ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಸೈನಿಕರ ಸಾವನ್ನು ಒಪ್ಪಿಕೊಂಡ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಂ ಮುನೀರ್ ಯಾರು? ಇಮ್ರಾನ್ ಖಾನ್ ಮೇಲೆ ಯಾಕಷ್ಟು ದ್ವೇಷ
ರಾವಲ್ಪಿಂಡಿ (ಸೆ.8): ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಂ ಮುನೀರ್ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಸೈನಿಕರ ಸಾವಿನ ಬಗ್ಗೆ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ರಕ್ಷಣಾ ದಿನಾಚರಣೆಯಂದು ಜನರಲ್ ಅಸಿಂ ಮುನೀರ್ ಭಾರತದೊಂದಿಗಿನ ಕಾರ್ಗಿಲ್ ಯುದ್ಧದಲ್ಲಿ ಮಡಿದ ಪಾಕಿಸ್ತಾನಿ ಸೈನಿಕರನ್ನು ಸ್ಮರಿಸಿ ಗೌರವ ಸಲ್ಲಿಸಿದರು.
ಇದಕ್ಕೂ ಮೊದಲು ಪಾಕಿಸ್ತಾನ ಯಾವಾಗಲೂ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ನಿರಾಕರಿಸುತ್ತಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನ ತನ್ನ ಕೈವಾಡವಿಲ್ಲ, ಇದು ಮುಜಾಹಿದ್ದೀನ್, ಸ್ವತಂತ್ರ ಕಾಶ್ಮೀರಕ್ಕಾಗಿ ಹೋರಾಡಿದವರು ನಡೆಸಿದ ಕೃತ್ಯ. ಆದರೆ ಭಾರತ, ನಮ್ಮ ಮೇಲೆ ದಾಳಿ ಆರಂಭಿಸಿತ್ತು. ಹೀಗಾಗಿ ಸೇನೆ ಪ್ರತ್ಯುತ್ತರ ನೀಡಿತ್ತು ಎಂದೇ ಪಾಕಿಸ್ತಾನ ಇದುವರೆಗೂ ಹೇಳಿಕೊಂಡು ಬಂದಿತ್ತು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಪಾತ್ರವನ್ನು ಮೊದಲ ಬಾರಿಗೆ ಒಪ್ಪಿಕೊಂಡ ಜನರಲ್ ಅಸಿಂ ಮುನೀರ್ ಯಾರು?
ಬಿಹಾರದಲ್ಲಿ ಮಗಧ ಎಕ್ಸ್‌ಪ್ರೆಸ್ ರೈಲು ಅಪಘಾತ, 10 ವರ್ಷದಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ರೈಲು ಅವಘಡಗಳಿವು
ಜನರಲ್ ಅಸಿಂ ಮುನೀರ್ ಯಾರು?
ಅಸಿಂ ಮುನೀರ್ ಪ್ರಸ್ತುತ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದಾರೆ. ಅವರು 1986 ರಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಆಫೀಸರ್ಸ್ ತರಬೇತಿ ಶಾಲಾ ಕಾರ್ಯಕ್ರಮದ ಮೂಲಕ ಪಾಕಿಸ್ತಾನಿ ಸೇನೆಗೆ ಸೇರಿದರು. ಅಲ್ಲಿ ಅವರು ಪಾಕಿಸ್ತಾನದ ಪ್ರತಿಷ್ಠಿತ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಗೆದ್ದರು. ಇದು ಅತ್ಯುತ್ತಮ ಪ್ರದರ್ಶನ ನೀಡುವ ಕೆಡೆಟ್‌ಗಳಿಗೆ ನೀಡಲಾಗುವ ಗೌರವ ಸೂಚಕ ಕತ್ತಿ.
