ಕೋವಿಡ್ ಟೆಸ್ಟ್‌ಗೆ ಒಪ್ಪದ ಮಹಿಳೆಯನ್ನು ಕೆಳಗೆ ಬೀಳಿಸಿ ದೌರ್ಜನ್ಯ: ಚೀನಾದ ವಿಡಿಯೋ ವೈರಲ್

Published : May 06, 2022, 09:59 AM IST
ಕೋವಿಡ್ ಟೆಸ್ಟ್‌ಗೆ ಒಪ್ಪದ ಮಹಿಳೆಯನ್ನು ಕೆಳಗೆ ಬೀಳಿಸಿ ದೌರ್ಜನ್ಯ: ಚೀನಾದ ವಿಡಿಯೋ ವೈರಲ್

ಸಾರಾಂಶ

ಚೀನಾದ ಭಯಾನಕ ವಿಡಿಯೋ ವೈರಲ್‌ ಕೋವಿಡ್ ಟೆಸ್ಟ್‌ಗೆ ಒಪ್ಪದ ಮಹಿಳೆ ಮೇಲೆ ದೌರ್ಜನ್ಯ ಕೆಳಗೆ ಬೀಳಿಸಿ ಮಹಿಳೆಗೆ ಕೋವಿಡ್ ತಪಾಸಣೆ

ಹೇಳಿ ಕೇಳಿ ಚೀನಾ ಕಮ್ಯುನಿಸ್ಟ್ ರಾಷ್ಟ್ರ ಇಲ್ಲಿ ಮಾನವಹಕ್ಕುಗಳು ಮಾನವೀಯತೆಗೆ ಪ್ರಜೆಗಳ ಪ್ರಾಣಕ್ಕೆ ಹಕ್ಕುಗಳಿಗೆ ಯಾವುದೇ ಬೆಲೆ ಇಲ್ಲ. ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಲ್ಲಿ ಪ್ರಜೆಗಳ ಮೇಲೆ ಸರ್ಕಾರದ ಕ್ರೌರ್ಯದ ಕೋವಿಡ್ ಬಂದ ಆರಂಭದಲ್ಲೇ ವಿಶ್ವದ ಗಮನಕ್ಕೆ ಬಂದಿತ್ತು. ಈಗ ಹೀಗೆ ಕ್ರೌರ್ಯ ತೋರಿದ ಚೀನಾದ ಮತ್ತೊಂದು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವದ ಆರ್ಥಿಕತೆಯಲ್ಲಿ ನಂಬರ್ ವನ್ ಆಗುವ ದುರುದ್ದೇಶದಿಂದ ಇಡೀ ವಿಶ್ವಕ್ಕೆ ಕೋವಿಡ್ ಹಬ್ಬಿಸಿದ ಚೀನಾಗೆ ಈಗ ಇಡೀ ವಿಶ್ವದಲ್ಲಿ ಕೋವಿಡ್ ಪ್ರಕರಣಗಳು ಬಹುತೇಕ ಅಂತ್ಯದ ಹಂತ ತಲುಪಿದ್ದರು ತನ್ನಲ್ಲಿ ಮಾತ್ರ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಅಸಹಾಯಕವಾಗಿದೆ. ಶಾಂಘೈ ನಗರವೊಂದರಲ್ಲೇ ಕೋವಿಡ್ ವಿಪರೀತ ಮಟ್ಟ ತಲುಪಿದ್ದು ಸಂಪೂರ್ಣ ಲಾಕ್‌ಡೌನ್ ಹೇರಲಾಗಿದೆ.

ಜನರಿಗೆ ಆಹಾರ ನೀರು ಮನೆಗೆ ಪೂರೈಸುವ ಭರವಸೆ ನೀಡಿ ಲಾಕ್‌ಡೌನ್‌ ಹೇರಿದ ಚೀನಾ ನಂತರದಲ್ಲಿ ಮಾತಿಗೆ ತಪ್ಪಿದ್ದು, ಜನರಿಗೆ ಮನೆಗೂ ಆಹಾರ ಪೂರೈಕೆ ಮಾಡದೇ ಜನರನ್ನು ಹೊರಗೆ ಬರಲು ಬಿಡದೇ ಜನ ಹಸಿವಿನಿಂದಲೇ ಸಾಯುವಂತೆ ಮಾಡಿದ್ದು ಇತ್ತೀಚೆಗೆ ವರದಿಯಾಗಿತ್ತು. ಆದರೆ ಬೇರೆ ದೇಶಗಳಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾದ ಕೂಡಲೇ ಸದ್ದು ಮಾಡುವ ವಿಶ್ವಸಂಸ್ಥೆ ಮಾತ್ರ ಈ ಬಗ್ಗೆ ಧ್ವನಿ ಎತ್ತದೆ ಗುಮ್ಮನಂತಿದೆ. 

