Latest Videos

ಗ್ಯಾಂಗ್‌ ರೇಪಿಸ್ಟ್‌ಗೆ ಅವಮಾನಿಸಿದ ಯುವತಿ, ರೇಪ್‌ ಆರೋಪಿಗಿಂತ ಹೆಚ್ಚಿನ ಶಿಕ್ಷೆ ಕೊಟ್ಟ ಕೋರ್ಟ್‌!

By Santosh NaikFirst Published Jun 27, 2024, 4:17 PM IST
Highlights

Shocking Woman gets harsher sentence than her rapist due to ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಅತ್ಯಾಚಾರಿಯ ಕುರಿತು ನಿಂದನಾತ್ಮಕ ಮಾತುಗಳನ್ನು ಆಡಿದ್ದಕ್ಕಾಗಿ, ರೇಪಿಸ್ಟ್‌ಗಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಹ್ಯಾಂಬರ್ಗ್‌ನ ಯುವತಿ ಪಡೆದುಕೊಂಡಿದ್ದಾಳೆ.


ನವದೆಹಲಿ (ಜೂ.27): ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದು ಜಾಗತಿಕ ಗಮನ ಸೆಳೆದಿದ್ದು, 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಅವಮಾನಿಸಿದ ಯುವತಿಗೆ ದೊಡ್ಡ ಪ್ರಮಾಣದ ಜೈಲು ಶಿಕ್ಷೆ ವಿಧಿಸಲಾಗಿದೆ. ಅಚ್ಚರಿ ಏನೆಂದರೆ, ವಲಸಿಗನಾಗಿರುವ ರೇಪಿಸ್ಟ್‌ಗೆ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಜೈಲು ಶಿಕ್ಷೆಯನ್ನು ಆ ಯುವತಿಗೆ ನೀಡಲಾಗಿದೆ. 2020ರಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಹೆಚ್ಚಿನ ಅಪರಾಧಿಗಳು ಅಮಾನತುಗೊಳಿಸಿದ ಶಿಕ್ಷೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ತಳಿದು ಹೆಚ್ಚಿನವರಿಗೆ ಆಘಾತವಾಗಿದೆ. ಗ್ಯಾಂಗ್‌ರೇಪ್‌ನಲ್ಲಿ ಭಾಗಿಯಾಗಿದ್ದ 9 ಮಂದಿಯ ಪೈಕಿ ಒಬ್ಬನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದ್ದರೆ, ಇನ್ನೊಬ್ಬನನ್ನು ಖುಲಾಸೆ ಮಾಡಲಾಗಿದೆ.

ಹ್ಯಾಂಬರ್ಗ್‌ನ 20 ವರ್ಷದ ಮಹಿಳೆ ಅತ್ಯಾಚಾರಿಗಳಲ್ಲಿ ಒಬ್ಬನ "ದ್ವೇಷಪೂರಿತ" ಹೇಳಿಕೆಗಳನ್ನು ನೀಡಿದ ನಂತರ ಕಾನೂನು ಪರಿಣಾಮಗಳನ್ನು ಎದುರಿಸಿದರು. ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಆತ ಜೈಲು ಶಿಕ್ಷೆಯನ್ನು ಅನುಭವಿಸದ ವ್ಯಕ್ತಿಯಾಗಿದ್ದ. ವರದಿಗಳ ಪ್ರಕಾರ, ಯುವತಿ, ಅವನ ಸಂಪರ್ಕ ವಿವರಗಳನ್ನು ಆನ್‌ಲೈನ್‌ನಲ್ಲಿ ಕಂಡುಕೊಂಡಳು ಮತ್ತು ಅವನನ್ನು ಅವಮಾನಿಸಲು WhatsApp ಅನ್ನು ಬಳಸಿದಳು, ಅವನನ್ನು "ಅಗೌರವಕಾರಿ ಅತ್ಯಾಚಾರಿ ಹಂದಿ" ಮತ್ತು "ಅಸಹ್ಯಕರ ವಿಚಿತ್ರ" ಎಂದು ಕರೆದಿದ್ದರು. ದೈಹಿಕ ಹಾನಿ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.

