ಹೀಗೂ ಪ್ರಪಂಚ ಸುತ್ತಾಡ್ಬಹುದು : ಏರ್‌ಲೈನ್ ಪಾಸ್ ತಗೊಂಡು ಎಷ್ಟು ದೇಶ ಸುತ್ತಿದ ನೋಡಿ?

Published : Jul 02, 2023, 02:57 PM IST
 ಹೀಗೂ ಪ್ರಪಂಚ ಸುತ್ತಾಡ್ಬಹುದು : ಏರ್‌ಲೈನ್ ಪಾಸ್ ತಗೊಂಡು ಎಷ್ಟು ದೇಶ ಸುತ್ತಿದ ನೋಡಿ?

ಸಾರಾಂಶ

ಇಲ್ಲೊಬ್ಬ ಅಮೆರಿಕಾ ಪ್ರಜೆ 30 ವರ್ಷಗಳ ಹಿಂದೆ ಖರೀದಿಸಿದ ಜೀವಮಾನದ ಏರ್‌ಲೈನ್ಸ್ ಪಾಸೊಂದು ಆತನ ಪ್ರಪಂಚ ಸುತ್ತುವ ಕನಸಿಗೆ ನೀರೆದು ಪೋಷಿಸಿದ್ದು ಈ ಮೂವತ್ತು ವರ್ಷಗಳಲ್ಲಿ ಆತ ಬರೋಬ್ಬರಿ 37 ಮಿಲಿಯನ್ ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾನೆ

ನ್ಯೂಯಾರ್ಕ್: ಪ್ರಪಂಚ ಸುತ್ತಬೇಕು ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಬೇಕು? ಅಲ್ಲಿನ ಆಹಾರ ಕ್ರಮ, ಸಂಸ್ಕೃತಿ ಜೀವನ ಪದ್ಧತಿಯ ಬಗ್ಗೆ ತಿಳಿಯಬೇಕು ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ನೋಡಬೇಕು ಎಂಬುದು ಬಹುಜನರ ಕನಸಾಗಿರುತ್ತದೆ. ಆದರೆ ಪ್ರಯಾಣ ವೆಚ್ಚ ಯಾರು ಕೊಡ್ತಾರೆ, ಜೀವನಪೂರ್ತಿ ದುಡಿದರೂ ನಮ್ಮದೇ ದೇಶದ ವಿವಿಧ ಭಾಗ ನೋಡಿಲ್ಲ, ಇನ್ನು ಪ್ರಪಂಚ ನೋಡುವುದು ಎಲ್ಲಿಯ ಮಾತು ಎಂದು ಬಹುತೇಕರೂ ಸಂಕಟ ಪಡುತ್ತಾರೆ. ಆದರೆ ಇಲ್ಲೊಬ್ಬ ಅಮೆರಿಕಾ ಪ್ರಜೆ 30 ವರ್ಷಗಳ ಹಿಂದೆ ಖರೀದಿಸಿದ ಜೀವಮಾನದ ಏರ್‌ಲೈನ್ಸ್ ಪಾಸೊಂದು ಆತನ ಪ್ರಪಂಚ ಸುತ್ತುವ ಕನಸಿಗೆ ನೀರೆದು ಪೋಷಿಸಿದ್ದು ಈ ಮೂವತ್ತು ವರ್ಷಗಳಲ್ಲಿ ಆತ ಬರೋಬ್ಬರಿ 37 ಮಿಲಿಯನ್ ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾನೆ. 30 ವರ್ಷಗಳ ಹಿಂದೆ ನಾನು ಪಡೆದ ಏರ್‌ಲೈನ್ಸ್ ಪಾಸ್‌ ಇದು ನಾನು ನನ್ನ ಜೀವನದಲ್ಲಿ ಮಾಡಿದ ಬೆಸ್ಟ್ ಇನ್‌ವೆಸ್ಟ್‌ಮೆಂಟ್ ಎಂದು ಆತ ಹೇಳಿದ್ದು, ಅದೇ ಟೈಮ್‌ಗೆ ಇದು ಏರ್‌ಲೈನ್ಸ್‌ ಸಂಸ್ಥೆಯ ಕೆಟ್ಟ ನಿರ್ಧಾರವೂ ಎನಿಸಿದೆ.

