ವರ್ಷಾಂತ್ಯಕ್ಕೆ ಮಿಲಿಯನ್‌ಗೂ ಅಧಿಕ ಭಾರತೀಯ ಕಾಗೆಗಳಿಗೆ ವಿಷಪ್ರಾಶನಕ್ಕೆ ಮುಂದಾದ ಕೀನ್ಯಾ ಸರ್ಕಾರ

By Anusha Kb  |  First Published Jun 28, 2024, 12:49 PM IST

ಈ ವರ್ಷದ ಅಂತ್ಯದ ವೇಳೆ ಮಿಲಿಯನ್‌ಗೂ ಅಧಿಕ ಕಾಗೆಗಳನ್ನು ಸರ್ವನಾಶ ಮಾಡುವ ಗುರಿ ಹೊಂದಿದೆ ಕೀನ್ಯಾ. ಕಾಗೆಗಳ ವಿರುದ್ಧ ಹೀಗೆ ಕೀನ್ಯಾ ಕೆಂಡಕಾರಲು ಕಾರಣವೇನು ಇಲ್ಲಿದೆ ಡಿಟೇಲ್ಸ್ ಸ್ಟೋರಿ... 


ಕೀನ್ಯಾ ಸರ್ಕಾರವೂ ದೇಶದಲ್ಲಿ ತುಂಬಿ ತುಳುಕುತ್ತಿರುವ ಭಾರತೀಯ ಮೂಲದ ಕಾಗೆಗಳ ವಿರುದ್ಧ ಯುದ್ಧ ಸಾರಲು ಮುಂದಾಗಿದ್ದು, ಇವುಗಳ ನಿರ್ಮೂಲನೆಗೆ ಯೋಜನೆ ರೂಪಿಸಿದೆ. ಈ ವರ್ಷದ ಅಂತ್ಯದ ವೇಳೆ ಮಿಲಿಯನ್‌ಗೂ ಅಧಿಕ ಕಾಗೆಗಳನ್ನು ಸರ್ವನಾಶ ಮಾಡುವ ಗುರಿ ಹೊಂದಿದೆ ಕೀನ್ಯಾ. ಕಾಗೆಗಳ ವಿರುದ್ಧ ಹೀಗೆ ಕೀನ್ಯಾ ಕೆಂಡಕಾರಲು ಕಾರಣವೇನು ಇಲ್ಲಿದೆ ಡಿಟೇಲ್ಸ್ ಸ್ಟೋರಿ... 

ಬುದ್ದಿವಂತ ಪಕ್ಷಿಗಳು ಎನಿಸಿರುವ ಕಾಗೆಗಳಿಗೆ ಭಾರತದಲ್ಲಿ ,ಹಿಂದೂ ಪುರಾಣದಲ್ಲಿ ಮಹತ್ವದ ಸ್ಥಾನಮಾನವಿದೆ. ಪಿತೃಪಕ್ಷಗಳಲ್ಲಿ ಅಥವಾ ಯಾವುದೇ ಪಿತೃ ಕಾರ್ಯಗಳಲ್ಲಿ ಕಾಗೆ ಬಂದಿಲ್ಲ ಎಂದರೆ ಆ ಕಾರ್ಯ ಸಂಪೂರ್ಣಗೊಳ್ಳುವುದಿಲ್ಲ. ಹೀಗಿರುವಾಗ ಕೀನ್ಯಾದಲ್ಲಿ ಈ ಕಾಗೆಗಳನ್ನು ವರ್ಷಾಂತ್ಯದ ವೇಳೆಗೆ ವಿಷವಿಕ್ಕಿ ಕೊಲ್ಲುವ ಕೆಲಸಕ್ಕೆ ಮುಂದಾಗಿದೆ ಕೀನ್ಯಾ ಆಡಳಿತ. ಇದಕ್ಕೆ ಕಾರಣವಾಗಿರುವುದು ಕಾಗೆಗಳ ಅತೀಯಾದ ಹಾವಳಿ.

Tap to resize

Latest Videos

ನಿಮ್ಮ ಮನೆಯ ಈ ದಿಕ್ಕಿನಲ್ಲಿ ಕಾಗೆ ಕುಳಿತು ಕಿರುಚಿದರೆ, ಹುಷಾರಾಗಿರಿ!

ಭಾರತ ಮೂಲದ ಕಾಗೆಗಳ ಹಾವಳಿ ಅಲ್ಲಿ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಪಾರ್ಕ್, ಮೈದಾನ ಮುಂತಾದ ಎಲ್ಲಿಯೂ ತೆರೆದ ಸ್ಥಳದಲ್ಲಿ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಹಾಗಿಲ್ಲ, ಕೂಡಲೇ ಅಲ್ಲಿಗೆ ದಾಳಿ ಇಡುವ ಕಾಗೆಗಳ ಹಿಂಡು ಅಲ್ಲಿದ್ದವರ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದು, ಅಲ್ಲಿದ ಕೇಕ್‌ನ್ನು ಹಾಳು ಮಾಡಿಬಿಡುತ್ತವಂತೆ ಬರೀ ಇಷ್ಟೇ ಅಲ್ಲ ಕಾಗೆಗಳ ವಿರುದ್ಧ ನೂರೆಂಟು ದೂರು ಹೇಳುತ್ತಿದ್ದಾರೆ ಅಲ್ಲಿನ ಜನ.  

