
ಸ್ಟಾಕ್‌ಹೋಮ್: ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಸುಡಲು ಅನುಮತಿ ನೀಡಿದ ಬಳಿಕ ಸ್ವೀಡನ್ ಇದೀಗ ಬೈಬಲ್ ಮತ್ತು ತೋರಾದ ಪ್ರತಿಗಳನ್ನು ಸುಡಲು ಅನುಮತಿ ನೀಡಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಬೈಬಲ್ ಸುಡಲು ಸ್ಟಾಕ್‌ಹೋಮ್‌ನಲ್ಲಿರುವ ಇಸ್ರೇಲ್ ದೂತವಾಸ ಕಚೇರಿಯ ಎದುರು ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಸ್ವೀಡನ್ ಸರ್ಕಾರ ಬೈಬಲ್ ಹಾಗೂ ಓಲ್ಡ್ ಟೆಸ್ಟಮೆಂಟ್‌ನ ಮೊದಲ 5 ಪುಸ್ತಕಗಳ ಸಂಕಲನವಾದ ತೋರಾವನ್ನು ಸುಡಲು ಅನುಮತಿ ನೀಡಿದೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿರುವ ಐರೋಪ್ಯ ಯಹೂದಿ ಕಾಂಗ್ರೆಸ್, ಇಂತಹ ಕೆರಳಿಸುವ, ಅಸಂಬದ್ಧ, ಯಹೂದಿ ವಿರೋಧಿ, ದುರಾಡಳಿತಕ್ಕೆ ಒಳ್ಳೆ ಸಮಾಜದಲ್ಲಿ ಸ್ಥಾನವಿಲ್ಲ. ಇಂಥಹ ನಿರ್ಧಾರಗಳು ಸಮಾಜ ಹಾಗೂ ಧಾರ್ಮಿಕ ಸೂಕ್ಷ್ಮತೆಗಳ ಮೇಲೆ ಪರಿಣಾಮ ಬೀರುತ್ತದೆ. ವಾಕ್ ಸ್ವಾತಂತ್ರದ ಹೆಸರಿನಲ್ಲಿ ಇಂಥಹ ನಿರ್ಧಾರಗಳು ಸ್ವೀಡನ್ ಬಗ್ಗೆ ಅಗೌರವ ತರುತ್ತದೆ ಎಂದು ಹೇಳಿದೆ.
ಕುರಾನ್ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ನೋಡಿ, ಪರಿಣಾಮ ಗೊತ್ತಾಗುತ್ತೆ: ಅಲಹಾಬಾದ್ ಹೈಕೋರ್ಟ್
ಮತ್ತೊಂದೆಡೆ, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಗೋಜ್,ನಾನು ಸಾರಾಸಗಟಾಗಿ ಸ್ವೀಡನ್ನಿನ ಈ ನಿರ್ಧಾರವನ್ನು ಧಿಕ್ಕರಿಸುತ್ತೇವೆ. ನಾನು ಒಬ್ಬ ಅಧ್ಯಕ್ಷನಾಗಿ ಮುಸ್ಲಿಂ ಧರ್ಮ ಗ್ರಂಥ ಕುರಾನ್ ಸುಟ್ಟಿದ್ದನ್ನು ಖಂಡಿಸಿದ್ದೆ. ಈಗ ಬೈಬಲ್ ಹಾಗೂ ತೋರಾ ಸುಡುವ ನಿರ್ಧಾರವನ್ನು ಖಂಡಿಸುತ್ತೇನೆ. ಎಂದಿದ್ದಾರೆ.
ಮಸೀದಿಯ ಹೊರಗಡೆ ಕುರಾನ್ ಸುಟ್ಟು ಪ್ರತಿಭಟನೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಸ್ವೀಡನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