Asianet Suvarna News Asianet Suvarna News

ದರ್ಶನ್‌ಗೆ ಜೈಲಿನಲ್ಲಿ 32 ಇಂಚಿನ ಟಿವಿ ಅಳವಡಿಕೆ, ನಾಳೆ ನಿರ್ಧಾರವಾಗಲಿದೆ ದಾಸನ ಜೈಲು ಭವಿಷ್ಯ

ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಟಿವಿ ಅಳವಡಿಸಲಾಗಿದೆ ಎಂದು ವರದಿಯಾಗಿದೆ. ತಮ್ಮ ಪ್ರಕರಣ ಮತ್ತು ಇತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು ದರ್ಶನ್‌ ಟಿವಿಗೆ ವಿನಂತಿಸಲಾಗಿತ್ತು.

Actor Darshan  get TV in ballari jail cell to stay updated on Renukaswamy murder case  gow
Author
First Published Sep 8, 2024, 3:36 PM IST | Last Updated Sep 8, 2024, 3:36 PM IST

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ  ನಟ ದರ್ಶನ್‌ ತೂಗುದೀಪಗೆ ಬಳ್ಳಾರಿ ಜೈಲಿನಲ್ಲಿ ಟಿವಿ ಲಭ್ಯವಾಗಿದೆ ಎನ್ನಲಾಗಿದೆ. 32 ಇಂಚಿನ ಟಿವಿಯನ್ನು ನಟ ದರ್ಶನ್‌ ಇರುವ ಕೋಣೆಯಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.  ತಮ್ಮ ಪ್ರಕರಣ ಮತ್ತು ಇತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ದರ್ಶನ್‌ ಟಿವಿಗೆ ವಿನಂತಿಸದ ಹಿನ್ನೆಲೆ ಹಿರಿಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಟಿವಿ ಅಳವಡಿಸಲಾಗಿದೆ ಎಂದು ವರದಿ ತಿಳಿಸಿದೆ.

ತಮ್ಮ ಪ್ರಕರಣದ ಚಾರ್ಜ್ ಶೀಟ್‌ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ದರ್ಶನ್‌ ಕಳೆದ ವಾರ ಟಿವಿಗಾಗಿ ವಿನಂತಿಸಿದ್ದರು. ಬೆಂಗಳೂರು ಪೊಲೀಸರು ಪ್ರಕರಣ ಸಂಬಂಧ ಈಗಾಗಲೇ  ದರ್ಶನ್‌ ಸೇರಿದಂತೆ 17 ಮಂದಿಯ ವಿರುದ್ಧ 3,991 ಪುಟಗಳ ಬೃಹತ್‌ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಆಗಸ್ಟ್‌ 29 ರಂದು ನಟನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿಗೆ ಸ್ಥಳಾಂತರಿಸಲಾಯಿತು. ಕುಖ್ಯಾತ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್ ನಾಗನ ಜೊತೆ ಸೇರಿದಂತೆ ಮೂವರು ವ್ಯಕ್ತಿಗಳೊಂದಿಗೆ ದರ್ಶನ್‌ ಜೈಲು ಆವರಣದಲ್ಲಿರುವ ಇದ್ದ ಫೋಟೋ  ಹೊರಬಂದ ನಂತರ ಈ ಸ್ಥಳಾಂತರ ನಡೆಯಿತು. 

 ನಾದಬ್ರಹ್ಮ ಹಂಸಲೇಖರ ಮಕ್ಕಳು ಏನ್ಮಾಡ್ತಿದ್ದಾರೆ? ಪ್ರೀತಿಯ ಮಗಳ ಸಾಧನೆ ಇದು

ದರ್ಶನ್‌ ಅಭಿಮಾನಿಯಾಗಿದ್ದ 33 ವರ್ಷದ ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿನ ಪ್ರಕರಣ ಇದು. ಆತ ತನ್ನ ಆತ್ಮೀಯ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು  ದರ್ಶನ್‌  ನನ್ನು ಕೆರಳಿಸಿತು ಮತ್ತು ಕಿಡ್ನಾಪ್ ಮಾಡಿ ಹತ್ಯೆ  ಬೆಂಗಳೂರಿನ ಪಟ್ಟಣಗೆರೆ ಶೆಡ್‌ ನಲ್ಲಿ ಹತ್ಯೆ ಮಾಡಲಾಯ್ತು.

ಪ್ರಮುಖ ಆರೋಪಿಯಾಗಿರುವ ಪವಿತ್ರ ಗೌಡ ಅಪರಾಧವನ್ನು ಪ್ರಚೋದಿಸುವಲ್ಲಿ ಮತ್ತು ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಇತರ ಆರೋಪಿಗಳೊಂದಿಗೆ ಕೊಲೆಯನ್ನು ಸಂಘಟಿಸುವಲ್ಲಿ  ನಿರ್ಣಾಯಕ ಪಾತ್ರ ವಹಿಸಿದ್ದಾಳೆ ಎಂದು ತನಿಖೆಯಿಂದ ಬಹಿರಂಗವಾಗಿದೆ.

ದರ್ಶನ್‌ ಮತ್ತು ಪವಿತ್ರ ಗೌಡ ಸೇರಿದಂತೆ ಸಹ ಆರೋಪಿಗಳು ಈಗ ರಾಜ್ಯಾದ್ಯಂತ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಆರೋಪಪಟ್ಟಿ ಸಲ್ಲಿಸಿದಾಗಿನಿಂದ ದರ್ಶನ್ ಸಾಕಷ್ಟು ಒತ್ತಡದಲ್ಲಿದ್ದಾನೆ ಎಂದು ವರದಿ ತಿಳಿಸಿದೆ.

ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ನಾಳೆ‌ಗೆ ದರ್ಶನ್ 13 ದಿನಗಳ ಕಸ್ಟಡಿ ಅಂತ್ಯವಾಗುತ್ತಿದೆ. ಹೀಗಾಗಿ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಿಡಿಯೋ ಸಂವಾದ ಮೂಲಕ ದರ್ಶನ್ ಕೋರ್ಟ್ ಗೆ ಹಾಜರಾಗಲಿದ್ದಾನೆ. ಬೆಂಗಳೂರು 24ನೇ ACMM ಕೋರ್ಟ್‌ ವಿಚಾರಣೆ ನಡೆಸಲಿದೆ. ವಿಡಿಯೋ ಕಾನ್ಫರೆನ್ಸ್ ಹಾಲ್ ಬದಲಾಗಿ ಹೈ ಸೆಕ್ಯುರಿಟಿ ಸೆಲ್‌ನಿಂದಲೇ ನಾಳೆ ಮದ್ಯಾಹ್ನ ಕೋರ್ಟ್‌ಗೆ ಹಾಜರಾಗಲಿದ್ದಾನೆ. 
 

Latest Videos
Follow Us:
Download App:
  • android
  • ios