ಪ್ರಿಗೋಝಿನ್ ಅವರನ್ನು ಮತ್ತೆ ಸಾರ್ವಜನಿಕವಾಗಿ ನೋಡುತ್ತೇವೆ ಎಂದು ನನಗೆ ಅನುಮಾನವಿದೆ. ಅವರು ತಲೆಮರೆಸಿಕೊಳ್ಳುವಂತೆ ಮಾಡಬಹುದು, ಅಥವಾ ಜೈಲಿಗೆ ಕಳುಹಿಸಲಾಗುತ್ತದೆ ಅಥವಾ ಬೇರೆ ರೀತಿಯಲ್ಲಿ ವ್ಯವಹರಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಯುಎಸ್ ಮಾಜಿ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.
ಮಾಸ್ಕೋ (ಜುಲೈ 16, 2023): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ದಂಗೆ ಎದ್ದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿ ಬಳಿಕ ಸೈಲೆಂಟಾಗಿದ್ದ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್ ಸತ್ತಿದ್ದಾರೆ ಅಥವಾ ಜೈಲಿನಲ್ಲಿದ್ದಾರೆ ಎಂದು ಯುಎಸ್ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಂಗೆ ನಡೆದ 5 ಐದು ದಿನಗಳ ನಂತರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆ ಗುಂಪಿನ ಮುಖ್ಯಸ್ಥರನ್ನು ಭೇಟಿಯಾದರು ಎಂದು ರಷ್ಯಾ ಹೇಳಿಕೊಂಡ ನಂತರ ಅಮೆರಿಕ ಮಾಜಿ ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಈ ಸಭೆಯೂ ಬಹುಶಃ ಸೃಷ್ಟಿ ಮಾಡಿರುವುದು ಎಂದೂ ಯುಎಸ್ ಮಾಜಿ ಜನರಲ್ ರಾಬರ್ಟ್ ಅಬ್ರಾಮ್ಸ್ ಎಬಿಸಿ ನ್ಯೂಸ್‌ಗೆ ಹೇಳಿಕೊಂಡಿದ್ದಾರೆ.
"ನನ್ನ ವೈಯಕ್ತಿಕ ಮೌಲ್ಯಮಾಪನವೆಂದರೆ ನಾವು ಪ್ರಿಗೋಝಿನ್ ಅವರನ್ನು ಮತ್ತೆ ಸಾರ್ವಜನಿಕವಾಗಿ ನೋಡುತ್ತೇವೆ ಎಂದು ನನಗೆ ಅನುಮಾನವಿದೆ. ಅವರು ತಲೆಮರೆಸಿಕೊಳ್ಳುವಂತೆ ಮಾಡಬಹುದು, ಅಥವಾ ಜೈಲಿಗೆ ಕಳುಹಿಸಲಾಗುತ್ತದೆ ಅಥವಾ ಬೇರೆ ರೀತಿಯಲ್ಲಿ ವ್ಯವಹರಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಅವನನ್ನು ಮತ್ತೆ ನೋಡುತ್ತೇವೆ ಎಂದು ನನಗೆ ಅನುಮಾನವಿದೆ’’ ಎಂದೂ ಅಬ್ರಾಮ್ಸ್ ಉಲ್ಲೇಖಿಸಿದ್ದಾರೆ. ಪ್ರಿಗೋಝಿನ್ ಇನ್ನೂ ಜೀವಂತವಾಗಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದಾಗ, ಜನರಲ್ ಅಬ್ರಾಮ್ಸ್ "ನಾನು ವೈಯಕ್ತಿಕವಾಗಿ ಅವರು ಬದುಕಿದ್ದಾರೆ ಎಂದು ಭಾವಿಸುವುದಿಲ್ಲ, ಮತ್ತು ಅವರು ಜೀವಂತವಾಗಿದ್ದರೆ, ಅವರು ಎಲ್ಲೋ ಜೈಲಿನಲ್ಲಿರುತ್ತಾರೆ’’ ಎಂದೂ ಹೇಳಿದರು.
ಇದನ್ನು ಓದಿ: ದಂಗೆ ಹತ್ತಿಕ್ಕಿದ ಕ್ರಮಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ
ಈ ವಾರದ ಆರಂಭದಲ್ಲಿ, ಪ್ರಿಗೋಝಿನ್ ಮತ್ತು ಅವರ ಜನರು ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು ಮತ್ತು ಸಶಸ್ತ್ರ ದಂಗೆಯ ಐದು ದಿನಗಳ ನಂತರ ಸರ್ಕಾರಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದರು ಎಂದು ರಷ್ಯಾ ಹೇಳಿಕೊಂಡಿದೆ. ಮೂರು ಗಂಟೆಗಳ ಸಭೆಯು ಜೂನ್ 29 ರಂದು ನಡೆಯಿತು ಮತ್ತು ಪ್ರಿಗೋಝಿನ್ ಮಾತ್ರವಲ್ಲದೆ ಅವರ ವ್ಯಾಗ್ನರ್ ಗ್ರೂಪ್ ಮಿಲಿಟರಿ ಗುತ್ತಿಗೆದಾರರ ಕಮಾಂಡರ್‌ಗಳನ್ನು ಒಳಗೊಂಡಿತ್ತು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದರು.
ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿನ ಯುದ್ಧಭೂಮಿಯಲ್ಲಿ ವ್ಯಾಗ್ನರ್‌ನ ಕ್ರಮಗಳ ಮೌಲ್ಯಮಾಪನವನ್ನು ನೀಡಿದರು. ಆ ಸೈನಿಕರು ರಷ್ಯಾದ ಸೈನ್ಯದೊಂದಿಗೆ ಹೋರಾಡಿದ್ದು ಮತ್ತು ದಂಗೆಯ ಬಗ್ಗೆ ಹೇಳಿದರು. ಕಮಾಂಡರ್‌ಗಳು ಸ್ವತಃ ಏನಾಯಿತು ಎಂಬುದರ ಕುರಿತು ತಮ್ಮ ಹೇಳಿಕೆ ನೀಡಿದರು. ಅವರು ರಾಷ್ಟ್ರದ ಮುಖ್ಯಸ್ಥ ಮತ್ತು ಕಮಾಂಡರ್-ಇನ್-ಚೀಫ್‌ನ ದೃಢ ಬೆಂಬಲಿಗರು ಮತ್ತು ಸೈನಿಕರು ಎಂದು ಒತ್ತಿಹೇಳಿದರು ಮತ್ತು ತಮ್ಮ ತಾಯ್ನಾಡಿಗಾಗಿ ಹೋರಾಡಲು ಅವರು ಸಿದ್ಧರಿದ್ದಾರೆ ಎಂದು ಹೇಳಿದರು’’ ಎಂದೂ ಡಿಮಿಟ್ರಿ ಪೆಸ್ಕೋವ್ ಹೇಳಿದರು. ಮಿಲಿಟರಿ ನಾಯಕತ್ವ ಬದಲಾವಣೆಗೆ ಒತ್ತಾಯಿಸಲು ಕಳೆದ ತಿಂಗಳು ಮಾಸ್ಕೋಗೆ ಮೆರವಣಿಗೆಯಲ್ಲಿ ಸೈನ್ಯವನ್ನು ಮುನ್ನಡೆಸಿದ ಪ್ರಿಗೋಝಿನ್ ಅವರನ್ನು ಪುಟಿನ್ ಮುಖಾಮುಖಿಯಾಗಿ ಭೇಟಿಯಾದರು ಎಂಬ ದೃಢೀಕರಣವು ಅನುಮಾನಾಸ್ಪದವಾಗಿದೆ.
ಇದನ್ನೂ ಓದಿ: ತನ್ನ ವಿರುದ್ಧವೇ ದಂಗೆಯೆದ್ದ ಖಾಸಗಿ ಸೇನೆಗೆ ಪುಟಿನ್ ಕ್ಷಮೆ: ‘ದೇಶದ್ರೋಹಿಗಳ’ ಎದುರು ಮಂಡಿಯೂರಿದ ರಷ್ಯಾ?
ಇನ್ನು, ರಷ್ಯಾದಲ್ಲಿ ವಿಫಲವಾದ ದಂಗೆಯ ನಂತರ ವ್ಯಾಗ್ನರ್ ಗ್ರೂಪ್‌ನ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ಮಧ್ಯೆ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್ ಅವರು ಪ್ಯಾಂಟ್ ಹಾಕದೆ ಒಳ ಉಡುಪುಗಳಲ್ಲಿ ಕ್ಯಾಮೆರಾ ಕಡೆ ಕೈ ಬೀಸುತ್ತಿರುವ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಪ್ರಿಗೋಝಿನ್ ಮಿಲಿಟರಿ ನಾಯಕತ್ವದ ವಿರುದ್ಧ ತನ್ನ ಸಶಸ್ತ್ರ ದಂಗೆಯನ್ನು ಘೋಷಿಸುವ 11 ದಿನಗಳ ಮೊದಲು ಜೂನ್ 12 ರಂದು ತೆಗೆದುಕೊಳ್ಳಲಾಗಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ದೊಡ್ಡ ಟೆಂಟ್‌ನಲ್ಲಿ ಸಣ್ಣ ಹಾಸಿಗೆಯ ಮೇಲೆ ಕುಳಿತಿರುವ ಪ್ರಿಗೋಝಿನ್ ಅವರ ಅರೆ-ನಗ್ನ ಛಾಯಾಚಿತ್ರವು ದಂಗೆಕೋರರನ್ನು ಅಪಖ್ಯಾತಿಗೊಳಿಸಲು ರಷ್ಯಾದ ಮಾಧ್ಯಮಗಳಲ್ಲಿ ಪ್ರಚಾರದ ಮಧ್ಯೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಗ್ನರ್ ಗ್ರೂಪ್ ಅನ್ನು ಮುನ್ನಡೆಸಲು "ನೈಜ ಕಮಾಂಡರ್" ಆಂಡ್ರೇ ಟ್ರೋಶೆವ್ ಅವರನ್ನು ಆಯ್ಕೆ ಮಾಡಿದ ಕೆಲವೇ ಗಂಟೆಗಳ ನಂತರ ಪ್ರಿಗೋಝಿನ್ ಅವರು ಒಳ ಉಡುಪುಗಳಲ್ಲಿ ಇರುವ ಫೋಟೋ ಕಾಣಿಸಿಕೊಂಡಿದೆ. ರಷ್ಯಾದ ಕಾನೂನಿನ ಅಡಿಯಲ್ಲಿ ವ್ಯಾಗ್ನರ್ ಎಂದಿಗೂ ಕಾನೂನು ಘಟಕವಾಗಿ ಅಸ್ತಿತ್ವದಲ್ಲಿಲ್ಲ ಎಂದು ರಷ್ಯಾ ಅಧ್ಯಕ್ಷ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿ ಪುಟಿನ್ ಆಪ್ತನ ಖಾಸಗಿ ಸೇನೆ ದಿಢೀರ್ ಸೈಲೆಂಟ್: ಮಾಸ್ಕೋಗೆ ಲಗ್ಗೆ ನಿರ್ಧಾರದಿಂದ ಹಿಂದೆ ಸರಿದ ವ್ಯಾಗ್ನರ್!