ಸ್ಫೋಟಗೊಂಡ ವಾಷಿಂಗ್ ಮೆಷಿನ್: ವ್ಯಕ್ತಿ ಜಸ್ಟ್ ಮಿಸ್.. ಅನಾಹುತ ಸಿಸಿ ಕ್ಯಾಮರಾದಲ್ಲಿ ಸೆರೆ

Published : Apr 03, 2023, 05:59 PM ISTUpdated : Apr 03, 2023, 06:06 PM IST
ಸ್ಫೋಟಗೊಂಡ ವಾಷಿಂಗ್ ಮೆಷಿನ್: ವ್ಯಕ್ತಿ ಜಸ್ಟ್ ಮಿಸ್.. ಅನಾಹುತ ಸಿಸಿ ಕ್ಯಾಮರಾದಲ್ಲಿ ಸೆರೆ

ಸಾರಾಂಶ

ವಾಷಿಂಗ್‌ ಮಿಷನೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಅದು ಸ್ಫೋಟಗೊಳ್ಳುವುದಕ್ಕೆ ಕ್ಷಣಗಳ ಮೊದಲು ಅದರ ಮುಂದೆ  ಪಾಸಾಗಿ ಹೋದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಸ್ಪೇನ್‌: ಮಾತನಾಡುತ್ತಿದ್ದಾಗಲೇ ಮೊಬೈಲ್ ಫೋನ್ ಬ್ಲಾಸ್ಟ್ , ಚಾರ್ಜ್‌ಗಿಟ್ಟ ಇಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್‌ ಮುಂತಾದ ಘಟನೆಗಳು ಸಂಭವಿಸಿ ಅನೇಕರು ಗಾಯಗೊಂಡ ಪ್ರಾಣ ಕಳೆದುಕೊಂಡ ಹಲವು ಘಟನೆಗಳು ಈಗಾಗಲೇ ನಡೆದಿವೆ.  ಈ  ಇಲೆಕ್ಟ್ರಿಕ್ ವಸ್ತುಗಳ ಸ್ಫೋಟದ ಪಟ್ಟಿಗೆ ಹೊಸ ಸೇರ್ಪಡೆ ಈಗ ವಾಷಿಂಗ್ ಮಿಷನ್. ಹೌದು  ಸ್ಪೇನ್‌ನಲ್ಲಿ ವಾಷಿಂಗ್‌ ಮಿಷನೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಅದು ಸ್ಫೋಟಗೊಳ್ಳುವುದಕ್ಕೆ ಕ್ಷಣಗಳ ಮೊದಲು ಅದರ ಮುಂದೆ  ಪಾಸಾಗಿ ಹೋದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಈ ಆಘಾತಕಾರಿ ಘಟನೆ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ದಿಗ್ಭ್ರಮೆಗೊಂಡಿದ್ದಾರೆ.  ಅಂದಹಾಗೆ ಸ್ಪೇನ್‌ನಲ್ಲಿ ಈ ಘಟನೆ ನಡೆದಿದೆ. 

ಟ್ವಿಟ್ಟರ್‌ನಲ್ಲಿ OnlyBangers (@OnlyBangersEth) ಎಂಬ ಖಾತೆಯಿಂದ ಈ 16 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದೆ. ಒಬ್ಬರು ತಮ್ಮ ಬಟ್ಟೆಯ ಜೇಬನ್ನು ಸರಿಯಾಗಿ ಪರೀಕ್ಷಿಸಿಲ್ಲ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 15 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ನಂತರ ಕೈಗಳಲ್ಲಿ ಮೂರು ಚೀಲಗಳಲ್ಲಿ ಏನನ್ನೋ ತುಂಬಿಸಿಕೊಂಡು ಕಟ್ಟಡದಿಂದ ಹೊರಗೆ ಹೋಗುತ್ತಾರೆ.. ಅದಾಗಿ ಸೆಕೆಂಡುಗಳಲ್ಲಿ ವಾಷಿಂಗ್ ಮಿಷನ್‌ನಲ್ಲಿ ಸ್ಫೋಟ ಕಾಣಿಸಿಕೊಂಡಿದ್ದು, ಸ್ಫೋಟದ ರಭಸಕ್ಕೆ ಅದರೊಳಗಿರುವುದೆಲ್ಲಾ ದೂರ ಹಾರಿ ಹೋಗಿದ್ದು, ಬೆಂಕಿ ಧಗ್ಗನೇ ಹೊತ್ತಿಕೊಂಡಿದೆ. 

