ಪಾಕ್‌ ಸೇನಾಧ್ಯಕ್ಷ ಬಜ್ವಾ ಭಾಷಣ, ಭಾರತೀಯರು ಸೇನೆಗೆ ನೀಡುವ ಗೌರವವನ್ನು ನೋಡಿ ಕಲಿಯಿರಿ!

By Santosh NaikFirst Published Nov 24, 2022, 1:12 PM IST
Highlights

ಪಾಕಿಸ್ತಾನದ ಆರ್ಮಿ ಚೀಫ್‌ ಖಮರ್‌ ಜಾವೇದ್‌ ಬಜ್ವಾ ಅವರ ಆರು ವರ್ಷದ ಅಧಿಕಾರವಧಿ ನವೆಂಬರ್‌ 29ಕ್ಕೆ ಕೊನೆಯಾಗಲಿದೆ. ಇದಕ್ಕೂ ಮುನ್ನ ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿರುವ ಬಜ್ವಾ, ಪಾಕಿಸ್ತಾನ ಸೇನೆಗೆ ಪಾಕ್‌ನ ರಾಜಕೀಯವೇ ಶತ್ರು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಪಾಕಿಸ್ತಾನದ ಸೇನೆ ಎಂದಿಗೂ ರಾಜಕಾರಣದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.

ನವದೆಹಲಿ (ನ.24): ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರ ಅಧಿಕಾರದ ಅವಧಿಯಲ್ಲಿ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆರು ವರ್ಷಗಳ ಕಾಲ ಪಾಕಿಸ್ತಾನದ ಆರ್ಮಿ ಚೀಫ್‌ ಆಗಿದ್ದ ಖಮರ್‌ ಜಾವೇದ್‌ ಬಜ್ವಾ, ನವೆಂಬರ್‌ 29ಕ್ಕೆ ಸೇವೆಯಿಂದ ನಿವೃತ್ತಲಾಗಲಿದ್ದಾರೆ. ಬುಧವಾರ ತಮ್ಮ ಕೊನೆಯ ಭಾಷಣದಲ್ಲಿ ಮಾತನಾಡಿರುವ ಬಜ್ವಾ ಭಾರತದ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಏನೇ ವಿಚಾರವಾದರೂ ಇಲ್ಲಿನ ಸೇನೆಯನ್ನು ದೂರುತ್ತಾರೆ. ಆದರೆ, ಪಾಕ್‌ ಸೇನೆ ಎಂದಿಗೂ ರಾಜಕಾರಣದಲ್ಲಿ ಭಾಗಿಯಾಗಿಲ್ಲ. ಭಾರತೀಯರು ತಮ್ಮ ಸೇನೆಗೆ ನೀಡುವ ಗೌರವವಿಂದ ಪಾಕಿಸ್ತಾನ ಕಲಿಯುವುದು ಬಹಳಷ್ಟಿದೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಸೇನಾ ವಿರೋಧಿ ಮನಸ್ಥಿತಿಯನ್ನು ಟೀಕೆ ಮಾಡಿದ ಅವರು, ಭಾರತೀಯರು ಎಂದಿಗೂ ತಮ್ಮ ದೇಶದ ಸೇನೆಯನ್ನು ಟೀಕೆ ಮಾಡುವುದಿಲ್ಲ ಎಂದಿದ್ದಾರೆ. ಅದರೊಂದಿಗೆ 1971ರಲ್ಲಿ ಭಾರತ ವಿರುದ್ಧದ ಯುದ್ಧದಲ್ಲಿ ಸೋಲು ಕಂಡ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ.

1971ರ ಯುದ್ಧ ಹಾಗೂ ಬಾಂಗ್ಲಾದೇಶದ ನಿರ್ಮಾಣ ಎಂದಿಗೂ ಸೇನೆಯ ವೈಫಲ್ಯವಾಗಿರಲಿಲ್ಲ. ಇದು ರಾಜಕಾರಣದ ವೈಫಲ್ಯ ಎಂದು ಹೇಳಿದ್ದಾರೆ. '1971ರ ಯುದ್ಧದ ವಿಚಾರದಲ್ಲಿ ಕೆಲವೊಂದು ಅಂಶವನ್ನು ಸ್ಪಷ್ಟ ಮಾಡಲು ಪ್ರಯತ್ನ ಮಾಡುತ್ತೇನೆ. 1971ರ ಯುದ್ಧ ಎಂದಿಗೂ ಸೇನೆಯ ವೈಫಲ್ಯವಾಗಿರಲಿಲ್ಲ. ಪೂರ್ವ ಪಾಕಿಸ್ತಾನದಲ್ಲಿ ನಮ್ಮ ಸೇನೆ ಸಮರ್ಥವಾಗಿ ಕಾದಾಟ ಮಾಡಿತ್ತು ಎಂದಿದ್ದಾರೆ.

ದೇಶವನ್ನು ಕಾಯಲು ಪಾಕ್‌ ಸೇನೆ ಸಿದ್ಧ: ಈ ಸಂದರ್ಭದಲ್ಲಿ, ಪಾಕಿಸ್ತಾನಿ ಸೇನೆಯನ್ನು ಮನಸೋಇಚ್ಛೆ ಹೊಗಳಿದ ಜನರಲ್ ಬಜ್ವಾ, ಪಾಕಿಸ್ತಾನಿ ಸೇನೆಯ ಸೈನಿಕರು ದೇಶವನ್ನು ರಕ್ಷಿಸಲು ಯಾವಾಗಲೂ ಸಿದ್ಧರಾಗಿದ್ದಾರೆ ಎಂದು ಹೇಳಿದರು. ಪಾಕಿಸ್ತಾನ ಸೇನೆ ಏನು ಬೇಕಾದರೂ ಮಾಡಬಹುದು ಆದರೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಜನರಿಗೆ ಸೇನೆಯನ್ನು ಟೀಕಿಸುವ ಹಕ್ಕಿದೆ ಆದರೆ ಅವರು ಸೇನೆಯನ್ನು ಟೀಕಿಸುವ ಪದಗಳ ಬಗ್ಗೆ ಎಚ್ಚರಿಕೆ ಇರಬೇಕು ಎಂದಿದ್ದಾರೆ. ಸೇನೆ ಎಂದಿಗೂ ಸಾರ್ವಜನಿಕರ ಮನಸ್ತಾಪಕ್ಕೆ ಕಾರಣವಾಗುವುದಿಲ್ಲ. ಹಾಗೇನಾದರೂ ಅಂದುಕೊಂಡಿದ್ದರೆ ಅದು ತಪ್ಪು ಎಂದು ಹೇಳಿದರು.

ರಾಜಕೀಯ ವಿಚಾರಗಳ ಬಗ್ಗೆ ಸೇನೆ ತಲೆ ತೂರಿಸುವುದಿಲ್ಲ: ಪಾಕಿಸ್ತಾನ ಸೇನೆ ಹಾಗೇನಾದರೂ ದೇಶದ ರಾಜಕೀಯ ವಿಚಾರದಲ್ಲಿ ತಲೆ ತೂರಿಸಿದರೆ ಅದು ಅಸಂವಿಧಾನಿಕ. ಪಾಕಿಸ್ತಾನ ಸೇನೆ ಎಂದಿಗೂ ರಾಜಕೀಯ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ನಿರ್ಧಾರ ಮಾಡಿಯಾಗಿದೆ. ಈ ನಿರ್ಧಾರವನ್ನು ಪಾಕಿಸ್ತಾನದ ಸೇನೆ ಸ್ಪಷ್ಟವಾಗಿ ಪಾಲನೆ ಮಾಡುತ್ತಿದೆ ಎಂದು ವಿಶ್ವಾಸದಿಂದ ಹೇಳಬಲ್ಲೆ ಎಂದಿದ್ದಾರೆ.

General Qamar Javed Bajwa: ಆರೇ ವರ್ಷದಲ್ಲಿ 460 ಕೋಟಿಯ ಒಡೆಯನಾದ ಪಾಕ್‌ ಆರ್ಮಿ ಚೀಫ್‌!

ಭಾರತವನ್ನು ಟಾರ್ಗೆಟ್‌ ಮಾಡಿದ ಬಜ್ವಾ: ತಮ್ಮ ಕೊನೆಯ ಭಾಷಣದಲ್ಲೂ ಜನರಲ್‌ ಬಜ್ವಾ ಭಾರತವನ್ನು ಗುರಿ ಮಾಡುವುದನ್ನು ಬಿಡಲಿಲ್ಲ. ಬಹುಶಃ ಜಗತ್ತಿನಲ್ಲಿ ಯಾವುದಾದರೂ ಸೇನೆ ದೊಡ್ಡ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದರೆ ಅದು ಭಾರತದ ಸೇನೆ ಮಾತ್ರ. ಆದರೆ, ಭಾರತದ ಜನ ಮಾತ್ರ ಎಂದಿಗೂ ಸೇನೆಯನ್ನು ಟೀಕೆ ಮಾಡುವುದಿಲ್ಲ ಎಂದಿದ್ದಾರೆ.
ಜನರಲ್‌ ಅಸೀಮ್‌ ಮುನಿರ್‌ ಮುಂದಿನ ಪಾಕ್‌ ಆರ್ಮಿ ಚೀಫ್: ಪಾಕಿಸ್ತಾನದ ಸೇನೆಯ ಮುಂದಿನ ಚೀಫ್‌ ಆಗಿ ಜನರಲ್‌ ಅಸೀಮ್‌ ಮುನೀರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನದ ಸರ್ಕಾರದ ಸಚಿವ ಮರಿಯುಮ್‌ ಔರಂಗಜೇಬ್‌ ಹೇಳಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ರಾಜಿ ಇಲ್ಲ: ಪಾಕ್ ಸೇನಾಧ್ಯಕ್ಷ!

ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಮತ್ತು ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಸೈಯದ್ ಅಸಿಮ್ ಮುನೀರ್ ಅವರನ್ನು ನೇಮಕ ಮಾಡಲು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನಿರ್ಧರಿಸಿದ್ದಾರೆ ಎಂದು ಮರಿಯಮ್‌ ಔರಂಗಜೇಬ್ ತಿಳಿಸಿದ್ದಾರೆ.

click me!