ಕಳೆದ ವಾರ, ಹ್ಯಾಂಬರ್ಗ್-ವಾಂಡ್ಸ್‌ಬೆಕ್ ಜಿಲ್ಲಾ ನ್ಯಾಯಾಲಯವು ಅತ್ಯಾಚಾರಿಯನ್ನು ಅವಮಾನಿಸಿದ ಮತ್ತು ಬೆದರಿಕೆ ಹಾಕಿದ್ದಕ್ಕಾಗಿ ಆಕೆಗೆ ಶಿಕ್ಷೆ ವಿಧಿಸಿದೆ. ಆಕೆಗೆ ವಾರಾಂತ್ಯದಲ್ಲಿ ಹ್ಯಾನೋಫರ್‌ಸಂಡ್ ಯುವ ಬಂಧನ  ಕೇಂದ್ರದಲ್ಲಿ ಬಂಧನ ವಿಧಿಸಲಾಯಿತು, ಇದು ಆ ವ್ಯಕ್ತಿ ಪಡೆದ ಅಮಾನತು ಶಿಕ್ಷೆಗಿಂತ ಹೆಚ್ಚು. ಆದರೆ ಆಕೆಯ ತೀರ್ಪು ಇನ್ನೂ ಅಂತಿಮವಲ್ಲ. ಈ ಕುರಿತು ಆಕೆ ಮೇಲ್ಮನವಿ ಸಲ್ಲಿಕೆ ಮಾಡಬಹುದಾಗಿದೆ.

ನರ್ಸ್‌ ಆಗುವ ಆಸೆ ಹೊಂದಿದ್ದ ಯುವತಿಯ ಹೆಸರಿನಲ್ಲಿ , 40 ಡಾಲರ್‌ಗಳಷ್ಟು ಅಂದರೆ 25 ಯುರೋಗಳಿಗಿಂತ ಕಡಿಮೆ ಮೌಲ್ಯದ ವಸ್ತುಗಳನ್ನು ಒಳಗೊಂಡಿರುವ ಸಣ್ಣ ಕಳ್ಳತನದ ದಾಖಲೆಯನ್ನೂ ಹೊಂದಿದ್ದಾರೆ. ಈ ನಡುವೆ ಹ್ಯಾಂಬರ್ಗ್‌ನ ಅಧಿಕಾರಿಗಳು ಅತ್ಯಾಚಾರಿಗಳಿಗೆ ಅವಮಾನಗಳು, ಬೆದರಿಕೆಗಳು ಅಥವಾ ನಕಾರಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದ 140 ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಮಲಗಿದ್ದ 6ರ ಪೋರಿಯನ್ನು ಹೊತ್ತೊಯ್ದು ರೇಪ್‌ಗೈದು ಕೊಂದ ಟ್ರಕ್ ಡ್ರೈವರ್ 

ಗ್ಯಾಂಗ್‌ ರೇಪ್‌ ಘಟನೆಯೇ ಅತ್ಯಂತ ಭಯಾನಕವಾಗಿತ್ತು. ಎರಡೂವರೆ ಗಂಟೆಗಳ ಕಾಲ ಮದ್ಯದ ಅಮಲಿನಲ್ಲಿದ್ದ ಹದಿಹರೆಯದ ಹುಡುಗಿಯ ಮೇಲೆ ಹಲ್ಲೆ ಹಾಗೂ ರೇಪ್‌ ಮಾಡಿದ ಆರೋಪದಲ್ಲಿ 10 ಮಂದಿ ವಲಸಿಗರನ್ನು ಬಂಧಿಸಲಾಗಿತ್ತು. ನಾಲ್ವರು ಆಕೆಯನ್ನು ಪೊದೆಯೊಂದಕ್ಕೆ ಕರೆದೊಯ್ದು, ಆಕೆಯ ಇಚ್ಛೆಯ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದರೆ, ಇನ್ನೊಬ್ಬ ಆಕೆಯ ಫೋನ್‌ ಹಾಗೂ ವ್ಯಾಲೆಟ್‌ಅನ್ನು ಕದ್ದಿದ್ದ  ಎಂದು ವಕೀಲರು ತಿಳಿಸಿದ್ದಾರೆ. ಅವರು ಹಲ್ಲೆ ಮಾಡಿದ ವಿಡಿಯೋ ದಾಖಲೆಗಳು ಇದ್ದರೂ ಬಳಿಕ ಅದನ್ನು ಡಿಲೀಟ್‌ ಮಾಡಲಾಯಿತು. ಆರೋಪಿತರಾಗಿದ್ದ ಹೆಚ್ಚಿನ ವಲಸಿಗರಿಗೆ ಅಮಾನತುಗೊಳಿಸಿದ ಶಿಕ್ಷೆಗಳು ಮತ್ತು ಸಮುದಾಯ ಸೇವೆಯ ತೀರ್ಪು ಪಡೆದಿದ್ದರು.

‘ರೇಪ್‌ ಮಾಡಿದರೂ ಸರಿಯೇ?’ ಕಪಾಳಕ್ಕೆ ಹೊಡೆದಿದ್ದು ಸರಿ ಎಂದವರ ವಿರುದ್ಧ ಸಂಸದೆ ಕಂಗನಾ ಕಿಡಿ

click me!