Asianet Suvarna News Asianet Suvarna News

ಮೋದಿ ಮಹತ್ವದ ಘೋಷಣೆ, ಒಂದೂವರೆ ವರ್ಷದಲ್ಲಿ ಕೇಂದ್ರದಿಂದ 10 ಲಕ್ಷ ಮಂದಿಗೆ ಉದ್ಯೋಗ!

* ಉದ್ಯೋಗ ಕಲ್ಪಿಸುವಲ್ಲಿ ಪಿಎಂ ಮೋದಿ ಮಹತ್ವದ ಘೋಷಣೆ

* ಒಂದೂವರೆ ವರ್ಷದಲ್ಲಿ ಕೇಂದ್ರದಿಂದ 10 ಲಕ್ಷ ಮಂದಿಗೆ ಉದ್ಯೋಗ

* ಪಿಎಂಒ ಖಾತೆಯಿಂದ ಟ್ವೀಟ್‌

10 lakh recruitments by govt in the next 548 days PM Modi mission mode order pod
Author
Bangalore, First Published Jun 14, 2022, 10:06 AM IST

ನವದೆಹಲಿ(ಜೂ.14): ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಈಗ ಕಾರ್ಯಪ್ರವೃತ್ತರಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಪಿಎಂಒ ಇಂಡಿಯಾ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಪಿಎಂಒ ತನ್ನ ಟ್ವೀಟ್‌ನಲ್ಲಿ ಮುಂದಿನ ಒಂದೂವರೆ ವರ್ಷಗಳಲ್ಲಿ, ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 10 ಲಕ್ಷ ಜನರನ್ನು ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದೆ. 

ಪಿಎಂಒ ಇಂಡಿಯಾ ಖಾತೆಯಿಂದ ಈ ಬಗ್ಗೆ ಮಾಹಿತಿ ನೀಡುತ್ತಾ ಮಾಡಲಾದ ಟ್ವೀಟ್‌ನಲ್ಲಿ 'ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಮಾನವ ಸಂಪನ್ಮೂಲವನ್ನು ಪರಿಶೀಲಿಸಿದ್ದಾರೆ. ಇದರೊಂದಿಗೆ ಅವರು ಈ ಬಗ್ಗೆ ಆದೇಶ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ.

ಹುದ್ದೆಗಳು ಬಹಳ ಸಮಯದಿಂದ ಖಾಲಿ

ನೇಮಕಾತಿಯನ್ನು ಕೇಂದ್ರ ಸರ್ಕಾರ ದೀರ್ಘಕಾಲದವರೆಗೆ ಆಯೋಜಿಸಿಲ್ಲ ಎಂಬುವುದು ಉಲ್ಲೇಖನೀಯ. 2020 ರಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಮಾರ್ಚ್ 1, 2020 ರವರೆಗೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಒಟ್ಟು 40 ಲಕ್ಷದ 4 ಸಾವಿರ ಹುದ್ದೆಗಳಿದ್ದು, ಈ ಪೈಕಿ 31 ಲಕ್ಷದ 32 ಸಾವಿರ ಉದ್ಯೋಗಿಗಳಿದ್ದು, 8.72 ಲಕ್ಷ ಹುದ್ದೆಗಳ ನೇಮಕಾತಿ ಅಗತ್ಯವಿದೆ ಎಂದು ತಿಳಿಸಿದ್ದರು.

ಎರಡು ವರ್ಷಗಳಿಂದ ನೇಮಕವಾಗಿಲ್ಲ

ಮಾಧ್ಯಮ ವರದಿಗಳ ಪ್ರಕಾರ, ಕೊರೋನಾ ಅವಧಿಯ ಕಾರಣ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಪ್ರಧಾನಿ ಮೋದಿಯವರ ನಿರ್ಧಾರದ ನಂತರ, ದೀರ್ಘಕಾಲದವರೆಗೆ ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈಗ ಪರಿಹಾರ ಸಿಗುತ್ತದೆ.

Follow Us:
Download App:
  • android
  • ios