ದೋಣಿಯೊಂದನ್ನು ಶಾರ್ಕ್ ಕಚ್ಚುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2019 ಫೆಬ್ರವರಿಯ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಭಾರಿ ಗಾತ್ರದ ಶಾರ್ಕೊಂದು ದೋಣಿಯ ಅಂಚನ್ನು ತನ್ನ ಬೃಹತ್ ಗಾತ್ರದ ಬಾಯಲ್ಲಿ ಕಚ್ಚಿ ಹಿಡಿದಿದೆ. ಸ್ವಲ್ಪ ಹೊತ್ತು ಹೀಗೆ ಕಚ್ಚಿ ಹಿಡಿದ ಶಾರ್ಕ್ ನಂತರ ದೂರ ಸಾಗುತ್ತದೆ.
ಫೆಬ್ರವರಿ 2019 ರಲ್ಲಿ, ಸಮುದ್ರ ಜೀವಶಾಸ್ತ್ರಜ್ಞ (marine Biologist) ಮತ್ತು ಶಾರ್ಕ್ ವಿಜ್ಞಾನಿ (shark scientist), 35 ವರ್ಷ ವಯಸ್ಸಿನ ರಿಲೆ ಎಲಿಯಟ್ (Riley Elliot) ತನ್ನ ಪಿಎಚ್‌ಡಿಗಾಗಿ ಸಂಶೋಧನೆ ನಡೆಸಲು ಸಮುದ್ರದಲ್ಲಿದ್ದಾಗ ಈ ಮಾಕೊ ಶಾರ್ಕ್ ಅವರಿದ್ದ ದೋಣಿಯನ್ನು ಕಚ್ಚುವ ಮೂಲಕ ಬೋಟ್‌ನಲ್ಲಿದ್ದ ರಿಲೆ ಹಾಗೂ ಇತರರನ್ನು ಸ್ವಾಗತಿಸಿತು. ಈ ವಿಡಿಯೋ ಆನ್‌ಲೈನ್‌ನಲ್ಲಿ ಈಗ ಮತ್ತೆ ಕಾಣಿಸಿಕೊಂಡಿದೆ. ರಿಲೆ ಎಲಿಯಟ್ ತನ್ನ ಪಿಎಚ್‌ಡಿಗಾಗಿ ನ್ಯೂಜಿಲೆಂಡ್‌ನ ಕರಾವಳಿಯಲ್ಲಿ ತನ್ನ ಪ್ರೇಯಸಿ ಮತ್ತು ನೀರೊಳಗಿನ ಸಿನೆಮ್ಯಾಟೋಗ್ರಾಫರ್‌ನೊಂದಿಗೆ ಈ ಸಂಶೋಧನೆ ನಡೆಸುತ್ತಿದ್ದರು. ಈ ವೇಳೆ ಅವರು ಶಾರ್ಕ್‌ನ ಈ ಅಪರೂಪದ ಕ್ಷಣವನ್ನು ಸೆರೆ ಹಿಡಿದರು.
ಆದರೆ ಶಾರ್ಕ್ ಆ ಕ್ಷಣ ಭಯಪಡಲಿಲ್ಲ. ಸ್ವಲ್ಪ ಕಾಲ ದೋಣಿಯನ್ನು ಕಚ್ಚಿ ಹಿಡಿದ ಶಾರ್ಕ್ ನಂತರ ಕ್ಷಣದಲ್ಲೇ ಸಮುದ್ರದೊಳಗೆ ಹೋಗಿದೆ. ಶಾರ್ಕ್‌ಗಳು ತನ್ನ ಮೇಲೆ ದಾಳಿ ಮಾಡದಂತೆ ಅವರೊಂದಿಗೆ ಈಜಲು ಕೆಲವು ತಂತ್ರಗಳನ್ನು ಕಲಿತಿರುವುದಾಗಿ ರಿಲೆ ಹೇಳಿದ್ದಾನೆ. ಶಾರ್ಕ್‌ಗಳು ಆಕ್ರಮಣಕಾರಿ ಅಲ್ಲ, ನರಭಕ್ಷಕ ಜಲಚರಗಳು ಮತ್ತು ವಾಸ್ತವವಾಗಿ ಅತ್ಯಂತ ಜಾಗರೂಕ, ಲೆಕ್ಕಾಚಾರದ ಪ್ರಾಣಿಗಳು, ಇಲ್ಲದಿದ್ದರೆ ಭೂಮಿಯ ಮೇಲಿನ ಯಾವುದೇ ಪ್ರಾಣಿಗಳಿಗಿಂತ ಹೆಚ್ಚು ಕಾಲ ಅಂದರೆ 400 ಮಿಲಿಯನ್ ವರ್ಷಗಳಿಗಿಂತಲೂ ಹೆಚ್ಚು ಕಾಲ ಅವು ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದು ಅವರು ನಂತರ ವಿವರಿಸಿದರು.
