ಪಾಕಿಸ್ತಾನವನ್ನೂ ಮೀರಿಸಿದ ಬಾಂಗ್ಲಾದೇಶ; ಮನೆ ಬಾಗಿಲವರೆಗೂ ಬಂತು ವಿಮಾನ

Published : Apr 09, 2025, 12:20 PM ISTUpdated : Apr 09, 2025, 12:35 PM IST
ಪಾಕಿಸ್ತಾನವನ್ನೂ ಮೀರಿಸಿದ ಬಾಂಗ್ಲಾದೇಶ; ಮನೆ ಬಾಗಿಲವರೆಗೂ ಬಂತು ವಿಮಾನ

ಸಾರಾಂಶ

Viral Video: ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ವಿಡಿಯೋವೊಂದು ವೈರಲ್ ಆಗಿದ್ದು, ವಿಮಾನದ ರೀತಿಯ ವಾಹನ ಮನೆ ಬಾಗಿಲಿಗೆ ಬರುತ್ತದೆ. ಈ ವಿಡಿಯೋ ಪಾಕಿಸ್ತಾನವನ್ನು ಮೀರಿಸುವಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಚಿತ್ರ ಅಥವಾ ತಮಾಷೆ ವಿಡಿಯೋಗಳು ಅಂದ್ರೆ ನೆನಪಿಗೆ ಬರೋದು ನಮ್ಮ ನೆರೆಯ ದೇಶ ಪಾಕಿಸ್ತಾನ. ಇಲ್ಲಿನ ಜನರು ಮಾಡುವ ದೇಶಿ ಜುಗಾಡ್, ಕ್ರಿಕೆಟರ್‌ ಜಗಳ, ಪೊಲೀಸರ ವರ್ತನೆ ಎಲ್ಲವೂ ಜಗಜ್ಜಾಹೀರು ಆಗಿದೆ. ಇದೀಗ ಈ ಪಾಕಿಸ್ತಾನಕ್ಕೆ ಮತ್ತೊಂದು ದೇಶ ಸವಾಲು ಹಾಕುವಂತಿದೆ ಈ ವಿಡಿಯೋ. ಹೌದು, ಪಾಕಿಸ್ತಾನವನ್ನು ಸಂಪೂರ್ಣವಾಗಿ ಹಿಂದಿಕ್ಕಲು ಬಾಂಗ್ಲಾದೇಶ ಪ್ರಯತ್ನಿಸುತ್ತಿದೆ. ಮನೆ ಬಳಿಯೇ ಏರ್‌ಕ್ರಾಫ್ಟ್ ತೆಗೆದುಕೊಂಡು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತದೆ. ವಿಮಾನದ ರೀತಿಯ ವಾಹನವೊಂದು ಮನೆ ಬಾಗಿಲಿನವರೆಗೂ ಬರುತ್ತದೆ.  ಇದರ ಹಿಂದೆಯೇ ಸೈಕಲ್ ಬರೋದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಓರ್ವ ಬಂದು ಬಾಗಿಲು ತೆಗೆಯುತ್ತಿದ್ದಂತೆ ಒಳಗಿದ್ದ ಜನರು ಹೊರ ಬರುತ್ತಾರೆ. ಅರೇ ಇದ್ಯಾವ ಊರು? ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ವಿಮಾನವಲ್ಲ, ಆಟೋ ಎಂದು ಹೇಳಿದ್ದಾರೆ. ಈ ಪ್ಲಾನ್ ಪಾಕಿಸ್ತಾನದವರನ್ನು ಮೀರಿಸಿದ ಪ್ಲಾನ್ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. 

