Asianet Suvarna News Asianet Suvarna News

ವಾಹನಗಳ ಮಾರಾಟದಲ್ಲಿ ಏರಿಕೆಯಾದರೂ, ಸಾಂಕ್ರಾಮಿಕ ಹಿಂದಿನ ಸಂಖ್ಯೆ ತಲುಪಲು ಹೆಣಗಾಟ

ದೇಶದಲ್ಲಿ ಆಟೊಮೊಬೈಲ್‌ ಉದ್ಯಮ (Automobile industry) ನಿಧಾನಕ್ಕೆ ಪ್ರಗತಿ ಕಾಣುತ್ತಿದೆ. ಆದರೆ, ವರ್ಷಗಳ ಹಿಂದಿನ ಸಂಖ್ಯೆ ತಲುಪುವಲ್ಲಿ ಸಾಕಷ್ಟು ಹಿಂದುಳಿದಿದೆ ಎಂದು ಭಾರತೀಯ ಆಟೊಮೊಬೈಲ್‌ ತಯಾರಕರ ಸೊಸೈಟಿ- ಸಿಯಾಮ್‌ –(SIAM)ಹೇಳಿದೆ.

Automobile sales still far behind pre covid era despite increase in numbers
Author
Bangalore, First Published Jun 13, 2022, 5:21 PM IST

ದೇಶದಲ್ಲಿ ಆಟೊಮೊಬೈಲ್ ಉದ್ಯಮ(Automobile industry) ನಿಧಾನಕ್ಕೆ ಪ್ರಗತಿ ಕಾಣುತ್ತಿದೆ. ಆದರೆ, ವರ್ಷಗಳ ಹಿಂದಿನ ಸಂಖ್ಯೆ ತಲುಪುವಲ್ಲಿ ಸಾಕಷ್ಟು ಹಿಂದುಳಿದಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಸೊಸೈಟಿ- ಸಿಯಾಮ್ –(SIAM)ಹೇಳಿದೆ. ಕಳೆದ ಕೆಲ ವರ್ಷಗಳ ಕಳಪೆ ಮಾರಾಟದ ನಂತರ, 2022 ರಲ್ಲಿ ಪ್ರಯಾಣಿಕ ವಾಹನಗಳ ಒಟ್ಟು ಮಾರಾಟದ ಅಂಕಿಅಂಶವು ಭಾರಿ ಜಿಗಿತ ಕಂಡಿದೆ. ಎಲ್ಲಾ ಪ್ರಮುಖ ವಾಹನ ಮತ್ತು ವಾಹನ ಎಂಜಿನ್ ತಯಾರಕರನ್ನು ಪ್ರತಿನಿಧಿಸುವ ಅಪೆಕ್ಸ್ ಲಾಭರಹಿತ ರಾಷ್ಟ್ರೀಯ ಸಂಸ್ಥೆಯಾದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್- SIAM ಇತ್ತೀಚೆಗೆ ದೇಶದ ವಾಹನ ತಯಾರಕರ ಒಟ್ಟು ಮಾರಾಟದ ಪ್ರಮಾಣವನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, 2022ರ ಮೇ ನಲ್ಲಿ ಒಟ್ಟು ಪ್ರಯಾಣಿಕ ವಾಹನಗಳ (PVs) ಮಾರಾಟ ವರ್ಷದಿಂದ ವರ್ಷಕ್ಕೆ ಶೇ.185ರಷ್ಟು ಅಂದರೆ 251,052 ವಾಹನಗಳಿಗೆ ಏರಿಕೆಯಾಗಿದೆ.

