Asianet Suvarna News Asianet Suvarna News

ಒದ್ದೆಯಾದ ಟವೆಲ್‌, ಬ್ರಶ್‌; ಬಾತ್‌ರೂಮ್‌ನಲ್ಲಿ ಅಪ್ಪಿತಪ್ಪಿಯೂ ಇಡಬಾರದ ವಸ್ತುಗಳಿವು!

ಆರೋಗ್ಯ ಚೆನ್ನಾಗಿರಲು ಬಾತ್‌ರೂಮ್‌ನ ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಸ್ನಾನಗೃಹದ ಶುಚಿತ್ವವನ್ನು ನಿರ್ಲಕ್ಷಿಸಿದರೆ, ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ಮನೆಯಾದ್ಯಂತ ಹರಡುತ್ತವೆ. ಇದು ಹಲವಾರು ರೋಗಗಳಿಗೆ ಕಾರಣವಾಗಬಹುದು. ಅದರಲ್ಲೂ ಈ ಬಾತ್‌ರೂಮ್‌ನಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಲೇಬಾರದು.

Bathroom cleaning tips, Wet Towels, Things You Should Not Keep In Bathroom Vin
Author
First Published May 17, 2024, 4:10 PM IST

ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಆರೋಗ್ಯ ಚೆನ್ನಾಗಿರಲು ಬಾತ್‌ರೂಮ್‌ನ ಸ್ವಚ್ಛತೆ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ. ಸ್ನಾನಗೃಹದ ಶುಚಿತ್ವವನ್ನು ನಿರ್ಲಕ್ಷಿಸಿದರೆ, ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ಮನೆಯಾದ್ಯಂತ ಹರಡುತ್ತವೆ. ಇದು ಹಲವಾರು ರೋಗಗಳಿಗೆ ಕಾರಣವಾಗಬಹುದು. ಇವು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ಸ್ನಾನಗೃಹ ಮತ್ತು ಶೌಚಾಲಯವು ಮನೆಯ ಭಾಗವಾಗಿದೆ.  ಮನೆಯಲ್ಲಿ ಇತರ ವಸ್ತುಗಳನ್ನು ನಾವು ನೋಡಿಕೊಳ್ಳುವಂತೆ ಎರಡನ್ನೂ ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಅಟ್ಯಾಚ್ಡ್ ಬಾತ್ ರೂಂ ಹೊಂದಿರುವವರಂತೂ ಕೆಲವು ತಪ್ಪುಗಳನ್ನು ಮಾಡಬಾರದು ಇಲ್ಲದಿದ್ದರೆ ಅದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾದರೆ ಮನೆಯಲ್ಲಿ ಅಟ್ಯಾಚ್ಡ್ ಬಾತ್ ರೂಮ್ ಗಳಿದ್ದರೆ ಮಾಡಬಾರದ ಸಾಮಾನ್ಯ ತಪ್ಪುಗಳೇನು ಎಂಬುದನ್ನು ನೋಡೋಣ ಬನ್ನಿ.

ಮನೆಯಲ್ಲಿ ಜಿರಳೆ ಕಾಟನಾ, ಹೋಗಲಾಡಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

1. ವೆಟ್ ಟೂತ್ ಬ್ರಷ್: ಹೆಚ್ಚಿನ ಜನರು ಒದ್ದೆಯಾದ ಟೂತ್ ಬ್ರಶ್ ಗಳನ್ನು ಸ್ಟ್ಯಾಂಡ್ ನಲ್ಲಿ ಇಟ್ಟುಕೊಳ್ಳುತ್ತಾರೆ, ಇದು ತುಂಬಾ ಅನಾರೋಗ್ಯಕರ. ಒದ್ದೆಯಾದ ಹಲ್ಲುಜ್ಜುವ ಬ್ರಷ್ ಗಾಳಿಯಲ್ಲಿರುವ ವಿಷ ಮತ್ತು ಇತರ ಸೂಕ್ಷ್ಮಜೀವಿಗಳನ್ನು ಆಕರ್ಷಿಸುತ್ತದೆ. ನಂತರ ಇಂತಹ ಬ್ರಷ್ ಅನ್ನು ಬಾಯಿಗೆ ಹಾಕಿಕೊಂಡು ಹಲ್ಲುಜ್ಜಿದಾಗ ರೋಗಾಣುಗಳು ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಒಳಗಾಗಬಹುದು.

2. ಒದ್ದೆಯಾದ ಟವೆಲ್ ಬಳಕೆ: ಸ್ನಾನದ ನಂತರ ನಾವು ಬಳಸುವ ಟವೆಲ್‌ನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಬೇಕು. ಎಷ್ಟೋ ಜನರು ಬಳಸಿದ ಟವೆಲ್‌ನ್ನು ತೊಳೆಯದೆ ದೀರ್ಘಕಾಲದವರೆಗೆ ಬಳಸುತ್ತಾರೆ. ಆದರೆ ಇದು ಚರ್ಮದ ಕಾಯಿಲೆಗೆ ಕಾರಣವಾಗಬಹುದು. ಅಲ್ಲದೆ, ಸ್ನಾನದ ನಂತರ ಟವೆಲ್ ಅನ್ನು ಸಂಪೂರ್ಣವಾಗಿ ಒಣಗಿಸುವುದು ಮುಖ್ಯವಾಗಿದೆ. ಒದ್ದೆಯಾದ ಟವೆಲ್‌ಗಳು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಆದ್ದರಿಂದ ಯಾವಾಗಲೂ ಒಣ ಟವೆಲ್ ಬಳಸಬೇಕು.

Cleaning Tips: ಮನೆ ಕ್ಲೀನ್ ಮಾಡುವಾಗ ಇದನ್ನು ನೀರಲ್ಲಿ ಬೆರೆಸಿದ್ರೆ ನೆಲ ಫಳಫಳ ಹೊಳೆಯುತ್ತೆ!

3. ಬಾತ್ ರೂಂ ಸಿಂಕ್: ಬಾತ್ ರೂಂ ಸಿಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಇಲ್ಲದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಬಹುದು. ಕೈ ತೊಳೆಯಲು ಮತ್ತು ಬಾಯಿ ತೊಳೆಯಲು ಸಿಂಕ್‌ನ್ನು ಬಳಸುವುದರಿಂದ, ಈ ಪ್ರದೇಶವು ಸೂಕ್ಷ್ಮಜೀವಿಗಳಿಂದ ತುಂಬಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚಾಗಿ ಸ್ವಚ್ಛಗೊಳಿಸಬೇಕು.

ಬಾತ್‌ರೂಮ್‌ನಲ್ಲಿನ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಸಲಹೆಗಳು:
1. ಬಾತ್‌ರೂಮ್‌ನಲ್ಲಿ ಒದ್ದೆಯಾದ ಬಟ್ಟೆಗಳನ್ನು ಇಡಬೇಡಿ.
2. ಶೌಚಾಲಯವನ್ನು ಬಳಸಿದ ನಂತರ ಅದನ್ನು ಸಂಪೂರ್ಣವಾಗಿ ಫ್ಲಶ್ ಮಾಡಲು ಮರೆಯಬೇಡಿ.
3. ಟಾಯ್ಲೆಟ್ ಸೀಟ್‌ನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ಇದು ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಶೌಚಾಲಯದ ಪ್ರತಿಯೊಂದು ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.

Latest Videos
Follow Us:
Download App:
  • android
  • ios