ಸಖತ್ ಆಗಿ ಮೀನ್‌ಸಾರ್ ಮಾಡಿ, ಭರ್ಜರಿ ಊಟ ಮಾಡ್ಕೊಂಡು ಮಲ್ಕೊಂಡಿತ್ತು ಎರಡು ಮುದಿಜೀವಗಳು. ಆದರೆ, ಅವರಿಗೆ ತಾವು ತಿಂದಿದ್ದು ವಿಷಕಾರಿ ಪಫರ್ ಫಿಶ್ ಅನ್ನೋದು ಗೊತ್ತಾಗಿರಲಿಲ್ಲ. ಪರಿಣಾಮ ಎನ್ನುವಂತೆ 83 ವರ್ಷದ ವೃದ್ಧೆ ಸಾವು ಕಂಡಿದ್ದರೆ, ಆಕೆಯ ಪತಿ ಕೋಮಾದಲ್ಲಿದ್ದಾರೆ.
ನವದೆಹಲಿ (ಏ.3): ಸುಂದರ ಕುಟುಂಬ. ಪ್ರತಿ ಭಾನುವಾರ ಮೀನು ತಂದು ಸಾಂಬಾರ್ ಮಾಡ್ಕೊಂಡು ತಿಂದರೆ, ಆ ಭಾನುವಾರ ಸಂಭ್ರಮದಿಂದ ಕಳೆದಂತೆ. ಎಂದಿನಂತೆ ವೃದ್ಧ ದಂಪತಿಗಳು ಅಲ್ಲಿಯೇ ಪಕ್ಕದಲ್ಲಿದ್ದ ಮೀನು ಮಾರ್ಕೆಟ್‌ನಿಂದ ಚಂದನೆಯ ಮೀನು ತಂದು ಕಟ್ ಮಾಡಿ, ಸಾಂಬಾರ್ ಮಾಡ್ಕೊಂಡು ತಿಂದು ಮಲಗಿದ್ದರಷ್ಟೇ. ಮಲಗಿದ್ದಲ್ಲಿಯೇ ಉಸಿರಾಟದ ತೊಂದರೆ ಕಾಣಿಸಿಕೊಂಡು ವೃದ್ಧೆ ಸಾವು ಕಂಡಿದ್ದರೆ, ಆಕೆಯ ರೀತಿಯಲ್ಲೇ ಉಸಿರಾಟದ ಸಮಸ್ಯೆ ಹೊಂದಿದ್ದ ಆಕೆಯ ಪತಿ ಕೋಮಾದಲ್ಲಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ಮಾಡುತ್ತಿದ್ದಾರೆ. ಈ ಘಟನೆ ನಡೆದಿದ್ದು ಮಲೇಷ್ಯಾದಲ್ಲಿ. ಅವರು ತಿಂದಿದ್ದು ವಿಷಕಾರಿ ಪಫರ್ ಫಿಶ್. ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ, ನ್ಯೂಯಾರ್ಕ್ ಪೋಸ್ಟ್ ದಕ್ಷಿಣ ಮಲಯ್ ಪೆನಿನ್ಸುಲಾದ ಜೋಹರ್‌ನಲ್ಲಿ ಕಳೆದ ತಿಂಗಳ ಕೊನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದೆ. ವೃದ್ಧ ದಂಪತಿಯ ಮಗಳು ಈ ವಿಚಾರವನ್ನು ತಿಳಿಸಿದ್ದು, ಸ್ಥಳೀಯ ಮಾರ್ಕೆಟ್‌ನಲ್ಲಿದ್ದ ಮೀನು ಅಂಗಡಿಯಿಂದ ಪಫರ್ ಮೀನನ್ನು ಖರೀದಿ ಮಾಡಿದ್ದರು ಎಂದು ತಿಳಿಸಿದ್ದಾರೆ. 'ನನ್ನ ತಂದೆ–ತಾಯಿ ಹಲವು ವರ್ಷಗಳಿಂದ ಇದೇ ಮೀನು ಅಂಗಡಿಯಿಂದ ಮೀನು ಖರೀದಿ ಮಾಡುತ್ತಿದ್ದರು. ಇದಕ್ಕಾಗಿ ಅಂಗಡಿಯವ ಕೊಟ್ಟ ಮೀನಿನ ಬಗ್ಗೆ ನನ್ನ ತಂದೆ ಮತ್ತೆ ಯೋಚನೆ ಮಾಡಿರಲಿಲ್ಲ. ವಿಷಕಾರಿಯಾದ ಮೀನನ್ನು ತಿಂದು ಸಾವು ಕಾಣಬೇಕಾದ ಯಾವುದೇ ಸ್ಥಿತಿ ಕೂಡ ಮನೆಯಲ್ಲಿರಲಿಲ್ಲ ಎಂದು ಮಗಳು ಹೇಳಿದ್ದಾರೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ವೃದ್ಧ ದಂಪತಿಗಳನ್ನುಮನೆಗೆ ತಂದ ಮೀನನ್ನು ಚೆನ್ನಾಗಿ ತೊಳೆದು, ಶುಚಿ ಮಾಡಿ ಮಧ್ಯಾಹ್ನದ ಊಟಕ್ಕೆ ಸಾಂಬಾರ್ ಮಾಡಿದ್ದಾರೆ. ಆದರೆ, ಮೀನು ಸಾರು ತಿಂದ ಬೆನ್ನಲ್ಲಿಯೇ 83 ವರ್ಷದ ವೃದ್ಧೆ ನಡುಗಲು ಆರಂಭಿಸಿದ್ದರು. ಆಕೆಗೆ ಉಸಿರುತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕೆಲವೇ ಹೊತ್ತಿನಲ್ಲಿ ಆಕೆಯ ಪತಿಗೂ ಇಂಥದ್ದೇ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿದವು. ತಕ್ಷಣವೇ ದಂಪತಿಯ ಮಗ ಇಬ್ಬರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವು ಕಂಡಿದ್ದರೆ, ಆಕೆಯ ಪತಿ ಕೋಮಾಕ್ಕೆ ಜಾರಿದ್ದಾರೆ.
"ಸಾವಿನ ಕಾರಣವನ್ನು ವೈದ್ಯರು, ನ್ಯೂರಾಲಾಜಿಕಲ್ ಮ್ಯಾನಿಫಿಸ್ಟೇಷನ್ ಫುಡ್ ಪಾಯ್ಸನಿಂಗ್ (ನರವಿಜ್ಞಾನದ ಮೇಲೆ ಪರಿಣಾಮ ಬೀರುವ ಫುಡ್ ಪಾಯ್ಸನ್) ಎಂದು ಹೇಳಿದ್ದಾರೆ. ಇದರ ಪರಿಣಾಮವಾಗಿ ಹೃದಯದ ಡಿಸ್ರಿಥ್ಮಿಯಾದೊಂದಿಗೆ ಉಸಿರಾಟದ ವೈಫಲ್ಯವು ಉಂಟಾಗಿತ್ತದೆ. ಸಿಗ್ವಾಟೆರಾ ಟಾಕ್ಸಿನ್ ಅಥವಾ ಟೆಟ್ರೋಡೋಟಾಕ್ಸಿನ್ ಸೇವನೆಯಿಂದ ಬರುತ್ತದೆ. ಇದು ಪಫರ್ ಮೀನಿನಿಂದ ಇವರಿಗೆ ಬಂದಿದೆ' ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಪಫರ್ ಫಿಶ್ ವಿಷ: ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಟೆಟ್ರೋಡೋಟಾಕ್ಸಿನ್ ಎನ್ನುವುದು ಪ್ರಕೃತಿಯಲ್ಲಿ ಕಂಡುಬರುವ ವಿಷಗಳಲ್ಲಿಯೇ ಅತ್ಯಂತ ವಿಷಕಾರಿ. ಇದು ಸಮುದ್ರವಾಸಿಗಳ ಪೈಕಿ ಪಫರ್ ಮೀನಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
Bengaluru: ಪ್ರಾಣಿಗಳನ್ನು ಬಿಟ್ರೂ ಪ್ರೀತಿಯ ಮೀನನ್ನು ಬಿಡದ ಏರ್‌ಇಂಡಿಯಾ ವಿರುದ್ಧ ಪ್ರಯಾಣಿಕ ಕಿಡಿ!
