ಕಾಂಡೋಮ್ ಇಲ್ಲದೇ ಸಂಪರ್ಕ ನಡೆಸಿದ್ರೂ ಆಗಲ್ಲ ಪ್ರೆಗ್ನೆಂಟ್; ಪುರುಷರಿಗಾಗಿ ಬರ್ತಿದೆ ಹೊಸ ಔಷಧಿ

Published : Apr 09, 2025, 10:55 AM ISTUpdated : Apr 09, 2025, 12:31 PM IST
ಕಾಂಡೋಮ್ ಇಲ್ಲದೇ ಸಂಪರ್ಕ ನಡೆಸಿದ್ರೂ ಆಗಲ್ಲ ಪ್ರೆಗ್ನೆಂಟ್; ಪುರುಷರಿಗಾಗಿ ಬರ್ತಿದೆ ಹೊಸ ಔಷಧಿ

ಸಾರಾಂಶ

ಪುರುಷರಿಗಾಗಿ ಹೊಸ ಗರ್ಭನಿರೋಧಕ ಮಾತ್ರೆಗಳು ಸಂಶೋಧನೆಯ ಹಂತದಲ್ಲಿವೆ. ಅಮೆರಿಕದ ವಿಜ್ಞಾನಿಗಳು YCT-529 ಹೆಸರಿನ ಹಾರ್ಮೋನ್ ಮುಕ್ತ ಮಾತ್ರೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ,

ನವದೆಹಲಿ: ಸುರಕ್ಷಿತ ಲೈಂಗಿಕ ಮತ್ತು ಗರ್ಭಧಾರಣೆ ನಿಯಂತ್ರಣಕ್ಕಾಗಿ ಪುರುಷರು ಕಾಂಡೋಮ್  ಬಳಕೆ ಮಾಡುತ್ತಾರೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕಾಂಡೋಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಗರ್ಭಧಾರಣೆ ನಿಯಂತ್ರಣಕ್ಕಾಗಿ ಕೆಲ ಮಾತ್ರೆಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದೀಗ ಇಂತಹ ಮಾರುಕಟ್ಟೆಗಳು ಪುರುಷರಿಗಾಗಿಯೂ ಬರುತ್ತಿವೆ. ಸುರಕ್ಷಿತ ಮತ್ತು ಲೈಂಗಿಕ ರೋಗಗಳಿಂದ ದೂರವಾಗಿರಲು ಹಾಗೂ ಒಬ್ಬರಿಗಿಂತ ಹೆಚ್ಚು ಸಂಗಾತಿಗಳಿದ್ರೆ ಕಾಂಡೋಮ್ ಬಳ ಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಯಾವುದೇ ಮುಂಜಾಗ್ರತ ಕ್ರಮಗಳಿಲ್ಲದೇ ದೈಹಿಕ ಸಂಪರ್ಕ ನಡೆಸಿದಾಗ ಮಹಿಳೆಯರು ಗರ್ಭಧಾರಣೆ ತಡೆಗೆ ಕೆಲವೊಂದು ಮಾತ್ರೆಗಳನ್ನು ಸೇವಿಸುತ್ತಾರೆ. ಇತ್ತೀಚಿನ ಸುದ್ದಿ ಪ್ರಕಾರ, ಪುರುಷರಿಗೂ ಈ ರೀತಿಯ ಮಾತ್ರೆಗಳು ಬರಲಿದ್ದು, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಇದುವರೆಗೂ ಮಹಿಳೆಯರಿಗೆ ಮಾತ್ರ ಗರ್ಭನಿರೋಧಕ ಮಾತ್ರೆಗಳು ಸಿಗುತ್ತವೆ. ಇದೀಗ ಈ ಔಷಧಿಗಳು ಪುರುಷರಿಗೂ ಬರಲಿವೆ. ಅಮೆರಿಕದ ವಿಜ್ಞಾನಿಗಳು, ಪುರುಷರಿಗಾಗಿ  YCT-529 ಹೆಸರಿನ ಹಾರ್ಮೊನ್ ಮುಕ್ತ ಗರ್ಭನಿರೋಧ ಮಾತ್ರಗಳ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಾತ್ರೆಗಳು ವೃಷಣದ ವಿಟಮಿನ್ ಎ ವರೆಗೂ ತಲುಪಿ ಬ್ಲಾಕ್ ಮಾಡುವ ಕೆಲಸವನ್ನು ಮಾಡುತ್ತವೆ. ಇದಿರಂದಾಗಿ ವೀರ್ಯದ (ಸ್ಪರ್ಮ್) ಉತ್ಪಾದನೆ ಕಡಿಮೆಯಾಗುತ್ತದೆ. ಆದ್ರೆ ಇದು ಟೆಸ್ಟೊಸ್ಟೆರೊನ್ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಅಂದ್ರೆ ಈ ಮಾತ್ರೆಗಳ ಸೇವನೆಯಿಂದ ಪುರುಷನ ಕಾಮೋದ್ವೇಗದ ಮೇಲೆ ಯಾವುದೇ ರೀತಿಯಲ್ಲಿ ನಕಾರಾತ್ಮಕ ಪರಿಣಾಮ ಬೀರಲಾರದು ಎಂದು ವರದಿಯಾಗಿದೆ. 

