ತಾಂತ್ರಿಕ ತೊಂದರೆ: ಬ್ಯಾಗ್ ಇಲ್ಲದೇ ತೆರಳುವಂತಾದ ಸಾವಿರಾರು ಪಯಣಿಗರು: ಏರ್‌ಪೋರ್ಟ್‌ನಲ್ಲಿ ಬ್ಯಾಗ್‌ಗಳ ಜಾತ್ರೆ

Published : Jun 19, 2022, 02:56 PM IST
ತಾಂತ್ರಿಕ ತೊಂದರೆ: ಬ್ಯಾಗ್ ಇಲ್ಲದೇ ತೆರಳುವಂತಾದ ಸಾವಿರಾರು ಪಯಣಿಗರು: ಏರ್‌ಪೋರ್ಟ್‌ನಲ್ಲಿ ಬ್ಯಾಗ್‌ಗಳ ಜಾತ್ರೆ

ಸಾರಾಂಶ

ಲಂಡನ್‌: ಇಲ್ಲಿನ ಹೀಥ್ರೂ ಏರ್‌ಪೋರ್ಟ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಪ್ರಯಾಣಿಗರಿಗೆ ಅವರ ಬ್ಯಾಗ್‌ಗಳನ್ನು ಮರಳಿಸದೇ ಹಾಗೆಯೇ ಕಳುಹಿಸಿದ ಘಟನೆ ನಡೆದಿದೆ. ಇದರಿಂದ ಸಾವಿರಾರು ಬ್ಯಾಗ್‌ಗಳಿಂದಾಗಿ ಏರ್‌ಪೋರ್ಟ್‌ನ ಲಗೇಜ್ ವಿಭಾಗ ತುಂಬಿ ತುಳುಕಿತ್ತು. 

ಲಂಡನ್‌: ಇಲ್ಲಿನ ಹೀಥ್ರೂ ಏರ್‌ಪೋರ್ಟ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಪ್ರಯಾಣಿಗರಿಗೆ ಅವರ ಬ್ಯಾಗ್‌ಗಳನ್ನು ಮರಳಿಸದೇ ಹಾಗೆಯೇ ಕಳುಹಿಸಿದ ಘಟನೆ ನಡೆದಿದೆ. ಇದರಿಂದ ಸಾವಿರಾರು ಬ್ಯಾಗ್‌ಗಳಿಂದಾಗಿ ಏರ್‌ಪೋರ್ಟ್‌ನ ಲಗೇಜ್ ವಿಭಾಗ ತುಂಬಿ ತುಳುಕಿತ್ತು. ಸಾಮಾನ್ಯವಾಗಿ ವಿಮಾನದಲ್ಲಿ ಹೋಗುವಾಗ ನೀವು ಒಂದು ಕಡೆ ಪ್ರಯಾಣಿಸುತ್ತಿದ್ದರೆ ನಿಮ್ಮ ಲಗೇಜ್ ಇಲ್ಲೇಲ್ಲೋ ಇರುತ್ತದೆ. ಲಗೇಜ್‌ಗಳನ್ನು ಪ್ರಯಾಣಿಕರ ಜೊತೆ ಜೊತೆಗೆ ಕೊಂಡೊಯ್ಯಲು ವಿಮಾನದಲ್ಲಿ ಅವಕಾಶವಿಲ್ಲ. ಅಗತ್ಯವಾದ ಸಣ್ಣ ಹ್ಯಾಂಡ್, ಅಥವಾ ಸಾಧಾರಣ ಗಾತ್ರದ  ಬ್ಯಾಗ್‌ಗಳ ಹೊರತಾಗಿ ದೊಡ್ಡದಾದ ಲಗೇಜ್ ಬ್ಯಾಗ್‌ಗಳನ್ನು ಜೊತೆ ಜೊತೆಗೆ ಸಾಗಿಸಲು ಕಾರಣವಿಲ್ಲ. ಇದೇ ಕಾರಣಕ್ಕೆ ಅನೇಕರು ತಮ್ಮ ಬ್ಯಾಗ್‌ಗಳನ್ನು ಏರ್‌ಪೋರ್ಟ್‌ನಲ್ಲಿ ಕಳೆದುಕೊಂಡಿರುವ ಹಲವು ನಿದರ್ಶನಗಳಿವೆ. 

ಹಾಗೆಯೇ ಈಗ ಲಂಡನ್‌ನ ಹೀಥ್ರೂ ಏರ್‌ಪೋರ್ಟ್‌ನಲ್ಲಿ ಕೇವಲ ಒಬ್ಬರಿಬ್ಬರಿಗೆ ಮಾತ್ರವಲ್ಲ ಇಡೀ ಹಲವು ವಿಮಾನಗಳ ಅನೇಕ ಪ್ರಯಾಣಿಕರಿಗೆ ಅವರ ಲಗೇಜ್‌ಗಳನ್ನು ನೀಡದೇ ಕಳುಹಿಸಿದೆ. ತಾಂತ್ರಿಕ ತೊಂದರೆಯಿಂದಾಗಿ ಈ ಅನಾಹುತ ಸಂಭವಿಸಿದೇ ಎಂದು ಏರ್‌ಪೋರ್ಟ್‌ ಪ್ರಾಧಿಕಾರ ತಿಳಿಸಿದೆ. ಅನೇಕರು  ಏರ್ಪೋರ್ಟ್‌ ಚೆಕ್ ಇನ್‌ನಲ್ಲಿ ಭಾರಿ ವಿಳಂಬ ಅನುಭವಿಸಿದರೆ ಮತ್ತೆ ಕೆಲವರಿಗೆ ಸೂಟ್‌ಕೇಸ್‌ ಇಲ್ಲದೇ ತೆರಳುವಂತೆ ಒತ್ತಾಯಿಸಲಾಯಿತು ಎಂದು ಪ್ರಯಾಣಿಕರು ದೂರಿದ್ದಾರೆ. ಪರಿಣಾಮ ಏರ್‌ಪೋರ್ಟ್‌ನ ಟರ್ಮಿನಲ್‌ ಎರಡರಲ್ಲಿ ಇದು ಲಗೇಜ್‌ಗಳ ರಾಶಿಗೆ ಕಾರಣವಾಗಿದೆ. 

