
ಪ್ಯಾರಿಸ್ (ಏಪ್ರಿಲ್ 3, 2023): ನಗ್ನ ಮಾಡೆಲ್‌ಗಳ ಹಾಗೂ ಪಾರ್ನ್ ಸ್ಟಾರ್‌ಗಳ ಫೋಟೋಗಳಿಗೆ ಪ್ಲೇಬಾಯ್ ಮ್ಯಾಗಜೀನ್ ಕುಖ್ಯಾತಿಯಾಗಿದೆ. ಈ ನಿಯತಕಾಲಿಕೆಗೆ ಪೋಸ್ ನೀಡಿದ್ದಕ್ಕಾಗಿ ಫ್ರೆಂಚ್ ಸರ್ಕಾರದ ಸಚಿವ ಮರ್ಲೀನ್ ಶಿಯಪ್ಪ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಆರ್ಥಿಕತೆ ಮತ್ತು ಫ್ರೆಂಚ್ ಅಸೋಸಿಯೇಷನ್‌ಗಳ ಸಚಿವರಾಗಿ ಸೇವೆ ಸಲ್ಲಿಸುವುದರ ಹೊರತಾಗಿ ಸ್ತ್ರೀವಾದಿ ಬರಹಗಾರರೂ ಆಗಿರುವ ಇವರು ಮಹಿಳೆಯರ ಮತ್ತು ಎಲ್‌ಜಿಬಿಟಿ ಹಕ್ಕುಗಳ ಕುರಿತು 12 ಪುಟಗಳ ಸಂದರ್ಶನದೊಂದಿಗೆ ಕವರ್ ಫೋಟೋಗೆ ಪೋಸ್ ನೀಡಿದ್ದಾರೆ.
ಪ್ಲೇಬಾಯ್ ನ್ಯೂಡ್ ಹಾಗೂ ಅಶ್ಲೀಲ ಫೋಟೋಗಳಿಗೆ ಕುಖ್ಯಾತಿಯಾಗಿದ್ದರೂ, ಫ್ರೆಂಚ್ ಸಚಿವೆ ಮರ್ಲೀನ್ ಶಿಯಪ್ಪ ಪೂರ್ಣ ಬಟ್ಟೆ ಧರಿಸಿ ಪೋಸ್ ನೀಡಿದ್ದಾರೆ. ಆದರೂ, ಆಕೆಯ ನಿರ್ಧಾರವು ಫ್ರೆಂಚ್ ರಾಜಕುಮಾರಿ ಹಾಗೂ ಪ್ರಧಾನ ಮಂತ್ರಿ ಎಲಿಜಬೆತ್ ಬೋರ್ನ್ ಸೇರಿದಂತೆ ಹಲವು ರಾಜಕಾರಣಿಗಳಿಂದ ಟೀಕೆಗೊಳಗಾಗಿದ್ದಾರೆ. ಮರ್ಲೀನ್ ಶಿಯಪ್ಪ ಅವರನ್ನು ಟೀಕಿಸಿದ ಎಲಿಜಬೆತ್ ಬೋರ್ನ್ "ಇದು ಸೂಕ್ತವಲ್ಲ, ವಿಶೇಷವಾಗಿ ಈ ಅವಧಿಯಲ್ಲಿ’’ ಎಂದು ಹೇಳಿರುವುದಾಗಿ BFMTV ಉಲ್ಲೇಖಿಸಿದೆ.
ಇದನ್ನು ಓದಿ: ಪೋರ್ನ್ ನಟಿ ಜತೆ ಸೆಕ್ಸ್: ಟ್ರಂಪ್ ವಿರುದ್ಧ ದೋಷಾರೋಪ; ತಕ್ಷಣವೇ ಜೈಲಿಗೆ ಹೋಗ್ತಾರಾ ಅಮೆರಿಕ ಮಾಜಿ ಅಧ್ಯಕ್ಷ..?
