
ವಾಷಿಂಗ್ಟನ್(ಮೇ.05): ನಾಲ್ಕು ವರ್ಷದ ಬಾಲಕಿಯ ಸಾವಿನ ಪ್ರಕರಣದಲ್ಲಿ ಆಕೆಯ ಅಜ್ಜಿ ಮತ್ತು ತಾಯಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಜ್ಜಿ ಶಿಕ್ಷೆಯಾಗಿ ಮಗುವಿಗೆ ಬಲವಂತವಾಗಿ ಅರ್ಧ ಬಾಟಲಿ ಮದ್ಯವನ್ನು ಕುಡಿಸಿದ್ದಾಳೆ ಎಂದು ಆರೋಪಿಸಲಾಗಿದೆ, ಇದರಿಂದ ಆಕೆಯ ಸ್ಥಿತಿ ಹದಗೆಟ್ಟಿದ್ದು, ಬಳಿಕ ಬಾಲಕಿಯ ಸಾವಿಗೆ ಕಾರಣವಾಗಿದೆ. ಅದೇ ಸಮಯದಲ್ಲಿ ಮಗುವಿನ ತಾಯಿ ಇದನ್ನೆಲ್ಲಾ ಕಂಡು ಮೌನವಾಗಿ ನೋಡುತ್ತಿದ್ದು, ಇದ್ಯಾವುದನ್ನೂ ವಿರೋಧಿಸಿಲ್ಲ ಎನ್ನಲಾಗಿದೆ.
ವರದಿಯ ಪ್ರಕಾರ, ಅಮೆರಿಕದ ಲೂಸಿಯಾನಾದಲ್ಲಿ ವಾಸಿಸುತ್ತಿರುವ 53 ವರ್ಷದ ಆರೋಪಿ ಮಹಿಳೆಯ ಹೆಸರು ರೊಕ್ಸಾನ್ನೆ (ಬಾಲಕಿಯ ಅಜ್ಜಿ). ರೊಕ್ಸಾನ್ನೆ ವಿರುದ್ಧ ನಾಲ್ಕು ವರ್ಷದ ಬಾಲಕಿಗೆ ಅರ್ಧ ಬಾಟಲಿ ವಿಸ್ಕಿಯನ್ನು ಬಲವಂತವಾಗಿ ಮಗುವಿಗೆ ಕುಡಿಸಿದ ಆರೋಪ ಕೇಳಿ ಬಂದಿದೆ, ಇದಾದ ಬಳಿಕ ಬಾಲಕಿ ಸಾವನ್ನಪ್ಪಿದ್ದಾಳೆ. ಆಶ್ಚರ್ಯಕರ ಸಂಗತಿಯೆಂದರೆ, ಬಾಲಕಿಯ ತಾಯಿ ಕಜಾಹ್ (28) ರೊಕ್ಸಾನ್ನೆಯ ಕಾರ್ಯವನ್ನು ಮೌನವಾಗಿ ನೋಡುತ್ತಿದ್ದರು. ಹೀಗಾಗಿ ರೊಕ್ಸಾನ್ ಜೊತೆಗೆ ಕಜಾಹ್ ಕೂಡ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಬಳಿಕ ನಡೆದ ತನಿಖೆ ವೇಳೆ ಬಾಲಕಿಯ ರಕ್ತದಲ್ಲಿ ಆಲ್ಕೋಹಾಲ್ ಮಟ್ಟವು .068 ಇರುವುದು ಪತ್ತೆಯಾಗಿದೆ. ಇದು 21 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕಾನೂನು ಮಿತಿಯ .08 ರ ಎಂಟು ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ.
ಪೊಲೀಸರು ರೊಕ್ಸಾನ್ನ ಮನೆಗೆ ಬಂದಾಗ, ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೇಳಿದಾಗ, ಹುಡುಗಿಯ ಅಣ್ಣ- ಅಕ್ಕಂದಿರು ಬಾಲಕಿ ತನ್ನ ಅಜ್ಜಿಯ ವಿಸ್ಕಿಯಲ್ಲಿ ಒಂದು ಸಿಪ್ ತೆಗೆದುಕೊಂಡಿದ್ದರಿಂದ ಅಜ್ಜಿ (ರೊಕ್ಸಾನ್ನೆ) ಕೋಪಗೊಂಡಿದ್ದರು ಎಂದು ಹೇಳಿದರು. ಇದರ ಶಿಕ್ಷೆಯಾಗಿ ಅಜ್ಜಿ ನೆಲದ ಮೇಲೆ ಮಂಡಿಯೂರಿ ಬಾಟಲಿಯಲ್ಲಿ ಉಳಿದ ಅರ್ಧದಷ್ಟು ವಿಸ್ಕಿಯನ್ನು ಕುಡಿಯುವಂತೆ ಒತ್ತಾಯಿಸಿದರು. ಬಾಲಕಿ ಪ್ರತಿಭಟಿಸಿದಾಗ ಬಲವಂತವಾಗಿ ವಿಸ್ಕಿ ನೀಡಿದ್ದರಿಂದ ಆಕೆಯ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣವು ಹೆಚ್ಚಾಯಿತು ಹಾಗೂ ಆಕೆ ಸಾವನ್ನಪ್ಪಿದ್ದಾಳೆ.
ಇನ್ನು ಸ್ಥಳಕ್ಕಾಗಮಿಸಿದ ಅಧಿಕಾರಿಗಳ ಬಳಿ ರೊಕ್ಸಾನ್ನೆ 'ತಾನು ಗೊಂದಲಕ್ಕೊಳಗಾಗಿದ್ದೆ' ಮತ್ತು ಮಗುವಿನ ಸಾವಿನ 'ಸಂಪೂರ್ಣ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ. ಅಲ್ಲದೇ ತನ್ನ ಈ ಕೃತ್ಯದಿಂದ ನಾನು 'ಎಲ್ಲರ ಜೀವನವನ್ನು ಹಾಳು ಮಾಡಿದ್ದೇನೆ ಎಂದಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