ಬೆಂಗಳೂರು ನೈಸ್‌ ರಸ್ತೆಯಲ್ಲಿ ಬೈಕ್‌ ಟೈರ್‌ ಬಸ್ಟ್‌: ತಡೆಗೋಡೆಗೆ ಗುದ್ದಿ ಇಂಜಿನಿಯರ್‌ ಸಾವು

ಈ ಸ್ಫೋಟವೂ ಅಲ್ಲಿರುವ ಇತರ ಇಲೆಕ್ಟ್ರಿಕ್ ಮೆಷಿನ್‌ಗಳನ್ನು ಬೆಂಕಿಗಾಹುತಿಯಾಗುವಂತೆ ಮಾಡಿದೆ.  ಇದು ಅಲ್ಲಿನ ಸ್ಥಳೀಯ ಕಾಲಮಾನ ಸಂಜೆ 7.30 ರ ಸುಮಾರಿಗೆ ನಡೆದಿದ್ದು,  ಅಲ್ಲಿದ್ದ ಅನೇಕರು ಸ್ಫೋಟದ ಸದ್ದಿಗೆ ಮನೆಯಿಂದ ಓಡಿ ಬಂದಿದ್ದಾರೆ. ನಂತರ ತುರ್ತು ಸಂಖ್ಯೆ 112ಗೆ ಕರೆ ಮಾಡಿ ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ಸ್ಥಳೀಯ ಸುದ್ದಿ ವೆಬ್‌ಸೈಟೊಂದು ವರದಿ ಮಾಡಿದೆ.  ಈ ವಾಷಿಂಗ್ ಮೆಷಿನ್ ಒಳಗೆ ಬಟ್ಟೆ ತೊಳೆಯಲು ಹಾಕಿದವರು ತಮ್ಮ ಬಟ್ಟೆಯನ್ನು ಸರಿಯಾಗಿ ಪರಿಶೀಲಿಸಿ ಹಾಕಿಲ್ಲ. ಬಟ್ಟೆಯ ಜೇಬಿನಲ್ಲಿ  ಲೈಟರ್ ಹಾಗೂ ಚಾರ್ಜರ್ ಇದ್ದು, ಇದನ್ನೂ ವಾಷಿಂಗ್ ಮೆಷಿನ್‌ಗೆ ಹಾಕಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಸ್ಥಳೀಯ ವೆಬ್‌ಸೈಟೊಂದು ವರದಿ ಮಾಡಿದೆ. 

ಹೆದ್ದಾರಿಯಲ್ಲೇ ಹೆರಿಗೆ, ಫೋನ್ ಚಾರ್ಜರ್‌ನಿಂದ ಹೊಕ್ಕುಳ ಬಳ್ಳಿ ಕಟ್ಟಿದ ತಂದೆ !

ಘಟನೆಯ ಬಳಿಕ ಅಗ್ನಿಶಾಮಕ ಅಧಿಕಾರಿಗಳು ಈ ಬೆಂಕಿ ಅನಾಹುತ ಸಂಭವಿಸಿದ ಕಟ್ಟಡದ ಗೋಡೆಯನ್ನು ಕೆಡವಿದ್ದು, ಭದ್ರತೆಗೆ ಅಪಾಯವಿದೆ ಎಂದು ಹೇಳಿ ಸಂಪೂರ್ಣ ಕಟ್ಟಡವನ್ನು ಮರು ನಿರ್ಮಾಣ ಮಾಡಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಸ್ಕಾಟ್‌ಲೆಂಡ್‌ನಲ್ಲೂ (Scotland) ಇಂತಹ ಘಟನೆ ಕೆಲ ವರ್ಷಗಳ ಹಿಂದೆ ನಡೆದಿತ್ತಂತೆ  ವಾಷಿಂಗ್ ಮೆಷಿನ್ ಸ್ಫೋಟಗೊಂಡ ಪರಿಣಾಮ ಮನೆಯೊಂದರ ಕಿಚನ್ ಸಂಪೂರ್ಣ ಧ್ವಂಸಗೊಂಡಿತ್ತು.  ಈ ಬಗ್ಗೆ ಇತರರಿಗೆ ಅರಿವು ಮೂಡಿಸಲು ಲೂರಾ ಬಿರೆಲ್ಲಾ (Laura Birrell)ಎಂಬುವವರು ಫೇಸ್‌ಬುಕ್‌ನಲ್ಲಿ ಫೋಟೋ ಶೇರ್ ಮಾಡಿ ವಿಚಾರ ಹಂಚಿಕೊಂಡಿದ್ದರು .

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶಿ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್‌
ಸೌದಿ ಬಳಿಕ ದುಬೈ, ಅಬುದಾಭಿಯಲ್ಲೂ ಭಾರೀ ಮಳೆ