ನವೆಂಬರ್ 24, 2022 ರಂದು, ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರನ್ನು ಹೊಸ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದರು. ಸೇನಾ ಮುಖ್ಯಸ್ಥರಾಗುವ ಮೊದಲು, ಅವರು ಜೂನ್ 2019 ರಿಂದ ಅಕ್ಟೋಬರ್ 2021 ರವರೆಗೆ ಗುಜ್ರಾನ್‌ವಾಲಾದಲ್ಲಿ X ಕಾರ್ಪ್ಸ್‌ಗೆ ನೇತೃತ್ವ ವಹಿಸಿದ್ದರು. ಇದು ಪಾಕಿಸ್ತಾನಿ ಸೇನೆಯ ಒಂದು ಫೀಲ್ಡ್ ಕಾರ್ಪ್ಸ್ ಆಗಿದ್ದು, ಪ್ರಸ್ತುತ ಪಾಕಿಸ್ತಾನದ ಪಂಜಾಬ್‌ನಲ್ಲಿದೆ.
ದರ್ಶನ್‌ಗೆ ಜೈಲಿನಲ್ಲಿ 32 ಇಂಚಿನ ಟಿವಿ ಅಳವಡಿಕೆ, ನಾಳೆ ನಿರ್ಧಾರವಾಗಲಿದೆ ದಾಸನ ಜೈಲು ಭವಿಷ್ಯ
ರಾವಲ್ಪಿಂಡಿಯಲ್ಲಿ ಜನಿಸಿದ ಅಸಿಂ ಮುನೀರ್
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಿಸಿದರು. ಅವರ ತಂದೆ ಸೈಯದ್ ಸರ್ವರ್ ಮುನೀರ್ ರಾವಲ್ಪಿಂಡಿಯ ಎಫ್‌ಜಿ ತಾಂತ್ರಿಕ ಪ್ರೌಢಶಾಲೆಯ ಪ್ರಾಂಶುಪಾಲರಾಗಿದ್ದರು ಮತ್ತು ಧೇರಿ ಹಸನ್ ಅಬ್ದಾಲ್ ಪ್ರದೇಶದಲ್ಲಿರುವ ಮಸೀದಿ ಅಲ್-ಕುರೈಶ್‌ನ ಇಮಾಮ್ ಆಗಿದ್ದರು. ಮುನೀರ್ ಅವರ ಆರಂಭಿಕ ಶಿಕ್ಷಣ ಇಸ್ಲಾಮಿಕ್ ಶಾಲೆ ದಾರ್-ಉಲ್-ತಜ್ವೀದ್‌ನಲ್ಲಿ ನಡೆಯಿತು. ನಂತರ ಅವರು ಇಸ್ಲಾಮಾಬಾದ್‌ನ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಅಲ್ಲಿಂದಲೇ ಅವರು ಸಾರ್ವಜನಿಕ ನೀತಿ ಮತ್ತು ಕಾರ್ಯತಂತ್ರದ ಭದ್ರತಾ ನಿರ್ವಹಣೆಯಲ್ಲಿ ಎಂಫಿಲ್ ಪದವಿ ಪಡೆದರು.
ಇಮ್ರಾನ್ ಖಾನ್ ಮತ್ತು ಬೆಂಬಲಿಗರೊಂದಿಗೆ 36ರ ಸಂಖ್ಯೆ:
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರ ನಡುವೆ 36ರ ಅಂಕಿ ಇದೆ ಎನ್ನಲಾಗಿದೆ. ಇಮ್ರಾನ್ ಖಾನ್ ತಮ್ಮ ಅಧಿಕಾರಾವಧಿಯಲ್ಲಿ ಅಸಿಂ ಮುನೀರ್ ಅವರನ್ನು ಬದಿಗೆ ಸರಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ಶಹಬಾಜ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುನೀರ್ ಅವರಿಗೆ ಹೊಸ ಜೀವ ಬಂದಂತಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರನ್ನು ಸೋಲಿಸುವುದರಿಂದ ಹಿಡಿದು ಅವರ ಬಂಧನದವರೆಗೆ ಅಸಿಂ ಮುನೀರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಇಮ್ರಾನ್ ಅವರ ಪಕ್ಷ ಪಾಕಿಸ್ತಾನ್-ತೆಹ್ರೀಕ್-ಎ-ಇನ್ಸಾಫ್ ಅನ್ನು ಮುಗಿಸಲು ಅಸಿಂ ಮುನೀರ್ ದೃಢ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಪಕ್ಷವು ಹಲವು ಬಾರಿ ಸೇನೆಯನ್ನು ಅಸಿಂ ಮುನೀರ್ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿತ್ತು.