Asianet Suvarna News Asianet Suvarna News

ಕ್ರಿಮಿನಲ್‌ಗಳ ಜೊತೆ ಹುಬ್ಬಳ್ಳಿ ಪೊಲೀಸರ ಸಂಪರ್ಕ; ಅರವಿಂದ ಬೆಲ್ಲದ್ ಶಾಕಿಂಗ್ ಹೇಳಿಕೆ!

ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರು ವರ್ಗಾವಣೆಗೆ ದುಡ್ಡು ಕೊಟ್ಟು ಬರುವಂತಾಗಿದೆ. ಇಂಥವರು ದುಡ್ಡು ಎಲ್ಲಿಂದ ತೆಗಿಬೇಕು? ಕ್ರಿಮಿನಲ್‌ಗಳಿಂದ ಹಣ ವಸೂಲಿ ಮಾಡ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಪೊಲೀಸರ ಕಾರ್ಯವೈಖರಿಗೆ ಕಿಡಿಕಾರಿದರು.

Hubballi anjali murder case MLA arvind bellad outraged against hubballi dharwad police rav
Author
First Published May 19, 2024, 1:31 PM IST

ಹುಬ್ಬಳ್ಳಿ (ಮೇ.19):ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರು ವರ್ಗಾವಣೆಗೆ ದುಡ್ಡು ಕೊಟ್ಟು ಬರುವಂತಾಗಿದೆ. ಇಂಥವರು ದುಡ್ಡು ಎಲ್ಲಿಂದ ತೆಗಿಬೇಕು? ಕ್ರಿಮಿನಲ್‌ಗಳಿಂದ ಹಣ ವಸೂಲಿ ಮಾಡ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಪೊಲೀಸರ ಕಾರ್ಯವೈಖರಿಗೆ ಕಿಡಿಕಾರಿದರು.

ಇಂದು ಹುಬ್ಬಳ್ಳಿಯ ನಿವಾಸಕ್ಕೆ ತೆರಳಿ ಕುಟುಂಬಸ್ಥರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ತಾವೇ ಹೋಗಿ ಗಾಂಜಾ ಮಾರೋದಿಲ್ಲ. ಆದರೆ ಮಧ್ಯವರ್ತಿಗಳ ಮೂಲಕ ಪೊಲೀಸರೇ ಕೆಲಸ ಮಾಡಿಸುತ್ತಾರೆ. ರಾಜಕಾರಣಿಗಳು ಇದನ್ನ ಗಮನಿಸಬೇಕು. ಆದ್ರೆ ಅವರೂ ದುಡ್ಡು ಪಡೆದಿರೋದ್ರಿಂದ ಏನೂ ಹೇಳೋದಿಲ್ಲ. ನೀವು ಹಣ ಪಡೆದು ವರ್ಗಾವಣೆ ಮಾಡಿದ್ರೆ ನಿಮ್ಮ ಮಾತನ್ನು ಪೊಲೀಸರು ಎಲ್ಲಿ ಕೇಳ್ತಾರೆ? ಇವತ್ತು ಯುವಕರು ಗಾಂಜಾ ದಾಸರಾಗಿದ್ದಾರೆ. ಇದರಿಂದ ಇಲ್ಲಿನ ಪ್ರತಿ ಕುಟುಂಬದ ಹಿರಿಯರು ನೋವು ಅನುಭವಿಸುತ್ತಿದ್ದಾರೆ. ಗಾಂಜಾ ನಶೆಯಲ್ಲಿ ನಾವು ಏನು ಮಾಡಿದ್ರೂ ದಕ್ಕಿಸಿಕೊಳ್ಳಬಲ್ಲೆವು ಅನ್ನೋ ಭಾವನೆಯಲ್ಲಿ ಯುವಕರಿದ್ದಾರೆ. ಚುನಾವಣೆ ಮುಗಿದಿದೆ ಸಿಎಂ ಸಿದ್ದರಾಮಯ್ಯ ಇತ್ತ ಗಮನಹರಿಸಬೇಕು. ಎಲ್ಲೆಡೆ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಅದನ್ನ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನ! ಅಕ್ಕಾನ ಸಾವಿನ ಶೋಕದಲ್ಲಿ ಪಿನಾಯಿಲ್ ಕುಡಿದ ತಂಗಿ!

ಅಂಜಲಿ ಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಪೊಲೀಸ್ ಅಧಿಕಾರಿಗಳ ವರ್ಗಾವಣೆ  ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸಿಪಿಯನ್ನೇಕೆ ಅಮಾನತ್ತು ಮಾಡಿಲ್ಲ? ಎಂದು ಪ್ರಶ್ನಿಸಿದರು. ಸರ್ಕಾರ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಕೆಳಹಂತದ ಪೊಲೀಸರನ್ನು ಜಿಲ್ಲೆಯಿಂದ ಹೊರಗೆ ವರ್ಗಾವಣೆ ಮಾಡಬೇಕು, ಅವರೆಲ್ಲ ಕ್ರಿಮಿನಲ್ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಅವರೇ ಇಂತಹ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಅಂಜಲಿ ಕುಟುಂಬಕ್ಕೆ ಸೂರು ಒದಗಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

Latest Videos
Follow Us:
Download App:
  • android
  • ios