ಅಮೆರಿಕಾದ ಈ ಪ್ರಜೆ ಈ ಪಾಸ್ ಖರೀದಿಸಿದ ನಂತರ 33 ವರ್ಷಗಳಲ್ಲಿ 373 ವಿಮಾನಗಳಲ್ಲಿ ಪ್ರಯಾಣ ಮಾಡಿದ್ದಾರೆ. ಎಲ್ಲಾ ಪ್ರಯಾಣವನ್ನು ಸೇರಿಸಿದರೆ 1.46 ಮಿಲಿಯನ್ ಮೈಲಾಗುತ್ತದೆ. ಅಲ್ಲದೇ ಇದೆಲ್ಲವನ್ನು ಪಾಸ್ ಇಲ್ಲದೇ ಹಣ ಕೊಟ್ಟು ಪ್ರಯಾಣ ಮಾಡುವುದಾಗಿದ್ದರೆ ಅವರು ಇದಕ್ಕಾಗಿ 2.44 ಮಿಲಿಯನ್ ಡಾಲರ್ ಹಣ ವ್ಯಯಿಸಬೇಕಾಗಿತ್ತು. ಆದರೆ ಅವರು ಖರೀದಿಸಿದ ಪಾಸ್‌ಗೆ 30 ವರ್ಷದ ಹಿಂದೆ ನೀಡಿದ ಹಣ 290,000 ಡಾಲರ್‌. ನ್ಯೂಜೆರ್ಸಿಯ ಆಟೋ ಕಂಪನಿಯೊಂದರ ಸಲಹೆಗಾರ ಟಾಮ್ ಸ್ಟುಕರ್ ಎಂಬುವವರೇ ಈ ಬುದ್ಧಿವಂತ ಹೂಡಿಕೆ ಮಾಡಿದ ಚಾಣಾಕ್ಷ.

ಹೆತ್ತವರೊಂದಿಗೆ ಊಟ ಮಾಡುತ್ತಲೇ ಪ್ರಾಣಬಿಟ್ಟ ಯುವತಿ; ಪ್ರಪಂಚ ಪರ್ಯಟನೆ ಮಾಡ್ಬೇಕಾದವ್ಳು ಜಗತ್ತನ್ನೇ ತೊರೆದ್ಳು

ದಿ ವಾಷಿಂಗ್ಟನ್ ಪೋಸ್ಟ್ ಪ್ರಕಾರ, ನ್ಯೂಜೆರ್ಸಿಯ ಆಟೋ ಕಂಪನಿಯ 69 ವರ್ಷದ ಸಲಹೆಗಾರ ಟಾಮ್ ಸ್ಟುಕರ್ 1990 ರಲ್ಲಿ  290,000 ಡಾಲರ್ ನೀಡಿ  ಯುನೈಟೆಡ್ ಏರ್‌ಲೈನ್ಸ್‌ನಿಂದ ಜೀವಮಾನದ ಪಾಸ್‌ ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ಪಾಸ್ ಬಳಸಿ ಅವರು37 ಮಿಲಿಯನ್ ಕಿಲೋ ಮೀಟರ್ ದೂರ ಕ್ರಮಿಸಿದ್ದಾರೆ. ಇವರು ಇದು ನಾನು ಜೀವಮಾನದಲ್ಲಿ ಮಾಡಿದ ಅತ್ಯುತ್ತಮ ಹೂಡಿಕೆ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಅವರು ಪ್ರಪಂಚದಲ್ಲೇ ಅತೀ ಹೆಚ್ಚು ಮೈಲು ದೂರ ಹಾರಾಟ ನಡೆಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಏಕವ್ಯಕ್ತಿ ಪ್ರಯಾಣಿಸಿದ ದೂರ 22 ಮಿಲಿಯನ್ ಕಿಲೋ ಮೀಟರ್ ಆಗಿತ್ತು.

