ಜರ್ಮನಿಯ ಪ್ರಸಿದ್ಧ ಯೂಟೂಬರ್ ಯೂನೆಸ್ ಜರೂ ಬೆಂಗಳೂರಿಗೆ ಭೇಟಿ ನೀಡಿ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದರು. ಐಫೋನ್ ಹಂಚಿಕೆ ವದಂತಿ ಹಿನ್ನೆಲೆಯಲ್ಲಿ ಅಭಿಮಾನಿಗಳು ಗುಂಪು ಸೇರಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬೆಂಗಳೂರು (ಸೆ.08): ಜರ್ಮನಿಯ ಪ್ರಸಿದ್ಧ ಯ್ಯೂಟೂಬರ್ ಯೂನೆಸ್ ಜರೂ (German YouTuber Younes Zarou) ಕೂಡ ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಆಗಿದ್ದಾರೆ. ವಿಶ್ವದ ವಿವಿಧ ದೇಶಗಳನ್ನು ಸುತ್ತಾಡಿ ತನ್ನನ್ನು ಫಾಲೋ ಮಾಡುವವರಿಗೆ ಹೊಸ ಐಫೋನ್ ಮೊಬೈಲ್ ಗಿಫ್ಟ್ ಕೊಡುವ ಯೂನೆಸ್ ಜರೂ ಬೆಂಗಳೂರಿಗೆ ಬಂದು ಪುನೀತ್ ರಾಜ್‌ಕುಮಾರ್ ಫೋಟೋ ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಯೂನೆಸ್ ಜರೂ ಬರೋಬ್ಬರಿ 15 ಮಿಲಿಯನ್‌ಗಿಂತಲೂ ಅಧಿಕ ಫಾಲೋವರ್ಸ್ ಹೊಂದಿದ್ದಾನೆ. ವಾರ್ಷಿಕ 35 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಜಗತ್ತಿನ ವಿವಿಧ ದೇಶಗಳಿಗೆ ಪ್ರವಾಸಕ್ಕೆ ತೆರಳಿ ಕೆಲವು ಸರಳ ಪ್ರಶ್ನೆ ಕೇಳಿ ಅಥವಾ ತನ್ನನ್ನು ಫಾಲೋ ಮಾಡುವರಿಗೆ ಐಫೋನ್ ಗಿಫ್ಟ್ (iPhone Gift) ಕೊಡುತ್ತಾರೆ. ಇವರು ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದಾರೆ ಎನ್ನುವುದೇ ಕನ್ನಡಿಗರ ಹೆಮ್ಮೆ ಆಗಿದೆ. ಕಳೆದೊಂದು ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದ ಯೂನೆಸ್ ಜರೂ ಎಂ.ಜಿ. ರಸ್ತೆಯಲ್ಲಿ ನಿಂತು ಯಾರು ನನ್ನನ್ನು ಫಾಲೋ ಮಾಡುತ್ತಿದ್ದೀರಿ ಎಂದು ಕೇಳಿದಾಗ ಅಲ್ಲಿ ಒಬ್ಬರು ಫಾಲೋ ಮಾಡುವುದನ್ನು ಒಪ್ಪಿಕೊಂಡು ತೋರಿಸಿದ್ದಾರೆ. ಅವರಿಗೆ ಅದೇ ಸ್ಥಳದಲ್ಲಿ ಐಫೋನ್ ಗಿಫ್ಟ್ ಕೊಟ್ಟು ಅದನ್ನು ವಿಡಿಯೋ ಮಾಡಿಕೊಂಡು ಹೋಗಿದ್ದಾರೆ.
ವಿಶ್ವದ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬೆಂಗಳೂರಿಗೆ ಬಂದರೆ ಬಂಧಿಸಿ ಜೀಪಲ್ಲಿಟ್ಟ ಪೊಲೀಸರು!