ಪ್ರಸ್ತುತ ಜೀರೋ ಕೋವಿಡ್‌ ಪ್ರಕರಣದ ಗುರಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಚೀನಾದಲ್ಲಿ ಕೋವಿಡ್ ಟೆಸ್ಟ್‌ಗೆ ಒಪ್ಪದ ಮಹಿಳೆಯೊಬ್ಬಳ ಮೇಲೆ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯನ್ನು ಕೆಳಗೆ ಬೀಳಿಸುವ ಇಬ್ಬರು ಆರೋಗ್ಯ ಕಾರ್ಯಕರ್ತರು ಆಕೆಗೆ ಬಲವಂತದ ಪರೀಕ್ಷೆ ಮಾಡುತ್ತಾರೆ. ಓರ್ವ ಆಕೆಯನ್ನು ಕೆಳಗೆ ಬೀಳಿಸಿ ಆಕೆಯ ಮೇಲೆ ಕುಳಿತುಕೊಂಡು ಆಕೆಯ ಕೈಗಳನ್ನು ಹಿಡಿದುಕೊಂಡರೆ ಮತ್ತೊಬ್ಬರು ಆಕೆಗೆ ಕೋವಿಡ್ ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಈ ವೇಳೆ ಮಹಿಳೆ ಜೋರಾಗಿ ಬೊಬ್ಬೆ ಹಾಕಿ ತಪಾಸಣೆಗೆ ವಿರೋಧ ವ್ಯಕ್ತಪಡಿಸುತ್ತಾಳೆ. ಆದಾಗ್ಯೂ ಆಕೆಗೆ ಬಲವಂತದಿಂದ ತಪಾಸಣೆ ಮಾಡಲಾಗುತ್ತದೆ. 

ಚೀನಾ ತನ್ನ ಕಠಿಣವಾದ ಶೂನ್ಯ ಕೋವಿಡ್ ಪ್ರಕರಣದ ಗುರಿ ತಲುಪಲು ಲಾಕ್ಡೌನ್ ಹೇರಿದೆ.  ಶಾಂಘೈನಂತಹ ನಗರಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದೆ. ಶಾಂಘೈನಲ್ಲಿ ಲಕ್ಷಾಂತರ ಜನರನ್ನು ಕಟ್ಟುನಿಟ್ಟಾದ ಲಾಕ್‌ಡೌನ್ ಅಡಿಯಲ್ಲಿ ಇರಿಸಲಾಗಿದೆ. ಬೀಜಿಂಗ್‌ನಲ್ಲಿ ಕೋವಿಡ್‌ ಹರಡದಂತೆ ಹೆಚ್ಚಿನ ಎಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಕೇವಲ ಪಾರ್ಸೆಲ್ ತೆಗೆದುಕೊಳ್ಳಲು ಮಾತ್ರ ಸೀಮಿತವಾಗಿವೆ. ಜಿಮ್‌ಗಳನ್ನು ಮುಚ್ಚಲಾಗಿದೆ ಮತ್ತು ತರಗತಿಗಳನ್ನು ಅನಿರ್ದಿಷ್ಟ ಕಾಲದವರೆಗೆ  ಸ್ಥಗಿತಗೊಳಿಸಲಾಗಿದೆ.

Covid 19 ಚೀನಾದಲ್ಲಿ 4ನೇ ಅಲೆ ಭೀಕರ, ಶಾಂಘೈ ನಗರದಲ್ಲಿ ಒಂದೇ ದಿನ 39 ಸಾವು!

ಶಾಂಘೈ ಮತ್ತು ಇತರೆಡೆಗಳಲ್ಲಿ ಕಂಡುಬರುವ ವ್ಯಾಪಕವಾದ ಲಾಕ್‌ಡೌನ್‌ಗಳನ್ನು (Lockdown) ವಿಧಿಸದೆಯೇ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ಕೋವಿಡ್ ಹೊಂದಿದವರನ್ನು ಪ್ರತ್ಯೇಕಿಸಲು ಅಧಿಕಾರಿಗಳು ಪ್ರಯತ್ನಿಸುವುದರಿಂದ ಬೀಜಿಂಗ್ ನಿವಾಸಿಗಳು ವಾರವಿಡೀ ಮೂರು ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಹೆಚ್ಚಿನ ಸಾರ್ವಜನಿಕ ಸ್ಥಳಗಳಿಗೆ (Public Place) ಪ್ರವೇಶ ಪಡೆಯಲು ಹಿಂದಿನ 48 ಗಂಟೆಗಳಲ್ಲಿ ಪಡೆದ ನಕಾರಾತ್ಮಕ ಪರೀಕ್ಷಾ (Negative report) ಫಲಿತಾಂಶದ ಅಗತ್ಯವಿದೆ. ಬೀಜಿಂಗ್ ಗುರುವಾರ ಕೇವಲ 50 ಹೊಸ ಪ್ರಕರಣಗಳನ್ನು ವರದಿ ಮಾಡಿತ್ತು ಅವುಗಳಲ್ಲಿ ಎಂಟು ಪ್ರಕರಣಗಳಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ. 

ಶಾಂಘೈನಲ್ಲಿ ಕೊರೋನಾ ಅಬ್ಬರ, ಜನರ ಓಡಾಟ ತಡೆಗೆ ಲೋಹದ ತಡೆಗೋಡೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!