ಅಲ್ಲದೇ ಸ್ಟುಕರ್ ಒಮ್ಮೆ  ಮಲಗದೆಯೇ 12 ದಿನಗಳನ್ನು ನೇರವಾಗಿ ಕ್ರಮಿಸಿದ್ದಾರೆ ಎಂದು  ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅವರು ನೆವಾರ್ಕ್‌ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಅಲ್ಲಿಂದ ಬ್ಯಾಂಕಾಕ್‌ಗೆ ನಂತರ ದುಬೈಗೆ ಪ್ರಯಾಣ ಮಾಡಿ ಮತ್ತೆ ನೆವಾರ್ಕ್‌ಗೆ ಹಿಂದಿರುಗಿದ್ದು, ಇದು ಪ್ರಪಂಚದಾದ್ಯಂತ ಸುತ್ತುವ ನಾಲ್ಕು ಪ್ರವಾಸಗಳಿಗೆ ಸಮಾನವಾಗಿದೆ ಎಂದು ವರದಿ ಹೇಳಿದೆ. 

ಈಗ 33 ವರ್ಷಗಳ ನಂತರವೂ ಸ್ಟುಕರ್ ಈ ಪಾಸನ್ನು ಬಳಸುತ್ತಿದ್ದು,  ತಮ್ಮ ಆದ್ಯತೆಯ ಸೀಟ್ ನಂಬರ್ 1Bಯಲ್ಲಿ ಕುಳಿತು ಆಗಾಗ ಪ್ರಯಾಣಿಸುತ್ತಿರುತ್ತಾರೆ. ಆದರೆ ಹೆಚ್ಚು ಹೆಚ್ಚು ವಿಮಾನವನ್ನು ಕಾಯ್ದಿರಿಸುವುದಕ್ಕೆ ತಾನು ಪ್ರಯಾಣಿಸುವ ಮೈಲುಗಳು  ಅಡ್ಡಿ ಆಗುವುದಿಲ್ಲ ಎಂಬುದು ಇತ್ತೀಚೆಗೆ ಅರ್ಥವಾಯ್ತು ಎಂದು ಅವರು ಹೇಳಿದ್ದಾರೆ.  ಒಮ್ಮೆ ನೀವು ಆ ಪಾಸುಗಳನ್ನು ಖರೀದಿಸಿದರೆ, ಅದನ್ನು ಯಾವಾಗ ಬೇಕಾದರೂ ಬಳಸಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಪಾಸ್‌ನಿಂದ ಸ್ಟುಕರ್ ಸುಲ್ತಾನ್ ರೀತಿ ಜೀವಿಸುತ್ತಿದ್ದು, ಪ್ರಪಂಚದಾದ್ಯಂತ ಐಷಾರಾಮಿ ಹೊಟೇಲ್‌ಗಳಲ್ಲಿ ವಾಸ ಮಾಡಿದ್ದಾರೆ. ಈ ಪಾಸನ್ನು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿರುವ ಸ್ಟುಕರ್  ಇದನ್ನು ಲಾಭದಾಯಕವಾಗಿ ಮಾಡಿಕೊಂಡಿದ್ದಾರೆ.

ದೇಶದ ಸಂಸ್ಕೃತಿ ಸಾರಲು ಮರಾಠಿ ಸೀರೆಯುಟ್ಟು ಬೈಕ್ ಸವಾರಿ ಮಾಡೋ ನಾರಿ

ವಾಷಿಂಗ್ಟನ್ ಪೋಸ್ಟ್ (Washington Post) ಸ್ಟುಕರ್ ಪ್ರಯಾಣದ ದೂರವನ್ನು ಲೆಕ್ಕಾಚಾರ ಮಾಡಿದ್ದು, ಅವರು ಒಂದೇ ವರ್ಷದಲ್ಲಿ ಅವರು ಪ್ರಯಾಣಿಸಿದ ದೂರ ಚಂದ್ರನಲ್ಲಿಗೆ ಆರು ಬಾರಿ ಪ್ರಯಾಣ ಮಾಡಿದಷ್ಟು ಎಂದು ವರದಿ ಮಾಡಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!