ಇಲ್ಲೊಂದು ಶ್ವಾನ ಉದ್ದ ನಾಲಗೆಯ ಕಾರಣಕ್ಕೆ ಗಿನ್ನೆಸ್ ಪುಟ ಸೇರಿದೆ. ಈ ನಾಯಿಯ ನಾಲಗೆ ಬರೋಬರಿ 5.46 ಇಂಚು ಉದ್ದ ಇದೆ.
ನ್ಯೂಯಾರ್ಕ್: ಸಾಮಾನ್ಯವಾಗಿ ಜಾಸ್ತಿ ಮಾತನಾಡುವವರನ್ನು ಹಿರಿಯರ ಮಾತಿಗೆಲ್ಲಾ ಎದುರಾಡುವವರನ್ನು ಉದ್ದ ನಾಲಗೆಯವರು, ನಿನ್ನ ನಾಲಗೆ ಭಾರಿ ಉದ್ದ ಆಯ್ತು, ನಾಲಗೆ ಮಡಚಿ ಕುಳಿತುಕೋ ಎಂದೆಲ್ಲಾ ಹಿರಿಯರು ಬೈಯ್ಯುವುದನ್ನು ನೀವು ನೋಡಿರಬಹುದು, ಕೇಳಿರಬಹುದು. ಅದರರ್ಥ ನಾಲಗೆ ಉದ್ದ ಇದೆ ಎಂದಲ್ಲಾ, ಮಾತು ಕಡಿಮೆ ಮಾಡು ಎದುರುತ್ತರ ಕೊಡದಿರು ಎಂಬುದು. ಅದೆಲ್ಲಾ ಯಾಕೆ ಈಗ ಅಂತೀರಾ ಮ್ಯಾಟರ್ ಇದೆ... ಇಲ್ಲೊಂದು ಶ್ವಾನ ಉದ್ದ ನಾಲಗೆಯ ಕಾರಣಕ್ಕೆ ಗಿನ್ನೆಸ್ ಪುಟ ಸೇರಿದೆ. ಈ ನಾಯಿಯ ನಾಲಗೆ ಬರೋಬರಿ 5.46 ಇಂಚು ಉದ್ದ ಇದೆ. ಕೆಲದಿನಗಳ ಹಿಂದೆ ಪುಟಾಣಿ ಶ್ವಾನವೊಂದು ಜಗತ್ತಿನ ಅತೀ ಪುಟ್ಟ ನಾಯಿ ಎಂದು ಗಿನ್ನೆಸ್ ದಾಖಲೆ ಮಾಡಿತ್ತು. ಈಗ ಉದ್ದ ನಾಯಿಯ ಸರದಿ...
ಈ ಅಮೆರಿಕಾದ ರಾಕಿ ಹೆಸರಿನ ಶ್ವಾನೇ ಉದ್ದ ನಾಲಗೆಯ ಕಾರಣಕ್ಕೆ ಗಿನ್ನೆಸ್ ಪುಟ ಸೇರಿದ ಶ್ವಾನ. ಇದಕ್ಕೂ ಮೊದಲು ಈ ದಾಖಲೆ ಮೋಚಿ ಎಂಬ ಶ್ವಾನದ ಹೆಸರಿನಲ್ಲಿತ್ತು. ಮೋಚಿ ನಿಧನದ ನಂತರ ಶ್ವಾನ ರಾಕಿಯ ಮಾಲೀಕ ಶ್ವಾನದ ಹೆಸರಲ್ಲಿ ಗಿನ್ನೆಸ್ ದಾಖಲೆ ಮಾಡಲು ಅರ್ಜಿ ಸಲ್ಲಿಸಿದ್ದರು. ಅಮೆರಿಕಾದ ಇಲಿನಾಯ್ಸ್‌ನ ಈ ರಾಕಿಯ ನಾಲಗೆ 5.46 ಇಂಚು ಉದ್ದ ಇದೆ. ಬಾಕ್ಸರ್ ಬ್ರಾಡ್ ಹಾಗೂ ಕ್ರಿಸ್ಟೆಲ್ ವಿಲಿಯಮ್ಸ್ ಈ ಶ್ವಾನದ ಮಾಲೀಕರಾಗಿದ್ದಾರೆ.