ಪ್ರಸ್ತುತ, ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಏರಿಸುವ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಅವರ ಸುಧಾರಣೆಗಳಿಂದಾಗಿ ಫ್ರಾನ್ಸ್ ರಾಜಕೀಯ ಅಶಾಂತಿಯಲ್ಲಿದೆ. 40 ವರ್ಷದ ಸ್ತ್ರೀವಾದಿ ಲೇಖಕಿ ಹಾಗೂ ಸಚಿವೆ ಮರ್ಲೀನ್ ಶಿಯಪ್ಪ ಆಗಾಗ್ಗೆ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಾರೆ ಮತ್ತು ಪದೇ ಪದೇ ಬಲಪಂಥೀಯರನ್ನು ಕೆರಳಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಮತ್ತು ಎಡಪಂಥೀಯ ವಿಮರ್ಶಕರು ಸಹ ಸಾಮಾಜಿಕ ಆರ್ಥಿಕತೆ ಸಚಿವರು ತಮ್ಮ ಇತ್ತೀಚಿನ ನಡೆಯಿಂದ ತಪ್ಪು ಮಾಡಿದ್ದಾರೆ ಎಂದು ಭಾವಿಸುತ್ತಾರೆ. ಪ್ಲೇಬಾಯ್‌ಗೆ ಮಹಿಳಾ ಮತ್ತು ಸಲಿಂಗಕಾಮಿ ಹಕ್ಕುಗಳು ಹಾಗೂ ಗರ್ಭಪಾತದ ಕುರಿತು 12-ಪುಟಗಳ ಸಂದರ್ಶನದೊಂದಿಗೆ ಪೋಸ್ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಇನ್ನು, ಈ ವಿರೋಧದ ನಡುವೆ "ತಮ್ಮ ದೇಹದಿಂದ ತಮಗೆ ಬೇಕಾದುದನ್ನು ಮಾಡುವ ಮಹಿಳೆಯರ ಹಕ್ಕನ್ನು ರಕ್ಷಿಸುವುದು: ಎಲ್ಲೆಡೆ ಮತ್ತು ಎಲ್ಲಾ ಸಮಯದಲ್ಲೂ"" ಫ್ರಾನ್ಸ್‌ನಲ್ಲಿ, ಮಹಿಳೆಯರು ಸ್ವತಂತ್ರರು’’ ಎಂದೂ ಮರ್ಲೀನ್ ಶಿಯಪ್ಪ ಶನಿವಾರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್ ಸೆಕ್ಸ್: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!
ಒಂದು ಕಡೆ, ನಿವೃತ್ತಿ ವಯಸ್ಸನ್ನು ಎರಡು ವರ್ಷಗಳವರೆಗೆ ಹೆಚ್ಚಿಸುವ ಯೋಜನೆಗಳ ವಿರುದ್ಧ ಮುಷ್ಕರ ಮತ್ತು ಹೆಚ್ಚುತ್ತಿರುವ ಹಿಂಸಾತ್ಮಕ ಪ್ರದರ್ಶನಗಳನ್ನು ಸರ್ಕಾರ ಎದುರಿಸುತ್ತಿದೆ. ಆದರೂ, ಇನ್ನೊಂದೆಡೆ, ಮರ್ಲೀನ್ ಶಿಯಪ್ಪ ಅವರ ಈ ನಿರ್ಧಾರ ಕೆಲವು ಸಹೋದ್ಯೋಗಿಗಳನ್ನು ಕೆರಳಿಸಿದೆ.
ಮರ್ಲೀನ್ ಶಿಯಪ್ಪ ಗ್ಲಾಮರ್ ಮ್ಯಾಗಜೀನ್‌ಗಾಗಿ ಡಿಸೈನರ್ ಡ್ರೆಸ್‌ಗಳನ್ನು ಧರಿಸಿರುವ ದೃಶ್ಯದ ಮೂಲಕ ತಪ್ಪು ಸಂದೇಶವನ್ನು ಕಳುಹಿಸಿದ್ದಾರೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಅದರ ಬಗ್ಗೆ ಮೊದಲು ಕೇಳಿದಾಗ ಅದು ಏಪ್ರಿಲ್ ಫೂಲ್ ಜೋಕ್ ಎಂದು ತಾನು ಭಾವಿಸಿದ್ದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Bihar ರೈಲ್ವೆ ಸ್ಟೇಷನ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ: ಅದು ನನ್ನದಿರಬಹುದು ಎಂದ ಪೋರ್ನ್ ಸ್ಟಾರ್
ಫ್ರಾನ್ಸ್ ಪ್ರಧಾನ ಮಂತ್ರಿ ಎಲಿಜಬೆತ್ ಬೋರ್ನ್, ಈ ಸ್ಥಾನವನ್ನು ಆಕ್ರಮಿಸಿಕೊಂಡ ಅಲ್ಲಿನ ಎರಡನೇ ಮಹಿಳೆಯಾಗಿದ್ದಾರೆ. ಇವರು ಫ್ರೆಂಚ್ ಸಚಿವೆ ಮರ್ಲೀನ್ ಶಿಯಪ್ಪ "ವಿಶೇಷವಾಗಿ ಪ್ರಸ್ತುತ ಅವಧಿಯಲ್ಲಿ ಇದು ಸೂಕ್ತವಲ್ಲ" ಎಂದು ಹೇಳಲು ಅವರಿಗೆ ಕರೆ ಮಾಡಿದ್ದರು ಎಂದು ಸಹಾಯಕರೊಬ್ಬರು ಶನಿವಾರ ಸುದ್ದಿಸಂಸ್ಥೆ ಎಎಫ್‌ಪಿಗೆ ಪ್ರಧಾನಿಯ ಸಹಾಯಕರೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