ಪುನೀತ್ ರಾಜ್ ಕುಮಾರ್ ಫೋಟೋ ಬಿಡುಗಡೆ: ಇನ್ನು ಎಂ.ಜಿ. ರಸ್ತೆಗೆ ಯೂನೆಸ್ ಜರೂ ಬಂದಿದ್ದು ತಿಳಿಯುತ್ತಿದ್ದಂತೆ ಅಲ್ಲಿಗೆ ಏಕಾಏಕಿ ಸಾವಿರಾರು ಆತನ ಅಭಿಮಾನಿಗಳು ಆಗಮಿಸಿದ್ದಾರೆ. ಕೆಲವರು ಆತನೊಂದಿಗೆ ಫೋಟೋ ತೆಗಿಸಿಕೊಂಡು, ರೀಲ್ಸ್ ಮಾಡಿ ತಾವು ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ಬೆಂಗಳೂರಿಗೆ ಬರುವ ಮುನ್ನವೇ ಕರ್ನಾಟಕದ ರತ್ನ ಪ್ರಶಶ್ತಿಗೆ ಭಾಜನರಾಗಿದ್ದ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ತಿಳಿದುಕೊಂಡು ತಾವೂ ಪುನೀತ್ ಅಭಿಮಾನಿ ಆಗಿದ್ದರು. ಇದಾದ ನಂತರ, ಬೆಂಗಳೂರಿಗೆ ಬಂದು ಒಂದು ಶಾಪ್‌ನಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಖರೀದಿಸಿ ನಾನು ಬೆಂಗಳೂರಿನಿಂದ ತೆಗೆದುಕೊಂಡು ಹೋಗುತ್ತಿರುವುದು ಏನು ಗೊತ್ತಾ? ಅದು ಪುನೀತ್ ರಾಜ್ ಕುಮಾರ್ ಫೋಟೋ ಎಂದು ಅದನ್ನು ಸಾರ್ವಜನಿಕ ಸ್ಥಳದಲ್ಲಿಯೇ ಅನಾವರಣ ಮಾಡಿದ್ದಾರೆ.
ಮದುವೆಯಾದ ಎರಡೇ ತಿಂಗಳಲ್ಲಿ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಗರ್ಭಿಣಿ?!
ಐಫೋನ್ ಕೊಡುವಂತೆ ಮುಗಿಬಿದ್ದ ಜನತೆ: ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಯೂನೆಸ್ ಜರೂ ಇರುವ ಸ್ಥಳಕ್ಕೆ ಬಂದ ಆತನ ಆಭಿಮಾನಿಗಳು ನಾವೂ ನಿಮ್ಮ ಅಭಿಮಾನಿಗಳು. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆ ಫಾಲೋ ಮಾಡುತ್ತಿದ್ದೇವೆ ಎಂದು ತೋರಿಸಿ ತಮಗೂ ಐಫೋನ್ ನೀಡುವಂತೆ ಮುಗಿ ಬಿದ್ದಿದ್ದಾರೆ. ಇದಾದ ಬಳಿಕ ಯೂನೆಸ್ ಜರೂಗೆ ಹಿಂಸೆ ಆರಂಭವಾಗಿದೆ. ನಾನು ಹೋಗುತ್ತೇನೆ ಬಿಟ್ಟುಬಿಡಿ ಎಂದರೂ ಆತನನ್ನು ಬೆಂಬಿಡದೇ ಕಾಡಿದ್ದಾರೆ. ಇದಾದ ನಂತರ ರಸ್ತೆಯಲ್ಲಿ ಜನರು ಗುಂಪು ಸೇರಿದ್ದನ್ನು ನೋಡಿದ ಅಶೋಕನಗರ ಠಾಣೆ ಸಂಚಾರಿ ಪೋಲೀಸರು ಯೂನೆಸ್ ಜರೂನನ್ನು ವಶಕ್ಕೆ ಪಡೆದಿದ್ದಾರೆ. ನಂತರ, ಆತನ ಹಿಂದೆ ಮುಗಿಬಿದ್ದಿದ್ದ ಜನರನ್ನು ಚದುರಿಸಿ ಪೊಲೀಸರ ಹೊಯ್ಸಳ ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆದೊಯ್ದಯಿದ್ದಾರೆ. ನಂತರ, ಕೆಲ ಹೊತ್ತಿನವರೆಗೆ ಠಾಣೆಯಲ್ಲಿ ಕೂರಿಸಿಕೊಂಡು, ಎಂ.ಜಿ. ರಸ್ತೆಗೆ ಒಂದೆಡೆ ಬರುವುದಾಗಿ ಮೊದಲೇ ತಿಳಿಸಬೇಕಿತ್ತು ಎಂದು ಹೇಳಿದ್ದಾರೆ. ಇದಾದ ನಂತರ ಯೂನೆಸ್ ಜರೂನನ್ನು ಬಿಟ್ಟು ಕಳಿಸಿದ್ದಾರೆ.