ಯಜಮಾನನಿಗಾಗಿ ಕಾಯುವ ಹಸು: ವಿಡಿಯೋ ವೈರಲ್

Published : Nov 24, 2022, 04:07 PM IST
ಯಜಮಾನನಿಗಾಗಿ ಕಾಯುವ ಹಸು: ವಿಡಿಯೋ ವೈರಲ್

ಸಾರಾಂಶ

ಇಲ್ಲೊಂದು ಕಡೆ ಹಸುವೊಂದು ತನ್ನನ್ನು ಕರೆದೊಯ್ಯಲು ಬರುವ ಮಾಲೀಕನಿಗಾಗಿ ಕಾಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮನೆಯಲ್ಲಿ ಹಸುಗಳನ್ನು ಸಾಕುತ್ತಿರುವವರಿಗೆ ಇದರ ಅನುಭವ ಆಗಿರಬಹುದು.

ಮಾನವರ ಜೊತೆ ಸಾಕು ಪ್ರಾಣಿಗಳಿಗೆ ಗಾಢವಾದ ಪ್ರೇಮವಿರುತ್ತದೆ. ಸಾಕು ಪ್ರಾಣಿಗಳಾದ ನಾಯಿಗಳು, ಬೆಕ್ಕುಗಳು, ಕುದುರೆ, ಮೇಕೆಗಳು ಮಾನವರ ಜೊತೆ ತಮ್ಮ ಪ್ರೀತಿಯನ್ನು ತೋರಿಸುವ ಭಾವುಕವಾದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿವೆ. ಮನುಷ್ಯರು ಪ್ರಾಣಿಗಳನ್ನು ಹೇಗೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಅದೇ ರೀತಿ ಪ್ರಾಣಿಗಳು ಕೂಡ ಮನುಷ್ಯರ ಮೇಲೆ ಅಗಾಧವಾದ ಪ್ರೇಮವನ್ನು ತೋರುತ್ತವೆ. ಅದರಲ್ಲೂ ಮನೆಯಲ್ಲಿರುವ ಶಾವ್ನಗಳು ಹಾಗೂ ಹಸುಗಳೆಂದರೆ ಮನೆ ಮಂದಿಗೆ ಒಂದು ಹಿಡಿ ಹೆಚ್ಚೆ ಪ್ರೀತಿ ಇರುತ್ತದೆ.

ಇಲ್ಲೊಂದು ಕಡೆ ಹಸುವೊಂದು ತನ್ನನ್ನು ಕರೆದೊಯ್ಯಲು ಬರುವ ಮಾಲೀಕನಿಗಾಗಿ ಕಾಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮನೆಯಲ್ಲಿ ಹಸುಗಳನ್ನು ಸಾಕುತ್ತಿರುವವರಿಗೆ ಇದರ ಅನುಭವ ಆಗಿರಬಹುದು. ಶ್ವಾನಗಳಂತೆ(Dog)  ಹಸುಗಳು (Cow) ಕೂಡ ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಮೇಯಲು ಬಯಲಿಗೆ ಬಿಡುವ ಹಸುಗಳಾದರೆ ಅವುಗಳು ಮುಂಜಾನೆ ಹಗ್ಗದಿಂದ ಬಿಚ್ಚಿ ಬಿಡುವುದಕ್ಕೆ ಕಾಯುತ್ತಿರುತ್ತವೆ. ಸಂಜೆ ಕರೆದುಕೊಂಡು ಹೋಗುವುದಕ್ಕೆ ಬರಲು ಕಾಯುತ್ತಿರುತ್ತವೆ. ಮೊದಲೆಲ್ಲಾ ಕೊಟ್ಟಿಗೆಯ ತುಂಬಾ ರಾಶಿ ರಾಶಿ ಹಸುಗಳಿರುತ್ತಿದ್ದವು. ಬೆಳಗ್ಗೆ ಅವುಗಳಿಗೆ ಬಾಯಾರಿಕೆ ನೀಡಿ ಹಗ್ಗ ಬಿಚ್ಚಿ ಮೇಯಲು ಬಿಟ್ಟರೆ ಸಂಜೆಯ ವೇಳೆ ಹೊಟ್ಟೆ ತುಂಬಿಸಿಕೊಂಡು ಅವುಗಳೇ ಸೀದಾ ಜೊತೆಯಾಗಿ ಬಂದು ಹಟ್ಟಿ ಸೇರಿಕೊಳ್ಳುತ್ತಿದ್ದವು. ಆದರೆ ಈಗ ಹಸುಗಳ ಸಂಖ್ಯೆಗಳೇ ಕಡಿಮೆ ಆಗಿವೆ. ಬಹುತೇಕ ಮನೆಗಳಲ್ಲಿ ಹಸುವೂ ಇಲ್ಲ ಹಟ್ಟಿ ಕೊಟ್ಟಿಗೆಯೂ ಇಲ್ಲ. ಆದರೆ ಇರುವ ಹಸುಗಳಿಗೆ ಮಾನವನೊಂದಿಗಿನ ಭಾವನೆಗಳು ಕಡಿಮೆ ಆಗಿಲ್ಲ.

ಅಯ್ಯೋ ಅಳ್ಬೇಡ ಕಣೋ, ನಾನಿದ್ದೀನಿ... ಅಳುತ್ತಿದ್ದ ಮಾಲೀಕನ ಸಂತೈಸುವ ಮಾರ್ಜಾಲ

ಹಾಗಾಗಿ ಇಲ್ಲೊಂದು ಕಡೆ ಹಸುವೊಂದನ್ನು ಮಾಲೀಕ (owner) ರಸ್ತೆ ದಾಟಿಸಿ ಕರೆತಂದು ಬಯಲಿಗೆ ಬಿಟ್ಟರೆ ಸಂಜೆ ವೇಳೆ ಅದನ್ನು ಕರೆದೊಯ್ಯಲು ಬರುತ್ತಾನೆ. ಈ ಒಡನಾಟ ಹಸುವಿಗೂ ರೂಢಿಯಾಗಿದ್ದು, ಬಯಲಿನಲ್ಲಿ ಮೇಯ್ದು ಹೊಟ್ಟೆ ತುಂಬಿಸಿಕೊಂಡಿರುವ ಹಸು ತನ್ನನ್ನು ಕರೆದುಕೊಂಡು ಹೋಗುವ ಮಾಲೀಕನಿಗಾಗಿ ರಸ್ತೆ ಬದಿ ಕಾಯುತ್ತಾ ನಿಂತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಹಸು ಒಂದೆಡೆ ರಸ್ತೆಯಲ್ಲಿ ವಾಹನಗಳು ಅತ್ತಿಂದಿತ್ತ ಅಡ್ಡಾಡುತ್ತಿದ್ದರೆ, ಇತ್ತ ಹಸು ಬಂದು ರಸ್ತೆ ಬದಿ ಮಾಲೀಕನಿಗಾಗಿ ಕಾಯುತ್ತ ನಿಂತಿದೆ. ಹಾಗಂತ ಹಸುವನ್ನೆನ್ನು ಕಟ್ಟಿ ಹಾಕಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಾಲೀಕ ಅಲ್ಲಿಗೆ ಆಗಮಿಸಿದ್ದು, ಕೂಡಲೇ ಹಸುವನ್ನು ಮಾತನಾಡಿಸಿದ್ದು, ಕೂಡಲೇ ಹಸು ಹಗ್ಗ ಬಿಚ್ಚಿ ಬಿಟ್ಟಂತೆ ಆತನ ಹಿಂದೆ ಹೆಜ್ಜೆ ಹಾಕಿದೆ. ಇದಕ್ಕೂ ಮೊದಲು ಹಸು ರಸ್ತೆ ದಾಟುವುದೆಂದು ಭಾವಿಸಿ ಹಲವು ವಾಹನಗಳು ಅಲ್ಲಿ ತಮ್ಮ ವಾಹನವನ್ನು(vehicle) ನಿಧಾನಿಸಿದರು ಕೂಡ ಹಸು ಮಾತ್ರ ರಸ್ತೆ ದಾಟದೇ ತನ್ನ ಮಾಲೀಕನಿಗಾಗಿ ಕಾಯುತ್ತಾ ನಿಂತಿದೆ. ಮಾಲೀಕ ಬಂದಿದೆ ತಡ ಆತನ ಹಿಂದೆ ಹಸು ಕುಣಿಯುತ್ತಾ ಹೆಜ್ಜೆ ಹಾಕಿದೆ.

 

ಹಸುವಿನ ಸಗಣಿ ಎಂಬ ಪವಾಡ; ಆರ್ಥಿಕ ಸಮಸ್ಯೆ ಹೋಗಿಸುವ Cow Dung

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೆಟ್ಟಿಗರು ಹಸು ಹಾಗೂ ಮಾಲೀಕನ ಒಡನಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೆಲವು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ನಮ್ಮ ಅಜ್ಜಿಯೂ ಹಸು ಸಾಕುತ್ತಿದ್ದು, ಮನೆಯಲ್ಲಿರುವ ಪ್ರತಿಯೊಂದು ಜೀವಿಯನ್ನು ಅವರು ಮಕ್ಕಳಂತೆ ಸಲಹುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ನಮ್ಮ ದೇಶದಲ್ಲಂತೂ ಹಸುವನ್ನು ಕಾಮಧೇನು ಎಂದೇ ಕರೆಯಲಾಗುತ್ತಿದೆ. ಅದಕ್ಕೆ ತಾಯಿಯ ಸ್ಥಾನಮಾನವನ್ನು ನೀಡುತ್ತಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!