
ಬೀಜಿಂಗ್(ಸೆ.08) ಮಲಗುವ ಕೋಣೆ ಶುಚಿತ್ವ ಅತ್ಯಂತ ಮುಖ್ಯ. ಇಲ್ಲಿ ಜಿರಳೆ, ಕೀಟಗಳು ಇರಬಾರದು.ಇದು ಅಪಾಯಕ್ಕೆ ಅಹ್ವಾನ ನೀಡಿದಂತೆ. ಹೀಗೆ ವ್ಯಕ್ತಿಯೊಬ್ಬ ಗಢದ್ ನಿದ್ದೆಗೆ ಜಾರಿದ್ದಾನೆ. ಹೀಗೆ ನಿದ್ದೆ ವೇಳೆ ಈತನ ಮೂಗಿನಿಂದ ಜಿರಳೆಯೊಂದು ದೇಹದ ಒಳ ಹೊಕ್ಕಿದೆ. ಆದರೆ ವ್ಯಕ್ತಿಗೆ ಮಾತ್ರ ಎಚ್ಚರವಾಗಿಲ್ಲ. ಗಟ್ಟಿ ನಿದ್ದೆ ಮಾಡಿದ ವ್ಯಕ್ತಿ ಮರುದಿನ ಬೆಳಗ್ಗೆ ಎದ್ದಿದ್ದಾನೆ. ಈ ವೇಳೆಯೂ ಈತನಿಗೆ ತನ್ನ ಮೂಗಿನೊಳಗಿಂದ ಜಿರಳೆ ದೇಹ ಪ್ರವೇಶಿಸಿದ ಸಣ್ಣ ಸುಳಿವು ಕೂಡ ಇರಲಿಲ್ಲ. ಆದರೆ ಕೆಲ ಹೊತ್ತಲ್ಲೇ ಇದರ ಪರಿಣಾಮ ಗೊತ್ತಾಗಿದೆ.
ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಡೆದಿದೆ. 58 ವರ್ಷದ ಹೈಕೊ ಅನ್ನೋ ವ್ಯಕ್ತಿಯ ದೇಹದೊಳಗೆ ಜಿರಳೆ ಪ್ರವೇಶಿಸಿ ಹೈರಾಣಾಗಿದ್ದಾನೆ. ಬೆಳಗ್ಗೆ ಎದ್ದಾಗ ಹೈಕೋಗೆ ಯಾವುದೇ ರೀತೀಯ ಸಮಸ್ಯೆ ಇರಲಿಲ್ಲ. ಮೊದಲ ದಿನ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗಿದೆ. ಆದರೆ ಎರಡನೇ ದಿನ ಉಸಿರಾಡುವಾಗ ಕೆಟ್ಟ ವಾಸನೆ ಬರಲು ಆರಂಭಿಸಿದೆ. ದೇಹದೊಳಗಿಂದ ಹೊರಬಿಡುವ ಉಸಿರು ದುರ್ವಾಸೆ ಬೀರುತ್ತಿತ್ತು.
ಜಿರಳೆ ಸಮಸ್ಯೆಗೆ ಶಾಶ್ವತ ಮುಕ್ತಿ! ಐಐಎಸ್ಸಿ ವಿಜ್ಞಾನಿ ಶಿವಕುಮಾರ್ ಕಂಡುಹಿಡಿದ ಉಪಾಯ ಇಲ್ಲಿದೆ...
ಆದರೂ ಹೈಕೋಗೆ ಕಾರಣ ಏನು ಅನ್ನೋದು ಅರ್ಥವಾಗಿಲ್ಲ. ಈತನ ಬಾಯಿ ಕೂಡ ಇದೇ ರೀತಿ ದುರ್ವಾಸೆ ಬೀರಲು ಆರಂಭಿಸಿದೆ. ಆದರೆ ಇತರ ಯಾವುದೇ ಸಮಸ್ಯೆಗಳು ಕಾಣಿಸಲಿಲ್ಲ. ಹೀಗಾಗಿ ಹೈಕೋ ಮೌಥ್ ವಾಶ್ ಮೂಲಕ ಕೆಲವು ಬಾರಿ ಮುಖ ಹಾಗೂ ಬಾಯಿ ತೊಳೆದಿದ್ದಾನೆ. ಆದರೂ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಮಿಂಟ್ ಸೇರಿದಂತೆ ಕೆಲ ಸುವಾಸನೆ ಭರಿತ ಚಾಕೋಲೇಟ್ ತಿಂದಿದ್ದಾನೆ. ಆದರೂ ದುರ್ವಾಸೆ ಮಾತ್ರ ಹೋಗುತ್ತಿಲ್ಲ.
