ಚೀನೀ ವಸ್ತುಗಳು ಆಯ್ತು ಈಗ ಚೀನಿಯರ ಮೇಲೂ ನಿಗಾ: ವೀಸಾ ನೀತಿ ಕಠಿಣ!

By Suvarna NewsFirst Published Aug 22, 2020, 12:37 PM IST
Highlights

ಚೀನೀ ವಸ್ತುಗಳು ಆಯ್ತು ಈಗ ಚೀನಿಯರ ಮೇಲೂ ನಿಗಾ| ಚೀನಿಯರಿಗೆ ಕಠಿಣ ವೀಸಾ ನೀತಿ, ಶಿಕ್ಷಣ ಸಂಸ್ಥೆಗಳೊಂದಿಗಿನ ಒಪ್ಪಂದ ಕಟ್‌

ನವದೆಹಲಿ(ಆ.22): ಗಲ್ವಾನ್‌ ಸಂಘರ್ಷದ ಬಳಿಕ ಚೀನಾ ವಿರುದ್ಧ ಕಠಿಣ ನಿಲುವು ತಾಳುತ್ತಿರುವ ಭಾರತ, ಇದೀಗ ಚೀನಿಯರ ಮೇಲೂ ತೀವ್ರ ನಿಗಾ ಇಡಲು ಮುಂದಾಗಿದೆ. ಚೀನೀ ನಾಗರಿಕರಿಗೆ ವೀಸಾ ನೀಡುವ ವೇಳೆ ಹೆಚ್ಚಿನ ಪರಿಶೀಲನೆ ಹಾಗೂ ಚೀನಾ ಜತೆ ಒಪ್ಪಂದ ಮಾಡಿಕೊಂಡಿರುವ ವಿಶ್ವವಿದ್ಯಾಲಯಗಳ ಮೇಲೆ ಹದ್ದಿನ ಕಣ್ಣಿಡಲು ತೀರ್ಮಾನಿಸಿದೆ.

ಪಾಕ್-ಚೀನಾ ಕಣ್ತಪ್ಪಿಸಿ ಲಡಾಖ್‌ಗೆ ಭಾರತದಿಂದ ರಹಸ್ಯ ರಸ್ತೆ ಮಾರ್ಗ

ಚೀನಾದ ಉದ್ಯಮಿಗಳು, ಶಿಕ್ಷಣ ತಜ್ಞರು, ಉದ್ಯಮಿಗಳು, ವಕೀಲರಿಗೆ ವೀಸಾ ನೀಡುವ ಮೊದಲು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಪಾಕಿಸ್ತಾನದೊಂದಿಗೆ ದೀರ್ಘ ಸಂಬಂಧ ಇಟ್ಟುಕೊಂಡಿರುವವರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಹೆಸರು ಬಹಿರಂಗ ಪಡಿಸಲೊಲ್ಲದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಲ್ಲದೇ ಚೀನಾ ಶಿಕ್ಷಣ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗುತ್ತದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬನಾರಾಸ್‌ ಹಿಂದೂ ವಿವಿ, ಜವಹರಲಾಲ್‌ ನೆಹರೂ ವಿವಿ ಸೇರಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಮರುಪರಿಶೀಲನೆ ಮಾಡಲು ಮುಂದಾಗಿದೆ.

ಮಾನಸ ಸರೋವರ ಬಳಿ ಚೀನಾದ ಕ್ಷಿಪಣಿ ನೆಲೆ: ಮತ್ತೆ ಡ್ರ್ಯಾಗನ್ ಕ್ಯಾತೆ!

ಅಲ್ಲದೇ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡು ಮ್ಯಾಂಡರೀನ್‌ ಭಾಷೆ ಭೋಧಿಸುತ್ತಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಅದನ್ನು ನಿಲ್ಲಿಸಲಾಗುತ್ತದೆ ಎಂದು ಗೊತ್ತಾಗಿದೆ. ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಚೀನಾದ ಪ್ರಭಾವನ್ನು ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಲ ದಿನಗಳ ಹಿಂದಷ್ಟೇ ಚೀನಾ ಮೂಲದ 50ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿರ್ಬಂಧಿಸುವ ಮೂಲಕ ಭಾರತ ಚೀನಾಕ್ಕೆ ಆರ್ಥಿಕ ಹೊಡೆತ ನೀಡಿತ್ತು.

click me!