ಪ್ಲೇನ್‌ ಚಕ್ರಗಳನ್ನು ನೋಡಿ
ವೈರಲ್ ಆಗಿರುವ ಈ ವಿಡಿಯೋವನ್ನು  @pratapkhuraw ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದುವರೆಗೂ 1.5 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ. ಈ ವಿಮಾನದ ಪೈಲಟ್ ಎಷ್ಟು ಒಳ್ಳೆಯ ಸೇವೆಯನ್ನು ನೀಡುತ್ತಿದ್ದಾನೆ. ಪ್ರಯಾಣಿಕರನ್ನು ಅವರ ಮನೆಯವರೆಗೂ ಕರೆದುಕೊಂಡು ಬಂದಿದ್ದಾನೆ ಎಂದು ನಿತೀಶ್ ಎಂಬವರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು. ಒಂದು ಕ್ಷಣ ಇದು ನಿಜವಾದ ಪ್ಲೇನ್ ಅನ್ನಿಸಿತು. ಆದರೆ ಅದರ ಚಕ್ರಗಳನ್ನು ನೋಡಿದ ಕೂಡಲೇ ಮಾರ್ಪಾಡಿಸಿದ ವಾಹನ ಎಂದು ಗೊತ್ತಾಯ್ತು ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನ ರಸ್ತೆಯಲ್ಲಿ ಕನ್ನಡ ಮಾತಾಡಿದ ಜಮ್ಮು-ಕಾಶ್ಮೀರದ ಹುಡುಗಿ! ಹಿಂದಿ ಭಾಷಿಕರಿಗೆ ಚಳಿ ಬಿಡಿಸಿದ್ದೇ ಅದ್ಭುತ!

ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರತಾಪ್ ಖುರ್ವ್, ಬಾಂಗ್ಲಾದೇಶದಲ್ಲಿ ಅದ್ಭುತ ವಿಮಾನಗಳು ಓಡಾಡುತ್ತಿವೆ. ಪೈಲಟ್‌ಗಳು ಪ್ರಯಾಣಿಕರನ್ನು ಅವರವರ ಮನೆಗೆ ಇಳಿಸುತ್ತಿದ್ದಾರೆ ಎಂದು ಬರೆದು ನಗುವ ಎರಡು ಎಮೋಜಿಗಳನ್ನು ಹಾಕಿದ್ದಾರೆ. ಹಾಗೆ ಇದನ್ನು ಅಭಿವೃದ್ಧಿ, ಕುರುಡು ಅಭಿವೃದ್ಧಿ ಎಂದು ಕರೆಯಲಾಗುತ್ತದೆ. ಪ್ರಗತಿಗೆ ಯಾವುದೇ ಮಿತಿಯಿಲ್ಲ. ಈ ವಾಹನದ ಕಲ್ಪನೆಗಾರರು ಯಾರು ಎಂದು ಕಮೆಂಟ್ ಮಾಡಿದ್ದಾರೆ. ಈ ಮೊದಲು ಇಂತಹ ವಿಡಿಯೋಗಳು ಪಾಕ್‌ನಿಂದಲೇ ಹೆಚ್ಚು ಬರುತ್ತಿದೆ. ಇದೀಗ ಪಾಕಿಸ್ತಾನವನ್ನು ಬಾಂಗ್ಲಾದೇಶ ಮೀರಿಸುತ್ತಿದೆ ಎಂದಿದ್ದಾರೆ. 

ಗೋಡೆ ಜಿಗಿದ ಮೇಕೆಮರಿ 
ಪ್ರತಾಪ್ ಖುರ್ವ್ ಅವರ ಎಕ್ಸ್ ಖಾತೆಯಲ್ಲಿನ ಮತ್ತೊಂದು ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದೆ. ಪುಟಾಣಿ ಮೇಕೆಮರಿಯಿಂದು ಸುಮಾರು 6 ಅಡಿ ಎತ್ತರದ ಗೋಡೆಯನ್ನು ಜಂಪ್ ಮಾಡಿದೆ. ಮೇಕೆಮರಿ ಗೋಡೆ ಜಿಗಿಯಲು ಮೊದಲು ಸುಮಾರು ಆರೇಳು ಹೆಜ್ಜೆ ಹಿಂದಕ್ಕೆ ಹೋಗುತ್ತದೆ. ನಂತರ ಅಲ್ಲಿಂದ ವೇಗವಾಗಿ ಓಡುತ್ತಾ ಬಂದು ಗೋಡೆಯನ್ನು ಯಶಸ್ವಿಯಾಗುತ್ತದೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

ಇದನ್ನೂ ಓದಿ: ವಲ್‌ರಸ್‌ಗೆ ಬಿಗ್‌ ಬರ್ತ್‌ಡೇ ಬ್ಯಾಶ್‌: ಚೀನಾದ ಝೂ ವೀಡಿಯೋ ಸಖತ್ ವೈರಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