ತಲೆಗೆ ಬಂದು ಬಡಿಯುವುದರಿಂದ ಹಿಡಿದು ಪ್ರವಾಸಿಗರ ಪ್ಲೇಟ್‌ನಿಂದ ಆಹಾರ ಕದಿಯುವವರೆಗೂ, ಸ್ಥಳೀಯ ಹಕ್ಕಿಗಳನ್ನು ಅವುಗಳ ವಾಸ ಸ್ಥಾನದಿಂದ ದೂರ ಓಡಿಸಿ ಬೆಳೆಗಳನ್ನು ಹಾನಿ ಮಾಡುವುದು ಸೇರಿದಂತೆ ಭಾರತೀಯ ಕಾಗೆಗಳ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದೆ. ಅವುಗಳ ಸಂಖ್ಯೆಯ ನಿಯಂತ್ರಣಕ್ಕೆ ದಶಕಗಳಿಂದಲೂ ಪ್ರಯತ್ನಿಸಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈಗ ಅವುಗಳ ವಿರುದ್ಧ ದೊಡ್ಡ ಯುದ್ಧ ಸಾರಲು ಮುಂದಾಗಿದೆ ಕೀನ್ಯಾ ಸರ್ಕಾರ. 

ಸುಖ, ನೆಮ್ಮದಿ ಜೊತೆಗೆ ಸುಂದರ ಮನೆ ಸರ್ವನಾಶ ಆಗೋಕೆ ಇವಿದ್ದರೆ ಸಾಕು!

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಕೀನ್ಯಾ ವನ್ಯಜೀವಿಮಂಡಳಿಯೂ, ಹೌಸ್ ಕ್ರೌ ಅಥವಾ ಇಂಡಿಯನ್ ಕ್ರೌ ಎಂದು ಕರೆಯಲ್ಪಡುವ ಈ ಕಾಗೆಗಳು ಆಕ್ರಮಣಕಾರಿ ಅನ್ಯಲೋಕದ ಪಕ್ಷಿಗಳಾಗಿದ್ದು, ಅದು ದಶಕಗಳಿಂದಲೂ ಸಾರ್ವಜನರಿಕರಿಗೆ ತೊಂದರೆ ನೋಡುತ್ತಿದೆ.  ಈ ಪಕ್ಷಿಗಳು ಕೀನ್ಯಾದ ಕರಾವಳಿಯುದ್ಧಕ್ಕೂ ಹೊಟೇಲ್ ಉದ್ಯಮಕ್ಕೆ ಹಾನಿಯುಂಟುಮಾಡುತ್ತಿವೆ. ಹೀಗಾಗಿ 2024ರ ಡಿಸೆಂಬರ್ ಅಂತ್ಯದ ವೇಳೆಗೆ ಈ ಕಾಗೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು  ಕೀನ್ಯಾ ವನ್ಯಜೀವಿ ಮಂಡಳಿ ಹೊಂದಿದ್ದು, ಇದಕ್ಕಾಗಿ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಹೇಳಿದೆ.

ಅಲ್ಲದೇ ಈ ಪಕ್ಷಿಗಳು ಸ್ಥಳೀಯ ಆದ್ಯತೆಯ ಪರಿಸರ ವ್ಯವಸ್ಥೆಯ ಭಾಗವಾಗಿಲ್ಲ ಎಂದು ಕೀನ್ಯಾ ವನ್ಯಜೀವಿ ಸೇವೆ (KWS)ಹೇಳಿದೆ. ಇವುಗಳ ಮಿತಿಮೀರಿದ ಜನಸಂಖ್ಯಾ ಬೆಳವಣಿಗೆಯಿಂದ ಇತರ ಪಕ್ಷಿಗಳ ಸಂತತಿಯ ಮೇಲೆ ಇದು ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಕೀನ್ಯಾ ವನ್ಯಜೀವಿ ಇಲಾಖೆ ಹೇಳಿದೆ.  ಕೀನ್ಯಾ ವನ್ಯಜೀವಿ ಸೇವೆಗಳ ಮಹಾನಿರ್ದೇಶಕರನ್ನು ಪ್ರತಿನಿಧಿಸುವ ವನ್ಯಜೀವಿ ಮತ್ತು ಸಮುದಾಯ ಸೇವೆಯ ನಿರ್ದೇಶಕ ಚಾರ್ಲ್ಸ್ ಮುಸ್ಯೋಕಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೀನ್ಯಾದ ಕರಾವಳಿ ಪ್ರದೇಶದಲ್ಲಿರುವ ಹೊಟೇಲ್ ಉದ್ಯಮಿಗಳು ಮತ್ತು ರೈತರು ಹಾಗೂ ಸಾರ್ವಜನಿಕರು ಈ ಕಾಗೆಗಳಿಂದ ಉಂಟಾಗುತ್ತಿರುವ ತೊಂದರೆ ಹಾಗೂ ಹಾನಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಕಾಗೆಗಳ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

click me!