ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಂದು ಕಡೆ ಯುವಕರು ಸುಮ್ಮನಿರಲಾರದೇ ಏನೋ ಮಾಡಲು ಹೋಗಿ ಸರಿಯಾಗಿ ಇಕ್ಕಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಂದು ಕಡೆ ಯುವಕರು ಸುಮ್ಮನಿರಲಾರದೇ ಏನೋ ಮಾಡಲು ಹೋಗಿ ಸರಿಯಾಗಿ ಇಕ್ಕಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈಗ ಎಲ್ಲರಿಗೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಕ್ರೇಜ್ ಇದರಿಂದ ಬೇರೆಯವರಿಗೆ ಹಾನಿಯಾದರೂ ತೊಂದರೆ ಇಲ್ಲ, ಇವರಿಗೆ ಮಾತ್ರ ವೀಡಿಯೋ ಬೇಕು ಎಂಬ ಮನಸ್ಥಿತಿ. ಇಂತಹ ಕೆಲ ಹುಚ್ಚು ಹುಡುಗರ ತಂಡವೊಂದು ವೀಡಿಯೋ ಮಾಡಿ ವೈರಲ್ ಆಗುವುದಕ್ಕಾಗಿ ರೈಲಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ನೀರೆರಚಿ ಕಿರುಕುಳ ನೀಡಿದ್ದಾರೆ. ಅದು ಹೇಗೆ ಅಂತೀರಾ ಅದನ್ನು ನೀವು ವೀಡಿಯೋದಲ್ಲೇ ನೋಡಬೇಕು.
ಚಲಿಸುತ್ತಿರುವ ರೈಲಿನಲ್ಲಿ ಕುಸಿದು ಬಿದ್ದ ಮಿಡಲ್ ಬರ್ತ್, ಪ್ರಯಾಣಿಕನ ದಾರುಣ ಸಾವು!
ವೀಡಿಯೋ ಇಲ್ಲಿದೆ ನೋಡಿ.
ان لوگوں کو لگ رھا تھا ٹرین رکے گی نہیں،ٹرین رکی،مسافروں نے طبیعت صاف کرکے ان کو دھویا اور پولیس نے بائیک بھی ضبط کرلی۔لیکن ان ذلیل لوگوں کو گرفتار کیا جانا چاھئے تھا۔ pic.twitter.com/sGCbbjugVL
— صحرانورد (@Aadiiroy2)
ಹುಡುಗರು ಮಾಡಿದ್ದೇನು?
ವೀಡಿಯೋದಲ್ಲಿ ಕಾಣಿಸುವಂತೆ ಹುಡುಗರು ರೈಲು ಪಾಸಾಗುವ ಸಮಯಕ್ಕೆ ಸರಿಯಾಗಿ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದ ನೀರಿನ ಮೂಲವೊಂದರಲ್ಲಿ ಬೈಕನ್ನು ಸ್ಟಾಟರ್‌ನಲ್ಲಿ ಇರಿಸಿದ್ದಾರೆ. ಬೈಕು ನೀರಿನ ಮೇಲೆ ಸ್ಟಾಟರ್‌ನಲ್ಲಿ ಇದ್ದಿದ್ದರಿಂದ ನೀರು ಕಾರಂಜಿಯಂತೆ ಚಿಮ್ಮಿ ರೈಲಿನ ಕಿಟಕಿಗಳ ಮೂಲಕ ಸೀದಾ ಪ್ರಯಾಣಿಕರ ಮೇಲೆ ಬಿದ್ದಿದೆ. ಇದರಿಂದ ರೈಲಿನ ಕಿಟಕಿ ಪಕ್ಕ ಕುಳಿತಿದ್ದ ಪ್ರಯಾಣಿಕರೆಲ್ಲಾ ಒದ್ದೆಯಾಗಿದ್ದಾರೆ. ಇದನ್ನು ನೋಡಿ ಹುಡುಗರು ಮಜಾ ತೆಗೆದುಕೊಂಡಿದ್ದಾರೆ.
ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್‌ನಲ್ಲಿ ಭಾರತೀಯ ರೈಲ್ವೆಯ ಯಶಸ್ವಿ ಟ್ರಯಲ್ ರನ್ : ಮೋಹಕ ವೀಡಿಯೋ ವೈರಲ್
ಆದರೆ ಈ ಟಿಕ್‌ಟಾಕ್ ಹುಡುಗರ ಗ್ರಹಚಾರ ಕೆಟ್ಟಿತ್ತೇನೋ, ರೈಲಿನಲ್ಲಿ ಒದ್ದೆಯಾಗಿದ್ದ ಪ್ರಯಾಣಿಕರು ಸಿಟ್ಟಿಗೆದ್ದಿದ್ದು, ಕೂಡಲೇ ಚೈನ್ ಎಳೆದು ರೈಲು ನಿಲ್ಲಿಸಿ ಕೆಳಗಿಳಿದು ಬಂದಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ತಮ್ಮನ್ನು ಒದ್ದೆ ಮಾಡಿ ತರಲೆ ಮಾಡಿದ ಹುಡುಗರನ್ನು ಹಿಡಿದುಕೊಂಡು ಸರಿಯಾಗಿ ಎರಡು ತದುಕಿದ್ದಾರೆ. ಬರೀ ಇಷ್ಟೇ ಅಲ್ಲ ತಮಗೆ ನಿರೇರಚಲು ಬಳಸಿದ್ದ ಬೈಕ್‌ನ್ನು ಕೂಡ ಎತ್ತಿಕೊಂಡು ಹೋಗಿ ರೈಲಿಗೆ ತುಂಬಿಸಿ ಮುಂದೆ ಸಾಗಿದ್ದಾರೆ. ಈ ವೇಳೆ ಕೆಲವರು ಯುವಕರು ಕಾಲಿಗೆ ಬುದ್ದಿ ಹೇಳಿದ್ದರೆ ಒಬ್ಬ ಮಾತ್ರ ತನ್ನ ಬೈಕ್‌ಗಾಗಿ ಬಡಿದಾಡುವುದು ಕಾಣುತ್ತದೆ. ಆದರೆ ಕ್ರೋಧಗೊಂಡ ರೈಲು ಪ್ರಯಾಣಿಕರು ಹೆಚ್ಚಿದ್ದರಿಂದ ಹೊದರೆ ಹಣ್ಣುಕಾಯಿ ನೀರುಗಾಯಿ ಆಗುವ ಸಾಧ್ಯತೆಯೇ ಹೆಚ್ಚಿದ್ದಿದ್ದರಿಂದ ಆತನ ಗೆಳೆಯ ಆತನನ್ನು ಗಟ್ಟಿಯಾಗಿ ಮುಂದೆ ಹೋಗದಂತೆ ಹಿಡಿದುಕೊಂಡಿದ್ದಾನೆ.
ಇದರಿಂದ ಬೇರೆಯವರಿಗೆ ಹಾವಳಿ ನೀಡಿ ಟಿಕ್‌ಟಾಕ್ ಮಾಡಲು ಹೋದ ಯುವಕರು ತಮ್ಮ ಬೈಕನ್ನು ಕೂಡ ಕಳೆದುಕೊಳ್ಳುವಂತಾಗಿದೆ.