ಭಾರತ ವ್ಯವಹಾರಗಳಲ್ಲಿ ಅತ್ಯಂತ ನಿಷ್ಣಾತ ಆಸೀಂ ಮುನೀರ್‌ ಪಾಕ್‌ ಹೊಸ ಸೇನಾ ಮುಖ್ಯಸ್ಥ

By Kannadaprabha NewsFirst Published Nov 25, 2022, 9:40 AM IST
Highlights

ಪಾಕಿಸ್ತಾನ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನಂಟ್‌ ಜನರಲ್‌ ಆಸೀಮ್‌ ಮುನೀರ್‌ ಅವರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ.

ಇಸ್ಲಾಮಾಬಾದ್‌: ಪಾಕಿಸ್ತಾನ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನಂಟ್‌ ಜನರಲ್‌ ಆಸೀಮ್‌ ಮುನೀರ್‌ ಅವರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿಷ್ಣಾತರಾಗಿರುವ ಹಾಗೂ ಎರಡೂ ದೇಶಗಳ ನಡುವೆ ಯುದ್ಧ ಭೀತಿ ಸೃಷ್ಟಿಸಿದ್ದ ಪುಲ್ವಾಮಾ ದಾಳಿ ವೇಳೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರಾಗಿದ್ದ ಮುನೀರ್‌ ನೇಮಕ ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಹಾಲಿ ಸೇನಾ ಮುಖ್ಯಸ್ಥರಾಗಿರುವ ಖಮರ್‌ ಜಾವೇದ್‌ ಬಜ್ವಾ (Qamar Javed Bajwa) ಅವರ ಅವಧಿ ನ.29ರಂದು ಮುಕ್ತಾಯವಾಗಲಿದೆ. 2016ರಿಂದ ಆ ಹುದ್ದೆಯಲ್ಲಿದ್ದ 61 ವರ್ಷದ ಬಜ್ವಾ ಅವರಿಗೆ ಮುನೀರ್‌ ಅತ್ಯಾಪ್ತರಾಗಿದ್ದಾರೆ. ಪ್ರಧಾನಿ ಶಾಬಾಜ್‌ ಷರೀಪ್‌ (Shahbaz Sharif) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುನೀರ್‌ ನೇಮಕ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿ, ಅಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ.

ಬಜ್ವಾ ಅವಧಿಯಲ್ಲೇ ಮುನೀರ್‌ ಅವರನ್ನು 2017ರಲ್ಲಿ ಐಎಸ್‌ಐ ಮುಖ್ಯಸ್ಥ ಹುದ್ದೆಗೆ ನೇಮಕ ಮಾಡಲಾಗಿತ್ತು. ಅಂದಿನ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರ ಪತ್ನಿಯ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದರು ಎಂಬ ಕಾರಣಕ್ಕೆ ಪ್ರಧಾನಿ ಒತ್ತಡಕ್ಕೆ ಮಣಿದು ಮುನೀರ್‌ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಹೀಗಾಗಿ 8 ತಿಂಗಳಲ್ಲೇ ಐಎಸ್‌ಐನಲ್ಲಿ ಅವರ ಅವಧಿ ಅಂತ್ಯವಾಗಿತ್ತು. ತನ್ಮೂಲಕ ಅತಿ ಕಡಿಮೆ ಅವಧಿಗೆ ಐಎಸ್‌ಐ ಮುಖ್ಯಸ್ಥರಾಗಿದ್ದ ಮೊದಲ ವ್ಯಕ್ತಿ ಎನಿಸಿಕೊಂಡರು.

ಎನ್‌ಐಎ ಹಿಟ್ ಲಿಸ್ಟ್‌ನಲ್ಲಿದ್ದ ಮೋಸ್ಟ್ ವಾಂಟೆಡ್ ಉಗ್ರ ಪಾಕಿಸ್ತಾನದಲ್ಲಿ ಸಾವು

ಪಾಕ್‌ ಸೇನಾಧ್ಯಕ್ಷ ಬಜ್ವಾ ಭಾಷಣ, ಭಾರತೀಯರು ಸೇನೆಗೆ ನೀಡುವ ಗೌರವವನ್ನು ನೋಡಿ ಕಲಿಯಿರಿ!

ಉಗ್ರರ ಸ್ವರ್ಗಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಬೇಕು: ಜಗತ್ತಿಗೆ ಅಮಿತ್ ಶಾ ಕರೆ

General Qamar Javed Bajwa: ಆರೇ ವರ್ಷದಲ್ಲಿ 460 ಕೋಟಿಯ ಒಡೆಯನಾದ ಪಾಕ್‌ ಆರ್ಮಿ ಚೀಫ್‌!

click me!