ಲಗೇಜ್‌ ಶುಲ್ಕ ತಪ್ಪಿಸಲು ಒಂದರ ಮೇಲೊಂದು 2.5 ಕೇಜಿ ಬಟ್ಟೆ ಧರಿಸಿದ ಯುವತಿ

ಕೆಲವು ಪ್ರಯಾಣಿಕರು ಲಗೇಜ್  ವಾಪಸ್ ಪಡೆಯುವಲ್ಲಿ ಅವರ ಲಗೇಜ್‌ಗಾಗಿ ಎರಡು ಗಂಟೆಗಳ ಕಾಲ ಕಾದಿದ್ದಾಗಿ ದೂರಿದರು. ಮತ್ತೆ ಕೆಲವರು ಲಗೇಜ್‌ಗಳಿಲ್ಲದೆ ಬೇರೆಡೆಗೆ ಹಾರಿದರು. ಹೀಥ್ರೂ ಇಂಗ್ಲೆಂಡ್‌ನ ಅತ್ಯಂತ ದೊಡ್ಡ ಏರ್‌ಪೋರ್ಟ್‌ ಆಗಿದ್ದು, ಇಲ್ಲಿ ಈ ರೀತಿಯ ಅವ್ಯವಸ್ಥೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ. 

ಎಂದಿಗೂ ಕಾಣಿಸದ ಸೂಟ್‌ಕೇಸ್‌ಗಳಿಗಾಗಿ ಹಲವಾರು ಗಂಟೆಗಳ ಕಾಲ ಕಾಯಬೇಕಾಗಿದೆ ಎಂದು ಒಬ್ಬರು ದೂರಿದ್ದಾರೆ, ಆದರೆ ಇನ್ನೊಬ್ಬರು ಎರಡು ಗಂಟೆಗಳ ವಿಳಂಬವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮತ್ತೆ ಕೆಲವರು 'ಬ್ರಿಟನ್‌ಗೆ ಮರಳಿ ಸ್ವಾಗತ' ಎಂದು ಕಾಮೆಂಟ್ ಮಾಡಿದ್ದಾರೆ 
ಈ ಘಟನೆಗೆ ಸಂಬಂಧಿಸಿದಂತೆ ಹೀಥ್ರೂ ಏರ್‌ಪೋರ್ಟ್‌ ವಕ್ತಾರರು ಅಡಚಣೆಗಾಗಿ ಕ್ಷಮೆಯಾಚಿಸಿದ್ದಾರೆ. ಶುಕ್ರವಾರ ಈ ಅಸಮರ್ಪಕ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ ಎಂದು ಅವರು ಹೇಳಿದರು. ಸಾಧ್ಯವಾದಷ್ಟು ಬೇಗ ಪ್ರಯಾಣಿಕರಿಗೆ ಅವರ ವಸ್ತುಗಳನ್ನು ಹಿಂದಿರುಗಿಸಲು ವಿಮಾನ ನಿಲ್ದಾಣದ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಯಾಣಿಕರ ಪ್ರಯಾಣಕ್ಕೆ ಅಡ್ಡಿ ಉಂಟಾಗಿರುವುದಕ್ಕೆ ನಾವು ವಿಷಾದಿಸುತ್ತೇವೆ ಎಂದು ಅವರು ಹೇಳಿದರು.

ಅಮೆರಿಕ ಏರ್‌ಪೋರ್ಟ್‌ನಲ್ಲಿ ಭಾರತೀಯನ ಬ್ಯಾಗ್‌ನಲ್ಲಿ ಸಿಕ್ತು ಸೆಗಣಿ ಬೆರಣಿ

ಇದು ಯುಕೆ ವಿಮಾನ ನಿಲ್ದಾಣಗಳಲ್ಲಿನ ಪ್ರಯಾಣದ ಅಡಚಣೆಗಳ ಸರಣಿಯಲ್ಲಿ ಇತ್ತೀಚಿನದು. ಹೀಥ್ರೂ ವಿಮಾನ ನಿಲ್ದಾಣ ಭಾರೀ ಸಿಬ್ಬಂದಿ ಕೊರತೆಯಿಂದ ಕಂಗೆಟ್ಟಿದೆ. ಇದೇ ಕಾರಣಕ್ಕೆ ನೂರಾರು ವಿಮಾನಗಳು ರದ್ದಾಗುತ್ತಿವೆ. COVID-19 ಸಾಂಕ್ರಾಮಿಕ ಲಾಕ್‌ಡೌನ್‌ನ ಎರಡು ವರ್ಷಗಳ ಅಡಚಣೆಯ ನಂತರ ವಿಮಾನ ನಿಲ್ದಾಣದ ಬೇಡಿಕೆಯನ್ನು ನಿರೀಕ್ಷಿಸಲು ಉದ್ಯಮವು ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!