
ನವದೆಹಲಿ (ಏ.14): ಇಸ್ರೇಲ್‌ಗೆ ಶನಿವಾರ ಮಧ್ಯರಾತ್ರಿ ಕರಾಳ ದಿನ. ಬಲಿಷ್ಠ ಇರಾನ್ ದೇಶ ಇಸ್ರೇಲ್ ಮೇಲೆ 331 ಕ್ಷಿಪಣಿ ಹಾಗೂ ಡ್ರೋನ್‌ಗಳಿಂದ ಏಕಕಾಲಕ್ಕೆ ದಾಳಿ ಮಾಡಿತ್ತು. ಆದರೆ, ಇರಾನ್ ದಾಳಿ ಮಾಡಿದ್ದ 185 ಸೂಸೈಡ್ ಡ್ರೋನ್‌ಗಳನ್ನು ಇಸ್ರೇಲ್‌ನ ಐರನ್ ಡೋಮ್ ಹೊಡೆದುರುಳಿಸಿದೆ. ಅದರೊಂದಿಗೆ ಆರೋ-3 ಹೈಪರ್‌ಸಾನಿಕ್ ಸರ್ಫೇಸ್-ಟು-ಏರ್ ಮಿಸೈಲ್ ಸಿಸ್ಟಮ್‌ಗಳು ಕೂಡ ಇಸ್ರೇಲ್‌ಗೆ ಬಲವಾಗಿ ನಿಂತವು. 110 ಖಂಡಾಂತರ ಕ್ಷಿಪಣಿಗಳ ಪೈಕಿ 103 ಕ್ಷಿಪಣಿಗಳನ್ನು ಇಸ್ರೇಲ್ ಹೊಡೆದುರುಳಿಸಿದೆ. ಅದರೊಂದಿಗೆ ಇರಾನ್ ಹಾರಿ ಬಿಟ್ಟಿದ್ದ 36 ಕ್ರೂಸ್ ಮಿಸೈಲ್‌ಗಳನ್ನೂ ಕೂಡ ಇಸ್ರೇಲ್ ಬಗ್ಗುಬಡಿದಿದೆ. ಮೂಲಗಳ ಪ್ರಕಾರ, ಇರಾನ್ ಹಾರಿಬಿಟ್ಟಿದ್ದ ಇಷ್ಟು ಕ್ಷಿಪಣಿಗಳ ಪೈಕಿ ಕೇವಲ 7 ಕ್ಷಿಪಣಿಗಳು ಮಾತ್ರವೇ ಇಸ್ರೇಲ್‌ನ ಭೂಪ್ರದೇಶದ ಮೇಲೆ ಬಿದ್ದಿವೆ. ಈ ಸಮಯದಲ್ಲಿ ಬಾಹ್ಯಾಕಾಶದಲ್ಲಿ ಪ್ರಕಾಶಮಾನ ಗೋಳ ರೂಪುಗೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದರ ಮಾಹಿತಿಯನ್ನು ಈಗ ಹಂಚಿಕೊಳ್ಳಲಾಗಿದೆ. ಇರಾನ್ ತನ್ನ ಖಂಡಾಂತರ ಕ್ಷಿಪಣಿಯನ್ನು ಭೂವಾತಾವರಣದ ಮೇಲಿನಿಂದಲೂ ಅಂದರೆ ಬಾಹ್ಯಾಕಾಶದಿಂದಲೂ ಹಾರಿ ಬಿಟ್ಟಿತ್ತು. ಆದರೆ, ಇಸ್ರೇಲ್‌ನ ಸರ್ಫೇಸ್-ಟು-ಏರ್ ಮಿಸೈಲ್ ಹೈಪರ್ಸಾನಿಕ್ ಆರೋ-3 ಕ್ಷಿಪಣಿ ಎಷ್ಟು ಬಲಿಷ್ಠವಾಗಿತ್ತೆಂದರೆ, ಭೂವಾತಾವರಣಕ್ಕೆ ಬರುವ ಮುನ್ನವೇ ಬಾಹ್ಯಾಕಾಶದಲ್ಲಿಯೇ ಇದನ್ನು ಹೊಡೆದುರುಳಿಸಿದೆ.