ಮೂರನೇ ದಿನ ಉಸಿರಾಟದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿದೆ. ಜೊತೆಗೆ ಬಾಯಿ ಮೂಲಕ ಹಳದಿ ಲೋಳೆಯಂತ ದ್ರವ ಬರಲು ಆರಂಭಿಸಿದೆ. ಉಸಿರಾಟದ ಸಮಸ್ಯೆ ಹೆಚ್ಚಾಗಲು ಆರಂಭಿಸಿದೆ. ಈ ವೇಳೆ ತನ್ನ ದೇಹಕ್ಕೆ ಗಂಭೀರವಾದ ಸಮಸ್ಯೆ ಇದೆ ಎಂದು ಹೈಕೋ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದಾನೆ.
ಇಷ್ಟಾದರೂ ಆರೋಗ್ಯವಾಗುವ ವಿಶ್ವಾಸದಿಂದ ಕೆಲ ಹೊತ್ತು ವಿಶ್ರಮಿಸಿದ್ದಾನೆ. ಆದರೆ ನಿದ್ದೆ ಬರಲಿಲ್ಲ. ಉಸಿರಾಟದಲ್ಲಿ ಸಮಸ್ಯೆಯಾಗುತ್ತಿರುವ ಕಾರಣ ನಿದ್ದೆ ಬರಲಿಲ್ಲ. ಹೀಗಾಗಿ ವೈದ್ಯರ ಭೇಟಿ ಬಿಟ್ಟರೆ ಬೇರೆ ಮಾರ್ಗವಿಲ್ಲ ಅನ್ನೋದು ಖಚಿತವಾಗಿದೆ. ಕೊನೆಗೆ ವೈದ್ಯರ ಭೇಟಿ ಮಾಡಿದ ಹೈಕೋಗೋ ಮಾತ್ರವಲ್ಲ ತಪಾಸಣೆ ಮಾಡಿದ ವೈದ್ಯರಿಗೂ ಅಚ್ಚರಿಯಾಗಿದೆ.
ಎಕ್ಸ್‍ರೇ, ಸ್ಕಾನಿಂಗ್ ಮಾಡಿದ ವೈದ್ಯರಿಗೆ ಶ್ವಾಸನಾಳದಲ್ಲಿ ಜಿರಳೆ ಪತ್ತೆಯಾಗಿದೆ. ಈ ಜಿರಳೆ ಶ್ವಾಸನಾಳದವರೆಗೆ ಬಂದು ಸತ್ತಿದೆ. ಮಲಗಿದ ಕೆಲ ಹೊತ್ತಲ್ಲೇ ಜಿರಳೆ ಈತನ ಮೂಗಿನ ಮೂಲಕ ಪ್ರವೇಶಿಸಿದೆ. ಒಂದೂವರೆ ದಿನ ಕಾಲ ಜಿರಳೆ ಜೀವಂತವಾಗಿದೆ. ಬಳಿಕ ಸತ್ತಿದೆ. ಸತ್ತ ಕೆಲ ಹೊತ್ತಿನಿಂದ ಇದು ಕೊಳೆಯಲು ಆರಂಭಿಸಿದೆ. ತೇವಾಂಶದ ಕಾರಣ ಜಿರಳೆ ಬೇಗನೆ ಕೊಳೆಯಲು ಆರಂಭಿಸುತ್ತಿದ್ದಂತೆ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಮೂರು
ಹೈಕೋ ತಪಾಸಣೆ ನಡೆಸಿದ ವೈದ್ಯರು ಬಳಿಕ ಸರ್ಜರಿ ಮಾಡಿ ಜಿರಳೆ ಹೊರತೆಗದ್ದಾರೆ. ಇದೀಗ ಹೈಕೋ ಆರೋಗ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಯಿ, ಮೂಗಿನಿಂದ ಕೆಟ್ಟವಾಸನೆ ಬರುತ್ತಿದೆ ಎಂದರೆ ನಿರ್ಲಕ್ಷಿಸಬೇಡಿ ಎಂದು ಹೆನಾನ್ ಪ್ರಾಂತ್ಯದ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಜಿರಳೆಗಳ ಮೂಲ ಆಗ್ನೇಯ ಏಷ್ಯಾವಂತೆ: ಅಧ್ಯಯನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