2022ರ ಮೇ ತಿಂಗಳಲ್ಲಿ ಮಾರಾಟವಾದ ಪ್ರಯಾಣಿಕ ವಾಹನಗಳ ಒಟ್ಟು ಸಂಖ್ಯೆಯು ಸಾಂಕ್ರಾಮಿಕ ಪೂರ್ವದ 2019ರ ಮೇ ತಿಂಗಳ ಮಾರಾಟಕ್ಕಿಂತ ಹೆಚ್ಚಿದೆ. ಈ ವರ್ಷದ ಮೇನಲ್ಲಿ 251,052 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿದ. ಆದರೆ, 2019ರಲ್ಲಿ ಅದೇ ತಿಂಗಳಲ್ಲಿ 226,975 ವಾಹನಗಳು ಮಾರಾಟವಾಗಿದ್ದವು. ಆದರೆ, SIAM ಪ್ರಕಾರ, 2018ಕ್ಕೆ ಹೋಲಿಸಿದರೆ ಇದು ಕಡಿಮೆಯೇ ಇದೆ.

ಇದಲ್ಲದೆ, ದೇಶದಲ್ಲಿ ತ್ರಿಚಕ್ರ ವಾಹನಗಳ ಮಾರಾಟ ಕೂಡ ಹೆಚ್ಚಾಗಿದೆ. 2021ರ ಮೇ ನಲ್ಲಿ ಮಾರಾಟವಾದ 1,262 ಯುನಿಟ್ಗಳಿಗೆ ಹೋಲಿಸಿದರೆ 2022 ಮೇ ತಿಂಗಳಲ್ಲಿ 28,542 ವಾಹನಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟ ಶೇ. 253ಕ್ಕಿಂತ ಹೆಚ್ಚು ಏರಿಕೆಯಾಗಿ 12,53,187 ವಾಹನಗಳಿಗೆ ತಲುಪಿದೆ.  ಆದರೆ, ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ಮಾರಾಟವು 2019ರ ಮೇ ನಲ್ಲಿ ಸಾಂಕ್ರಾಮಿಕ-ಪೂರ್ವ ಮಟ್ಟವನ್ನು ಮೀರಲು ಇನ್ನೂ ವಿಫಲವಾಗಿದೆ.

ಇದನ್ನೂ ಓದಿ: Break issue: ಲಕ್ಷಾಂತರ ಕಾರು ಹಿಂಪಡೆದ ಐಷಾರಾಮಿ ಮರ್ಸಿಡೆಸ್ ಬೆಂಜ್

ಒಟ್ಟಾರೆಯಾಗಿ, ಭಾರತೀಯ ವಾಹನ ವಲಯವು 2022 ಮೇನಲ್ಲಿ 15,32,809 ವಾಹನಗಳ ಒಟ್ಟು ಮಾರಾಟ ದಾಖಲಿಸಿದೆ. ಆದರೆ,  2019ರ ಏಪ್ರಿಲ್ನಲ್ಲಿ ಮಾರಾಟವಾದ 20,04,137 ವಾಹನಗಳ ಸಂಖ್ಯೆಯನ್ನು ಇನ್ನೂ ತಲುಪಿಲ್ಲ. ಆದರೆ, ಉದ್ಯಮವು ವರ್ಷದಿಂದ ವರ್ಷಕ್ಕೆ ಶೇ.245ರಷ್ಟು ಬೆಳವಣಿಗೆ ದಾಖಲಿಸಿದೆ.

SIAM ನ ಮಹಾನಿರ್ದೇಶಕ ರಾಜೇಶ್ ಮೆನನ್, “ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಮಾರಾಟವು 2022 ಮೇ ತಿಂಗಳಲ್ಲಿ ಸ್ವಲ್ಪ ಪ್ರಗತಿ ಕಂಡಿದೆ. ಆದರೆ, ಇದು 9 ವರ್ಷ ಮತ್ತು 14 ವರ್ಷಗಳ ಹಿಂದೆ ಇದ್ದ ಸಂಖ್ಯೆಗಿಂತ ಕಡಿಮೆಯಿದೆ. ಪ್ರಯಾಣಿಕ ವಾಹನಗಳ ವಿಭಾಗದ ಮಾರಾಟವು 2018ರ ದಾಖಲೆಗಿಂತ ಕಡಿಮೆಯಿದೆದೆ" ಎಂದಿದ್ದಾರೆ.