Baby Ghost Shark ಸಮುದ್ರ ಆಳದಲ್ಲಿ ಭಯ ಹುಟ್ಟಿಸುವ ಘೋಸ್ಟ್ ಬೇಬಿ ಶಾರ್ಕ್ ಪತ್ತೆ!
ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್
ಒಮ್ಮೊಮ್ಮೆ ಪ್ರವಾಸಿ ತಾಣದಲ್ಲಿ ಗೊತ್ತಿಲ್ಲದೆ ಅವಘಡ ನಡೆದು ಬಿಡುತ್ತದೆ. ಶಾರ್ಕ್ ಒಂದು ಕಚ್ಚಿ ಪ್ರವಾಸಿಗ ಮೃತಪಟ್ಟ ಘಟನೆ ಸಿಡ್ನಿಯ ಕೇಬಲ್ ಬೀಚ್‌ನಲ್ಲಿ
2020 ರಲ್ಲಿ ನಡೆದಿತ್ತು. ವ್ಯಕ್ತಿಯ ರಕ್ಷಣೆ ಮಾಡಲು ಧಾವಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ. ಶಾರ್ಕ್ ದಾಳಿಗೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ನೀರಿನಿಂದ ಹೊರಗೆ ತೆಗೆದು ಪ್ರಾಥಮಿಕ ಚಿಕಿತ್ಸೆ ಕೊಡುವ ಯತ್ನ ಮಾಡಿದರೂ ಫಲಪ್ರದವಾಗಲಿಲ್ಲ. ಶಾರ್ಕ್ ಗಳು ಈ ರೀತಿ ದಾಳಿ ಮಾಡುವುದು ತುಂಬಾ ಅಪರೂಪ. ಆದರೆ ಕೇಬಲ್ ಬೀಚ್ ನಲ್ಲಿ ವರ್ಷದಲ್ಲಿ ಒಂದೆರಡು ಇಂಥ ಘಟನೆಗಳು ವರದಿಯಾಗುತ್ತವಂತೆ. ಒಂದೇ ಸಂದರ್ಭದಲ್ಲಿ 22 ಶಾರ್ಕ್ ಗಳು ದಂಡೆಯ ಕಡೆ ಬಂದಿದ್ದವು ಎನ್ನಲಾಗಿದೆ. ಆಸ್ಟ್ರೇಲಿಯಾ ಸಮುದ್ರ ದಂಡೆಯಲ್ಲಿ ಈ ಸಾವಿನೊಂದಿಗೆ 2020 ರಲ್ಲಿ ಶಾರ್ಕ್‌ಗೆ ಬಲಿಯಾವರ ಸಂಖ್ಯೆ ಎಂಟು ತಲುಪಿತ್ತು.
ಮೀನುಗಾರನಿಗೆ ಎದುರಾದ ಶಾರ್ಕ್... ಎದೆ ಝಲ್ ಎನಿಸುವ ವಿಡಿಯೋ
ಸೆಲ್ಫಿ ತೆಗೆಯವಾಗಲೇ ಹೆಚ್ಚು ಸಾವು
ಕೆಲವರು ಸೆಲ್ಫಿ ಹುಚ್ಚಿಗೆ ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಾರೆ. ಎಲ್ಲೋ ಅಪರೂಪಕ್ಕೊಮ್ಮೆ ಇಂಥ ಘಟನೆ ನಡೆಯುತ್ತದೆ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ಕಳೆದ ಒಂದು ದಶಕದಲ್ಲಿ ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡವರ ಸಂಖ್ಯೆ ಶಾರ್ಕ್ ದಾಳಿಗೆ ಬಲಿಯಾದವರ ಸಂಖ್ಯೆಯ ಐದು ಪಟ್ಟು ಹೆಚ್ಚಿದೆಯಂತೆ. 2011ರ ಅಕ್ಟೋಬರ್‌ನಿಂದ 2017ರ ಡಿಸೆಂಬರ್ ವರೆಗೆ ವಿಶ್ವದಾದ್ಯಂತ 259 ಜನರು ಸೆಲ್ಫಿಗಾಗಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ 159 ಜನ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಶಾರ್ಕ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಕೇವಲ 50 ಎಂದು ಇಂಡಿಯಾಸ್ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಆ್ಯಂಡ್ ಪ್ರೈಮರಿ ಕೇರ್‌ನ ಅಧ್ಯಯನ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