ಜನನ ನಿಯಂತ್ರಣಕ್ಕೆ ಹೊಸ ಆಯ್ಕೆಗಳು
YCT-529 ಮಾತ್ರೆಗಳ ಪ್ರಯೋಗ ಇಲಿಗಳ ಮೇಲೆ ನಡೆಸಲಾಗಿದೆ. ಈ ಪ್ರಯೋಗದಲ್ಲಿ YCT-529 ಮಾತ್ರೆಗಳು ಶೇ.99ರಷ್ಟು ಗರ್ಭಧಾರಣೆಯನ್ನು ನಿಯಂತ್ರಿಸುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮಹಿಳೆಯರಿಗಾಗಿರುವ ಗರ್ಭನಿರೋಧಕ ಮಾತ್ರೆಗಳ ರೀತಿಯಲ್ಲಿಯೇ YCT-529 ಕೆಲಸ ಮಾಡುತ್ತದೆ. ಈ ದಶಕದಲ್ಲಿಯೇ YCT-529 ಮಾತ್ರೆಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

YCT-529 ಎಂಬುವುದು  ಹಾರ್ಮೋನ್ ಮುಕ್ತ ಗರ್ಭನಿರೋಧಕ ಮಾತ್ರೆ ಆಗಿದ್ದು, ಇಲಿಗಳ ಬಳಿಕ ಮನುಷ್ಯರ ಮೇಲೆಯೂ ಪ್ರಯೋಗ ನಡೆಸಲಾಗುತ್ತಿದೆ. ಈ ಮಾತ್ರೆ ಪುರುಷರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ, ಇದು ದಂಪತಿಗಳಿಗೆ ಜನನ ನಿಯಂತ್ರಣಕ್ಕೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಮಿನ್ನೇಸೋಟ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರಜ್ಞ ಮತ್ತು ಔಷಧಿಕಾರ ಗುಂಡಾ ಜಾರ್ಜ್ ಹೇಳುತ್ತಾರೆ. 

ಇದನ್ನೂ ಓದಿ: ಸ್ನೇಹಿತರನ್ನೇ ಮದುವೆ ಆಗ್ತೀರಾ? ಆಗಬಹುದಾದ ಈ ದೊಡ್ಡ ಅನಾಹುತ ತಪ್ಪಿಸಬಹುದು! ಯಾವುದು?

ಮಾರುಕಟ್ಟೆಯಲ್ಲಿರೋದು ಎರಡು ಉತ್ಪನ್ನಗಳು 
ಸದ್ಯ ಪುರುಷರಿಗೆ ಕೇವಲ  ಎರಡು ಗರ್ಭನಿರೋಧಕ ಆಯ್ಕೆಗಳಿವೆ. ಒಂದು ಕಾಂಡೋಮ್ ಬಳಕೆ ಮತ್ತೊಂದು ಸಂತಾನಹರಣ ಶಸ್ತ್ರಚಿಕಿತ್ಸಗೆ ಒಳಗಾಗುವುದು.  ಗರ್ಭಧಾರಣೆ ನಿಯಂತ್ರಣಕ್ಕಾಗಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಎರಡು  ಆಯ್ಕೆ ಹೊರತುಪಡಿಸಿದ್ರೆ ಪುರುಷರಿಗೆ ಪ್ರಸ್ತುತ ಯಾವುದೇ ರೀತಿಯ ಆಯ್ಕೆಗಳು ಲಭ್ಯವಿಲ್ಲ. YCT-529 ಔಷಧ ಗಂಡು ಇಲಿಗಳಲ್ಲಿ ಬಂಜೆತನವನ್ನು ಉಂಟುಮಾಡುತ್ತದೆ. ಔಷಧ ಪ್ರಯೋಗದ ನಾಲ್ಕು ವಾರಗಳಲ್ಲಿ ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ 99 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ತಂಡವು ಕಂಡುಹಿಡಿದಿದೆ.

ಫಲವತ್ತತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ
ಔಷಧ ಸೇವನೆ ಪ್ರಾರಂಭವಾದ ಎರಡು ವಾರಗಳಲ್ಲಿ ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ, ಔಷಧವನ್ನು ನಿಲ್ಲಿಸಿದ ನಂತರ ಇಲಿಗಳು ಮತ್ತು ಮಾನವರಲ್ಲದ ಸಸ್ತನಿಗಳಲ್ಲಿ ಫಲವತ್ತತೆ ಸಂಪೂರ್ಣವಾಗಿ ಚೇತರಿಸಿಕೊಂಡಿತು ಮತ್ತು ಎರಡೂ ಜಾತಿಗಳಲ್ಲಿ ಯಾವುದೇ ಅಡ್ಡಪರಿಣಾಮಗಳನ್ನು ಗಮನಿಸಲಾಗಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಗಂಡ ಟೈಮ್‌ ಕೊಡ್ತಿಲ್ಲ? ಇಂಟರೆಸ್ಟ್‌ ತೋರಸ್ತಿಲ್ವಾ? ಇದನ್ನು ಪಾಲಿಸಿದ್ರೆ ನಿಮ್ಮ ಹಿಂದೆ ಸುತ್ತುತ್ತಾರೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!