ಇದನ್ನೂ ಓದಿ: 3 ತಿಂಗಳಿಗೆ ಮುರಿದು ಬಿತ್ತು ಓಲಾ ಸ್ಕೂಟರ್ ಸೈಡ್ ಸ್ಟ್ಯಾಂಡ್, Viral Video!

"ಇತ್ತೀಚಿನ ಸರ್ಕಾರದ ಮಧ್ಯಸ್ಥಿಕೆಗಳು, ಪೂರೈಕೆ-ಬದಿಯ ಸವಾಲುಗಳನ್ನು ಎದುರಿಸಲು ನೆರವಾಗಿದೆ. ಆದರೆ ಆರ್ಬಿಐನಿಂದ ಎರಡನೇ ಬಾರಿ ರೆಪೋ-ರೇಟ್ ಹೆಚ್ಚಳ ಮತ್ತು ಥರ್ಡ್ ಪಾರ್ಟಿಯ ವಿಮಾ ದರಗಳಲ್ಲಿ ಹೆಚ್ಚಳ ಗ್ರಾಹಕರಿಗೆ ಹೆಚ್ಚು ಸವಾಲಾಗಿ ಪರಿಣಮಿಸುತ್ತದೆ.  ಇದರಿಂದ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಾಹನ ವಲಯವು 2023 ರಲ್ಲಿ ಇದುವರೆಗೆ 5.02 ಲಕ್ಷ  ಪ್ರಯಾಣಿಕ ವಾಹನಗಳು, 49,480 ತ್ರಿಚಕ್ರ ವಾಹನಗಳು ಮತ್ತು 24.15 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2023 ರಲ್ಲಿ 29.6 ಲಕ್ಷ ವಾಹನಗಳು ಮಾರಾಟವಾಗಿವೆ.  ಇದು 2021ರ ಏಪ್ರಿಲ್-ಮೇ ತಿಂಗಳಲ್ಲಿ ಮಾರಾಟವಾದ 17,17,839 ವಾಹನಗಳಿಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಆದರೂ, ಈ ಅಂಕಿ ಅಂಶವು 2019 ರ ಏಪ್ರಿಲ್-ಮೇ ತಿಂಗಳಲ್ಲಿ ಮಾರಾಟವಾದ 39,23,165 ವಾಹನಗಳ ಸಾಂಕ್ರಾಮಿಕ ಪೂರ್ವ ಮಟ್ಟಕ್ಕಿಂತ ಇನ್ನೂ ಕಡಿಮೆಯಾಗಿದೆ.

ಇದನ್ನೂ ಓದಿ: ಟ್ರಾಕ್ಟರ್ ಖರೀದಿಸುವ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ!

ಕಳೆದ ತಿಂಗಳು ಕೇಂದ್ರ ಭಾರತ ಸರ್ಕಾರವು ಥರ್ಡ್ ಪಾರ್ಟಿ ಮೋಟಾರು ವಿಮೆಗಳಿಗೆ ವಿಮಾ ಕಂತುಗಳಲ್ಲಿ ಹೆಚ್ಚಳವನ್ನು ಘೋಷಿಸಿತು.  ಈ ನಿರ್ಧಾರದ ಬಗ್ಗೆ ಉದ್ಯಮ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.  ಆಟೋಮೊಬೈಲ್ಗಳ ಮಾರಾಟದ ಮೇಲೆ, ವಿಶೇಷವಾಗಿ ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳಂತಹ ಸಮೂಹ ವಿಭಾಗಗಳ ಬೇಡಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ರಾಜೇಶ್ ಮೆನನ್ ಹೇಳಿದ್ದಾರೆ.

Follow Us:
Download App:
  • android
  • ios