ಹೈ ಹೀಲ್ಸ್ ಧರಿಸಿ 12.28 ಸೆಕೆಂಡ್‌ನಲ್ಲಿ 100 ಮೀಟರ್ ಓಡಿದ ಯುವಕನಿಗೆ ಗಿನ್ನೆಸ್ ಗರಿ
ಈ ಬಗ್ಗೆ ಮಾತನಾಡಿದ ಶ್ವಾನದ ಮಾಲೀಕ ಕ್ರಿಸ್ಟೆಲ್ ವಿಲಿಯಮ್ಸ್ (Crystal William), ನಮ್ಮ ಮನೆಯ ಶ್ವಾನಗಳು ಯಾವಾಗಲೂ ಸಾಮಾನ್ಯಕ್ಕಿಂತ ಹೆಚ್ಚಿನ ಉದ್ದ ನಾಲಗೆಯನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ. ಹೊಸ ದಾಖಲೆ ಮೂರರಿಂದ ನಾಲ್ಕು ಇಂಚುಗಳ ಮಧ್ಯೆ ಇದೆ ಎಂದಾಗ ಹೋ ನಾವು ಭಾಗವಹಿಸಬಹುದು ಎಂದು ತಾವು ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದೀರ್ಘವಾಗಿತ್ತು ಇದು ಬೇಸರದ ಸಂಗತಿಯಾಗಿದೆ. ಇದರ ಜೊತೆಗೆ ನಾಯಿಯ ಮಾಲೀಕರು ಸ್ಪರ್ಧೆಗೆ ಅರ್ಜಿ ಸಲ್ಲಿಸುವ ಮೊದಲು ಮೂರು ಬಾರಿ ಪರಿಶೀಲಿಸಿದ್ದಾರೆ. ಅಲ್ಲದೇ ಇದಕ್ಕೆ ಅವರು ಸ್ಪಂದಿಸಲು ತಿಂಗಳು ಹಿಡಿದವು ಇದಾದ ಬಳಿಕ ಗಿನ್ನೆಸ್ ಸಂಸ್ಥೆ ತಮ್ಮ ಪಶುವೈದ್ಯ ಡಾಕ್ಟರ್ ಬೆರ್ನಾರ್ಡ್ ಬ್ಲೀಮ್ (Dr Bernard Bleem) ಅವರನ್ನು ನಾಯಿಯ ನಾಲಗೆಯ ಅಳತೆಗಾಗಿ ಕಳುಹಿಸಿದರು ಎಂದು ಮಾಲೀಕ ಹೇಳಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅಬ್ಬಬ್ಬಾ! 800 ಗ್ರಾಂ ತೂಕದ ಕಿಡ್ನಿ ಸ್ಟೋನ್ ಹೊರತೆಗೆದ ವೈದ್ಯರು: ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆ
ರಾಕಿ ಒಂದು ಅಧ್ಬುತ ಶ್ವಾನ ಅವನು ಈ ಪ್ರಶಸ್ತಿ ಗಳಿಸಲು ಆತ ಅರ್ಹ ಎಂದು ಪಶುವೈದ್ಯ ಬೆರ್ನಾರ್ಡ್ ಬ್ಲೀಮ್ ಹೇಳಿದ್ದಾರೆ. ಇದಕ್ಕೂ ಮೊದಲು ಲ್ಯಾಬ್ರಡಾರ್ (Labrador) ಜರ್ಮನ್ ಶೆಫರ್ಡ್ (German shepherd) ಮಿಶ್ರ ತಳಿಯ ಶ್ವಾನ ಜೋಯಾ (Zoey) ಹೆಸರಲ್ಲಿ ಈ ದಾಖಲೆ ಇತ್ತು. ಅದರ ನಾಲಗೆ ಐದು ಇಂಚು ಉದ್ದ ಇತ್ತು.