ಆದರೆ, ಈ ಪಫರ್ ಫಿಶ್‌ನ ಸೇವನೆ ಕೂಡ ಮಾಡಬಹುದು. ಏಷ್ಯಾದಲ್ಲಿ ಇದು ಬಹಳ ಜನಪ್ರಿಯವಾಗಿದೆ. ಕೆಲವು ವಿಧದ ಸುಶಿ ಮತ್ತು ಸಾಶಿಮಿಗಳಲ್ಲಿ ನೀಡಲಾಗುತ್ತದೆ. ಆದರೆ, ಪಫರ್ ಮೀನಿನ ಖಾದ್ಯವನ್ನು ತಯಾರಿಸಲು ಅಡುಗೆ ಮಾಡುವ ವ್ಯಕ್ತಿಗಳಿಗೆ ವಿಶೇಷವಾದ ತರಬೇತಿಯ ಅಗತ್ಯವಿರುತ್ತದೆ. ಮೀನಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಅವರು ಖಾದ್ಯವನ್ನು ತಯಾರಿ ಮಾಡುತ್ತಾರೆ. ಆ ಬಳಿಕ ಪಫರ್ ಮೀನನ್ನು ತಿಂದರೆ ಯಾವುದೇ ಪ್ರಾಣಾಪಾಯ ಸಂಭವಿಸುವುದಿಲ್ಲ. ಪಫರ್ ಫಿಶ್ ವಿಷವು ಪಾರ್ಶ್ವವಾಯು ಚಿಪ್ಪುಮೀನು ವಿಷವನ್ನು ಹೋಲುತ್ತದೆ.
ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಮೀನುಗಾರರ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ
ಕಳೆದ 38 ವರ್ಷಗಳಲ್ಲಿ ಮಲೇಷ್ಯಾದಲ್ಲಿ 58 ಪಫರ್ ಫಿಶ್ ಘಟನೆಗಳು ನಡೆದಿವೆ ಎಂದು ಆರೋಗ್ಯ ಸಚಿವಾಲಯದ ಡೇಟಾ ತಿಳಿಸಿದೆ ಎಂದು ಮಲೇಷ್ಯಾದ ಆರೋಗ್ಯ ಮಹಾನಿರ್ದೇಶಕ ನೂರ್ ಹಿಶಾಮ್ ಅಬ್ದುಲ್ಲಾ ಹೇಳಿದ್ದಾರೆ. ಅವರಲ್ಲಿ 18 ಮಂದಿ ಸಾವಿಗೆ ಕಾರಣರಾಗಿದ್ದರು. ಫುಗು ಎಂದೂ ಕರೆಯಲ್ಪಡುವ, ಪಫರ್ ಮೀನನ್ನು ಜಪಾನಿನ ಖಾದ್ಯವಾಗಿ ನೀಡಲಾಗುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ ನೀಡಿರುವ ಮಾಹಿತಿಯ ಪ್ರಕಾರ, ಟೆಟ್ರೋಡೋಟಾಕ್ಸಿನ್ ಎನ್ನುವ ವಿಷವು ಸೈನೈಡ್‌ಗಿಂತ 1200 ಪಟ್ಟು ಮಾರಕವಾಗಿದೆ.