೀ 26 ವರ್ಷ ವಯಸ್ಸಿನಲ್ಲಿದ್ದರು. 

ಮಾಯಾವತಿ ಸರ್ಕಾರದ ಅವಧಿಯಲ್ಲಿ ತನ್ನ ಮೇಲೆ ದಾಳಿ ನಡೆಸಲಾಯಿತು ಮತ್ತು ಸಮಾಜವಾದಿ ಪಕ್ಷದ ಆಳ್ವಿಕೆಯಲ್ಲಿ ಭ್ರಷ್ಟಾಚಾರವನ್ನು ಅತಿಯಾಗಿ ಪ್ರತಿಭಟಿಸಿದ್ದಕ್ಕಾಗಿ ಅವರನ್ನು ಮಾನಸಿಕ ಚಿಕಿತ್ಸಾಲಯಕ್ಕೆ ಕಳುಹಿಸಲಾಯಿತು ಎಂದು ರಹೀ ಹೇಳಿದರು. ಉತ್ತರಪ್ರದೇಶಕ್ಕೆ ಯಾವ ಸರ್ಕಾರ ಬಂದರೂ ಶಿಕ್ಷೆಗಳು ಎಂದಿಗೂ ನಿಲ್ಲುವುದಿಲ್ಲ ಅವರು ಹೇಳಿದರು ಎಂಬುದನ್ನು ಸುದ್ದಿಸಂಸ್ಥೆ ಐಎಎನ್ಎಸ್ ಉಲ್ಲೇಖಿಸಿದೆ. 

ಯುಪಿಎಸ್‌ಸಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಕರ್ನಾಟಕ ಟಾಪರ್ ಅವಿನಾಶ್
 

ರಾಹೀ ಅವರ ಅಜ್ಜನ ಮರಣದ ನಂತರ, ಅವರ ಅಜ್ಜಿ ಮತ್ತು ಅವರ 10 ವರ್ಷ ವಯಸ್ಸಿನ ತಂದೆಯನ್ನು ಅವರ ಕುಟುಂಬದಿಂದ  ಹೊರ ದೂಡಲಾಗಿತ್ತು. ಹೀಗಾಗಿ ಅವರ ಅಜ್ಜಿ ಜೀವನೋಪಾಯಕ್ಕಾಗಿ ಇತರರ  ಮನೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಪ್ರತಿಯೊಂದು ಸಣ್ಣ ಕೆಲಸವನ್ನು ಮಾಡಬೇಕಾಗಿತ್ತು. ಅವರ ತಂದೆ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಸಾಧನೆ ಮಾಡಿದ್ದರೂ ಕುಟುಂಬವನ್ನು ನೋಡಿಕೊಳ್ಳಬೇಕಾಗಿದ್ದರಿಂದ ಅವರು ಶಾಲೆಯನ್ನು ಬಿಡಬೇಕಾಯಿತು. ಹೀಗೆ ಇಂತಹ ಶೋಷಣೆಯ ಕಥೆಗಳನ್ನು ಕೇಳುತ್ತಾ ಈ ಹಿನ್ನೆಲೆಯಿಂದ ಬಂದ ನಾನು ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕರಾಗಿದ್ದರೆ ನಾವು ಸೇರಿದಂತೆ ನಮ್ಮಂತ ಜನ ಹಲವಾರು ಯೋಜನೆಗಳಿಂದ ಪ್ರಯೋಜನ ಪಡೆಯಬಹುದಿತ್ತು ಎಂದು  ಭಾವಿಸಿದೆ. ಇದು ನನ್ನನ್ನು ಸರ್ಕಾರಿ ಕೆಲಸಕ್ಕೆ ತಯಾರಿ ಮಾಡಲು ಪ್ರೇರೇಪಿಸಿತು ಎಂದು ರಾಹೀ ಐಎಎನ್‌ಎಸ್‌ಗೆ ತಿಳಿಸಿದರು.

ಎಂಟು ವರ್ಷದ ಮಗುವಿನ ತಂದೆಯಾಗಿರುವ ರಾಹೀ ಅವರು, ವೈಯಕ್ತಿಕ ಲಾಭಕ್ಕಾಗಿ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಲವು ಬಾರಿ ಪ್ರಲೋಭನೆಗೆ ಒಳಗಾಗಿದ್ದರು ಆದರೆ ಇದು ಬೇರೆಯವರಿಗೆ ಮತ್ತು ಅವರ ಮಗುವಿಗೆ ತೊಂದರೆಯಾಗಬಹುದು ಎಂದು ಭಾವಿಸಿ ಅವರು ಈ ಆಮಿಷವನ್ನು ಒಪ್ಪಿಲ್ಲ ಎಂದು ಹೇಳಿದರು.

ಭವಿಷ್ಯದಲ್ಲಿ ನನ್ನ ಮೇಲೆ ಯಾವುದೇ ದಾಳಿಗಳು ನಡೆದರೆ ಹೇಗೆ ಎದುರಿಸಬೇಕು ಎಂದು ಕಲಿತಿದ್ದೇನೆ. ಈ ಸಮಸ್ಯೆಗಳನ್ನು ಹೇಗೆ ಉತ್ತಮ ರೀತಿಯಲ್ಲಿ ನಿಭಾಯಿಸಬೇಕು ಎಂಬುದನ್ನೂ ಕಲಿತಿದ್ದೇನೆ ಎಂದು ಹೇಳಿದರು. ಅವರ ಮೇಲಿನ ದಾಳಿಯ ಸಮಯದಲ್ಲಿ, ಹಗರಣದ ಎಲ್ಲಾ ಪುರಾವೆಗಳು ತನ್ನ ಬಳಿ ಇದ್ದವು ಮತ್ತು ಒಂದು ವೇಳೆ ತಾನು ಸಾವಿಗೀಡಾಗಿದ್ದರೆ ಈ ಪುರಾವೆಗಳೆಲ್ಲವೂ ನನ್ನ ಸಾವಿನೊಂದಿಗೆ ಸಮಾಧಿಯಾಗುತ್ತಿತ್ತು ಎಂದು ಅವರು ಹೇಳಿದರು. 
 

Follow Us:
Download App:
  • android
  • ios