ಪಾಕಿಸ್ತಾನದಲ್ಲಿ ನವರಾತ್ರಿ ಸಂಭ್ರಮದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಾಚಿಯ ಬೀದಿಯಲ್ಲಿ ನಡೆದ ಈ ಆಚರಣೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಭಾರತದೆಲ್ಲೆಡೆ ನವರಾತ್ರಿ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ಬೀದಿ ಬೀದಿಗಳಲ್ಲಿ ದುರ್ಗಾದೇವಿಯನ್ನು ಕೂರಿಸಿ 9 ದಿನಗಳ ಕಾಲ ಆರಾಧನೆ ಮಾಡಲಾಗುತ್ತದೆ. ಅದೇ ರೀತಿ ಕೆಲವರು ಮನೆಯಲ್ಲಿಯೂ ಕೂಡ ದುರ್ಗಾಮಾತೆಯನ್ನು ಕೂರಿಸಿ, ಅಥವಾ ಗೊಂಬೆಗಳನ್ನು ಕೂರಿಸಿ ಒಂಭತ್ತು ದಿನಗಳ ಕಾಲ ವೃತ ಮಾಡಿ ಪೂಜೆ ಮಾಡಿ ಭಕ್ತಭಾವದಿಂದ ನವದುರ್ಗೆಯರಿಗೆ ಪ್ರಾರ್ಥನೆ ಮಾಡುತ್ತಾರೆ. ಇದು ನವರಾತ್ರಿಯ ದಿನಗಳಲ್ಲಿ ಭಾರತದಲ್ಲಿ ನಡೆಯುವ ಆಚರಣೆ ಆದರೆ ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಹಿಂದುಗಳು ಕೇವಲ ಬೆರಳೆಣಿಕೆಯಷ್ಟಿರುವ ಪಾಕಿಸ್ತಾನದಲ್ಲೂ ನವರಾತ್ರಿ ಸಂಭ್ರಮ ನಡೆಯುತ್ತದೆ. ಅಲ್ಲಿನ ಬೀದಿಯೊಂದರಲ್ಲಿ ನಡೆದ ದುರ್ಗಾದೇವಿಯ ಆರಾಧನೆಯ ವೀಡಿಯೋವೊಂದನ್ನು ಪಾಕಿಸ್ತಾನದ ಇನ್‌ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ನವದುರ್ಗೆಯರ ಆರಾಧನೆಗೆ ಯಾವ ಗಡಿಗಳು ಇಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ.
ಅಂದಹಾಗೆ ಈ ವೀಡಿಯೋವನ್ನು ಪಾಕಿಸ್ತಾನದ ಇನ್‌ಫ್ಲುಯೆನ್ಸರ್ ಧೀರಜ್ ಮಂಧನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಹಬ್ಬದ ಲೈಟಿಂಗ್ಸ್‌ಗಳಿಂದ ಕರಾಚಿಯ ಬೀದಿ ಕಂಗೊಳಿಸುತ್ತಿದ್ದು, ಬೀದಿ ಮಧ್ಯೆ ಪೆಂಡಾಲ್‌ನಲ್ಲಿ ದುರ್ಗಾದೇವಿಯನ್ನು ಕೂರಿಸಲಾಗಿದೆ. ಮಹಿಳೆಯರು ಮಕ್ಕಳೆಲ್ಲರೂ ದುರ್ಗಾದೇವಿಯ ಪೆಂಡಾಲ್ ಬಳಿ ಬಂದು ದೇವಿಗೆ ಕೈ ಮುಗಿದು ಹೋಗುತ್ತಿದ್ದಾರೆ.
undefined
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಬಗ್ಗೆ ಪ್ರಸ್ತಾಪಿಸಿದ ಪಾಕ್‌ಗೆ ಭಾರತದ ದಿಟ್ಟ ಉತ್ತರ
ವೀಡಿಯೋ ಪೋಸ್ಟ್ ಮಾಡಿದ ಧೀರಜ್ ಮಂಧನ್ ಹೀಗೆ ಬರೆದುಕೊಂಡಿದ್ದಾರೆ. ನವರಾತ್ರಿಯ 4ನೇ ದಿನ ಕರಾಚಿ ಪಾಕಿಸ್ತಾನ. ಈ ಸ್ಥಳದಲ್ಲಿ ಕೇವಲ ಕಾಲ್ನಡಿಗೆಯ ಅಂತರದಲ್ಲಿ ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್‌ಗಳನ್ನು ಜೊತೆಯಾಗಿ ನೋಡಬಹುದಾಗಿದೆ. ಅಲ್ಲಿ ಜನ ಶಾಂತಿ ಹಾಗೂ ಸೌಹಾರ್ದತೆಯಲ್ಲಿ ನಂಬಿಕೆ ಇರಿಸಿದ್ದಾರೆ. ಈ ಪ್ರದೇಶವನ್ನು ಮಿನಿ ಇಂಡಿಯಾ ಎಂದು ಕೂಡ ಕರೆಯಲಾಗುತ್ತದೆ. ಆದರೆ ನಾನು ಇದನ್ನು ನಮ್ಮ ಪಾಕಿಸ್ತಾನ ಎಂದು ಕರೆಯುವೆ. ನವರಾತ್ರಿಯಲ್ಲಿ ಇಲ್ಲಿ ನಾನು ಇದೇ ಮೊದಲ ಬಾರಿಗೆ ಇಂತಹ ಮಾಂತ್ರಿಕವಾದ ಮೋಡಿ ಮಾಡುವ ನವರಾತ್ರಿಯ ಉತ್ಸಾಹವನ್ನು ನೋಡುತ್ತಿದ್ದೇನೆ. ಇಲ್ಲಿ ಪ್ರತಿಯೊಬ್ಬರ ಮೊಗದಲ್ಲಿ ನಗು ಕಾಣುತ್ತಿದೆ, ಪ್ರತಿಯೊಬ್ಬರು ನಗುತ್ತಾ ಡಾನ್ಸ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಎಂದು ಅವರು ಬರೆದುಕೊಂಡಿದ್ದಾರೆ.
ಈ ವೀಡಿಯೋ ನೋಡಿದ ಅನೇಕರು ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯಕ್ಕೆ ನವರಾತ್ರಿಯ ಶುಭಾಶಯ ತಿಳಿಸಿದ್ದಾರೆ. ಮತ್ತೆ ಕೆಲವರು ಸದಾ ಸುರಕ್ಷಿತವಾಗಿರಿ ಭಾರತದಿಂದ ನಿಮಗೆ ಪ್ರೀತಿಯ ಸಂದೇಶಗಳು ಎಂದು ಶುಭ ಹಾರೈಸಿದ್ದಾರೆ. ಮತ್ತೆ ಕೆಲವರು ಪಾಕಿಸ್ತಾನದಲ್ಲಿ ಹಿಂದೂಗಳು ಆರಾಮವಾಗಿದ್ದಾರೆ ಎಂದು ವೈಭವೀಕರಿಸುವುದನ್ನು ನಿಲ್ಲಿಸಿ ಎಂದಿದ್ದಾರೆ. ಇದೊಂದು ಸಣ್ಣ ಗಲ್ಲಿಯಷ್ಟೇ ನಗರದ ಪ್ರಮುಖ ಪ್ರದೇಶಗಳಲ್ಲೂ ಹೀಗೆಯೆ ನವರಾತ್ರಿ ಸಂಭ್ರಮವನ್ನು ಮಾಡುತ್ತಾರಾ ಎಂಬುದನ್ನು ನಮಗೆ ತಿಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಪಾಕ್‌ನಿಂದ ಭಾರತದ ವಿರುದ್ಧ ಗಂಭೀರ ಆರೋಪ; ಇತ್ತ ಅರುಣಾಚಲದ ಪರ್ವತಕ್ಕೆ ಹೆಸರಿಟ್ಟಿದ್ದಕ್ಕೆ ಚೀನಾದಿಂದ ಕ್ಯಾತೆ