ಆರೋ-3 ಹೈಪರ್‌ಸಾನಿಕ್ ಕ್ಷಿಪಣಿ ಇರಾನ್‌ನ ಕ್ಷಿಪಣಿಯನ್ನು ಬಾಹ್ಯಾಕಾಶದಲ್ಲಿ ನಾಶಪಡೆದಿದೆ. ಇದರಿಂದಾಗಿ ಬಾಹ್ಯಾಕಾಶದಲ್ಲಿ ದೊಡ್ಡ ನೀಲಿ ಗೋಳ ಕೂಡ ರೂಪುಗೊಂಡು ತಕ್ಷಣವೇ ಕಣ್ಮರೆಯಾಯಿತು. ಇದು ಕ್ಷಿಪಣಿ ಹೊಡೆದುರುಳಿಸಿದ ಕಾರಣದಿಂದ ಉಂಟಾದ ಶೆಲ್ ಆಗಿತ್ತು. ಕೆಲವು ಮೂಲಗಳ ಪ್ರಕಾರ, ಅಮಡರಿಕದ ವಾರ್‌ಶಿಪ್ ಎಸ್‌ಎಂ-3 ಮಿಸೈಲ್‌ನಿಂದ ಇರಾನ್‌ನ ಕ್ಷಿಪಣಿಯನ್ನು ನಾಶಮಾಡಲಾಗಿದೆ. ಇರಾನ್ ದಾಳಿ ಮಾಡುವ ಹೊತ್ತಿನಲ್ಲಿ ಅಮೆರಿಕ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ಬೆಂಬಲವಾಗಿ ನಿಂತಿದೆ.
ಆರೋ-3 ಕ್ಷಿಪಣಿ ವ್ಯವಸ್ಥೆಯು ಭೂವಾತಾವರಣದ ಮೇಲಿನಿಂದಲೂ ಇಸ್ರೇಲ್ ಅನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಕ್ಷಿಪಣಿಯಾಗಿದೆ. ಇಸ್ರೇಲಿ ಸರ್ಕಾರವು ಇದರ ಫೈರ್‌ಪವರ್, ವೇಗ ಮತ್ತು ನಿಖರತೆಯನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಆದರೆ ಇದು ಆರೋ-2 ಕ್ಷಿಪಣಿಗಿಂತಲೂ ವೇಗವಾಗಿ ಚಲಿಸುತ್ತದೆ ಎಂದು ಹೇಳಲಾಗಿದೆ. ಬಾಹ್ಯಾಕಾಶದಲ್ಲಿ ಯಾವುದೇ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯ. ಇದನ್ನು 2017 ರಿಂದ ಇಸ್ರೇಲಿ ಭದ್ರತೆಯಲ್ಲಿ ನಿಯೋಜಿಸಲಾಗಿದೆ. ಬಾಹ್ಯಾಕಾಶದಲ್ಲಿ ಹಾರುವ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳಲ್ಲಿ ಇಸ್ರೇಲ್ ಸೇರಿಕೊಂಡಿದೆ.
ಮತ್ತೊಂದು ಯುದ್ಧಕ್ಕೆ ಸಜ್ಜಾದ ವಿಶ್ವ, ಇಸ್ರೇಲ್ ಮೇಲೆ ದಾಳಿಗೆ ಮುಂದಾದ ಇರಾನ್!
ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಕ್ಷಿಪಣಿಗಳನ್ನು ಹಾರಿಸಿತು. ಇರಾನ್ 110 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದರ ಒಟ್ಟು ವೆಚ್ಚ ಸುಮಾರು 30 ರಿಂದ 50 ಮಿಲಿಯನ್ ಡಾಲರ್‌ಗಳು ಅಂದರೆ 250 ರಿಂದ 417 ಕೋಟಿ ರೂಪಾಯಿಗಳು. ಆ ಬಳಿಕ 36 ರಿಂದ 45 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರ ಬೆಲೆ ಸುಮಾರು 33.41 ಕೋಟಿಯಿಂದ 58.47 ಕೋಟಿ ರೂ. 170 ಶಾಹೆದ್ ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಇದರ ಬೆಲೆ 33 ರಿಂದ 54 ಕೋಟಿ ರೂ. ಒಟ್ಟಾರೆ, ಇಸ್ರೇಲ್ ಮೇಲಿನ ದಾಳಿಗೆ ಇರಾನ್ ಸುಮಾರು 520 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ ಇಸ್ರೇಲ್‌ಗೆ ತನ್ನನ್ನು ಉಳಿಸಲು 1.10 ಶತಕೋಟಿ ಡಾಲರ್‌ಗಳು ಅಂದರೆ 92 ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ.
ಇಸ್ರೇಲ್-ಪ್ಯಾಲೆಸ್ತೀನ್ ಕದನಕ್ಕೆ 6 ತಿಂಗಳು: ಈವರೆಗೆ 35,000 ಬಲಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