ಜಾಧವ್‌ಗೆ ಭಾರತೀಯ ವಕೀಲರನ್ನು ನೇಮಕ ಮಾಡಬೇಕು: ಭಾರತ

By Suvarna NewsFirst Published Aug 22, 2020, 2:30 PM IST
Highlights

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್| ಮೇಲ್ಮನವಿ ಸಲ್ಲಿಸಲು ಭಾರತೀಯ ವಕೀಲರನ್ನು ನೇಮಕ ಮಾಡುವಂತೆ ಭಾರತದ ಒತ್ತಾಯ| 

ನವದೆಹಲಿ(ಆ.22): ಬೇಹುಗಾರಿಕೆಯ ಸುಳ್ಳು ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ಗೆ, ತನ್ನ ವಿರುದ್ಧ ನೀಡಲಾಗಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತೀಯ ವಕೀಲರನ್ನು ನೇಮಕ ಮಾಡಬೇಕು ಎಂದು ಭಾರತ ಮತ್ತೆ ಒತ್ತಾಯಿಸಿದೆ.

ಕುಲಭೂಷಣ್ ಜಾಧವ್ ಕೇಸಲ್ಲಿ ಪಾಕ್ ಮತ್ತೆ ಕ್ಯಾತೆ..!

ಈ ಬಗ್ಗೆ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ, ಮುಕ್ತ ಹಾಗೂ ನ್ಯಾಯೋಚಿತ ವಿಚಾರಣೆಗೆ ಕುಲಭೂಷಣ್‌ ಜಾಧವ್‌ಗೆ ಭಾರತೀಯ ವಕೀಲರನ್ನು ನೇಮಕ ಮಾಡಬೇಕು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಮತ್ತೆ ಪಾಕ್‌ ಮಾನ ಹರಾಜು!

ಮಿಲಿಟರಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಜಾಧವ್‌ಗೆ ತನ್ನ ತೀರ್ಪಿನ ವಿರುದ್ದ ಇಸ್ಲಾಮಾಬಾದ್‌ ಹೈ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶ ಇದ್ದು, ಈ ವೇಳೆ ಜಾಧವ್‌ ಪರ ಪಾಕಿಸ್ತಾನದ ವಕೀಲ ಇದ್ದರೆ ಪಾಕ್‌ ಸರ್ಕಾರ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಭಾರತೀಯ ವಕೀಲರ ನೇಮಕ ಮಾಡಬೇಕು ಎಂದು ಭಾರತ ಒತ್ತಾಯಿಸಿದೆ.

click me!