ಮುಸ್ಲಿಂ ಯುವಕನ ಶೂಟೌಟ್‌ ಬಳಿಕ ಫ್ರಾನ್ಸ್‌ ಧಗಧಗ: 4 ದಿನಗಳಿಂದ ಗಲಭೆ; 2500 ಕಾರು, ಕಟ್ಟಡಕ್ಕೆ ಬೆಂಕಿ, 2400 ಜನರ ಸೆರೆ

Published : Jul 02, 2023, 08:56 AM IST
ಮುಸ್ಲಿಂ ಯುವಕನ ಶೂಟೌಟ್‌ ಬಳಿಕ ಫ್ರಾನ್ಸ್‌ ಧಗಧಗ: 4 ದಿನಗಳಿಂದ ಗಲಭೆ; 2500 ಕಾರು, ಕಟ್ಟಡಕ್ಕೆ ಬೆಂಕಿ, 2400 ಜನರ ಸೆರೆ

ಸಾರಾಂಶ

ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಮುಂದುವರಿಸಿದ್ದು, ಶನಿವಾರ 1311 ಜನರನ್ನು ಬಂಧಿಸಲಾಗಿದೆ. ಇದರೊಂದಿಗೆ ಈವರೆಗೆ 2,400 ಜನರನ್ನು ಸೆರೆ ಹಿಡಿದಂತಾಗಿದೆ.

ಪ್ಯಾರಿಸ್‌ (ಜುಲೈ 2, 2023): ನಿಲ್ಲಿಸಲು ಸೂಚಿಸಿದರೂ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ 17 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ಫ್ರಾನ್ಸ್‌ ದೇಶವನ್ನು ಹೊತ್ತಿ ಉರಿಯುವಂತೆ ಮಾಡಿದೆ. 4 ದಿನ ಕಳೆದರೂ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿಲ್ಲ. ನಾಲ್ಕನೇ ದಿನವೂ ವ್ಯಾಪಕ ಹಿಂಸೆ ಮುಂದುವರೆದಿದ್ದು, 2500ಕ್ಕೂ ಹೆಚ್ಚು ಕಾರುಗಳು-ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಅಂಗಡಿ-ಮಳಿಗೆಗಳನ್ನು ಲೂಟಿ ಮಾಡಲಾಗುತ್ತಿದೆ.

ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಮುಂದುವರಿಸಿದ್ದು, ಶನಿವಾರ 1311 ಜನರನ್ನು ಬಂಧಿಸಲಾಗಿದೆ. ಇದರೊಂದಿಗೆ ಈವರೆಗೆ 2,400 ಜನರನ್ನು ಸೆರೆ ಹಿಡಿದಂತಾಗಿದೆ. ದೇಶದ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌ ತಮ್ಮ ಜರ್ಮನಿ ಪ್ರವಾಸ ರದ್ದುಗೊಳಿಸಿದ್ದಾರೆ. ಜೊತೆಗೆ ಫ್ರಾನ್ಸ್‌ನ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹಲವು ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಇದನ್ನು ಓದಿ: ಬಾಲಕನ ಹತ್ಯೆ ಖಂಡಿಸಿ ಫ್ರಾನ್ಸಲ್ಲಿ ಭಾರಿ ಹಿಂಸೆ: ನೂರಾರು ವಾಹನಕ್ಕೆ ಬೆಂಕಿ; 200 ಪೊಲೀಸರಿಗೆ ಗಾಯ, ನೂರಾರು ಜನ ಸೆರೆ

ಈ ನಡುವೆ, ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಬೇಡಿ ಎಂಬ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌ ಅವರು ಮನವಿ ಮಾಡುತ್ತಿದ್ದರೂ, ಯುವ ಪ್ರತಿಭಟನಾಕಾರರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ದೇಶಾದ್ಯಂತ ಹಿಂಸಾಚಾರ ನಿಯಂತ್ರಣಕ್ಕೆ 40,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಇದೇ ವೇಳೆ, ಹಿಂಸಾಚಾರವನ್ನು ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಖ್ಯಾತಿಯ ಫುಟ್‌ಬಾಲ್‌ ಆಟಗಾರ ಕಿಲಿಯನ್‌ ಎಂಬೆಪೆ ಮನವಿ ಮಾಡಿದ್ದಾರೆ. ಈ ಮಧ್ಯೆ 17 ವರ್ಷದ ಬಾಲಕನ ಅಂತ್ಯಕ್ರಿಯೆ ಶನಿವಾರ ಭಾರೀ ಬಿಗಿ ಭದ್ರತೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಗುಂಡು ಹಾರಿಸಿದ ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!

ಲೈಬ್ರರಿಗೆ ಬೆಂಕಿ:
ಪೊಲೀಸರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ವೇಳೆ ಮಾರ್ಸೆಯಲ್ಲಿರುವ ಅತಿದೊಡ್ಡ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಲೈಬ್ರರಿ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದರಿಂದಾಗಿ ಸಂಸ್ಕೃತಿ, ಜ್ಞಾನ ಮತ್ತು ಸಂಪನ್ಮೂಲಗಳು ನಾಶವಾಗಿದೆ ಎಂದು ಫ್ರಾನ್ಸ್‌ ಆಡಳಿತ ಹೇಳಿದೆ.

ಫ್ರಾನ್ಸ್‌ನಲ್ಲಿ ಆಗಿದ್ದೇನು?
- ಮಾರ್ಸೆ ನಗರದಲ್ಲಿ ಕಳೆದ ಮಂಗಳವಾರ ಅಲ್ಜೀರಿಯಾ ಮೂಲದ ಯುವಕನಿಂದ ಬಸ್‌ ಲೇನ್‌ನಲ್ಲಿ ಕಾರು ಚಾಲನೆ
- 17 ವರ್ಷದ ಯುವಕನಿಗೆ ಹಲವು ಬಾರಿ ಪೊಲೀಸರಿಂದ ಪಥ ಬದಲಿಸಲು ಸೂಚನೆ; ಆದರೂ ಕೇರ್‌ ಮಾಡದೆ ಚಾಲನೆ
- ಕೊನೆಗೆ ಆತನನ್ನು ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರು: ಮಾತಿನ ಚಕಮಕಿ ವೇಳೆ ಪೊಲೀಸರ ಮೇಲೆ ದಾಳಿಗೆ ಯುವಕ ಯತ್ನ
- ಪೊಲೀಸರಿಂದ ಯುವಕನ ಮೇಲೆ ಗುಂಡಿನ ದಾಳಿ, ಸಾವು: ದಾಳಿಯ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
- ಘಟನೆಯ ವಿರುದ್ಧ ಆಫ್ರಿಕಾ, ಅರಬ್‌ ಮೂಲದ ಮುಸ್ಲಿಮರಿಂದ ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಹಿಂಸಾಚಾರ
ಇದನ್ನೂ ಓದಿ: PlayBoyಗೆ ಪೋಸ್‌ ನೀಡಿದ ಫ್ರೆಂಚ್‌ ಸಚಿವೆ ನಡೆಗೆ ಹಲವರ ಟೀಕೆ; ಸಾಫ್ಟ್‌ ಪೋರ್ನ್‌ ಅಲ್ಲ ಎಂದ ಮ್ಯಾಗಜೀನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು