ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಇನ್ನು ಮಾಸ್ಕ್ ಕಡ್ಡಾಯವಲ್ಲ!

By Suvarna NewsFirst Published Aug 22, 2020, 9:51 AM IST
Highlights

 ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಸತತ 13 ದಿನಗಳಿಂದ ಕೊರೋನಾ ಸೋಂಕಿಲ್ಲ| ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಇನ್ನು ಮಾಸ್ಕ್‌ ಕಡ್ಡಾಯವಲ್ಲ

ಬೀಜಿಂಗ್(ಆ.22)‌: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಸತತ 13 ದಿನಗಳಿಂದಲೂ ಒಬ್ಬರೇ ಒಬ್ಬ ವ್ಯಕ್ತಿಯಲ್ಲಿ ಈ ಸೋಂಕು ಕಂಡುಬಂದಿಲ್ಲ. ಹೀಗಾಗಿ, ಕೊರೋನಾ ಹಬ್ಬದಂತೆ ಮುಂಜಾಗ್ರತೆ ವಹಿಸಲು ಕಡ್ಡಾಯ ಮಾಡಲಾಗಿದ್ದ ಮಾಸ್ಕ್‌ ನಿಯಮ ಸಡಿಲಗೊಳಿಸಲಾಗಿದೆ.

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಜನ ಸಾಮಾನ್ಯರು ಮನೆಯಿಂದ ಹೊರಬರಬೇಕಾದರೆ, ಮುಖಗವಸು ಧಾರಣೆ ಕಡ್ಡಾಯವಾಗಿತ್ತು. ಆದರೆ, ಬೀಜಿಂಗ್‌ನಲ್ಲಿ ಕಳೆದ 13 ದಿನಗಳಿಂದ ಒಂದೇ ಒಂದು ಕೊರೋನಾ ಪ್ರಕರಣ ದೃಢವಾಗಿಲ್ಲ. ಹೀಗಾಗಿ, ಜನರು ಮಾಸ್ಕ್‌ ಇಲ್ಲದೆ ನಗರದಾದ್ಯಂತ ಸಂಚರಿಸಬಹುದು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಚೀನಾದಲ್ಲಿ ಈವರೆಗೆ ಒಟ್ಟು 84,939 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ 79,851 ಮಂದಿ ಗುಣಮುಖರಾಗಿದ್ದಾರೆ. 4,634 ಮಂದಿ ಈವರೆಗೆ ಮೃತಪಟ್ಟಿದ್ದು, 454 ಸಕ್ರಿಯ ಪ್ರಕರಣಗಳಿವೆ.

click me!